ಆತ ಆ ಏರಿಯಾದ ಯುವಕರಿಗೆಲ್ಲಾ ಅಚ್ಚು ಮೆಚ್ಚಿನ ಗೆಳೆಯ. ಮಾಡೊಕೆ ಕೆಲಸ ಇಲ್ಲ ಅಂದ್ರು, ಹುಡುಗರ ಜೊತೆ ಸೇರಿ ಓಡಾಡ್ಕೊಂಡು ಎಣ್ಣೆ ಪಾರ್ಟಿ ಮಾಡ್ಕೊಂಡು ಆರಾಮಾಗಿದ್ದ. ಆದರೆ, ಇತ್ತಿಚಿಗೆ ಅವೆಲ್ಲ ಬಿಟ್ಟು ಸೈಲೆಂಟ್ ಆಗಲು ನಿರ್ಧರಿಸಿದ್ದ. ಹೀಗಂತ ಎಲ್ಲಾ ಬಿಟ್ಟವನು ಇಂದು ಬೆಳಿಗ್ಗೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ. ಅದು ದುಷ್ಕರ್ಮಿಗಳ ಸ್ಕೆಚ್ಗೆ ಕೊಲೆಯಾಗಿದ್ದಾನೆ. ನಗರದಲ್ಲಿ ಭೀಕರವಾಗಿ ಹತ್ಯೆಯಾಗಿದೆ. ಮುಖ ಮೂತಿ ನೋಡದೆ ಮಚ್ಚೇಟು ನೀಡಿ ಎಸ್ಕೇಪ್ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ …
Read More »ಅಹೋರಾತ್ರನ ವಿರುದ್ಧ ಗುಡುಗಿದ ಸುನೀಲ್ ಕುರಿಬಾಂಡ್
ಕನ್ನಡ ನಟ ಕಿಚ್ಚ ಸುದೀಪ್ ಅವರ ಬಗ್ಗೆ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬರಹಗಾರ ಅಹೋರಾತ್ರ ವಿರುದ್ಧ ಸುನೀಲ್ ಕುರಿಬಾಂಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿರುವ ಸುನೀಲ್ ಕುರಿಬಾಂಡ್, ಅಹೋರಾತ್ರರ ವಿರುದ್ಧ ಕಿಡಿಕಾರಿದ್ದಾರೆ. ’25 ವರ್ಷದಿಂದ ಚಿತ್ರಜಗತ್ತಿನಲ್ಲಿ ಕಲಾಸೇವೆ ಮಾಡಿಕೊಂಡು ಬಂದಿರುವ ಒಬ್ಬ ಮೇರು ಕಲಾವಿದನ ಬಗ್ಗೆ ಏಕವಚನದಲ್ಲಿ ಹೀಯಾಳಿಸುವುದು ಸರಿಯಲ್ಲ, ನಿನಗೆ ತಾಕತ್ ಇದ್ದರೆ, ಧೈರ್ಯ ಇದ್ದರೆ …
Read More »ಪ್ರಕರಣ ದಾಖಲಿಸಿರುವುದಕ್ಕೆ ಹೆದರುವುದಿಲ್ಲ, ಮಸೂದೆ ಹಿಂಪಡೆಯದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ: ರಾಕೇಶ್ ಟಿಕಾಯತ್
ಬೆಂಗಳೂರು: ನನ್ನ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಹೆದರುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಮಸೂದೆಗಳನ್ನು ರದ್ದುಪಡಿಸಿದರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಹೇಳಿದ್ದಾರೆ. ದೆಹಲಿ ರೀತಿ ಬೆಂಗಳೂರನ್ನು ಮುತ್ತಿಗೆ ಹಾಕುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಟಿಕಾಯತ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟಿಕಾಯತ್, ದೂರಿಗೆ ಹೆದರುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ …
Read More »ಹೈಕೋರ್ಟ್‌ಗೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಅಧಿಸೂಚನೆ
ನವದೆಹಲಿ, ಮಾ.25- ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ದೇಶದ 25 ಹೈಕೋರ್ಟ್‍ಗಳಲ್ಲಿ 1080 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 419 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇತ್ತು. ಇದೀಗ ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಅಲಹಬಾದ್ ಹೈಕೋರ್ಟ್‍ಗೆ 40 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ನ್ಯಾಯಾಧೀಶರ …
Read More »ಇನ್ಮುಂದೆ ‘ಸರ್ಕಾರಿ ನೌಕರ’ರಿಗೆ ವಾರದಲ್ಲಿ 4 ದಿನ ಕೆಲಸ ‘3 ದಿನ’ ರಜೆ.?
