Breaking News

ರಾಷ್ಟ್ರೀಯ

ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್

ಸ್ಯಾಂಡಲ್ವುಡ್, ಟಾಲಿವುಡ್, ಕಿರುತೆರೆಯಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಜನಮನ್ನಣೆ ಪಡೆದಿರುವ ನಟಿ ತೇಜಸ್ವಿನಿ ಪ್ರಕಾಶ್, ಖಾಸಗಿ ಕಂಪನಿಯ ಉದ್ಯೋಗಿ ಪಣಿ ವರ್ಮಾ ಜೊತೆಗೆ ನಿನ್ನೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಣಿ ಮತ್ತು ತೇಜಸ್ವಿನಿ ಹಲವು ವರ್ಷಗಳಿಂದ ಸ್ನೇಹಿತರು, ಈ ಸ್ನೇಹವೇ ಪ್ರೀತಿಗೆ ತಿರುಗಿ ಇದೀ ಹೊಸ ಜೀವನಕ್ಕೆ ನಾಂದಿ ಹಾಡಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ವಧು, ವರರ ಕುಟುಂಬಸ್ಥರು, ಅನೇಕ ಸಿನಿ ಮತ್ತು ಕಿರುತೆರೆ ಕಲಾವಿದರು …

Read More »

ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಬಳಿಯಲ್ಲಿ ಖಾಸಗಿ ಬಸ್ ಅಪಘಾತಗೊಂಡು ಭೀಕರ ದುರ್ಘಟನೆ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ದುರಂತದ ಬಳಿಕ 7 ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ.   ಹೌದು.. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆ ಎಸ್ ಆರ್ ಟಿ ಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆ ಟು …

Read More »

ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

ದಾವಣಗೆರೆ: ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲಿನ ವೈದ್ಯಕೀಯ ಕೋರ್ಸ್​ಗೂ, ಇಲ್ಲಿಗೂ ಬದಲಾವಣೆ ಇದೆ‌. ಈಗಾಗಲೇ ಇಂತಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಭಾರತೀಯ ವೈದ್ಯಕೀಯ ಮಂಡಳಿ ಚಿಂತನೆ ಮಾಡುತ್ತಿದೆ ಎಂದು ದಾವಣಗೆರೆಯಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ‌ ಕಡಿಮೆ …

Read More »

ಜನಪ್ರತಿನಿಧಿಗಳನ್ನು ಕೆಳಗಿಸುವ ಅಧಿಕಾರ ಜನರ ಕೈಗೆ.. ಶಾಸಕರು, ಸಚಿವರಿಗೆ ಸಿಎಂ ಮಾನ್​ ಹೊಸ ಟಾಸ್ಕ್​​

ಚಂಡೀಗಢ: ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ಸಚಿವರ, ಶಾಸಕರ ಭದ್ರತೆ ರದ್ದು, 25 ಸಾವಿರ ಸರ್ಕಾರಿ ಹುದ್ದೆಗಳ ನೇಮಕಕ್ಕೆ ಸೂಚನೆ, ಭ್ರಷ್ಟಾಷಾರ ನಿಗ್ರಹಕ್ಕೆ ಸಹಾಯವಾಣಿ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸದ ಸಚಿವರನ್ನು ‘ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ಜನರಿಗೆ ನೀಡಿ’ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮೊಹಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಪಕ್ಷದ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಸಿಎಂ ಭಗವಂತ್​ ಮಾನ್​ ಅವರು ಸರ್ಕಾರದಲ್ಲಿ …

Read More »

15 ವರ್ಷವಾದ್ರೂ ಮುಗಿಯದ ಇದೆಂಥ ದ್ವೇಷನಪ್ಪಾ? ಜನಸಂದಣಿ ನಡುವೆ ಬಂದು 500ಕ್ಕೂ ಹೆಚ್ಚು ಸಲ ಕಚ್ಚಿದ ಹಾವು!

