Breaking News

ರಾಷ್ಟ್ರೀಯ

ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬಾಗಲಕೋಟೆ: ಬಾದಾಮಿ ಮತ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಗರು ಕೆಲಸ ಮಾಡದಿದ್ರೆ ನಾನೇ ಬಂದು ಕೆಲಸ ಮಾಡಿ ಕೊಡುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದ್ದು, ನಾನೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇನೆಂದು ಪರೋಕ್ಷವಾಗಿ ಹೇಳಿದರು. ಆಲೂರ ಎಸ್.ಕೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ …

Read More »

ಆಮ್​ ಆದ್ಮಿ ರೀ ಎಂಟ್ರಿ ಯಾರಿಗೆ ಆಪತ್ತು?: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ನೆಲೆ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಿದ್ದಂತೆ, ರಾಜ್ಯದಲ್ಲಿ ಆ ಪಕ್ಷದ ಮರು ಪ್ರವೇಶದ ಸೂಚನೆ ನೀಡಿದೆ. ಕೇಜ್ರಿವಾಲ್ ಪಕ್ಷಕ್ಕೆ ಕರ್ನಾಟಕ ಹೊಸದೇನಲ್ಲ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ರಾಜ್ಯದ ಜನರಿಗೆ ತನ್ನ ಪರಿಚಯ ಮಾಡಿಕೊಂಡಿತ್ತು. ಆದರೆ, ಬೇರು ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿ ಸೋತಿತ್ತು. ಆದರೀಗ ದೊಡ್ಡ ಉದ್ದೇಶ ಇಟ್ಟುಕೊಂಡಂತೆ ಪ್ರವೇಶ ಮಾಡುವ ಸುಳಿವು ನೀಡಿದೆ. ಮುಂಬರುವ …

Read More »

ಬಿಜೆಪಿ ಸರ್ಕಾರ ರೈತರನ್ನು ಬದುಕಿರುವಾಗಲೇ ಸಮಾಧಿ ಮಾಡಲು ಮುಂದಾಗಿದೆ:ಡಿ.ಕೆ. ಶಿ.

ಹಾಸನ: ಬಿಜೆಪಿ ಸರ್ಕಾರ ರೈತರನ್ನು ಬದುಕಿರುವಾಗಲೇ ಸಮಾಧಿ ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇಡೀ ರಾಜ್ಯದಲ್ಲಿ ಜನ ಬಿಜೆಪಿ ಹಾಗೂ ದಳದಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್ ಸದಸ್ಯರಾಗುತ್ತಿದ್ದು, ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ. ಪಂಚರಾಜ್ಯ ಚುನಾವಣೆಯಲ್ಲಿ ನಾವು ಪಂಜಾಬ್ ರಾಜ್ಯವನ್ನು ನಮ್ಮ ತಪ್ಪಿನಿಂದ ಸೋತಿದ್ದೇವೆ. ಬಿಜೆಪಿಯವರು ಇಲ್ಲಿಯೂ ಗೆಲ್ಲುವುದಾಗಿ ಬೀಗುತ್ತಿದ್ದಾರೆ. ಆದರೆ ಜನ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. …

Read More »

ಮೋದಿ ತಮ್ಮ ಮನೆಗೆ ಕೆಲಸ ಮಾಡ್ತೀಲ್ಲ, ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ:ಶಶಿಕಲಾ ಜೊಲ್ಲೆ

ಕೊಪ್ಪಳ: ಮಸೀದಿ, ಮಂದಿರಗಳಲ್ಲಿ ಧ್ವನಿ ವರ್ಧಕ ಬಳಕೆ ವಿಚಾರ, ಇದು ಇವತ್ತಿನ ವಿಷಯ ಅಲ್ಲ. ಬಹಳ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಇದೆ. ಇಷ್ಟೇ ಪ್ರಮಾಣದ ಧ್ವನಿ ವರ್ದಕ ಬಳಸಲು ಆದೇಶವಿದೆ. ಆದರೆ ಅದು ಸರಿಯಾಗಿ ಫಾಲೋ ಆಪ್ ಆಗುತ್ತಿಲ್ಲ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಕೊಪ್ಪಳದಲ್ಲಿ ಬಿಜೆಪಿ 42 ನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ ನಿಯಮಗಳಿವೆ. …

Read More »

ಕಳೆದಿದ್ದ ಚಿನ್ನಾಭರಣಗಳ ಸೂಟ್ ಕೇಸ್​ ವಾರಸುದಾರರಿಗೆ ತಲುಪಿಸಿದ ಹೋಮ್ ಗಾರ್ಡ್..

