Breaking News

ರಾಷ್ಟ್ರೀಯ

ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ

ಬೆಂಗಳೂರು: ಐಪಿಎಲ್‍ನ ಹೈ ವೋಲ್ಟೇಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಜಡೇಜಾ ಮ್ಯಾಜಿಕ್‍ನಿಂದಾಗಿ 69 ರನ್ ಗಳಿಂದ ಚೆನ್ನೈ ಭರ್ಜರಿ ಜಯ ಸಾಧಿಸಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವೆಲ್ ಪ್ಲೇಯ್ಡ್ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿಂದ ಇನ್ನೂ ಹೆಚ್ಚು ಆಸಕ್ತಿದಾಕವಾಗಿದೆ. ಅಲ್ಲದೆ ಆರ್ ಸಿಬಿಯ …

Read More »

ನಿಧನ ವಾರ್ತೆ ರಾಮಣ್ಣ ತೋಳಿನವರ ನಿಧನ

ಗೋಕಾಕ: ತಾಲೂಕಿನ ಮಾಲದಿನ್ನಿ ಗ್ರಾಮದ ನಿವಾಸಿ, ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ರಾಮಣ್ಣ ಭೀಮಪ್ಪ ತೋಳಿನವರ(68) ರವಿವಾರ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ: ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಉಪ್ಪಾರ ಸಮಾಜದ ಮುಖಂಡರು ರಾಮಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Read More »

ದೇಶೀಯ ಲಸಿಕೆ ಕೋವ್ಯಾಕ್ಸಿನ್ ದರ ನಿಗದಿ

ಹೈದರಾಬಾದ್: ದೇಶಾದ್ಯಂತ ಕೊರೊನಾ 2ನೇ ಅಲೆ ತಾಂಡವಾಡುತ್ತಿದ್ದು, ಹತೋಟಿಗೆ ತರಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ. ಇದರ ಭಾಗವಾಗಿ ಮೇ ತಿಂಗಳಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಹೀಗಿರುವಾಗಲೇ ದೇಶೀಯ ಕೊರೊನಾ ಲಸಿಕೆ ಕೋವ್ಯಾಕ್ಸಿನ್‍ಗೆ ದರ ನಿಗದಿಪಡಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ. ದರ ನಿಗದಿಪಡಿಸಲಾಗಿದೆ. ಈ ಕುರಿತು ಹೈದರಾಬಾದ್ ಮೂಲದ ಕೋವ್ಯಾಕ್ಸಿನ್ …

Read More »

ಸ್ವಂತ ಟಿವಿ ಚಾನೆಲ್ ಆರಂಭಿಸಿದ ‘ಕಾಂಗ್ರೆಸ್’

ದೇಶದ ಜನತೆಯನ್ನು ತಲುಪಲು ಕಾಂಗ್ರೆಸ್ ಪಕ್ಷ ಇದೀಗ ತನ್ನ ಸ್ವಂತ ಟಿವಿ ಚಾನೆಲ್ ಆರಂಭಿಸಿದೆ. ಐ.ಎನ್.ಸಿ. ಟಿವಿಗೆ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ (ಏಪ್ರಿಲ್ 24)ವಾದ ಶನಿವಾರದಂದು ಚಾಲನೆ ನೀಡಲಾಗಿದೆ. ದೇಶದಲ್ಲಿ ವಿವಿಧ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದ್ದರೂ ಸಹ ಇದು ಬಹಳಷ್ಟು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಲ್ಲ. ಹೀಗಾಗಿ ನೈಜ ವಿಷಯವನ್ನು ಜನರಿಗೆ ತಲುಪಿಸಲು ಟಿವಿ ಚಾನೆಲ್ ಆರಂಭಿಸಿರುವುದಾಗಿ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನೂತನ ಟಿವಿ ಚಾನೆಲ್ …

Read More »

