ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ನಿತ್ಯ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡುವುದರ ಮೂಲಕ ಜನರಿಗೆ ಕೊಡಲಿಪೆಟ್ಟು ಕೊಡುತ್ತಿದೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ನಗರದಲ್ಲಿ 111 ರೂ. ಪೆಟ್ರೋಲ್ ದರ ಇದ್ದು, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಪೆಟ್ರೋಲ್ ಅನ್ನು ಉಚಿತವಾಗಿ ವಿತರಿಸುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯೂ ಸಹ ಏರಿಕೆಯಾಗಿದೆ. ಚುಣಾವಣೆಗೋಸ್ಕರ …
Read More »ಹುಬ್ಬಳ್ಳಿ : ಜ್ಞಾಪಕಶಕ್ತಿಯಿಂದ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮಾಡಿದ 2 ವರ್ಷದ ಬಾಲಕ
ಹುಬ್ಬಳ್ಳಿ : ಈತ ಇನ್ನೂ ಅಮ್ಮನ ಮಡಿಲಲ್ಲಿ ಆಟವಾಡುವ ಪುಟ್ಟ ಕಂದ. ಆದರೆ, ಇವನ ಜ್ಞಾನ ಶಕ್ತಿ ನೋಡಿದ್ರೆ ನಿಜಕ್ಕೂ ಎಂತವರಿಗೂ ಅಚ್ಚರಿ ಆಗುತ್ತದೆ. ತನ್ನದೇ ಆದ ಅಪಾರ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ಮಾಡಿ ತಂದೆ-ತಾಯಿಗೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಹೆಸರು ತಂದಿದ್ದಾನೆ. ಪಟಾಪಟ್ ಅಂತಾ ಕೇಳಿದ ಪ್ರಶ್ನೆಗೆಲ್ಲ ಉತ್ತರಿಸುವ ತೊದಲು ನುಡಿಯ ಈ ಕಂದನ ಹೆಸರು ಅಥರ್ವ ಎಸ್. ವಾಣಿಜ್ಯನಗರಿ ಹುಬ್ಬಳ್ಳಿಯ ಶಿರೂರ್ ಪಾರ್ಕ್ …
Read More »ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್: ಕನ್ನಡ ಶಾಲೆ ಉಳಿವಿಗೆ ಆಂಗ್ಲ ಶಿಕ್ಷಣ ಅಗತ್ಯ
ಬೆಂಗಳೂರು: ಬಜೆಟ್ನಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರಿ ಮಾದರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ವಿಷಯ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ್ದ ‘ಕನ್ನಡ ಶಾಲೆ ಉಳಿಸಿ ಕನ್ನಡ ಬೆಳೆಸಿ’ ವಿಷಯ ಕುರಿತ ದುಂಡು ಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ವ್ಯಾಮೋಹ ಪಾಲಕರಲ್ಲಿ …
Read More »ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿ ಹಿಡಿದ ‘ಸುಪ್ರೀಂ’
ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪತ್ನಿಯ ವ್ಯಾಪಾರ ಪಾಲುದಾರ ಕಂಪನಿಯೊಂದರಿಂದ ವಶಪಡಿಸಿಕೊಂಡಿದ್ದ ₹53 ಲಕ್ಷ ನಗದನ್ನು ಮರಳಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ‘ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಹಣದ ಮೂಲ ಖಚಿತವಾಗದ ಹಿನ್ನೆಲೆಯಲ್ಲಿ 2021ರ ಮಾರ್ಚ್ 4ರಂದು ಹೈಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ಮಧ್ಯ ಪ್ರವೇಶಿಸಲು ಆಗದು’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. …
Read More »ಬಸವರಾಜ ಬೊಮ್ಮಾಯಿ 8 ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ.
