ಕಾರವಾರ: ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಅಪ್‌ಲೋಡ್ ಮಾಡಿದವರಿಗೆ, ಅದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡವರಿಗೆ (ಶೇರ್) ಪೊಲೀಸ್ ಇಲಾಖೆಯಿಂದ ಬಿಸಿ ಮುಟ್ಟತೊಡಗಿದೆ. ಒಂದೊಂದೇ ಪ್ರಕರಣಗಳನ್ನು ಹುಡುಕಿ ತೆಗೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಮಕ್ಕಳಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ, ಅಶ್ಲೀಲ ವಿಡಿಯೊಗಳನ್ನು ನೋಡುವುದೂ ಭಾರತೀಯ ದಂಡಸಂಹಿತೆಯ ಪ್ರಕಾರ ಅಪರಾಧ. ಅದರಲ್ಲೂ ಫೇಸ್‌ಬುಕ್, ವಾಟ್ಸ್‌ಆಯಪ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಡೌನ್‌ಲೋಡ್ ಮಾಡುವುದು ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ. ಜಿಲ್ಲೆಯಲ್ಲಿ ಒಂದು ವರ್ಷದ …
Read More »ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದ ವ್ಯಕ್ತಿ ಅಧಿಕಾರಿಗಳ ಕಣ್ತಪ್ಪಿಸಲು ಮಾಡಿದ್ದೇನು ಗೊತ್ತಾ…?
ಮನೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಲು ವ್ಯಕ್ತಿಯೊಬ್ಬ ಹಾವಿನಂತೆ ತೆವಳುತ್ತಾ ಮನೆಯ ಛಾವಣಿ ತಲುಪಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮುರಾದ್ನಗರದಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಹೊಂದಿದ್ದ ಮನೆಯ ಮೇಲೆ ದಾಳಿ ನಡೆಸಿದ ವೇಳೆ ವಿದ್ಯುತ್ ಇಲಾಖೆ ಸಿಬ್ಬಂದಿ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ. ತಮ್ಮ ಮನೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ದಾಳಿ ಮಾಡ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ವ್ಯಕ್ತಿ ಹಾವಿನಂತೆ ತೆವಳುತ್ತಾ …
Read More »ಪುಡ್ಕಿಟ್ ವಿತರಣೆಯಲ್ಲಿ ನೂಕಾಟ ಉಂಟಾಗಿ ಗಲಾಟೆ ಆರಂಭ
ಚಿಕ್ಕಬಳ್ಳಾಪುರ: ಫುಡ್ಕಿಟ್ ವಿತರಣೆ ಸಂದರ್ಭದಲ್ಲಿ ಜನ ಕಿತ್ತಾಟ ನಡೆಸಿ ಕಿಟ್ಗಳನ್ನು ಹೊತ್ತೊಯ್ದ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಇಂದು ಪಟ್ಟಣದ ಶಾದಿ ಮಹಲ್ನಲ್ಲಿ ಪುಡ್ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು. ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿದ್ದರು. ಸಾಂಕೇತಿಕವಾಗಿ ಪುಡ್ಕಿಟ್ಗೆ ಚಾಲನೆ ನೀಡಿ ನಾಯಕರು ತೆರಳಿದ ಬಳಿಕ ಶಾಸಕರು ಪುಡ್ಕಿಟ್ ವಿತರಿಸಲು ಆರಂಭಿಸಿದ್ದಾರೆ. ಈ …
Read More »ಕೋವಿಡ್ ನಿಂದ ಮೃತಪಟ್ಟ ರೈತರ ಸಾಲ ಮನ್ನಾ.!
