Breaking News

ರಾಷ್ಟ್ರೀಯ

ರೆಡಿಯಾಯ್ತು ರಷ್ಯಾದ ಎಸ್​​-400! ಇವು 400 ಕಿಲೋಮೀಟರ್​ವರೆಗೆ ಸಾಗಿ ದಾಳಿ ನಡೆಸೋ ಸಾಮರ್ಥ್ಯ ಹೊಂದಿರುತ್ತವೆ.

ಯುಕ್ರೇನ್ ಮೇಲೆ ರಷ್ಯಾ ಮುಗಿಬಿದ್ದು ಈಗಾಗಲೇ ಒಂದು ವಾರ ಕಳೆದೋಗಿದೆ. ಸಂಘರ್ಷ 8ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಇಲ್ಲಿ ರಷ್ಯಾ ಅಂದುಕೊಂಡಿದ್ದರ ಮಟ್ಟಿಗೆ ಯಶಸ್ಸು ಸಿಗ್ತಾ ಇಲ್ಲ. ಯುಕ್ರೇನ್ ಕಡೆಯಿಂದ ಬಲವಾದ ವಿರೋಧ ಎದುರಾಗ್ತಿದೆ. ಮತ್ತೊಂದ್ಕಡೆ ಪಾಶ್ಚಿಮಾತ್ಯ ದೇಶಗಳು ಯುಕ್ರೇನ್​​ಗೆ ನಿರಂತರವಾಗಿ ಸಪೋರ್ಟ್ ಮಾಡ್ತಾ ಇದಾರೆ. ಇದ್ರ ನಡುವೆಯೇ ಭಾನುವಾರ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ರೆಡಿ ಇಟ್ಕೊಳ್ಳಿ ಅಂತ ಆದೇಶಿಸಿದ್ರು. ಇದೀಗ ಕಂಟ್ರೋಲ್​​ಗೆ ಬಾರದ ಯುಕ್ರೇನ್​ ಮೇಲೆ ಎಸ್​​ 400 …

Read More »

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಡಿ ಬಾಸ್‌’ ಘೋಷಣೆಗೆ ಸಿ.ಎಂ ಪೆಚ್ಚು!

ಬೆಂಗಳೂರು: ಚಿತ್ರಾಭಿಮಾನ, ಅಭಿಮಾನಿಗಳ ಜೈಕಾರ, ರಾಜಕೀಯ ಮೇಳ, ಬೇಡಿಕೆಗಳ ಪಟ್ಟಿ ಮತ್ತು ಭರವಸೆಗಳ ಮಹಾಪೂರಗಳ ನಡುವೆ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ಸಿಕ್ಕಿತು. ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್‌ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುಮಾರು ಒಂದು ಗಂಟೆಯಷ್ಟು ತಡವಾಗಿ ಆರಂಭವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಆರಂಭಿಸಿದ ಕೆಲ ಕ್ಷಣಗಳಲ್ಲಿ ನಟ ದರ್ಶನ್‌ ಬಂದರು   ಆ ವೇಳೆಗೆ ಸಭಾಂಗಣದಲ್ಲಿದ್ದ …

Read More »

ಬೊಮ್ಮಾಯಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ಧತೆ.

ಬಜೆಟ್ ಎಂದಾಕ್ಷಣ ಜನ ಸಾಮಾನ್ಯರಿಂದ ಹಿಡಿದು ಉದ್ಯಮಿಗಳ ತನಕ ಹತ್ತು ಹಲವು ನಿರೀಕ್ಷೆಗಳು ಗರಿಗೆದ ರುವುದು ಸಹಜ. ಇಂಥದ್ದೆ ನಿರೀಕ್ಷೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ಮೇಲೂ ಇದೆ. ಮೊದಲಿಂದಲೂ ರೈತ ಸಮುದಾಯಕ್ಕೆ ಬಜೆಟ್​ನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಂಗಾರಪ್ಪ, ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ವಿಶೇಷ ಕಾಳಜಿ ವಹಿಸಿದ್ದಾರೆ. ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, …

Read More »

ಅಮರಾವತಿʼಯೇ ಆಂಧ್ರಪ್ರದೇಶದ ರಾಜಧಾನಿ!. ಹೈಕೋರ್ಟ್‌ನ ಅಂತಿಮ ತೀರ್ಪು ಪ್ರಕಟ

ಅಮರಾವತಿ(ಆಂಧ್ರಪ್ರದೇಶ): ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ 3 ರಾಜಧಾನಿಗಳು, ಸಿಆರ್‌ಡಿಎ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಸಿಆರ್‌ಡಿಎ ಕಾಯ್ದೆ ಪ್ರಕಾರವೇ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.   ʻಅಮರಾವತಿʼಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಆದೇಶಿಸಲಾಗಿದೆ. ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಾಲಕಾಲಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. …

Read More »

ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟದಲ್ಲಿ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಸುರಕ್ಷಿತವಾಗಿ ಈ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರುವ ಕೆಲಸ ನಡೆಯುತ್ತಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಮಹತ್ವದ ಮಾತುಕತೆ ನಡೆಸಿದರು. ದೂರವಾಣಿ ಮೂಲಕ ನಡೆದ ಮಾತುಕತೆಯಲ್ಲಿ ಉಕ್ರೇನ್​​ನಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗಿದ್ದು, ವಿಶೇಷವಾಗಿ ಖಾರ್ಕಿವ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನ ವಾಪಸ್​​ ಕರೆತರುವ ಬಗ್ಗೆ …

