ಬೆಳಗಾವಿ: ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಫೆಬ್ರವರಿ 15ರಿಂದ ಸ್ಥಳಗಿತಗೊಳಿಸುವ ನಿರ್ಧಾರವನ್ನು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಕೈಬಿಟ್ಟು, ಮಾರ್ಚ್ 1ರ ವರೆಗೂ ನೀರು ಬಿಡುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆದೇಶಿಸಿದ್ದಾರೆ. ಈ ಕುರಿತು ಧಾರವಾಡ ವಾರ್ತಾ ಇಲಾಖೆ ಮಾಹಿತಿ ನೀಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 15ರಂದು ಜರುಗಿದ್ದ ಸಭೆಯಲ್ಲಿ ಶಾಸಕರುಗಳು, …
Read More »ಕರ್ನಾಟಕದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿ: ಡಿಸಿಎಂ ಡಿ.ಕೆ.ಶಿವಕುಮಾರ್.
ಉದಯಪುರ: “ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ “2047ರಲ್ಲಿ ಭಾರತ ಜಲ ಸಮೃದ್ಧಿ ರಾಷ್ಟ್ರ” ಎಂಬ 2ನೇ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು. “ಕರ್ನಾಟಕ ರಾಜ್ಯದ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಂಡು …
Read More »ವಿವಿಗಳ ರದ್ಧತಿಗೆ ಮುಂದಾದ ಸರ್ಕಾರ – ಸರ್ಕಾರದ ನಡೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಬಾಗಲಕೋಟ: ಈ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ಪಂಚಗ್ಯಾರೇಂಟಿ ಭರವಸೆ ನೀಡಿ ಅಧಿಕಾರ ಗದ್ದು ಏರಿದೆ.ಇದೀಗ ಗ್ಯಾರೆಂಟಿ ಯೋಜನೆ ಜಾರಿಯಲ್ಲಿವೆ.ಆದ್ರೆ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾದಂತೆ ಕಾಣ್ತಿದೆ. ಅದನ್ನ ಸರಿದೂಗಿಸಲು ಹಿಂದಿನ ಬಿಜೆಪಿ ಸರ್ಕಾರ ಮುಂಜೂರು ಮಾಡಿದ 9 ವಿವಿಗಳನ್ನ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ ಕಾಂಗ್ರೆಸ್ ಸರ್ಕಾರ. ಸರ್ಕಾರದ ನಡೆ ವಿರುದ್ಧ ಇದೀಗ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟಕ್ಕೆ ಧೂಮಿಕಿದ್ದಾರೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಒಂದೆಡೆ …
Read More »ಪತಿಯ ಅನೈತಿಕ ಸಂಬಂಧಕ್ಕೆ ಬೆಸತ್ತ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣು.
ಬೆಂಗಳೂರು: ಪತಿಯ ಅನೈತಿಕ ಸಂಬಂಧದಿಂದ ಜೀವನದಲ್ಲಿ ಬೇಸತ್ತ 34 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ಬೆಂಗಳೂರಿನ ರಾಮಯ್ಯ ಲೇಔಟ್ ನಡೆದಿದೆ. ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರುತಿ, ಮೊದಲು ತಮ್ಮ ಮಗಳು ರೋಶಿನಿಯನ್ನು ದುಪ್ಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿ …
Read More »ಬೇಸಿಗೆಯಲ್ಲಿ 19 ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಸನ್ನದ್ಧ; ಸಚಿವ ಕೆ.ಜೆ.ಜಾರ್ಜ್
ಹಾವೇರಿ : ರಾಜ್ಯದಲ್ಲಿ ಖಾಲಿ ಇರುವ 3,000 ಸಾವಿರ ಲೈನ್‌ಮನ್ ಹುದ್ದೆಗಳ ನೇಮಕಾರತಿ ಪ್ರಕ್ರಿಯೆ ಏಪಿಲ್ ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ದೊಳಗೆ ಲೈನ್‌ಮನ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಳೆದ ವರ್ಷತೀವ್ರ ಬರಗಾಲವಿದ್ದುದರಿಂದ ವಿದ್ಯುತ್ ಕೊರತೆಯಿದ್ದರೂ ಕೇವಲ …
Read More »ರೈತರಿಗೆ ಗುಡ್ ನ್ಯೂಸ್ ,ಫೆ. 21ರಿಂದ ನಂದಿನಿ ಹಾಲಿನ ದರ ಪರಿಷ್ಕರಣೆ; ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಗೋಕಾಕದಲ್ಲಿಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದು ಕೊರತೆಗಳ ಸಭೆಯಲ್ಲಿ ನಂದಿನಿ ಹಾಲಿನಿ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡ ಬೆಮ್ಯೂಲ್ ಅಧ್ಯಕ್ಷ್ ಬಾಲಚಂದ್ರ ಜಾರಕಿಹೊಳಿ. ನಂದಿನಿ ಹಾಲಿನ ದರವನ್ನು ಫೆ. 21 ರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ನಗರದ ಹೊರವಲಯದಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ …
Read More »ಅತಿ ಹೆಚ್ಚು ಉದ್ಯೋಗ ಅವಲಂಭನೆ ಇರುವುದು ಕೃಷಿಯಲ್ಲೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆಧ್ಯತೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಆಡಿದ ಆರಂಭಿಕ ಮಾತುಗಳು. ರೈತರ ಬೇಡಿಕೆಗಳನ್ನು ನಿರಂತರವಾಗಿ ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ: ಸಿಎಂ ಸಿದ್ದರಾಮಯ್ಯಅತಿ ಹೆಚ್ಚು ಉದ್ಯೋಗ ಅವಲಂಭನೆ ಇರುವುದು ಕೃಷಿಯಲ್ಲೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆಧ್ಯತೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದ ನಾನು ಸದಾ ರೈತ ಕುಲದ …
Read More »ತ್ರಿವೇಣಿ ಸಂಗಮದಲ್ಲಿ ಫೋನ್‌ಗೂ ಕುಂಭಸ್ನಾನ ಮಾಡಿಸಿದ ಭೂಪ..!