ನವದೆಹಲಿ : ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಕೆಲಸದ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಇನ್ಮುಂದೆ ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡಿ, ಮೂರು ದಿನ ರಜೆ ನೀಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಇಂತಹ ಊಹಾಪೋಹಳಿಗೆ ಕೇಂದ್ರ ಕಾರ್ಮಿಕ ಸಚಿವರು ಸಂಸತ್ ನಲ್ಲಿ ಕೇಳಲಾದ ಪ್ರಶ್ನೆಗೆ ಏನ್ ಉತ್ತರಿಸಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.. ದೇಶದಲ್ಲಿ ಕೆಲವು ದಿನಗಳಿಂದ, ಮುಂಬರುವ …
Read More »ದರ್ಶನ್-ಸುದೀಪ್ ಒಂದಾಗಬೇಕು: ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ
ನಟ ದರ್ಶನ್ ಹಾಗೂ ಸುದೀಪ್ ಒಂದು ಸಮಯದಲ್ಲಿ ಕುಚುಕು ಗೆಳೆಯರಾಗಿದಿದ್ದು ನಿಮಗೆ ಗೊತ್ತೇ ಇದೆ. ಆ ನಂತರ ಇಬ್ಬರ ನಡುವೆ ಮುನಿಸು ಬಂದು ಈಗ ದೂರವಾಗಿದ್ದಾರೆ. ಆದರೆ, ಈಗ ಅವರ ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾಗ ಬೇಕೆಂದು ಬಯಸಿದ್ದಾರೆ. ಇದರ ಪರಿಣಾಮವಾಗಿ ಅಭಿಮಾನಿಗಳು ಟ್ವೀಟರ್‌ನಲ್ಲಿ ಒಂದು ಅಭಿಯಾನ ವನ್ನೇ ಆರಂಭಿಸಿದ್ದಾರೆ. #DbossKicchaComeTogether ಅಭಿಯಾನದಡಿ ಅವರ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಜೊತೆಗೆ ದರ್ಶನ್ ಸುದೀಪ್ ಜೊತೆಗಿರುವ ಸಿಡಿಪಿಯೊಂದನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. …
Read More »ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ನಾಳೆ `ಭಾರತ್ ಬಂದ್’ ಗೆ ಕರೆ
ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿರುವ ರೈತ ಸಂಘಟನೆಗಳು ಮಾರ್ಚ್ 26 ರ ನಾಳೆ ಸಂಪೂರ್ಣ ಭಾರತ್ ಬಂದ್ ಗೆ ಕರೆ ನೀಡಿವೆ. ‘ 40 ರೈತ ಸಂಘಗಳ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಕಾರ್ಮಿಕ ಸಂಘಗಳು, ಸಾರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘಗಳು ಮತ್ತು ಇತರೆ ಸಾಮೂಹಿಕ ಸಂಸ್ಥೆಗಳು ಭಾರತ್ ಬಂದ್ …
Read More »ಗೋಕಾಕ: ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸುತ್ತಿರುವುದು.
ಗೋಕಾಕ: ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ಅಬಲಿ ಎಂಬ ಸ್ಥಿತಿ ಮೀರಿ ಸಾಧನೆಯತ್ತ ದಾಪುಗಾಲು ಹಾಕುತ್ತಿದ್ದಾಳೆ ಎಂದು ಡಾ: ದೀಪಾ ತುಬಾಕಿ ಹೇಳಿದರು. ಬುಧವಾರದಂದು ನಗರದಲ್ಲಿ ಭಾವಯಾನ ವೇದಿಕೆಯವರು ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಕುಟುಂಬ ಮತ್ತು ವೃತ್ತಿ ನಿಭಾಯಿಸುತ್ತಾ ಮಹಿಳೆ ಸಾಧನೆಯತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ: ಜ್ಯೋತಿಲಕ್ಷ್ಮೀ ವಾಲಿ, ಡಾ: ವಿಜಯಲಕ್ಷ್ಮೀ ಪಲೋಟಿ, …
Read More »ಗೋಕಾಕ: ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.
ಗೋಕಾಕ: ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಿಘ್ನಹಾರ ಪಾಟೀಲ, ಸಚೀನಗೌಡ, ರಾಕೇಶ ಕೊಳದುರ್ಗಿ ಇವರು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಪ್ರಾಯೋಗಿಕ ವಿಭಾಗದಲ್ಲಿ ಚಿನ್ನ, ಲಿಖಿತ ವಿಭಾಗದಲ್ಲಿ ಬೆಳ್ಳಿಯ ಪದಕಗಳನ್ನು ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಚೇರಮನ್ ಲಖನ ಜಾರಕಿಹೊಳಿ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಸಿ.ಬಿ.ಪಾಗದ, ತರಬೇತಿದಾರ ಅಮೃತ ಕದ್ದು ಸೇರಿದಂತೆ …
Read More »ಮಸ್ಕಿ ಉಪ ಚುನಾವಣೆ; ಪ್ರತಾಪ್ ಗೌಡ ಪಾಟೀಲ್ ನಾಮಪತ್ರ
ರಾಯಚೂರು, ಮಾರ್ಚ್ 24: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ಪ್ರತಾಪ್ ಗೌಡ ಪಾಟೀಲ್ ಬುಧವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ. ಬಿಜೆಪಿ ಇನ್ನೂ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಬುಧವಾರ ಪ್ರತಾಪ್ ಗೌಡ ಪಾಟೀಲ್ ಅಂಕಲಿಮಠಕ್ಕೆ ಭೇಟಿ ನೀಡಿದರು. ಗಚ್ಚಿನಮಠಕ್ಕೆ ಭೇಟಿ ಕೊಟ್ಟರು. ಬಳಿಕ ಬಿಜೆಪಿ ಕಚೇರಿಗೆ ಆಗಮಿಸಿದರು. ಅಲ್ಲಿಂದ ಕಾರ್ಯಕರ್ತರ ಜೊತೆ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಬಂದರು. ಚುನಾವಣಾಧಿಕಾರಿ ಹಾಗೂ …
Read More »