Read More »

ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

ಹಾವೇರಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸ್ ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ ಎಮದು ಮೃತ ನವೀನ್ ಸಹೋದರ ಹರ್ಷ ಭಾವುಕರಾದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ಮನೆಯಲ್ಲಿ ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೆ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಗದ್ಗದಿತರಾದರು.  ರಷ್ಯಾ-ಉಕ್ರೇನ್ ನಡುವಿನ ಯುದ್ಧದ …

Read More »

ಎಳೇಬೈಲ್‍ನಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ಶಾಸಕರ ನಿಧಿ

ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ. ನೀಡಲಾಗಿದೆ. ಮೊದಲ ಕಂತಿನಲ್ಲಿ 2.77 ಲಕ್ಷ ರೂ,ಗಳ ಚೆಕ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದೇವಸ್ಥಾನದ ಕಮೀಟಿಯವರಿಗೆ ಮಂಗಳವಾರ ಹಸ್ತಾಂತರಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಮನೋಹರ್ ಬೆಳಗಾಂವ್ಕರ್, ಮೃಣಾಲ ಹೆಬ್ಬಾಳಕರ್, ಮಹೇಶ ಪಾಟೀಲ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

Read More »

ನಾನು ಅಂಬರೀಶ್ ಮಾಡಬಾರದನ್ನೂ ಮಾಡಿದ್ದೇವೆ’: ಸಿಎಂ ಬೊಮ್ಮಾಯಿ

ಬೆಂಗಳೂರು, ಫೆ 28: ಕನ್ನಡ ಚಿತ್ರೋದ್ಯಮದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಶ್ ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಕಾರ್ಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫ್ಲ್ಯಾಷ್ ಬ್ಯಾಕಿಗೆ ಹೋಗಿದ್ದಾರೆ. ತಮ್ಮ ಮತ್ತು ಅಂಬರೀಶ್ ಅವರ ನಲವತ್ತು ವರ್ಷದ ಒಡನಾಟದ ಬಗ್ಗೆ ರಸವತ್ತಾಗಿ ಸಭೆಯಲ್ಲಿ ವಿವರಣೆಯನ್ನು ನೀಡಿದ ಬೊಮ್ಮಾಯಿ ಅವರ ಹೇಳಿಕೆಗೆ ನೆರೆದಿದ್ದ ಜನಸ್ತೋಮ ಚಪ್ಪಾಳೆಯ ಮೇಲೆ ಚಪ್ಪಾಳೆಯನ್ನು ಹೊಡೆದಿದೆ. “ನನ್ನ ಆತ್ಮೀಯ ಸ್ನೇಹಿತ ಅಂಬರೀಶ್, ನಮ್ಮ …

Read More »

ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು

ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು ಗಜಾನನ ನಾಯಿಕ್ ಕೊಲೆಯಾದ ದುರ್ದೈವಿ. ಸುಮಾರು ಅನೇಕ ವರ್ಷಗಳಿಂದ ಗಜಾನನ ನಾಯಕ್ ಹಾಗೂ ಅವರ ಪತ್ನಿ ಬೇರೆಯಾಗಿಯೇ ವಾಸಮಾಡುತ್ತಿದ್ದರು. ಗಜಾನನ ತಮ್ಮ ಮಗನೊಂದಿಗೆ ವಾಸ ಮಾಡುತ್ತಿದ್ದರು. ನಿನ್ನೆ ಮಗ ಉಜಗಾಂವ್‍ಗೆ ಹೋದ ಸಂದರ್ಭದಲ್ಲಿ ಇಂದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ತಂದೆ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಡಿಸಿಪಿ ರವಿಂದ್ರ ಗಡಾದಿ, ಎಸಿಪಿ …

Read More »

ಗೋಕಾಕ ಮುಪ್ಪಯ್ಯನ ಮಠದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ : ರಾಚೋಟಿ ಶ್ರೀಗಳಿಂದ ಚಾಲನೆ

ಗೋಕಾಕ : ನಗರದ ಸೋಮವಾರ ಪೇಟೆಯ ಅಂಗನವಾಡಿ ಕೇಂದ್ರ ಸಂಖ್ಯೆ 176 ಮತ್ತು 177 ರ ಮಕ್ಕಳಿಗೆ ರವಿವಾರದಂದು ಶ್ರೀ ಮುಪ್ಪಯ್ಯನವರ ಹಿರೇಮಠದಲ್ಲಿ ಪೂಜ್ಯ ಶ್ರೀ ರಾಚೋಟಿದೇವರು ಪೋಲಿಯೋ ಹನಿ ನೀಡುವ ಮೂಲಕ ಫಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಿರ್ಮಲಾ ಸುಭಂಜಿ, ಲಕ್ಷ್ಮೀ ದೇಶನೂರ, ಮುಖಂಡರಾದ ಮಲ್ಲಿಕಾರ್ಜುನ ಹೊಸಪೇಠ, ಧರೀಶ ಕಲಘಾಣ, ಬಸವರಾಜ ಶೇಗುಣಸಿ, ಸೋಮಶೇಖರ ಮಗದುಮ್ಮ, ಬಸವರಾಜ ದೇಶನೂರ, ಗಣೇಶ ಕರೋಶಿ, …

Read More »