ಲಾತೂರು(ಮಹಾರಾಷ್ಟ್ರ): ಹಾವಿನ ದ್ವೇಷ 12 ವರ್ಷ ಎನ್ನುತ್ತಾರೆ. ಆದರೆ ಅಲ್ಲಲ್ಲಿ ಕೆಲವೊಂದು ಘಟನೆಗಳನ್ನು ನೋಡಿದರೆ ಮೈ ಝುಂ ಎನ್ನುವುದು ಉಂಟು. ಒಂದೇ ಹಾವು ಪದೇ ಪದೇ ಬಂದು ಒಬ್ಬ ವ್ಯಕ್ತಿಯನ್ನು ಕಚ್ಚುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇಎಉತ್ತವೆ.   ಆದರೆ ಅಚ್ಚರಿ ಮಹಾರಾಷ್ಟ್ರದ ಲಾತೂರಿನಲ್ಲಿ ವ್ಯಕ್ತಿಯೊಬ್ಬನಿಗೆ ಇದಾಗಲೇ 500ಕ್ಕೂ ಅಧಿಕ ಬಾರಿ ಹಾವು ಬಂದು ಕಚ್ಚಿದೆ. ಅನೇಕ ಜನರು ಒಟ್ಟಿಗೆ ಕೆಲಸ ಮಾಡ್ತಿದ್ದ ಸಂದರ್ಭದಲ್ಲೂ ಅಂದರೆ ಜನ ನಿಬಿಡ ಪ್ರದೇಶದಲ್ಲಿಯೂ ಈತನಿಗೆ …

Read More »

ಕೇಸರಿ ಧ್ವಜವೇ ಒಂದು ದಿನ ರಾಷ್ಟ್ರಧ್ವಜ ಆಗತ್ತೆ- ಕಲ್ಲಡ್ಕ ಪ್ರಭಾಕರ್‌

ಮಂಗಳೂರು: ‘ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು’ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದಾರೆ. ಕರಾವಳಿಯ ಕಾರ್ನಿಕ ದೈವ ಕೊರಗಜ್ಜ ಕ್ಷೇತ್ರದ ಕಡೆ ಭಕ್ತರ ನಡಿಗೆ ಎಂಬ ಹೆಸರಿನಲ್ಲಿ ನಡೆದ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ …

Read More »

ಸಿಎಂ ವಿರುದ್ಧ ಎಚ್​ಡಿಕೆ ಗರಂ;

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಆ ಮೂರು ಆರ್ ಮತ್ತು ನಾಲ್ಕು ಗಂಟೆ.. ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿನ್ನೆ ಸಂಭವಿಸಿದ ಬಸ್ ದುರಂತದಲ್ಲಿ ಗಾಯಗೊಂಡವರನ್ನು ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಸಿಎಂ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು.   ನಿನ್ನೆ ಚಿಕ್ಕಬಳ್ಳಾಪುರದಲ್ಲಿ ನಡೆದ ಆರ್​ಆರ್​ಆರ್​ ಸಿನಿಮಾ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ …

Read More »

ಡೀಸೆಲ್ ಬೆಲೆ ಲೀಟರ್​ಗೆ 25 ರೂಪಾಯಿ ಹೆಚ್ಚಳ; ಚಿಂತೆ ಯಾರಿಗೆ?

ನವದೆಹಲಿ: ಈ ಹಿಂದೆಯೇ ಸುಳಿವು ಇದ್ದಂತೆ ತೈಲ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಡೀಸೆಲ್​ ದರ ಲೀಟರ್​ವೊಂದಕ್ಕೆ 25 ರೂಪಾಯಿ ಏರಿದೆ. ಅದಾಗ್ಯೂ ಚಿಲ್ಲರೆಯಾಗಿ ಡೀಸೆಲ್ ಭರಿಸಿಕೊಳ್ಳುವ ವಾಹನ ಮಾಲೀಕರು ಚಿಂತೆ ಮಾಡುವಂತಿಲ್ಲ. ಹಾಗಾದರೆ, ಈ ಬೆಲೆ ಏರಿಕೆಯ ಚಿಂತೆ ಯಾರಿಗೆ?   ಹೌದು.. ಡೀಸೆಲ್​​ ದರದಲ್ಲಿ ಪ್ರತಿ ಲೀಟರ್​ಗೆ 25 ರೂ. ಹೆಚ್ಚಳವಾಗಿದ್ದರೂ ಚಿಲ್ಲರೆಯಾಗಿ ಡೀಸೆಲ್​ ಭರಿಸಿಕೊಳ್ಳುವ ವಾಹನ ಮಾಲೀಕರಿಗೆ ಅದರ ಬಿಸಿ ಸದ್ಯಕ್ಕಂತೂ ತಟ್ಟುವಂತಿಲ್ಲ. ಏಕೆಂದರೆ ಈ ಬೆಲೆ ಏರಿಕೆ …

