ನವದೆಹಲಿ, ಜುಲೈ 11: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರಿ ನೌಕರರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೇಲೆ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿರುವ ಸರ್ಕಾರಿ ನೌಕರರು 8ನೇ ವೇತನ ಆಯೋಗ ರಚನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ …
Read More »2ಎ ಮೀಸಲಾತಿಗೆ ಸದನದಲ್ಲಿ ಆಗ್ರಹಿಸುವೆ: ಶಾಸಕ ಕಾಶಪ್ಪನವರ
ಇಳಕಲ್: ‘ಲಿಂಗಾಯತ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎ ಅಡಿ ಸೇರಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 28 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲದು, ಸಂದರ್ಭ ಬಂದರೆ ಅಧಿಕಾರ ತ್ಯಾಗ ಮಾಡಿ ಹೋರಾಟದಲ್ಲಿ ಪಾಲ್ಗೊಳ್ಳುವೆ’ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ನೀಡಿದ …
Read More »ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ಶಂಕಿತ ಡೆಂಘಿ ಜ್ವರಕ್ಕೆ ಬಾಲಕಿ ಬಲಿ
ಬೆಳಗಾವಿ : ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ಶಂಕಿತ ಡೆಂಘಿ ಜ್ವರಕ್ಕೆ ಬಾಲಕಿ ಬಲಿ** ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಶಂಕಿತ ಡೆಂಘಿ ಜ್ವರಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ. 11 ವರ್ಷದ ಶ್ರೇಯಾ ಕೃಷ್ಣಾ ದೇವದಾತೆ, ತಂದೆ, ಡೆಂಗಿ ಜ್ವರದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶ್ರೇಯಾ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ನಿವಾಸಿಯಾಗಿದ್ದು, ಥೈಪಾಡ್‌ನಿಂದ ಬಳಲುತ್ತಿದ್ದಳು. ಈ ಕುರಿತು, ಡಿಹೆಚ್ಒ ಮಹೇಶ ಕೋಣಿ, ಜಿ ಬಿ ಏನ್ 7 …
Read More »ಗುರುಸಿದ್ಧದೇವ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ 17ರಂದು
ಬಾದಾಮಿ: ಶಿವಯೋಗಮಂದಿರ ಸಮೀಪದ ಮಲಪ್ರಭಾ ನದಿ ದಂಡೆಯ ಬಸವೇಶ್ವರ ಪುಣ್ಯಕ್ಷೇತ್ರದಲ್ಲಿ ಜುಲೈ 17ರಂದು ಬಂದಗದ್ದೆ, ಕೆಳದಿ ಸಂಸ್ಥಾನ ರಾಜಗುರು ಹಿರೇಮಠ ಮತ್ತು ಮಂಗಳೂರ ಮಠದ ಗುರುಸಿದ್ಧದೇವ ಶಿವಾಚಾರ್ಯರ 15ನೇ ಪುಣ್ಯಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಸಂಸ್ಥಾನ ಹಿರೇಮಠ ಬಂದಗದ್ದೆ, ಕೆಳದಿ ಮಂಗಳೂರು ಮಠದ ಮೃತ್ಯುಂಜಯ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 6 ಗಂಟೆಗೆ ಗುಳೇದಗುಡ್ಡ ಮುರುಘಾಮಠದ ಕಾಶಿನಾಥ ಸ್ವಾಮೀಜಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸುವರು. ಲಿಂ. ಗುರುಸಿದ್ಧದೇವ …
Read More »ಕೋತಿ ಕಚ್ಚಿ 8 ಮಂದಿಗೆ ಗಾಯ
ಬಾದಾಮಿ: ಬನಶಂಕರಿ ರಸ್ತೆಯ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಮೀಪ ಮಂಗಳವಾರ ಸಂಜೆ ಕಪ್ಪು ಕೋತಿಯೊಂದು ಮಹಿಳೆಯರು ಸೇರಿದಂತೆ ಎಂಟಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ ಎಂದು ಗಾಯಗೊಂಡ ಮಹಾದೇವ ಪತ್ರಿಕೆಗೆ ಹೇಳಿದರು. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಕೋತಿ ನೆಗೆದಾಡುತ್ತ ಜನರ ತಲೆ, ಕಾಲು, ಬೆನ್ನು ಮತ್ತು ಕೈಗೆ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಗಾಯಗೊಂಡವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ …
