ಬೆಂಗಳೂರು: ಸಂಚಾರಿ ವಿಜಯ್ ಸತ್ತಿಲ್ಲ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅಂತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಅರುಣ್ ನಾಯ್ಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಸಂಚಾರಿ ವಿಜಯ್ ಸಹೋದರ) ಸಿದ್ದೇಶ್ವರ್ ಅವರು ನಮ್ಮ ಅಣ್ಣ (ಸಂಚಾರಿ ವಿಜಯ್) ಅವರನ್ನು ಜೀವಂತವಾಗಿ ಇಡುವ ನಿಟ್ಟಿನಲ್ಲಿ ಅವರ ಅಂಗಾಗಳ ದಾನಕ್ಕೆ ಮುಂದಾಗಿದ್ದೇವೆ, ಅವರು ನಮ್ಮೊಂದಿಗೆ ಇಲ್ಲ ಅಂತ ಹೇಳುವುದಕ್ಕೆ ಬೇಸರವಾಗುತ್ತಿದೆ ಅಂತ ಹೇಳಿದ್ದರು. ಈ ನಡುವೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಆಪೋಲೋ …
Read More »ಸರ್ಕಾರದ ಧನಸಹಾಯ ಪಡೆಯಲು ಬ್ರ್ಯಾಡ್ಜ್ ಲೈಸೆನ್ಸ್ಗಾಗಿ ಸಾವಿರಾರು ಆಟೋ ಚಾಲಕರ ಪರದಾಟ
ಗದಗ: ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಧನಸಹಾಯ ಪಡೆಯಲು ಗದಗನಲ್ಲಿ ಸಾವಿರಾರು ಆಟೋ ಚಾಲಕರು ಪರದಾಟ ನಡೆಸಿದ್ದಾರೆ. ಧನಸಹಾಯ ಪಡೆಯಲು ಸೇವಾ ಸಿಂಧು ಪೋರ್ಟಲ್ನಲ್ಲಿ ಕೆಲವು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ. ಧನಸಹಾಯ ಪಡೆಯಲು ಅರ್ಜಿ ಹಾಕಿದರೆ ಅದು ಬ್ರ್ಯಾಡ್ಜ್ ಲೈಸೆನ್ಸ್ ಕೇಳ್ತಿದೆ. ಇದರಿಂದ ಜಿಲ್ಲಾಧಿಕಾರಿಗಳು ಬ್ರ್ಯಾಡ್ಜ್ ಲೈಸೆನ್ಸ್ ಪಡೆಯಲು ಎರಡು ದಿನಗಳ ಕಾಲ ಮಾತ್ರ ಅವಕಾಶ ಕೊಟ್ಟಿದ್ದರು. ಆದ್ರೆ ಎರಡು ದಿನದಲ್ಲಿ ಕೆಲವೇ ಕೆಲವು ಜನರಿಗೆ ಲೈಸೆನ್ಸ್ …
Read More »: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
ನವದೆಹಲಿ, ಜೂ. 14: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಹೊಸ ರೀತಿಯ ಸಮಸ್ಯೆ ಶುರುವಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪರ ಮತ್ತು ವಿರೋಧಿ ಗುಂಪುಗಳು ಹೇರುತ್ತಿರುವ ಒತ್ತಡದಿಂದ ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಎರಡೂ ಪಾಳೆಯದಿಂದ ದೂರುಗಳ ಸುರಿಮೆಳೆ …
Read More »ಗುಜರಾತ್ ಬದಲಾಗಲಿದೆ.2022ರ ವಿಧಾನಸಭಾ ಚುನಾವಣೆ-ಎಲ್ಲಾ ಕ್ಷೇತ್ರದಲ್ಲೂ AAP ಸ್ಪರ್ಧೆ
ನವದೆಹಲಿ:ಮುಂಬರುವ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಸೋಮವಾರ(ಜೂನ್ 14) ಘೋಷಿಸಿದ್ದಾರೆ. 2022ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಅಹಮದಾಬಾದ್ ನಗರಕ್ಕೆ ಕೇಜ್ರಿವಾಲ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಗುಜರಾತ್ ನ ಜನರು ಒಂದು ವೇಳೆ ದೆಹಲಿಯಲ್ಲಿ ಉಚಿತ ವಿದ್ಯುತ್ ನೀಡುತ್ತಾರೆ ಎಂದಾದರೆ ಗುಜರಾತ್ ನಲ್ಲಿ …
Read More »ಹುಲಿಯ ಹಾಲಿನ ಮೇವು, ಬಬ್ರುವಾಹನ ಖ್ಯಾತಿಯ ನಿರ್ಮಾಪಕ ನಿಧನ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್ (69) ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಚಂದ್ರಶೇಖರ್ ಅವರು ಹುಲಿಯ ಹಾಲಿನ ಮೇವು, ಬಬ್ರುವಾಹನ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದರು. ಕರ್ನಾಟಕ ಫಿಲಂ ಚೇಂಬರ್ ಹಾಗೂ ಎಸ್‌ಐಎಫ್‌ಸಿಸಿಆರ್‌ಐಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
