ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ (ಜೂನ್ 13) ಚುನಾವಣಾ ಕಣ ಘಟಾನುಘಟಿಗಳ ಸ್ಪರ್ಧೆಯಿಂದಾಗಿ ರಂಗೇರಿದೆ. ಪ್ರತಿಷ್ಠೆ-ಪೈಪೋಟಿಗೆ ವೇದಿಕೆಯೂ ಆಗಿದೆ. ಅರುಣ ಶಹಾಪುರ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಅರುಣ ಶಹಾಪುರ ಅವರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡಿದೆ. ಪ್ರತಿ ಸ್ಪರ್ಧಿಯಾಗಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಕಣದಲ್ಲಿದ್ದಾರೆ. ಪದವೀಧರರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಹಣಮಂತ ನಿರಾಣಿ ಅವರಿಗೆ …
Read More »ಗೋವಾದಲ್ಲಿ ರಷ್ಯಾ ಮೂಲದ ಬಾಲಕಿ ಮೇಲೆ ಅತ್ಯಾಚಾರ: ಗದಗದಲ್ಲಿ ಆರೋಪಿ ಸೆರೆ
ಪಣಜಿ: ಉತ್ತರ ಗೋವಾದ ಅರಂಬೋಲ್‌ನಲ್ಲಿರುವ ರೆಸಾರ್ಟ್‌ನಲ್ಲಿ ರಷ್ಯಾ ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಮೇ 6 ರಂದು ಲೈಂಗಿಕ ದೌರ್ಜನ್ಯ ಪ್ರಕರಣ ಸಂಭವಿಸಿತ್ತು. ಗೋವಾದ ಪೆರ್ನೆಮ್ ಠಾಣೆ ಪೊಲೀಸರು ಆರೋಪಿ ರವಿ ಲಮಾಣಿ (28)ಯನ್ನು ಮೇ 10 ರಂದು ಗದಗದಲ್ಲಿ ಬಂಧಿಸಿದ್ದಾರೆ. ಸಂತ್ರಸ್ತೆಯ ತಾಯಿ ಮೇ 9 ರಂದು ದೂರು ದಾಖಲಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು …
Read More »ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.
ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಸಂಧಾನ ನಡೆಸಿದ್ದಾರೆ. ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಲ್ಲಿನ ನಿವಾಸಿಗಳ ಸಭೆ ನಡೆಸಿ …
Read More »ಮಾಜಿ ಸಚಿವ ರಮೇಶ್ ಜರಕಿಹೊಳಿಗೆ, ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ನವದೆಹಲಿ, ಮೇ. 11: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಬಾರಿಯ ದೆಹಲಿ ಭೇಟಿ ಫಲಪ್ರದ ಕೊಡುವ ಮುನ್ಸೂಚನೆ ನೀಡಿದೆ. ಸಂಪುಟ ಪುನಾರಚನೆಗೆ ಕೇಂದ್ರ ವರಿಷ್ಠರು ಗ್ರೀನ್ ಸಿಗ್ನಲ್ ಸಿಗಲಿದ್ದು, ಹಾಲಿ ಸಚಿವರಲ್ಲಿ ನಡುಕ ಹುಟ್ಟಿಸಿದೆ. ಸಚಿವ ಸ್ಥಾನ ಅಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಸಂಪುಟ ಪುನಾರಚನೆಯಾದರೆ ಐವರು ಸಚಿವರು ಸಚಿವಗಿರಿ ಕಳೆದುಕೊಳ್ಳಲಿದ್ದು, ಹತ್ತು ಮಂದಿ ನೂತನ ಸಚಿವರು ಬೊಮ್ಮಾಯಿ ಕ್ಯಾಬಿನೆಟ್ ಸೇರಲಿದ್ದಾರೆ. ಸಚಿವ ಸ್ಥಾನ ಅಲಂಕರಿಸುವವರ ಸಂಭಾವ್ಯ …
Read More »545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರ; ಕಾಂಗ್ರೆಸ್ ಮಾಜಿ ಸಚಿವನ ಆಪ್ತ ಶರತ್ ಅರೆಸ್ಟ್!
ಮಂಡ್ಯ: 545ಪಿಎಸ್‌ಐಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಕಲಬುರಗಿ ಜೊತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಈ ಅಕ್ರಮಕ್ಕೆ ಸಂಬಂಧಿಸಿ ಮಂಡ್ಯದ ಮಾಜಿ ಸಚಿವರ ಆಪ್ತನ್ನು ಬಂಧಿಸಲಾಗಿದೆ. ಶರತ್ ರಾಮಣ್ಣ ಎಂಬಾತನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶರತ್ ಮಂಡ್ಯ ಜಿಲ್ಲೆಯ ನಾಗಮಂಗಲದವನು. ಈತ ಮಾಜಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ …
Read More »ಸಮುದ್ರದಲ್ಲಿ ತೇಲಿ ಬಂತು ʻನಿಗೂಢ ಚಿನ್ನದ ಬಣ್ಣದ ರಥʼ!.
