ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಿದ್ದ ಗ್ರಾಮೀಣ ಪೊಲೀಸರು ಇಂದು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಬೆಳಗಾವಿ ತಾಲೂಕಿನ ಹಲಗಾ ಬಸ್ತವಾಡ ಗ್ರಾಮದ ಸಧ್ಯ ಭವಾನಿ ನಗರದ ಸಂಸ್ಕøತಿ ಫಾಮ್ರ್ಸನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡ ಬೊಮ್ಮನ್ನವರನನ್ನು ಮಾರ್ಚ 15ರಂದು ಬೆಳ್ಳಂ ಬೆಳಿಗ್ಗೆ ಹತ್ಯೆ ಮಾಡಲಾಗಿತ್ತು. ಆರೋಪಿಗಳಿಗೆ …
Read More »ಬಣ್ಣ ಆಡುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಜನರು ಆತಂಕದಲ್ಲಿ
ರಂಗ ಪಂಚಮಿ ಹಬ್ಬದ ಪ್ರಯುಕ್ತ ಬಣ್ಣ ಆಡುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಬಣ್ಣ ಎರಚಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಗ್ರಾಮ ಪಂಚಾಯತ ಅಧ್ಯಕ್ಷನನ್ನು ತಳ್ಳಾಡುವುದರ ಜೊತೆಗೆ ಪೊಲೀಸರ ಮೇಲೆಯೇ ಯುವಕರ ಗುಂಪೊಂದು ಹಲ್ಲೆ ಮಾಡಿದೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‍ಐ ಹಾಗೂ …
Read More »ಪಾರ್ವತಮ್ಮ ರಾಜ್ ಕುಮಾರ್-ಪುನೀತ್ ಹೆಸರಿನಲ್ಲಿ ಮೈಸೂರು ವಿವಿಯಲ್ಲಿ 2 ಚಿನ್ನದ ಪದಕ
ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರತಿ ವರ್ಷವೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ ಪ್ರತಿಭಾವಂತರಿಗೆ 2 ಚಿನ್ನದ ಪದಕವನ್ನು ನೀಡುವುದಾಗಿ ರಾಘವೇಂದ್ರ ರಾಜ್ ಕುಮಾರ್ ಘೋಷಿಸಿದ್ದಾರೆ. ಇಂದು ಮೈಸೂರಿನ ವಿವಿಯಲ್ಲಿ ನಡೆಯುತ್ತಿರುವ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ‘ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಎರಡು ಚಿನ್ನದ ಪದಕಗಳನ್ನು ನೀಡುವುದಾಗಿ ತಿಳಿಸಿದರು. ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲಿ, ಬ್ಯೂಸಿನೇಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಬಂಗಾರದ ಪದಕ ಮತ್ತು …
Read More »ಎಸಿಬಿ ದಾಳಿ ಕಣ್ಣೊರೆಸುವ ತಂತ್ರ, ಭ್ರಷ್ಟರಿಗೆ ಶಿಕ್ಷೆ ಆಗುತ್ತಿಲ್ಲ: ಹೆಚ್‍ಡಿಕೆ
ಬೆಂಗಳೂರು: ಜನ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರು ಸಮೃದ್ಧವಾಗಿದ್ದಾರೆ. ಜನರಿಗೆ ಬೆಲೆ ಏರಿಕೆಗಿಂತ ಭಾವನಾತ್ಮಕ ವಿಷಯಗಳೇ ಹೆಚ್ಚು ಖುಷಿ ನೀಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಪಂಚರಾಜ್ಯ ಚುನಾವಣೆಯ ನಂತರ ಬೆಲೆ ಏರಿಕೆ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಗ್ಯಾಸ್ ಮತ್ತಿತರ ಬೆಲೆ ಏರಿಕೆ ಆಗಿದೆ. ಜನ ಇಂದು ಹಣವಂತರಾಗಿದ್ದಾರೆ. ಮೌನವಾಗಿ ಬೆಂಬಲಿಸಿದ್ದಾರೆ. ಜನರಿಗೆ ಈಗ ಧರ್ಮದ …
