Breaking News

Uncategorized

ಭೂಕುಸಿತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್ (

ಹಾಸನ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾಗಿರುವ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಶ್ರೇಯಸ್ ಪಟೇಲ್, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎರಡು ಕಿ.ಮೀ ರಸ್ತೆ ಕಾಮಗಾರಿಗೆ ಭೂಕುಸಿತವೇ ದೊಡ್ಡ ಸವಾಲಾಗಿದೆ. ತಡೆಗೊಡೆ ಕಟ್ಟಿರುವ ಕೆಲವು ಕಡೆಗಳಲ್ಲಿ ಮಣ್ಣು ಕುಸಿದಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡುವಂತೆ ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಸೂಚಿಸಿದರು.ಈ ಬಾರಿಯೂ ಭೂ ಕುಸಿತ …

Read More »

ಭಾರಿ ಮಳೆಗೆ ಕುಸಿದ ಮನೆ…ಓರ್ವ ಸಹೋದರಿ ಸಾವು…ಇನ್ನೋರ್ವಳಿಗೆ ಗಾಯ…

ಭಾರಿ ಮಳೆಗೆ ಕುಸಿದ ಮನೆ…ಓರ್ವ ಸಹೋದರಿ ಸಾವು…ಇನ್ನೋರ್ವಳಿಗೆ ಗಾಯ… ಗೋಕಾಕ ನಗರದ ಮಹಾಲಿಂಗೇಶ್ವರ ಕಾಲನಿಯಲ್ಲಿ ಘಟನೆ… ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಹೃದಯವಿದ್ರಾವಕ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಹಾಲಿಂಗೇಶ್ವರ ಕಾಲನಿಯಲ್ಲಿ ನಡೆದಿದೆ. ಕೀರ್ತಿಕಾ ನಾಗೇಶ್ ಪೂಜಾರಿ (3) ಮೃತ ದುರ್ದೈವಿ ಮನೆಯ ಹಿಂಬದಿಯ ಗೋಡೆ ಕುಸಿದು ಮಗವಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವು‌. ಮತ್ತೋರ್ವ ನಾಲ್ಕು …

Read More »

ಹೆತ್ತವರ ಬದುಕಿಗೆ ಕೊಳ್ಳಿ ಇಟ್ಟ ಮಗಳು

ಮೈಸೂರು, (ಮೇ 25): ಮಗಳು ಮನೆ ಬಿಟ್ಟು ಓಡಿ ಹೋಗಿದ್ದಕ್ಕೆ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನ (Mysuru) ಹೆಚ್​.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಮೃತ ದುರ್ದೈವಿಗಳು. ಇವರ ಸಾವಿಗೆ ಕಾರಣ ದೊಡ್ಡ ಮಗಳು ಕಾರಣ ಎಂದು ತಿಳಿದುಬಂದಿದೆ, ಮಹದೇವ ಸ್ವಾಮಿ ಅವರ ದೊಡ್ಡ ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗುವುದಾಗಿ ಆಕೆ ಪಟ್ಟು ಹಿಡಿದಿದ್ದಾಳಂತೆ. …

Read More »

ಮೊದಲ ಹಂತದ ಸುರಂಗ ಮಾರ್ಗಕ್ಕೆ ಶೀಘ್ರದಲ್ಲೇ ಟೆಂಡರ್: ಡಿಸಿಎಂ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಎರಡು ಹಂತದ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಮೊದಲ ಹಂತದ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರಲ್ಲಿ ಸುರಂಗ ರಸ್ತೆ ನಿರ್ಮಾಣ ಹಾಗೂ ಮಂಡ್ಯದ ಕೆಆರ್​ಎಸ್​ನಲ್ಲಿ ಕಾವೇರಿ ಆರತಿ ನಡೆಸುವ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಸುರಂಗ ರಸ್ತೆಯ …

Read More »

ರೈಲ್ವೆ ನಿಲ್ದಾಣ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (

ಗದಗ: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ 2025-26ರಲ್ಲಿ 7,600 ಕೋಟಿ ರೂ.‌ ಅನುದಾನ ಒದಗಿಸಿದ್ದಾರೆ.‌ ಕಳೆದೊಂದು ದಶಕದಲ್ಲಿ ಪ್ರತಿ ವರ್ಷ ಕರ್ನಾಟಕಕ್ಕೆ 7 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಿದ್ದು, ಸದ್ಯ 51 ಸಾವಿರ ಕೋಟಿ ರೂ.‌ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಗುರುವಾರ ಅಮೃತ ಭಾರತ್ ರೈಲ್ವೆ ಸ್ಟೇಷನ್ ಯೋಜನೆಯಡಿ 23.24 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಕಂಡ ಗದಗ …

Read More »