ಶ್ರೀಕಾಕುಳಂ (ಆಂಧ್ರಪ್ರದೇಶ): ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ ಬಂದರಿನಲ್ಲಿ ಅಸಾನಿ ಚಂಡಮಾರುತದ ಪ್ರಭಾವದ ನಡುವೆ ಮಂಗಳವಾರ ನಿಗೂಢವಾದ ಚಿನ್ನದ ಬಣ್ಣದ ರಥವೊಂದು ದಡ ಸೇರಿದೆ. ಇದು ಮಂಗಳವಾರ ಈ ಪ್ರದೇಶದಲ್ಲಿ ಅಸಾನಿ ಚಂಡಮಾರುತದ ಪ್ರಭಾವದ ನಡುವೆ ದಡಕ್ಕೆ ತೇಲಿ ಬಂದಿದೆ. ಈ ವೇಳೆ ದಡದಲ್ಲಿದ್ದ ಜನರು ರಥವನ್ನು ನೀರಿನಿಂದ ಎಳೆದು ದಡಕ್ಕೆ ತಂದಿದ್ದಾರೆ. ‘ಇದು ಬೇರೆ ದೇಶದಿಂದ ಬಂದಿರಬಹುದು. ನಾವು ಗುಪ್ತಚರ ಮತ್ತು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು …
Read More »ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಸೆಂಟ್ರಲ್ ಜೈಲು ಸೇರಿಕೊಂಡಿದ್ದು, ಕಣ್ಣೀರಾಕುತ್ತಿದ್ದಾಳೆ. ಜೈಲಿನ ಬ್ಯಾರಕ್ ಹಿಂದೆ ಇದ್ದ ಪತಿ ರಾಜೇಶ್ ಕಂಡು ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾಳೆ. ದೂರದಿಂದಲೇ ಪತಿ ರಾಜೇಶ್‍ನನ್ನು ನೋಡ್ತಿದ್ದ ಹಾಗೆಯೇ ಕುಸಿದು ಬಿದ್ದು ಕಣ್ಣೀರು ಸುರಿಸಿದ್ದಾಳೆ. ಇತ್ತ ದಿವ್ಯಾ ಕಂಡು ಜೈಲಿನ ಬ್ಯಾರಕ್ ಹಿಂದೆಯಿಂದ ರಾಜೇಶ್ ಕೂಡ ಅತ್ತಿದ್ದಾರೆ. ಒಟ್ಟಿನಲ್ಲಿ ಅರ್ಧ ಗಂಟೆಗೂ …
Read More »ಅಶ್ವತ್ಥ ನಾರಾಯಣ ಎಂ.ಬಿ ಪಾಟೀಲರನ್ನು ಭೇಟಿಯಾಗಿದ್ದಾರೆ: ಡಿ.ಕೆ ಶಿವಕುಮಾರ್
ಬೆಂಗಳೂರು : ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ತಮ್ಮ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ವಿರುದ್ಧ ಧ್ವನಿ ಎತ್ತದಂತೆ ಮನವೊಲಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಸಚಿವರು ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಈಗ ಬೇರೆ ಸಬೂಬು ಹೇಳಬಹುದು. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಎಂ.ಬಿ. ಪಾಟೀಲರ …
Read More »PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮ ಇದೀಗ ಖಾಕಿ ಸುತ್ತಲೂ ಸುತ್ತುವರಿಯೋಕೆ ಮುಂದಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್‍ಪಿ ಕಮಾಂಡೆಂಟ್ ವೈಜನಾಥ್ ರೇವೂರ್ ರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಲ್ಲಿ 10 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್‍ಐ ಹಗರಣದ ಒಂದೊಂದೇ ರಹಸ್ಯ ಬಯಲಾಗ್ತಿದ್ದಂತೆ ಅಲರ್ಟ್ ಆದ ಸಿಐಡಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಪೊಲೀಸ್ …
Read More »ದಿವ್ಯಾ ದಂಪತಿಗೆ ಜೈಲುಭಾಗ್ಯ, ಜಡ್ಜ್ ಮುಂದೆ ಸಿಐಡಿ ಅಧಿಕಾರಿ ವಿರುದ್ಧ ಆರೋಪಗಳ ಸುರಿಮಳೆ
ಬೆಂಗಳೂರು/ ಕಲಬುರ್ಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ (PSI Recruitment scam) ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿರುವ ಬಂಧಿತ 11 ಅಭ್ಯರ್ಥಿಗಳಿಗೆ 14 ದಿನ ನ್ಯಾಯಾಂಗ ಬಂಧನ ನೀಡಲಾಗಿದೆ. ಪ್ರಕರಣದ ಇಬ್ಬರು ಆರೋಪಿಗಳಿಗೆ 4 ದಿನ ಸಿಐಡಿ ಕಸ್ಟಡಿ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯ ಆದೇಶ ಮಾಡಿದೆ. ಈ ಮಧ್ಯೆ, ಬೆಂಗಳೂರಿನ ಈ ಆರೋಪಿಗಳು ಜಡ್ಜ್ ಮುಂದೆ ತನಿಖಾಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸಿಐಡಿ ಕಸ್ಟಡಿ …
Read More »