Read More »ಹೊಸಪೇಟೆ: ಆರಂಭದಲ್ಲಿ ನಿರಾಕರಣೆ, ನಂತರ ಹಿಜಾಬ್ ಕಳಚಿ ಪರೀಕ್ಷೆಗೆ ಹಾಜರು
ಹೊಸಪೇಟೆ (ವಿಜಯನಗರ): ಪ್ರಾಚಾರ್ಯರ ಮನವೊಲಿಕೆ ನಂತರ ಎಂಟು ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ನಗರದ ವಿಜಯನಗರ ಕಾಲೇಜಿನಲ್ಲಿ ಸೋಮವಾರ ಪದವಿ ಪರೀಕ್ಷೆಗೆ ಹಾಜರಾದರು. ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿಯರು ಮುಂದಾಗಿದ್ದರು. ಆದರೆ, ಪ್ರಾಚಾರ್ಯ ವಿ.ಎಸ್. ಪ್ರಭಯ್ಯ, ಅವರನ್ನು ತಡೆದು, ‘ನ್ಯಾಯಾಲಯದ ಆದೇಶ ಪಾಲಿಸಬೇಕು’ ಎಂದು ಹೇಳಿದರು. ಮಂಗಳೂರಿನಲ್ಲಿ ಅವಕಾಶ ನಿರಾಕರಣೆ: ನಗರದ ವಾಮಂಜೂರಿನ ಸಂತ ರೇಮಂಡ್ಸ್ ಕಾಲೇಜಿನಲ್ಲಿ ಸೋಮವಾರ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಅರ್ಥಶಾಸ್ತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ. ಹೈಕೋರ್ಟ್ ತೀರ್ಪಿನ …
Read More »ಆಗಸ್ಟ್‌ನಲ್ಲಿ ಕೋವಿಡ್ ನಾಲ್ಕನೇ ಅಲೆ ಸಾಧ್ಯತೆ: ಸಚಿವ ಸುಧಾಕರ್
ಬೆಂಗಳೂರು: ‘ಐಐಟಿ ಕಾನ್ಪುರ ತಂಡದ ಅಧ್ಯಯನ ಪ್ರಕಾರ ಆಗಸ್ಟ್‌ನಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಇದೆ. ಆದರೆ, ದೇಶದಲ್ಲಿ ಲಸಿಕಾ ಅಭಿಯಾನ ವ್ಯಾಪಕವಾಗಿ ಕೈಗೊಂಡಿರುವುದರಿಂದ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಶಶಿಲ್ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹೊಸ ತಳಿ ಬಿಎ2 ಫಿಲಿಪ್ಪೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದು, 40 ದೇಶಗಳಲ್ಲಿ ಹಬ್ಬಿದೆ. ಹೀಗಾಗಿ, ಎಚ್ಚರಿಕೆ …
Read More »ಪುನೀತ್ ಅಭಿಮಾನ: ಕ್ರೇನಿಗೆ ಬೆನ್ನಿನ ಮೂಲಕ ಕಬ್ಬಿಣದ ಕೊಂಡಿ ಕಟ್ಟಿಕೊಂಡು ನೇತಾಡುತ್ತಿದ್ದ ಭಕ್ತ
ಭದ್ರಾವತಿ: ಕೂಡ್ಲಿಗೆರೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಶುಕ್ರವಾರ ವೈಭವದಿಂದ ನಡೆಯಿತು. ಭಕ್ತರು ದೇಹದಂಡನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು. 350ಕ್ಕೂ ಹೆಚ್ಚು ಮಾಲಾಧಾರಿ ಭಕ್ತರು ತಮ್ಮ ಹರಕೆಗೆ ತಕ್ಕಂತೆ ದೇಹದಂಡನೆ ಮಾಡಿಕೊಂಡು ಸ್ವಾಮಿಯ ದರ್ಶನ ಪಡೆದರು. ಭಕ್ತರು ಆಟಗೇರಿ ಕ್ಯಾಂಪ್ ಬಳಿಯ ಚಾನಲ್ ಬಳಿಯಲ್ಲಿ ದೇಹದಂಡನೆ ಮಾಡಿಕೊಂಡು ಅಲ್ಲಿಂದ ಕೊಂಬು, ಕಹಳೆ, ವಾದ್ಯ, ಡೊಳ್ಳು, ನಗಾರಿ ಮೊದಲಾದ ವಾದ್ಯಮೇಳದೊಂದಿಗೆ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಬಂದರು. ಕೆನ್ನೆಯ ಎರಡೂ ಬದಿಗಳಲ್ಲಿ ತ್ರಿಶೂಲ, ನಾಲಿಗೆಗೆ ತ್ರಿಶೂಲ, ಕಲ್ಲಿನ …
Read More »ದಾವಣೆಗೆರೆಯ ಎಸ್ ಎಸ್ ಆಸ್ಪತ್ರೆಗೆ ವಿದ್ಯಾರ್ಥಿ ನವೀನ್ ದೇಹದಾನ.. ಕರುಳ ಕುಡಿಗೆ ಕೊನೆಯ ಮುತ್ತಿಟ್ಟ ಅಮ್ಮ..