Read More »

ಭಗ್ನ ಪ್ರೇಯಸಿ ಉಪನ್ಯಾಸಕಿ; ಪ್ರಿಯಕರನ ಮದುವೆ ದಿನವೇ ಆತ್ಮಹತ್ಯೆ!

ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನ ಅತಿಥಿ ಉಪನ್ಯಾಸಕಿಯೊಬ್ಬರು ಪ್ರೇಮವೈಫಲ್ಯದಿಂದ ಮನನೊಂದು ತನ್ನ ಪ್ರಿಯಕರ ಮದುವೆಯಾದ ದಿನವೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಭಾನುವಾರ ಬೆಳಗ್ಗೆ ತಮ್ಮ ಮನೆಯ ಬೆಡ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಏನಿದು ಪ್ರಕರಣ?: ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಆಕೆಗೆ ವಿನೋಬನಗರದ ನಿವಾಸಿಯಾದ ತನ್ನ ಸಹಪಾಠಿಯೊಂದಿಗೆ ಸ್ನೇಹ ಬೆಳೆದಿತ್ತು. ಆನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ವೈಮನಸ್ಸು ಉಂಟಾಗಿತ್ತು. ನಂತರ ಪ್ರಿಯಕರನಿಗೆ …

Read More »

38 ಲಕ್ಷ ರೂ. ಬಾಡಿಗೆ ಬಾಬ್ತು ಪಾವತಿಸದ ಜಮೀರ್ ಅಹಮದ್​​; ಐವರು ಮಾಜಿ ಸಚಿವರಿಂದಲೂ ಬಾಕಿ..

ಬೆಂಗಳೂರು: ರಾಜ್ಯದಲ್ಲಿ ಬಿ.ಝಡ್. ಜಮೀರ್ ಅಹಮದ್ ಖಾನ್ ಸೇರಿ 6 ಮಾಜಿ ಸಚಿವರು ಸರ್ಕಾರದಿಂದ ನೀಡಲಾಗಿದ್ದ ವಸತಿ ಗೃಹಗಳ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತುಗಳನ್ನು ಮೂರು ವರ್ಷವಾದರೂ ಪಾವತಿಸಿಲ್ಲ. ರಾಜ್ಯದಲ್ಲಿ ಸಚಿವರಾದವರಿಗೆ ಸರ್ಕಾರದಿಂದ ಆಡಳಿತ ಕಾರ್ಯವೈಖರಿಗೆ ಅನುಕೂಲ ಆಗುವಂತೆ ವಸತಿ ಗೃಹ ನೀಡಲಾಗುತ್ತದೆ. ಕೆಲವರು ಅಧಿಕಾರ ಪೂರ್ಣಗೊಂಡರೂ ವಸತಿ ಮನೆ ಬಿಟ್ಟು ಹೋಗದೇ ಇದ್ದಲ್ಲಿ, ಎಷ್ಟು ದಿನಗಳವರೆಗೆ ಉಳಿದುಕೊಂಡಿರುತ್ತಾರೋ ಅಷ್ಟು ಅವಧಿಗೆ ಬಾಡಿಗೆ ಮತ್ತು ಗೃಹೋಪಯೋಗಿ ವಸ್ತುಗಳ ಬಾಬ್ತು ಪಾವತಿಸಬೇಕು. …

Read More »