Read More »ತುಂಬಿದ ತುಂಗಾ; 21 ಕ್ರಸ್ಟ್ ಗೇಟ್ ಓಪನ್
ಶಿವಮೊಗ್ಗ : ಹಠಕ್ಕೆ ಬಿದ್ದಂತೆ ಮುಂಗಾರು ಸುರಿಯುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆ ಕಂಡಿದೆ. ಈಗಾಗಲೇ ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ಬಳಿಯ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಹರಿಸಲಾಗುತ್ತಿದೆ. ಅಣೆಕಟ್ಟಿನ 21 ಕ್ರಸ್ಟ್ ಗೇಟ್‍ಗಳ ಮೂಲಕ 7,300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 2.85 ಕ್ಯೂಸೆಕ್ ನೀರು ಸಂಗ್ರಹ ಸಾಮಥ್ರ್ಯವನ್ನು ಹೊಂದಿದೆ. 1,500 ಕ್ಯೂಸೆಕ್ ನೀರು ನದಿಗೆ ಹಾಗೂ ಉಳಿದ 5,800 …
Read More »ಕೊರೊನಾಗೆ ಬಲಿಯಾದ ಕುಟುಂಬಕ್ಕೆ 1 ಲಕ್ಷ ಪರಿಹಾರ; ಸಿಎಂ ಘೋಷಣೆ
ಬೆಂಗಳೂರು: ಕೊರೊನಾ ಮಹಾಮಾರಿಗೆ ಹಲವಾರು ಕುಟುಂಬಗಳು ಬಲಿಯಾಗಿದ್ದು, ಅನೇಕರು ಬೀದಿ ಪಾಲಾಗಿದ್ದಾರೆ. ಕೋವಿಡ್ ನಿಂದ ಕುಟುಂಬದ ಹಿರಿಯರು ಮೃತಪಟ್ಟರೆ ಅಂತಹ ಕುಟುಂಬದವರಿಗೆ 1 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಹಿರಿಯರು ಕೊರೊನಾದಿಂದ ಮೃತಪಟ್ಟಿದ್ದರೆ ಅಂತಹ ಕುಟುಂಬದ ಒಬ್ಬರಿಗೆ 1 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು.
Read More »ಇಹಲೋಕದ ಸಂಚಾರ ನಿಲ್ಲಿಸಿದ ‘ಸಂಚಾರಿ’
ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಬೈಕ್ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಟನನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ ನಟನ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ಕುಮಾರ್ ನಾಯ್ಕ್ ಮಾತನಾಡಿ, ಸಂಚಾರಿ ವಿಜಯ್ ಗೆ ಚಿಕಿತ್ಸೆ ಶುರುವಾಗಿ 36 …
Read More »ಕೋವಿಡ್-೧೯ ಸಾಂಕ್ರಾಮಿಕಕ್ಕೆ ಬಲಿಯಾದ ತಂದೆ-ತಾಯಿಯರ ಮಕ್ಕಳಿಗೆ ಶುಲ್ಕ ವಿನಾಯಿತಿ: R.C.U.
ಬೆಳಗಾವಿ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಘಟಕವು ಸೋಂಕಿತರ ನೆರವಿಗೆ ನಿಂತಿರುವುದು, ಜನಕಲ್ಯಾಣ ಟ್ರಸ್ಟ್‌ದೊಂದಿಗೆ ಕೋವಿಡ್ ಕೇರ್ ಸೆಂಟರ್ ನಡೆಸುವ ಉಪಕ್ರಮದಲ್ಲಿ ಭಾಗಿಯಾಗಿರುವುದಲ್ಲದೆ ವಿಶ್ವವಿದ್ಯಾಲಯದ ದೀನದಯಾಳ ಅಧ್ಯಯನ ಪೀಠದ ವತಿಯಿಂದ ಮೂರು ದತ್ತು ಗ್ರಾಮಗಳಲ್ಲಿ ಆಹಾರ ಕಿಟ್‌ಗಳನ್ನು ವಿತರಿಸುವುದರ ಮೂಲಕ ತನ್ನ ಕಾಳಜಿಯನ್ನು ವ್ಯಕ್ತಪಡಿಸಿದೆ. ಅಲ್ಲದೆ, ವಿಶ್ವವಿದ್ಯಾಲಯದ ಅಧ್ಯಾಪಕರುಗಳು ಮನೆ ಬಾಗಿಲಿಗೆ ಉನ್ನತ ಶಿಕ್ಷಣ ಎನ್ನುವ …
Read More »”ಜನರ ಆಕ್ರೋಶದಿಂದ ಮೋದಿ ಭಸ್ಮಾಸುರನಂತೆ ನಾಶ”: ಉಗ್ರಪ್ಪ ಕಿಡಿ
ಬಳ್ಳಾರಿ, ಜೂ.13: ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದು, ”ಜನರಿಗೆ ಇಷ್ಟೆಲ್ಲ ಅನ್ಯಾಯ ಮಾಡುವ ಪ್ರಧಾನಿ ನರೇಂದ್ರ ಮೋದಿ ಭಸ್ಮಾಸುರನಂತೆ ಸುಟ್ಟು ನಾಶವಾಗುತ್ತಾರೆ” ಎಂದು ಕಿಡಿಕಾರಿದ್ದಾರೆ. ದೇಶದಲ್ಲಿ ಕಳೆದ ಹಲವು ದಿನಗಳಿಂದ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿದ್ದು, ದೇಶದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ. …
Read More »