ಬೆಂಗಳೂರು: ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲು ಮತ್ತು ಅನುಮತಿ ಪಡೆಯಲು ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಮಾಡುವ ಬಗ್ಗೆ ಇಂದು ವರಿಷ್ಠರ ಬಳಿ ಚರ್ಚಿಸುವ ಸಾಧ್ಯತೆ ಇದೆ. ಕರ್ನಾಟಕದ ಬಿಜೆಪಿ ಮಹಾನಾಯಕ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ 8 ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ. ಇಂದು …
Read More »ಪರೀಕ್ಷಾ ಕೊಠಡಿಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿಯ ಖತರ್ನಾಕ್ ಐಡಿಯಾ: ಅಧಿಕಾರಿಗಳೇ ಬೆಚ್ಚಿಬಿದ್ರು!
ಫತೇಹಾಬಾದ್(ಹರಿಯಾಣ): ಪರೀಕ್ಷೆ ಬಂದ್ರೆ ಸಾಕು ಕೆಲವು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಇದ್ದರೆ, ಇನ್ನೂ ಕೆಲವರು ಹೆದರುವುದುಂಟು. ಹಾಗೆ ಮತ್ತೆ ಕೆಲವರು ಪರಿಕ್ಷಾ ಕೊಠಡಿಯಲ್ಲಿ ನಕಲು ಮಾಡುವುದು ಹೇಗೆ ಎಂಬ ಆಲೋಚನೆಗೆ ಬೀಳುವುದೂ ಉಂಟು. ಈ ನಕಲು ವಿಚಾರಕ್ಕೆ ಬಂದರೆ ಮೈಕ್ರೋ ಝೆರಾಕ್ಸ್ ಅಥವಾ ಏರ್ ಫೋನ್ ಬಳಕೆ ಮಾಡಿರುವುದನ್ನು ನಾವು ಇದುವರೆಗೆ ನೋಡಿದ್ದೇವೆ. ಆದರೆ ಇಲ್ಲೋರ್ವ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಹೌದು, ಅಷ್ಟಕ್ಕೂ ಆ ವಿದ್ಯಾರ್ಥಿ ಮಾಡಿದ್ದ ಖತರ್ನಾಕ್ …
Read More »ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ,ಕೋಟಿ ಲೂಟಿ ಮಾಡಿದ ಫೈನಾನ್ಸ್ ಕಂಟ್ರೋಲರ್ ಅರೆಸ್ಟ್
ಬೆಳಗಾವಿ – ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪನಿಯ ಹಣವನ್ನು ಆರ್ ಟಿ ಜಿ ಎಸ್ ಮೂಲಕ ತನ್ನ ಖಾತೆಗೆ,ತನ್ನ ಹೆಂಡತಿಯ ಖಾತೆಗೆ,ನೆಂಟರ ಖಾತೆಗೆ ವರ್ಗಾಯಿಸಿಕೊಂಡು ಶಾರ್ಜಾಗೆ ಹಾರಲು ಹೊರಟಿದ್ದ ವಂಚಕನನ್ನು ಬೆಳಗಾವಿಯ ಸೈಬರ್ ಪೋಲೀಸರು ಅರೆಸ್ಟ ಮಾಡಿದ್ದಾರೆ. ದೇಸೂರಿನ ಎಂ.ಜಿ ಅಟೋಮೋಟಿವ್ ಬಸ್ ಆ್ಯಂಡ ಕೋಚ್ ಪ್ರಾ ಲಿ ಕಂಪನಿಯ ಫೈನಾನ್ಸ್ ಕಂಟ್ರೋಲರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಮುಂಬಯಿ ಮೂಲದ ಭವ್ಯ ಹರೇನ್ ದೇಸಾಯಿ ಎಂಬಾತ ಆರ್ ಟಿ ಜಿಎಸ್ …
Read More »ಕಿಂದರ್ ಸರ್ಪ್ರೈಸ್ ಚಾಕೊಲೇಟ್ʼ ಸೇವನೆ ಮಕ್ಕಳಿಗೆ ಎಷ್ಟು ಸೇಫ್?. ತಜ್ಞರಿಂದ ಆಘಾತಕಾರಿ ವಿಷಯ ಬಹಿರಂಗ.