Read More »ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಇಳಕಲ್: ‘ಬಡವರಿಗೆ, ಕೂಲಿಕಾರರಿಗೆ ರಿಯಾಯ್ತಿ ದರದಲ್ಲಿ ಊಟ, ಉಪಹಾರ ನೀಡುವ ಇಂದಿರಾ ಕ್ಯಾಂಟಿನ್ ಹುನಗುಂದದಲ್ಲಿ ಮಂಜೂರಾಗಿದ್ದರೂ, ಹಿಂದಿನ ಸರ್ಕಾರ ಹಾಗೂ ಆಗಿನ ಶಾಸಕರು ದುರುದ್ದೇಶದಿಂದ ಆರಂಭಿಸಿರಲಿಲ್ಲ’ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು. ಅವರು ಮಂಗಳವಾರ ಇಲ್ಲಿಯ ಪೊಲೀಸ್ ಠಾಣೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ‘ಕೆಲವೇ ತಿಂಗಳುಗಳಲ್ಲಿ ಕ್ಯಾಂಟಿನ್ ಅರಂಭವಾಗಲಿದೆ. ಕೇವಲ ₹ 5 ಮತ್ತು …
Read More »ರಾಜ್ಯದಲ್ಲಿ ಮತ್ತೊಂದು ‘ಕೀಚಕ ಕೃತ್ಯ’: ಡ್ರಾಫ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ‘ದುರುಳ’ರಿಂದ ಅತ್ಯಾಚಾರ
ಕೊಡಗು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಡ್ರಾಫ್ ನೀಡುವ ನೆಪದಲ್ಲಿ ಬಾಲಕಿಯೊಬ್ಬಳ ಮೇಲೆ ಕೀಚಕರ ಕೃತ್ಯವನ್ನು ದುರುಳರು ಮೆರೆದಿದ್ದಾರೆ. ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರೇ, ಮತ್ತೋರ್ವ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆಸಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಐವರು ಬಾಲಕಿಯರನ್ನು, ಮಾರುತಿ 800 ಅಪರಿಚಿತ ಕಾರಿನಲ್ಲಿ ಡ್ರಾಫ್ ಕೊಡುವುದಾಗಿ ಕರೆದೊಯ್ದಿದ್ದಾರೆ. ನಾಗರಹೊಳೆಗೆ ಡ್ರಾಫ್ ಕೊಡ್ತಾರೆ ಅಂತ ಕಾರು ಹತ್ತಿದಂತ …
Read More »ಪಹಣಿಗೆ ಆಧಾರ್ ಜೋಡಣೆ|ಕೆ.ಹೊಸಳ್ಳಿ ರಾಜ್ಯಕ್ಕೆ ಪ್ರಥಮ: ಉಪತಹಶೀಲ್ದಾರ್
ಸಿಂಧನೂರು: ತಾಲ್ಲೂಕಿನ ಕೆ.ಹೊಸಳ್ಳಿ ಗ್ರಾಮದಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಶೇ 98ರಷ್ಟು ಮುಗಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಜಾಲಿಹಾಳ ಹೋಬಳಿಯ ಉಪತಹಶೀಲ್ದಾರ್ ಶ್ರೀನಿವಾಸ ಹೇಳಿದರು. ಪಹಣಿಗೆ ಆಧಾರ್ ಜೋಡಣೆ ಯಶಸ್ಸಿಗಾಗಿ ತಾಲ್ಲೂಕಿನ ಜಾಲಿಹಾಳ ಹೋಬಳಿ ಕೇಂದ್ರದಲ್ಲಿ ಕೆ.ಹೊಸಳ್ಳಿ ಗ್ರಾಮದ ಆಡಳಿತ ಅಧಿಕಾರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪಹಣಿಗಳಿಗೆ ಆಧಾರ್ ಜೋಡಣೆಯಿಂದ ಪಹಣಿಯಲ್ಲಿ ರೈತರ ಭಾವಚಿತ್ರ ಬರುತ್ತದೆ. ಯಾವುದೇ ರೀತಿಯ ಸಮಸ್ಯೆಗಳ ಉದ್ಭವಿಸಿದರೂ, …
Read More »ಕುಮಟಾ | ಹೊಳೆಗೆ ಉರುಳಿದ ಖಾಲಿ ಗ್ಯಾಸ್ ಟ್ಯಾಂಕರ್
ಕುಮಟಾ: ಹೆದ್ದಾರಿ ಬದಿಯ ಹೊಳೆಗೆ ಖಾಲಿ ಗ್ಯಾಸ್ ಟ್ಯಾಂಕರ್ ಹೊತ್ತ ಲಾರಿ ಉರುಳಿ ಬಿದ್ದು ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಪಟ್ಟಣದ ಹೊನಮಾಂವ್ ಬಳಿ ನಡೆದಿದೆ. ಖಾಲಿ ಟ್ಯಾಂಕರ್ ಹೊತ್ತ ಲಾರಿ ಗೋವಾದಿಂದ ಮಂಗಳೂರಿಗೆ ಹೋಗುತ್ತಿತ್ತು. ವಾಹನದ ಎದುರು ಬೈಕ್ ಬಂದಾಗ ಅಪಾಯ ಸಂಭವಿಸುವುದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಲಾರಿ ಪಕ್ಕದ ಹೊಳೆಗೆ ಉರುಳಿದೆ. ಲಾರಿ ಚಾಲಕ ಜಾರ್ಖಂಡ್ ಮೂಲದ ಬಿರೇಂದರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ …
Read More »ಶಾಲಾ ಕೊಠಡಿಯಲ್ಲಿ ಶಿಕ್ಷಕಿ ಜೊತೆ ಹೆಡ್ ಮಾಸ್ಟರ್ ರೋಮ್ಯಾನ್ಸ್ ; ಏನ್ ಕಾಲ ಬಂತು ಗುರು…?
ಶಾಲಾ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವವರು. ವಿಧ್ಯೆ ಕಲಿಸುವ ಶಿಕ್ಷಕರ ಮೇಲೆ ತಮ್ಮ ಮಕ್ಕಳ ಭವಿಷ್ಯವನ್ನೇ ಮುಡಿಪಾಗಿಟ್ಟು ಪೋಷಕರು ಸುಂದರ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಶಿಕ್ಷಕರು ಶಾಕೆಯಲ್ಲೇ ಮೈ ಮರೆತರೆ ಏನಾಗಬಹುದು ಎಂಬುದಕ್ಕೆ ಈ ಸುದ್ದಿ ಸಾಕ್ಷಿಯಾಗಿದೆ. ಹೌದು ಶಾಲೆಯ ಕೊಠಡಿಯಲ್ಲೇ ಮಹಿಳಾ ಶಿಕ್ಷಕಿ ಹಾಗೂ ಶಾಲೆಯ ಹೆಡ್ ಮಾಸ್ಟರ್ ಸೇರಿ ರೋಮ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಧ್ಯ ಈ ವೀಡಿಯೋ ನೋಡಿದ ನೆಟ್ಟಿಗರು ಶಾಲಾ …
Read More »