ಧಾರವಾಡ, ಜುಲೈ 12: “ಕರ್ನಾಟಕ ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ, ಮುಂದೆ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು,” ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಭವಿಷ್ಯ ನುಡಿದರು. ಸೋಮವಾರ ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಉಮೇಶ್ ಕತ್ತಿ, “ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ, ಸುಮ್ಮನಿರಲ್ಲ. ಈ ಭಾಗದ ಜನರ ಸಹಕಾರದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕಟ್ಟುವುದು ಶತ ಸಿದ್ಧ,” ಎಂದು ಮತ್ತೊಮ್ಮೆ ರಾಜ್ಯ ವಿಭಜನೆಯ ಮಾತುಗಳನ್ನಾಡಿದರು. …
Read More »ಮಾಟ-ಮಂತ್ರ ಎಂದು ಜನರಿಗೆ ಮೋಸ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ
ಗದಗ: ಕಷ್ಟಪಟ್ಟು ಮೈ ಬಗ್ಗಿಸಿ ದುಡಿಯದೇ ಆರಾಮಾಗಿ ಹಣ ಮಾಡಲು ಮುಂದಾಗಿದ್ದ, ಜನರನ್ನು ನಂಬಿಸಿ ಹಣ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಡೋಂಗಿ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬುವ ವ್ಯಕ್ತಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ. ಸದ್ಯ ಈತನ ಕೃತ್ಯ ಬಯಲಾಗಿದ್ದು ಸ್ಥಳೀಯರು ಡೋಂಗಿ ಬಾಬಾನಿಗೆ ತಕ್ಕ ಪಾಠ ಕಲಿಸಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯವನಾಗಿದ್ದ ಡೋಂಗಿ ಬಾಬಾ ಅನೇಕ …
Read More »ಹಾಳಾದ ರಸ್ತೆ, ಸೇತುವೆ ದುರಸ್ತಿಪಡಿಸಿ: ಅಧಿಕಾರಿಗಳಿಗೆ ಸಚಿವ ಸೂಚನೆ
ಬೀದರ್: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ರಸ್ತೆ ಹಾಗೂ ಸೇತುವೆಗಳು ಹಾಳಾಗಿವೆ. ತಕ್ಷಣ ದುರಸ್ತಿ ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲವು ಕಡೆಗಳಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತು ರಸ್ತೆಯೇ ಕಾಣದಂತಹ ಸ್ಥಿತಿಯಿದೆ. ರಸ್ತೆಗಳ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರಸ್ತೆಗಳಲ್ಲಿ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲಲ್ಲಿ …
Read More »ಹುಬ್ಬಳ್ಳಿ: ನೆಲೆ ನಿಂತರೂ ಅಲೆಮಾರಿಗಳಿಗಿಲ್ಲ ಸೌಲಭ್ಯ
ಕಲಬುರ್ಗಿ: ಡಾಂಬರ್ ಕಾಣದ, ತಗ್ಗು ಗುಂಡಿಗಳಿಂದ ಕೂಡಿದ ದೂಳುಮಯ ರಸ್ತೆ, ಮಳೆ ಬಂದರೆ ಸೋರುವ ಜೋಪಡಿಗಳು, ಚರಂಡಿ ಇಲ್ಲದೆ ಎಲ್ಲೆಂದರಲ್ಲಿ ನಿಂತಿರುವ ತ್ಯಾಜ್ಯ ನೀರು… ನಗರ ಹೊರವಲಯದ ಶಹಾಬಾದ್ ರಸ್ತೆಯಲ್ಲಿನ ಅಲೆಮಾರಿ ಬುಡ್ಗ ಜಂಗಮ ಕಾಲೊನಿಯ ದುಸ್ಥಿತಿ ಇದು. ರಾಜ್ಯದ ವಿವಿಧ ಭಾಗಗಳಿಂದ ಬಂದು ಕಳೆದ 8 ವರ್ಷಗಳಿಂದ ಇಲ್ಲಿಯೇ ನೆಲೆ ಕಂಡುಕೊಂಡಿರುವ ಬುಡ್ಗ ಜಂಗಮ ಸಮುದಾಯದ 200ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಲಭ್ಯದಿಂದ ವಂಚಿತವಾಗಿವೆ. ಯಾದಗಿರಿ ಜಿಲ್ಲೆ ಯರಗೋಳ ಗ್ರಾಮದ …
Read More »ಈ ಊರಲ್ಲಿ ಮನೆಗೊಂದು ಕುದುರೆ: ಔಷಧಕ್ಕೂ, ಶಾಲೆಗೆ ಶಿಕ್ಷಕರು ಬರೋಕೂ, ಹೆಣ ಸಾಗಿಸೋಕೂ ಇಲ್ಲಿ ಕುದುರೆಗಳೇ ವಾಹನ !