ಬೆಂಗಳೂರು : ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಸೂಟ್ ಕೇಸ್ ಪತ್ತೆಹಚ್ಚಿ ಹಿಂದಿರುಗಿಸುವ ಮೂಲಕ ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೃಹ ರಕ್ಷಕ ದಳದ ಸಿಬ್ಬಂದಿ ಅವರ ಗುರುರಾಜ್​ ಪ್ರಾಮಾಣಿಕತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗ್ತಿದೆ. ರಮೇಶ್ ಚಂದ್ ಎಂಬುವವರು ನಿನ್ನೆ ರಾತ್ರಿ 9:30ಕ್ಕೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಸೂಟ್ ಕೇಸ್ಅನ್ನು ಕಳೆದುಕೊಂಡಿದ್ದರು. …

Read More »

ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

ಧಾರವಾಡ: ಇವತ್ತು ದೇಶಕ್ಕೆ ಆಫಘಾನಿಸ್ತಾನದ ವಿಡಿಯೋ ಪ್ರಸಾರವಾಗಿದೆ. ಇದು ದೇಶದ ಜನರಿಗೆ ಆತಂಕ ತಂದಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಮಂಡ್ಯದ ಮುಸ್ಕಾನ್‍ಳನ್ನು ಬೆಂಬಲಿಸಿದ್ದಾನೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರು. ಶಾಲೆಯಲ್ಲಿ ಹಿಜಬ್ ಬ್ಯಾನ್ ಮಾಡಿದ್ದನ್ನು ವಿರೋಧಿಸಿದ್ದು ಅಚ್ಚರಿ ತಂದಿದೆ. ಹಿಜಬ್ ವಿಚಾರ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ ಎಂದ ಅವರು, ಉಗ್ರ ಸಂಘಟನೆಗಳು …

Read More »

ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಅಂಕಪಟ್ಟಿಯಲ್ಲಿ ಹೆಸರು ತಿದ್ದುಪಡಿಗೆ 1200 ರೂ. ಲಂಚ ಕೇಳಿ, 1000 ರೂ ಪಡೆಯುವಾಗ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ತಂದೆ ಮಹಾದೇವಗೌಡ ಪಾಟೀಲ (ಸಾ: ಮನೆಂ: 186 ಕುಟರನಟ್ಟ ಪೋಸ್ಟ: ಹಿರೇಬೂದನೂರ ತಾ: ಸವದತ್ತಿ) ಎಸಿಬಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹಾಗೂ ತಮ್ಮ ಸ್ನೇಹಿತ ಮಹಾಂತೇಶ ಚಂದ್ರಪ್ಪ ಬೂತನವರ ಇಬ್ಬರ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ನಮೂದಿದ್ದ ಹೆಸರುಗಳನ್ನು ತಿದ್ದುಪಡಿ ಮಾಡಿ ಸರಿಪಡಿಸಿ …

Read More »

ಹೊರಟ್ಟಿ ಸೇರ್ಪಡೆಗೂ ಮೊದಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಹುಬ್ಬಳ್ಳಿ: ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಸಭಾಪತಿ ಬಸವರಾಜ್ ಹೊರಟ್ಟಿಗೆ ಶಾಕ್ ಆಗಿದೆ. ಜೆಡಿಎಸ್ ಬಿಟ್ಟು ಬಿಜೆಪಿಗೆ ಹೊರಟಿದ್ದ ಹೊರಟ್ಟಿಗೆ ಆರಂಭಿಕ ಆಘಾತ ಉಂಟಾಗಿದೆ. ಹೊರಟ್ಟಿ ಅತ್ತ ಬಿಜೆಪಿ ಸೇರ್ಪಡೆ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಸ್ಫೋಟವಾಗಿದೆ. ಯಾರ ಮಾತು ನಂಬಲೇ ಬೇಡಿ ನನಗೆ ಮತ ನೀಡಿ. ಹೊರಟ್ಟಿಗೆ ಬಿಜೆಪಿಗೆ ಸೇರಲು ಯಾವ ಅರ್ಹತೆ ಇಲ್ಲ. ಅವರು ಈ ಬಾರಿ ಸೋಲಿನ ಭಯದಿಂದ ಬಿಜೆಪಿಗೆ ಬರುತ್ತಿದ್ದಾರೆ. ಇದಕ್ಕೆ ನಾನು ಸೇರಿದಂತೆ …

Read More »

ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ;

ಬೆಂಗಳೂರು: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆ ಒತ್ತಡದಲ್ಲಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಲಿನ ದರ ಏರಿಸಲು 1 ತಿಂಗಳಿಂದ ನಿರಂತರ ಸರ್ಕಸ್ ಮಾಡಲಾಗುತ್ತಿದೆ. ಈಗಾಗಲೇ KERC ವಿದ್ಯುತ್ ದರ ಏರಿಕೆಗೆ ಅಸ್ತು ಎಂದಿದೆ. ಹೀಗಾಗಿ ಈಗ ಹಾಲಿನ ದರ ಏರಿಸಲು ಹಾಲು ಒಕ್ಕೂಟಗಳು ಪಟ್ಟು ಹಿಡಿದಿವೆ. ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು …

Read More »

ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಎಲ್ಲಾ ಜವಾಬ್ದಾರಿ ಬೊಮ್ಮಾಯಿ ಹೆಗಲಿಗೆ : ಹಾಯ ಕಮಾಂಡ್

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಸಚಿವ ಸಂಪುಟ ವಿಚಾರವಾಗಿ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Read More »