ಖಾಸಗಿ ಆಸ್ಪತ್ರೆಗಳಿಗೆ ₹600, ರಾಜ್ಯಗಳಿಗೆ ₹400, ಕೇಂದ್ರಕ್ಕೆ 150 ರೂಪಾಯಿಗೆ ಕೊರೊನಾ ಲಸಿಕೆ ಮಾರಾಟ: ಸೀರಮ್ ಸ್ಪಷ್ಟನೆ

ನವದೆಹಲಿ: ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಯ ಮುಕ್ತ ಮಾರುಕಟ್ಟೆ ಬೆಲೆ ನಿಗದಿ ಕುರಿತು ಟೀಕೆಗೆ ಸೀರಮ್ ಸಂಸ್ಥೆ ಶನಿವಾರ ಪ್ರತಿಕ್ರಿಯಿಸಿದ್ದು, ‘ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ ₹600 ಮಾರಾಟ ಮಾಡಲಾಗುವುದು, ರಾಜ್ಯಗಳಿಗೆ ₹400 ಮತ್ತು ಕೇಂದ್ರಕ್ಕೆ 150 ರೂಪಾಯಿಗೆ ನೀಡಲಾಗುವುದು’ ಎಂದಿದ್ದಾರೆ. ತಯಾರಕರು ‘ಭಾರತದೊಂದಿಗೆ ಲಸಿಕೆಯ ಜಾಗತಿಕ ಬೆಲೆಗಳ ನಡುವೆ ಮಾಡಲಾದ ನಿಖರವಲ್ಲದ ಹೋಲಿಕೆ’ಯಾಗಿದೆ. ಪ್ರಸ್ತುತ ದೇಶದಲ್ಲಿ ಬಳಸಲಾಗುತ್ತಿರುವ ಎರಡು ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ …

Read More »

ಮುಂಗಡ ಹಣ ವಾಪಸ್ ನೀಡಲು ಕಲ್ಯಾಣ ಮಂಟಪ ಮಾಲೀಕರಿಂದ ನಕಾರ

ಚಿಕ್ಕಮಗಳೂರು: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ಕಠಿಣ ನಿಯಮವನ್ನು ಹೇರಲಾಗಿದೆ. ಸಾವಿರಾರು ಜನರನ್ನ ಸೇರಿಸಿ ಮದುವೆ ಮಾಡಬೇಕು ಎಂದು ಆಸೆಪಟ್ಟವರು ಇದೀಗ 50 ಮಂದಿಯನ್ನ ಸೇರಿಸಿ ಮದುವೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ದೊಡ್ದ ದೊಡ್ಡ ಹಾಲ್​ಗಳಲ್ಲಿ ಬುಕ್ ಮಾಡಿದ ಮದುವೆಗಳೇಲ್ಲ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಆದರೆ ಕನ್ಷೆಷನ್ ಹಾಲ್​ಗಳಿಗೆ ಮುಂಗಡವಾಗಿ ಕಟ್ಟಿದ ಹಣವನ್ನ ಮಾತ್ರ ಕೇಳಬೇಡಿ ಎಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರಲ್ಲಿ …

Read More »

ಮೋದಿಗೆ ಕೈ ಮುಗಿದು ಮನವಿ ಮಾಡಿದ ಸಿಎಂ! ಏಕೆ ಈ ರೀತಿ ಮಾಡಿದರು?

ನವದೆಹಲಿ : ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಕೇಜ್ರಿವಾಲ್ ಅವರು ಕೊರೊನಾ ಹೆಚ್ಚಾಗಿರುವ ಹತ್ತು ರಾಜ್ಯಗಳ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪ್ರಧಾನಿಯಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಪರಿಸ್ಥಿತಿ ನೋಡಿ, ನನಗೆ ನಿದ್ದೆ ಬರುತ್ತಿಲ್ಲ. ಒಂದೊಂದು ಸಾವು ನನ್ನನ್ನು ಕಾಡುತ್ತಿದೆ ಎಂದು ಗದ್ಗದಿತರಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್ ತಯಾರಿಸುವ ಘಟಕ …

Read More »

ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ.