ಸಚಿವ ಸಂಪುಟ ವಿಸ್ತರಣೆ ವಿಚಾರ ಆದಾಗ ನೋಡೋಣ ಎಂದ ಸತೀಶ ಜಾರಕಿಹೊಳಿ

ಡಿಸೆಂಬರ್ ನಲ್ಲಿ ರಾಜ್ಯ ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ವಿಚಾರ ಡಿಸೆಂಬರ್ ಇನ್ನೂ ಬಹಳ ದೂರವಿದೆ, ಆದಾಗ ನೋಡೋಣ ಎಂದ ಸತೀಶ ಸಚಿವ ಸಂಪುಟದ ವಿಸ್ತರಣೆಯನ್ನ ಹೈಕಮಾಂಡ್ ಮಾಡಬೇಕು, ನಮಗೇನು ಅದರ ಬಗ್ಗೆ ಗೊತ್ತಿಲ್ಲ ಹಿರಿಯ ಶಾಸಕರು ಮಂತ್ರಿ ಆಗಬೇಕೆಂದು ಆಕಾಂಕ್ಷಿ ವ್ಯಕ್ತಪಡಿಸಿದ ವಿಚಾರ 30ತಿಂಗಳ ನಂತರ ನಾವು ಮಂತ್ರಿಗಳು ಆಗಬೇಕೆಂದು ಬಹಳಷ್ಟು ಶಾಸಕರ ಒತ್ತಾಸೆ ಇದೆ ಸಚಿವ ಸಂಪುಟ ವಿಸ್ತರಣೆಯಾದರೆ ಒಳ್ಳೆಯದು,ಎಲ್ಲರಿಗೂ ಅವಕಾಶ ಸಿಗುತ್ತದೆ ಇದನ್ನ ನಿರ್ಧಾರ ಮಾಡೋ …

Read More »

ಭಾರಿ ಮಳೆ: ರಸ್ತೆಗಳು ಜಲಾವೃತ,

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ಮೇ 15 ರಿಂದ ಮೇ 18 ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಕಿತ್ತಳೆ(Orange) ಎಚ್ಚರಿಕೆಯನ್ನೂ ರವಾನಿಸಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ(Yellow) ಎಚ್ಚರಿಕೆ ನೀಡಲಾಗಿದೆ. ಇಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಭಾರಿ ಬಿರುಸಿನ ಮತ್ತು ಆಲಿಕಲ್ಲು ಮಳೆಯಾಗಿದೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ …

Read More »

ಎಂಎನ್​ಸಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ₹14.23 ಲಕ್ಷ ಪೀಕಿದ HR

ಬೆಂಗಳೂರು: ಕೆಲಸಕ್ಕಾಗಿ ನೀವೇನಾದರೂ ಇಂಟರ್​ವ್ಯೂಗೆ ಹೋದರೆ ಹುಷಾರಾಗಿರಿ. ಕಾರಣ, ಸಂದರ್ಶನ ಮಾಡುವ ಸೋಗಿನಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪಿ ಮಾನವ ಸಂಪನ್ಮೂಲ ಅಧಿಕಾರಿ (ಹೆಚ್​ಆರ್​) ಸಿಸಿಬಿ ಪೊಲೀಸರ ಅತಿಥಿಯಾಗಿದ್ಧಾನೆ. ಮೆಕ್ರೋಸಾಪ್ಟ್​, ಬಾಷ್ ಸೇರಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 8 ಮಂದಿ ಉದ್ಯೊಗಾಂಕ್ಷಿಗಳಿಂದ 14.23 ಲಕ್ಷ ಹಣ ಪಡೆದಿದ್ದ ಖಾಸಗಿ ಕಂಪನಿ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಯುವತಿಯು ನೀಡಿದ ದೂರು …

Read More »

ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಿ ಎಂದು ಯಾವನ ಮನೆಗೂ ನಾನು ಹೋಗಿಲ್ಲ:ಯತ್ನಾಳ್

ವಿಜಯಪುರ, ಮೇ 12: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವರಸೆಯನ್ನು ಮುಂದುವರಿಸಿದ್ದಾರೆ, ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಿ ಎಂದು ಯಾವನ ಮನೆಗೂ ನಾನು ಹೋಗಿಲ್ಲ, ಅದರ ಅವಶ್ಯಕತೆಯೇ ನನಗಿಲ್ಲ, ಯಾಕೆಂದರೆ ದೆಹಲಿ ವರಿಷ್ಠರೆಲ್ಲ (party seniors) ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಯತ್ನಾಳ್ ಹೇಳಿದರು. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿ ನಂತರ ದೆಹಲಿಯ ಬಿಜೆಪಿ ನಾಯಕರೆಲ್ಲ, ಭಯೋತ್ಪಾದಕರನ್ನು ಹತ್ತಿಕ್ಕುವ, ಪಾಕಿಸ್ತಾನಕ್ಕೆ ಪಾಠ ಕಲಿಸುವ, ಅಪರೇಷನ್ ಸಿಂಧೂರ, ಯುದ್ಧ, ಕದನ …

Read More »

ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ:* ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. ಭಾರತಕ್ಕಿದು ಸಂಕಷ್ಟದ ಕಾಲ, ಎಲ್ಲರೂ ಒಗ್ಗಟಾಗಿ ಎದುರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕಾಪುವಿನ ಪುರಾಣ ಪ್ರಸಿದ್ಧ ಮಾರಿಯಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಬೆಳಗಾವಿಯ ಸೊಸೆ …

Read More »