ಹತ್ತಿರದ ಹಳ್ಳಿಗಳಿಗೆ ಅಥವಾ ಬೇರ್ಯಾವುದೇ ಕೆಲಸಕ್ಕೆ ಮತ್ತೊಂದೆಡೆ ಪ್ರಯಾಣಿಸಬೇಕು ಎಂದರೆ ಕುದುರೆಯ ಮೇಲೆ ಏರಿಯೇ ಹೋಗಬೇಕಾದ ಅನಿವಾರ್ಯತೆ ಈ ಜನರದ್ದು. ಇವರು ವಾಸಿಸುವ ಸ್ಥಳಗಳಿಗೆ ತೆರಳಲು ರಸ್ತೆಯಾಗಲಿ, ವಾಹನ ಬರುವ ಸೌಕರ್ಯವಾಗಲಿ ಇಲ್ಲ, ಹಾಗಾಗಿ ಕುದುರೆಗಳೇ ಇಲ್ಲಿ ವಾಹನಗಳು. ತಾವು ಬೆಳೆದ ಬೆಳೆಗಳನ್ನು ಮಾರಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಪ್ರತಿದಿನ ಈ ಆದಿವಾಸಿಗಳು ಕನಿಷ್ಟ 12ರಿಂದ 25 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಕುದುರೆಗಳ ಮೇಲೆ ಇಲ್ಲಿನ ಜನ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. …
Read More »ಬಿಜೆಪಿ ನಾಯಕನ ಸಂಬಂಧಿ ಹತ್ಯೆ; ಚಾಕುವಿನಿಂದ ಇರಿದು ಕೊಲೆಗೈದ ಆರೋಪಿಗಳು
ಹುಬ್ಬಳ್ಳಿ: ಬಿಜೆಪಿ ರೈತ ಮೋರ್ಚಾದ ನಾಯಕ ಈಶ್ವರ ಗೌಡ ಅಣ್ಣನ ಮಗನ ಹತ್ಯೆಯಾಗಿದೆ. ಅಭಿಷೇಕ್ ಗೌಡರ್ ಪಾಟೀಲ್(22) ಹತ್ಯೆಯಾದ ಯುವಕ. ಹುಬ್ಬಳ್ಳಿಯ ಗೋಪನಕೊಪ್ಪ ಅಮರ ಕಾಲೋನಿ ಕ್ರಾಸ್ ಬಳಿ ಘಟನೆ ನಡೆದಿದ್ದು ಸಂಜೆ ನಡೆದ ಘಟನೆಗೆ ಹುಬ್ಬಳ್ಳಿ ಜನ ದಂಗಾಗಿದ್ದಾರೆ. ಆರೋಪಿಗಳು ಚಾಕು ಹಾಕಿ ಅಭಿಷೇಕ್ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಉಡುಪಿ: ಬಾಗಲಕೋಟೆ ಮೂಲದ ದಂಪತಿಗಳ ಮಗು ಅಪಹರಣ
ಉಡುಪಿ:ಇಲ್ಲಿನ ಕರಾವಳಿ ಬೈಪಾಸ್ ಬಳಿಯ ಶೆಡ್‌ನಲ್ಲಿ ವಾಸಿಸುತ್ತಿರುವ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ಅಪರಿಚಿತರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಂಪತಿಗಳು, ಭಾರತಿ ಮತ್ತು ಅರುಣ್ ಮತ್ತು ಅವರ ಮಗ ಶಿವರಾಜ್ (2.4 ವರ್ಷ) ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನವರು.ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ವಲಸೆ ಕಾರ್ಮಿಕರಾದ ದಂಪತಿಗಳು ಕರಾವಳಿ ಬೈಪಾಸ್ ಬಳಿಯ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯವನೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ದಂಪತಿಗಳಿಗೆ ಪರಿಚಯವಾಗಿದ್ದರು.ಭಾನುವಾರ ಬೆಳಿಗ್ಗೆ, ಅವರು ಚಹಾ ಅಂಗಡಿಗೆ ಕರೆದೊಯ್ಯುತ್ತೇನೆ ಎಂದು …