ಉಡುಪಿ ಡಿಸಿ ಅವರು ಉತ್ತರಿಸಲೇ ಬೇಕು… ಮೆಹಂದಿಯಲ್ಲಿ ಭಾಗವಹಿಸಿ, ಮಾಸ್ಕ್ ಹಾಕದೇ‌ ಇರೋ ವ್ಯಕ್ತಿ ನೀವೇ ಆಗಿದ್ದರೆ… ಖಂಡನೀಯ!! ಮದುವೆಗೆ ಮಾತ್ರ ಅವಕಾಶ, ಮೆಹಂದಿಗೆ ಇಲ್ಲ ಈ‌ ನಿಯಮ ಜನ ಸಾಮಾನ್ಯರಿಗೆ ಮಾತ್ರವಾ? ಅದೂ ಅಲ್ಲದೆ ಮೊನ್ನೆ ಬಸ್ ನಿಂದ‌ ಇಳಿಸಿ ಕೇಸ್ ಹಾಕಿಸಿದ್ರಿ! ಇವತ್ತು ನೋಡಿದ್ರೆ ನೀವೇ ಮಾಸ್ಕ್ ಹಾಕಿಲ್ಲ… ತಪ್ಪಲ್ವಾ ಸರ್… ನಾವು ಇಂಥ ತಪ್ಪು ಮಾಡೋದಿಲ್ಲ ಅಂಥಲ್ಲಾ.. ಆದರೆ ನೀವೇ ಮಾಡಿದ್ರೆ ಹೇಗೆ? ಬಡವರಿಗೊಂದು ನ್ಯಾಯ, …

Read More »

ಯುವಕರ ಜೊತೆ ಪ್ರೇಯಸಿಯ ಚಾಟಿಂಗ್ ನೋಡಿ ಪ್ರಿಯಕರ ಮಾಡಿದ್ದೇನು ಗೊತ್ತಾ..?

ಮೈಸೂರು: ಪ್ರೇಯಸಿಯ ನಡತೆ ಪ್ರಶ್ನಿಸಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ ನಡೆದಿದೆ. ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದ ಯುವತಿ. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ ಬರುತ್ತಿದ್ದ ಮೆಸೇಜ್​ಗಳನ್ನು ತನ್ನ …

Read More »

ಬೆಳಗಾವಿ, ಗೋಕಾಕ ಸೇರಿ ಜಿಲ್ಲೆಯಾದ್ಯಂತ ಏಕಾಏಕಿ ಅಂಗಡಿಗಳು ಬಂದ್

ಬೆಳಗಾವಿ : ಜಿಲ್ಲೆಯಲ್ಲಿ ಅಗತ್ಯ ಸೇವೆ ಹೊರತು ಪಡೆಸಿ ಉಳಿದೆಲ್ಲ ಅಂಗಡಿ, ಮಳಿಗೆಗಳನ್ನು ಏಕಾಏಕಿ ಪೊಲೀಸರು ಇಂದು ಮಧ್ಯಾಹ್ನ ಬಂದ್ ಮಾಡಿಸಿದ್ದು, ವ್ಯಾಪಾರಿಗಳು, ಜನರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಿತ್ತು. ಆದರೆ ಇಂದು ಮಧ್ಯಾಹ್ನ ಮತ್ತೊಂದು ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಜನರು, ವ್ಯಾಪಾರಿಗಳು ಫುಲ್ ಶಾಕ್ ಆಗಿದ್ದಾರೆ. ಬೆಳಗಾವಿ ನಗರ, ಗೋಕಾಕ, ಘಟಪ್ರಬಾ ಸೇರಿದಂತೆ ಜಿಲ್ಲೆಯಾದ್ಯಂತ …

Read More »