ಉತ್ತರ ಪ್ರದೇಶದ: ತ್ರಿವೇಣಿ ಸಂಗಮದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಹಾ ಕುಂಭಮೇಳ ಇಡೀ ಜಗತ್ತಿನ ಗಮನ ಸೆಳೆದಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಈಗಾಗಲೇ 50 ಕೋಟಿ ಭಕ್ತರು ಬಂದು, ಪವಿತ್ರ ಸ್ನಾನ ಮಾಡಿದ್ದಾರೆ. ಈ ಶುಭ ಘಳಿಗೆಯಲ್ಲೇ ಭಕ್ತನೊಬ್ಬ ತನ್ನ ಮೊಬೈಲ್ ಫೋನ್‌ಗೂ ಪವಿತ್ರ ಸ್ನಾನ ಮಾಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಹಿಂದೂಗಳ ಪವಿತ್ರ ಆಚರಣೆ ಆಗಿರುವ ಮಹಾ ಕುಂಭಮೇಳ ಪ್ರಪಂಚದ ಮೂಲೆ ಮೂಲೆಯಲ್ಲಿ ಸದ್ದು ಮಾಡುತ್ತಿದೆ. …
Read More »ಫಾಸ್ಟ್‌ಟ್ಯಾಗ್ ಹೊಸ ರೂಲ್ಸ್; ದುಪ್ಪಟ್ಟು ಹಣ ಪಾವತಿ..! ಏನಿದು ಹೊಸ ನಿಯಮ..?
ಬೆಂಗಳೂರು: ಫಾಸ್ಟ್‌ಟ್ಯಾಗ್‌ನ ಹೊಸ ನಿಯಮಾವಳಿಗಳು ಇಂದಿನಿಂದ ಫೆ. 17 ಜಾರಿಗೆ ಬಂದಿವೆ. ಇದರ ಅಡಿಯಲ್ಲಿ, ಕಡಿಮೆ ಬ್ಯಾಲೆನ್ಸ್, ಪಾವತಿ ವಿಳಂಬ ಅಥವಾ ಫಾಸ್ಟ್‌ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ವಾಹನವು ಟೋಲ್ ದಾಟುವ ಮೊದಲು 60 ನಿಮಿಷಗಳಿಗಿಂತ ಹೆಚ್ಚು ಕಾಲ ಮತ್ತು ಟೋಲ್ ದಾಟಿದ ನಂತರ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ವಹಿವಾಟನ್ನು ತಿರಸ್ಕರಿಸಲಾಗುತ್ತದೆ. ಇದು ದೋಷ ಕೋಡ್ …
Read More »ತಾಯಿ, ಹೆಂಡತಿ,ಮಗನಿಗೆ ವಿಷಕೊಟ್ಟು ಕೊನೆಗೆ ತಾನು ನೇಣಿಗೆ ಶರಾಣಾದ ವ್ಯಕ್ತಿ.
ಮೈಸೂರ: ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕೊಲೆ ಹಾಗೂ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ತಾಯಿ, ಪತ್ನಿ ಹಾಗೂ ಮಗನಿಗೆ ವಿಷವುಣಿಸಿದ ಗಂಡಸು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಕುಶಾಲ್ (15), ಚೇತನ್ (45), ರೂಪಾಲಿ (43), ಪ್ರಿಯಂವಧಾ (62) ಮೃತ ದುರ್ದೈವಿಗಳು. ಚೇತನ್ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್ಗೆ ವಿಷವುಣಿಸಿ ಸಾಯಿಸಿ ಬಳಿಕ …
Read More »