ಚಾಕೊಲೇಟ್ ಮಕ್ಕಳ ಅಚ್ಚುಮೆಚ್ಚು. ಅದ್ರಲ್ಲೂ ಕಿಂದರ್ ಸರ್ಪ್ರೈಸ್ ಚಾಕೊಲೇಟ್(Kinder Surprise chocolate) ಎಲ್ಲರ ಫೇವರೇಟ್. ಆದ್ರೆ, ಇವುಗಳು ಮಕ್ಕಳ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಪೋಷಕರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕಿಂದರ್ ಸರ್ಪ್ರೈಸ್ ಚಾಕೊಲೇಟ್ ಒಳಗಿನ ಎಗ್ ಮತ್ತು ಸಾಲ್ಮೊನೆಲ್ಲಾ ಸಾಂಕ್ರಾಮಿಕದ ನಡುವೆ ನಿಕಟ ಸಂಬಂಧ ಹೊಂದಿದೆ ಎಂದು ಬಹಿರಂಗವಾಗಿದೆ. ಇದರ ಸೇವನೆಯು ಮಕ್ಕಳನ್ನು ಅನಾರೋಗ್ಯಕ್ಕೆ ಒಳಪಡಿಸುತ್ತಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬ್ರಿಟನ್‌ನ ಆಹಾರ …
Read More »ಸುಮಾರು ಒಂದು ಡಜನ್‍ಗೂ ಅಧಿಕ ಶಾಸಕರು ನಿನ್ನೆಯಿಂದಲೇ ದೆಹಲಿಗೆ ದೌಡ
ಬೆಂಗಳೂರು,ಏ.5- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಶತಾಯಗತಾಯ ಸಂಪುಟಕ್ಕೆ ಸೇರ್ಪಡೆಯಾಗಲೇಬೇಕೆಂದು ಪಟ್ಟು ಹಿಡಿದಿರುವ ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಲಾಬಿ ಆರಂಭಿಸಿದೆ. ಸುಮಾರು ಒಂದು ಡಜನ್‍ಗೂ ಅಧಿಕ ಶಾಸಕರು ನಿನ್ನೆಯಿಂದಲೇ ದೆಹಲಿಗೆ ದೌಡಾಯಿಸಿದ್ದು ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಸಂಪುಟಕ್ಕೆ ತಮ್ಮನ್ನು ಪರಿಗಣಿಸುವಂತೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಏಕಾಏಕಿ …
Read More »IPL 2022: RCB vs RR ಪಂದ್ಯದ ಡ್ರೀಮ್ ಟೀಂ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್
ಮುಂಬೈನ ವಾಂಖೆಡೆ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ರಾಜಸ್ತಾನ್ ರಾಯಲ್ಸ್ (ಆರ್‌ಆರ್) ಮುಖಾಮುಖಿಯಾಗುತ್ತಿವೆ. ಐಪಿಎಲ್ 13ನೇ ಸೀಸನ್‌ನಲ್ಲಿ ಆರ್‌ಆರ್ ಮೊದಲೆರಡು ಪಂದ್ಯಗಳನ್ನ ಜಯಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಒಂದು ಪಂದ್ಯ ಸೋಲು ಹಾಗೂ ಗೆಲುವನ್ನ ಕಂಡಿದೆ. ಆರ್‌ಸಿಬಿ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನ ಕಂಡ ಬಳಿಕ, ಕೆಕೆಆರ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದೆ. ಹೀಗಾಗಿ 2 ಪಾಯಿಂಟ್ಸ್‌ಗಳು ಆರ್‌ಸಿಬಿ ಖಾತೆಗೆ ಸೇರಿದೆ. …
Read More »