ಬೆಂಗಳೂರು: ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ನೆರವು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಕೋವಿಡ್ ಗೆ ಬಲಿಯಾದ ರೈತರ ಸಾಲ ಮನ್ನಾ ಮಾಡಲು ಚಿಂತನೆ ನಡೆಸಿದೆ. ಈ ಕುರಿತು ಸಚಿವ ಎಸ್.ಟಿ.ಸೋಮಶೇಖರ ಮಾಹಿತಿ ನೀಡಿದ್ದು, ಕೊರೋನಾದಿಂದ ಮೃತಪಟ್ಟ 10187 ರೈತರ 79.47 ಕೋಟಿ ರೂ. ಸಾಲ ಮನ್ನಾ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ 3-4 ದಿನಗಳಲ್ಲಿ ಅಪೆಕ್ಸ್, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಭೆ …
Read More »ಲಸಿಕೆ ದೊರೆಯದೆ ವಾಪಸಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಸಾಗರ: ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು ಇಲ್ಲಿನ ದೇವರಾಜ ಅರಸು ಸಭಾಭವನಕ್ಕೆ ಮಂಗಳವಾರ ಬಂದಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಲಸಿಕಾ ಕೇಂದ್ರದಲ್ಲಿ ಲಸಿಕೆ ಸಂಗ್ರಹವಿಲ್ಲದ ಕಾರಣ ಮನೆಗೆ ಮರಳಬೇಕಾಯಿತು. ಕಾಗೋಡು ತಿಮ್ಮಪ್ಪ ಅವರಿಗೆ ಎರಡನೇ ಡೋಸ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಮಂಗಳವಾರ ಬರುವಂತೆ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿತ್ತು. ಆ ಪ್ರಕಾರ ಅವರು ಲಸಿಕಾ ಕೇಂದ್ರಕ್ಕೆ ಬಂದರೆ ‘ಲಸಿಕೆ ಸಂಗ್ರಹವಿಲ್ಲ’ ಎಂಬ ಫಲಕ ನೋಡಿ …
Read More »ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು.
ಕೊಪ್ಪಳ: ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು. ನಿಜ! ಸಾಧಿಸುವ ಛಲ ಇದ್ರೆ ಪಡೆಯುವ ಹುಚ್ಚು ಇರಬೇಕು ಅಂತಾರೆ. ಅದರಂತೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ತಾನು ಕಲಿತ ಚಿತ್ರಕಲೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೌದು! ಕಲೆಯೆನ್ನುವುದೇ ಹಾಗೆ ಒಂದು ಸಲ ಅದರ ಹುಚ್ಚು ಹಿಡಿದ್ರೆ, ಬರಿ ಬಣ್ಣ ಹಾಗೂ ಪೆನ್ಸಿಲ್, ಪೇಂಟಿಂಗ್ ಬ್ರಷ್ಗಳ ಮಧ್ಯೆ ಕಲಾವಿದರು ತಮ್ಮ ಕಾಲವನ್ನು ಕಳೆಯುತ್ತಾರೆ. ಕೊಪ್ಪಳದ …
Read More »‘ಒಂದಾಗಿದ್ವಿ, ಒಂದಾಗಿರೋಣ’: ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ತೆರೆಬೀಳುವ ಸಾಧ್ಯತೆ ಇದೆ. ನಿನ್ನೆಯಿಂದ ಭಾರಿ ಸದ್ದು ಮಾಡಿದ್ದ ವಂಚನೆ ಪ್ರಕರಣಕ್ಕೆ ದರ್ಶನ್ ಮತ್ತು ಉಮಾಪತಿ ಇಬ್ಬರು ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಪ್ರಕರಣದಿಂದ ದರ್ಶನ್ ಮತ್ತು ಉಮಾಪತಿ ನಡುವಿನ ಸ್ನೇಹ ಸಂಬಂಧ ಮುರಿದು ಬಿತ್ತು ಎನ್ನುವ ಅನುಮಾನ ಎಲ್ಲರಲ್ಲೂ ಕಾಡಿತ್ತು. ಆದರೀಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಒಂದಾಗಿದ್ವಿ, ಒಂದಾಗಿರೋಣ ಎಂಡಿದ್ದಾರೆ. ಮೈಸೂರಿನಿಂದ …