Read More »ಬುಧವಾರ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ ರೈತರೊಬ್ಬರ ಶವ ಪತ್ತೆ
ವಿಜಯಪುರ : ಬುಧವಾರ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ ರೈತರೊಬ್ಬರ ಶವ ಪತ್ತೆಯಾಗಿದೆ. ಆಲಮೇಲ ತಾಲೂಕಿನ ಕುರಬತಹಳ್ಳಿ ಗ್ರಾಮದ ಬಸಣ್ಣ ಅಂಬಾಗೋಳ (55) ಕರಬತಹಳ್ಳಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕರಬತಹಳ್ಳಿ ಹಳ್ಳ ತುಂಬಿಬಂದಿತ್ತು. ಹಳ್ಳದ ಪ್ರವಾಹ ಲೆಕ್ಕಿಸದೇ ಮನೆಗೆ ಮರಳಲು ಹಳ್ಳಕ್ಕೆ ಇಳಿದಾಗ ನೀರಿನ ಸೆಳವಿಗೆ ಸಿಕ್ಕು ರೈತ ಕೊಚ್ಚಿಕೊಂಡು ಹೋಗಿದ್ದರು. ವಿಷಯ ತಿಳಿಯುತ್ತಲೇ ಬುಧವಾರ ದಿಂದಲೇ ಕೊಚ್ಚಿಕೊಂಡು ಹೋಗಿದ್ದ ರೈತನಿಗಾಗಿ ತಾಲೂಕ ಆಡಳಿತದ ನೇತೃತ್ವದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ …
Read More »ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿರಾಯ
ಧಾರವಾಡ: ಶೂರ್ಪನಖಿಯ ಮೂಗನ್ನು ಲಕ್ಷ್ಮಣನು ಖಡ್ಗದಿಂದ ಕತ್ತರಿಸಿದರೆ, ಆಧುನಿಕ ಯುಗದಲ್ಲಿ ಬಾಯಿಂದಲೇ ಪತ್ನಿಯ ಮೂಗು ಕತ್ತರಿಸಿದ ಪತಿರಾಯ. ರಾಮ-ಲಕ್ಷ್ಮಣರನ್ನು ಮೋಹಿಸಿ ಬಂದ ಶೂರ್ಪನಕಿ ಮೂಗನ್ನು ಲಕ್ಷ್ಮಣ ಖಡ್ಗದಿಂದ ಕತ್ತರಿಸಿದ ಪುರಾಣದ ಕಥೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇಲ್ಲೊಬ್ಬ ಆಧುನಿಕ ಪತಿ ಬಾಯಿಯಿಂದಲೇ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಉಮೇಶ ಗುಂಡಗುದರಿ ಹೆಂಡತಿ ಗೀತಾಳ ಮೂಗು ಕಚ್ಚಿದ ಪಾಪಿ …
Read More »ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಗ್ರಾಮ ಮಟ್ಟದಲ್ಲಿ ಕೇಂದ್ರ: ರಾಜ್ಯ ಸರ್ಕಾರದಿಂದ ತೀರ್ಮಾನ
ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಈಗಾಗಲೇ ಆದೇಶ ಹೊರಬಿದ್ದಿದೆ. ಆಧಾರ್ ಬಹುತೇಕ ಎಲ್ಲ ಸೇವೆಗಳಿಗೆ ಅನಿವಾರ್ಯವಾಗಿದ್ದು, ಕೊರೊನಾ ಲಸಿಕೆ ಪಡೆಯಲು ಸಹ ಆಧಾರ್ ಸಂಖ್ಯೆ ಬೇಕಾಗುತ್ತದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಕೆಲವರು ಇನ್ನೂ ಸಹ ಆಧಾರ್ ನೋಂದಣಿ ಮಾಡದ ಕಾರಣ ಅನಾನುಕೂಲವಾಗಿದೆ. ಆಧಾರ್ ನೋಂದಣಿ ಮಾಡಿಸಲು ಅಥವಾ ತಿದ್ದುಪಡಿಗಾಗಿ …
Read More »
Laxmi News 24×7