ಹಾವೇರಿ/ದಾವಣಗೆರೆ: ಶೆಲ್ ದಾಳಿಗೆ ಉಕ್ರೇನ್ ನಲ್ಲಿ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್‌ಗೆ ಅವರ ಕುಟುಂಬ ಕಣ್ಣೀರಿನ ಅಂತಿಮ ವಿದಾಯ ಹೇಳಿದೆ. ಸಹೋದರ ಹರ್ಷ ಅವರು ತನ್ನ ತಮ್ಮನ ಮೃತದೇಹಕ್ಕೆ ಅಪ್ಪುಗೆ ಮಾಡಿ ಅಧಿಕೃತವಾಗಿ ಆಸ್ಪತ್ರೆಯ ನಿಬಂಧನೆಗಳಿಗೆ ಸಹಿ ಹಾಕುವ ಮೂಲಕ ನವೀನ್ ಮೃತದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಿಂದ ನವೀನ್ ಮೃತದೇಹ ಹೊತ್ತ ಆ್ಯಂಬುಲೆನ್ಸ್ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ಆಗಮಿಸಿತು. ಈ ವೇಳೆ ಮೃತದೇಹ ಹಸ್ತಾಂತರ …
Read More »ಪ್ರತಿಯೊಬ್ಬ ಭಾರತೀಯರೂ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿ: ಅಮೀರ್ ಖಾನ್
ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್ ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಈ ಚಿತ್ರವನ್ನು ಶ್ಲಾಘಿಸಿದ್ದು, ಸಿನಿಮಾ ನೋಡಲು ಪ್ರೇಕ್ಷಕರಿಗೆ ಸಲಹೆ ನೀಡಿದ್ದಾರೆ. ಈಗ ನಟ ಅಮೀರ್ ಖಾನ್ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸುವಂತೆ ತಿಳಿಸಿದ್ದಾರೆ. ಮಾಧ್ಯಮ ಸಂವಾದದ ವೇಳೆ ಅಮೀರ್, ಪ್ರತಿಯೊಬ್ಬ ಭಾರತೀಯನೂ ಕಾಶ್ಮೀರ ಫೈಲ್ಸ್ ನೋಡಲೇಬೇಕು ಎಂದು …
Read More »‘ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಇನ್ಯಾರಿಗೂ ಜವಾಬ್ದಾರಿ ಇಲ್ಲ’ : ಸಿದ್ದು
ಬೆಂಗಳೂರು: ವಿಧಾನಸಭೆಯಲ್ಲಿ (Assembly) ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಇವತ್ತು ಹಲವು ಸಚಿವರು ಗೈರಾಗಿದ್ದಕ್ಕೆ ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಕೆಂಡಾಮಂಡಲರಾದ್ರು. ಬಿಜೆಪಿಯಲ್ಲಿ ಯಡಿಯೂರಪ್ಪ (Yediyurappa) ಬಿಟ್ರೆ ಇನ್ಯಾರಿಗೂ ಜವಾಬ್ದಾರಿ (Responsibility) ಅನ್ನೋದೇ ಇಲ್ಲ ಅಂತ ಕಿಡಿ ಕಾರಿದ್ದಾರೆ. ಸದನದಲ್ಲಿ ಚರ್ಚೆ ಮಾಡುವಾಗ ಸಚಿವರು (Ministers) ಹಾಜರಾಗಿರಬೇಕು. ಸಚಿವರೇ ಇಲ್ಲದಿದ್ರೆ ಹೇಗೆ? ಆ ಇಲಾಖೆ ಸಚಿವರಿಲ್ಲದಾಗ ಬೇರೆ ಸಚಿವರು ಚರ್ಚೆ ವಿಷಯವನ್ನು ಬರೆದುಕೊಳ್ಳಬೇಕು ಇಲ್ಲವಾದ್ರೆ ನಮ್ಮ ಪ್ರಶ್ನೆಗಳಿಗೆ ಅವ್ರು ಉತ್ತರಿಸೋದಾದ್ರು ಹೇಗೆ …
Read More »