Read More »ಬರಹಗಾರ ಟಿಕೆ ದಯಾನಂದ್‌ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ ಟಾಲಿವುಡ್
ಕನ್ನಡ ಚಿತ್ರರಂಗವನ್ನು ಪರಭಾಷಿಕರು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಕನ್ನಡದ ಸಿನಿಮಾಗಳು, ಕತೆಗಳ ಆಯ್ಕೆ ಕುರಿತು ಹೆಚ್ಚು ಗಮನ ಕೊಡುತ್ತಿದ್ದಾರೆ. ಕರ್ನಾಟಕದಾಚೆ ಕನ್ನಡ ತಂತ್ರಜ್ಞರು ಮಿಂಚುತ್ತಿರುವ ಸಮಯ ಇದು. ಇದೀಗ, ಕನ್ನಡದ ಖ್ಯಾತ ಬರಹಗಾರ ಟಿಕೆ ದಯಾನಂದ್ ಅವರಿಗೆ ಟಾಲಿವುಡ್‌ನಿಂದ ಅವಕಾಶ ಹುಡುಕಿಕೊಂಡು ಬಂದಿದೆ. ಬೆಲ್ ಬಾಟಮ್, ಆಕ್ಟ್ 1978 ಅಂತಹ ಚಿತ್ರಗಳಿಗೆ ಕಥೆ-ಸಂಭಾಷಣೆ ರಚಿಸಿರುವ ಟಿಕೆ ದಯಾನಂದ್ ಕೆಲಸ ಮೆಚ್ಚಿಕೊಂಡ ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ ರೆಡ್ ಕಾರ್ಪೆಟ್ ಹಾಕಿ …
Read More »‘ಲವ್ 360’ಗಾಗಿ ಮೇಘಾ ಶೆಟ್ಟಿಯನ್ನು ಸಂಪರ್ಕಿಸಿದ ನಿರ್ದೇಶಕ ಶಶಾಂಕ್
ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ “ಲವ್ 360” ನಲ್ಲಿ ನವ ನಾಯಕ ಪ್ರವೀಣ್ ಅವರನ್ನು ತೆರೆಗೆ ತರಲಿದ್ದಾರೆ. ಈ ಚಿತ್ರಕ್ಕಾಗಿ ನಾಯಕಿಯ ಆಯ್ಕೆ ಅಂತಿಮಗೊಳಿಸಲು ನಿರ್ದೇಶಕರು ಹುಡುಕಾಟದಲ್ಲಿದ್ದಾರೆ. ಮತ್ತು, ಇತ್ತೀಚಿನ ಮಾಹಿತಿಯಂತೆ ಈ ಪಾತ್ರಕ್ಕಾಗಿ ಜನಪ್ರಿಯ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ. ಮೇಘಾ ತನ್ನ ಚೊಚ್ಚಲ ಟಿವಿ ಧಾರಾವಾಹಿ “ಜೊತೆ ಜೊತೆಯಲಿ”ಮೂಲಕ ಖ್ಯಾತರಾಗಿದ್ದಾರೆ. ಇದೀಗ ಅವರು ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. …
Read More »ಟೂರಿಸ್ಟ್ ವ್ಯಾನ್ ಸುತ್ತುವರೆದ ದೈತ್ಯಾಕಾರದ 3 ಹುಲಿಗಳು
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದಿಷ್ಟು ಕ್ಯೂಟ್ ವಿಡಿಯೋಗಳಾಗಿದ್ದರೆ ಇನ್ನು ಕೆಲವು ಬೆಚ್ಚಿಬೀಳಿಸುವ ಕಥೆಯನ್ನು ಹೇಳುತ್ತವೆ. ಕೆಲವು ಭಯಾನಕ ಸನ್ನಿವೇಶಗಳೂ ಸಹ ಭಾರೀ ಚರ್ಚೆಯಾಗುತ್ತವೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ(Viral Video) ಕೂಡಾ ಅಂಥದ್ದೇ! ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಭಯವಾಗುತ್ತದೆ. ಕೆಲವರು ಇಂಥಹ ಭಯಾನಕ ದೃಶ್ಯವನ್ನು ಇನ್ನೂ ನೋಡಿಲ್ಲ ಎಂದು ಹೇಳಿದ್ದರೆ ಇನ್ನೊರ್ವರು, ನಾನಲ್ಲಿದ್ದಿದ್ದರೆ ಹೃದಯ ಬಡಿತವೇ ನಿಂತೋಗ್ಬಿಟ್ತಿತ್ತೇನೋ.. ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಭಾರೀ ಸುದ್ದಿಯಲ್ಲಿರುವುದಂತೂ …
Read More »