Breaking News

ರಾಷ್ಟ್ರೀಯ

ರಾಜ್ಯ ಸಭೆ ಚುನಾವಣೆ : ಸೋನಿಯಾಗಾಂಧಿಯವರಿಗೆ ಮಾತನಾಡಿದ್ದಾರೆಂಬ ವದಂತಿ ಶುದ್ದ ಸುಳ್ಳು :H.D.K.

ರಾಜ್ಯ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರು, ಸೋನಿಯಾಗಾಂಧಿಯವರಿಗೆ ಮಾತನಾಡಿದ್ದಾರೆಂಬ ವದಂತಿ ಶುದ್ದ ಸುಳ್ಳು, ನಾನು ಯಾವ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಗುನ್ನಾ, ತಳಮಳ ಎಂಬ ಚರ್ಚೆಗಳು ಆಗತ್ತಾ ಇವೆ. ಆದರೆ ಯಾವುದೇ ರೀತಿಯ ತಳಮಳ, ನಡುಕ ಪಕ್ಷಕ್ಕೆ ಆಗಿಲ್ಲ. ಅದಕ್ಕಾಗಿಯೇ ನಾನು ರಾಜ್ಯಸಭಾ …

Read More »

ಬದಲಾಗಲಿದೆಯೇ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ?: ಸಚಿವರ ಪ್ರತಿಕ್ರಿಯೆ ಇಲ್ಲಿದೆ..

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೆಸರು ಬದಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಈ ಭಾಗದ ಅಭಿಪ್ರಾಯಕ್ಕೆ ಅನುಗುಣವಾಗಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಅಭಿಪ್ರಾಯಕ್ಕೆ ವಿರೋಧವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು.   ಜಿಲ್ಲೆಗೊಂದು ನೂತನ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆರು ವಿವಿ ಸ್ಥಾಪಿಸಲಾಗಿದೆ. ಇನ್ನೊಂದು ವಿವಿ ಸ್ಥಾಪಿಸಬೇಕೆಂಬ ಚರ್ಚೆಯೂ ಇದೆ. ಶಿಕ್ಷಣದಲ್ಲಿ ಗುಣಮಟ್ಟ ಇರಬೇಕು. ಆ ನಿಟ್ಟಿನಲ್ಲಿ …

Read More »

ಜಿಲ್ಲಾ ಎಸ್ಪಿಗಳಿಗೆ ಟಾಸ್ಕ್ ನೀಡಿದ‌ ಅಲೋಕ್‌ ಕುಮಾರ್:

ಬೆಂಗಳೂರು: ಕಾನೂನು‌ ಸುವ್ಯವಸ್ಥೆ ಕಾಪಾಡಲು, ಕೋಮು ಸಂಘರ್ಷ ಹಾಗೂ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣ ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ಎಸ್ಪಿಗಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್ ಹೊಸ ಟಾಸ್ಕ್ ನೀಡಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ‌ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಆಯಾ ಎಸ್ಪಿ‌ ಮಾಹಿತಿ‌ ತಿಳಿದುಕೊಂಡಿರಬೇಕು. ಗಂಭೀರ ಅಪರಾಧ ಕೃತ್ಯಗಳು ನಡೆದಾಗ‌ ಕಡ್ಡಾಯವಾಗಿ ಸ್ಥಳಕ್ಕೆ ಹೋಗಬೇಕು. ಅಹಿತಕರ ಘಟನೆ ನಡೆದಾಗ ಸ್ಥಳಕ್ಕೆ ಮಾರ್ಕ್‌ ಮಾಡಿಸಿ ತ್ವರಿತಗತಿಯಲ್ಲಿ‌ ಪ್ರಕರಣ ಬೇಧಿಸಬೇಕು‌ ಎಂದು …

Read More »

ರಾತ್ರಿ ಸರಣಿ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖದೀಮರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ರಾತ್ರಿ ಸರಣಿ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖದೀಮರು. ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನೆನ್ನೆ ರಾತ್ರಿ ಒಂದು ಮಹಿಳೆಯ ಸಮೇತ ನಾಲ್ಕು ಜನರು ಮಹಾರಾಷ್ಟ್ರ ಮೂಲದ ನೀಲಿ ಕಲರ ಇಂಡಿಕಾ ವಾಹನದ ಸಂಖ್ಯೆ MH 06 AF 4072 ಸಂಖ್ಯೆಯ ವಾಹನದಲ್ಲಿ ಬಂದು ಬಂಬಲವಾಡ ಗ್ರಾಮದಲ್ಲಿ ಕಳ್ಳತನ ನಡೆಸಿದ್ದರು. ಬಂಬಲವಾಡ ಗ್ರಾಮದ ಹನುಮಾನ ಮಂದಿರ ಸೇರಿದಂತೆ ರಾಜು …

Read More »

ನನ್ನ ಅಣ್ಣಂದಿರಿಗೆ ಇನ್ನೂ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ನನಗೂ ಹೆಣ್ಣು ಸಿಗುವುದಿಲ್ಲ ಎಂದು ರೈತ ಆತ್ಮಹತ್ಯೆ

ಚಿಕ್ಕೋಡಿ: ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಗುಪ್ಪಿ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ. ತನ್ನ ಜಮೀನಿನ ಮಾವಿನ ಮರಕ್ಕೆ ನೇಣು ಹಾಕಿಕೊಂಡು ರಮೇಶ್ ಬಾಳಪ್ಪ ಪಾಟೀಲ್ (25) ಸಾವನ್ನಪ್ಪಿದ್ದಾನೆ. ಮನೆಯಲ್ಲಿ ತನ್ನ ಹಿರಿಯ ಇಬ್ಬರು ಸಹೋದರರು ಬಹುದಿನಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದರು ಅವರಿಗೆ ಇನ್ನೂ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ನನ್ನ ಅಣ್ಣಂದಿರಿಗೆ ಇನ್ನೂ ಮದುವೆ …

Read More »

ಮುತ್ಯಾನಟ್ಟ್ತಿ ಇಂದ ಹುದಲಿ ರೋಡಿನ ಕಾಮಗಾರಿ ಪೂರ್ಣ ಸತೀಶ್ ಜಾರಕಿಹೊಳಿ ಅವರಿಗೆ ಧನ್ಯವಾದ ತಿಳಿಸಿದ ಗ್ರಾಮಸ್ಥರು

ಹುದಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುತ್ಯಾನಟ್ಟಿ ಯಿಂದ ಹುದಲಿಗೆ ಬರುವ ರಸ್ತೆ ಡಾಂಬರೀಕರಣ ಜೋತೆಗೆ 60 ಮೀಟರ್ ಹಿಲ್ ಕಟ್ಟಿಂಗ್ ಮಾಡಿ RDPR ಯೋಜನೆ ಅಡಿಯಲ್ಲಿ   3 ಕೋಟಿ 80ಲಕ್ಷ ಅನುದಾನದಲ್ಲಿ ನಮ್ಮ ನೆಚ್ಚಿನ ಶಾಸಕರಾದ ಸನ್ಮಾನ್ಯ ಶ್ರೀ #ಸತೀಶ್ಅಣ್ಣಾಜಾರಕೀಹೊಳಿ ಅವರ ಪ್ರಯತ್ನ ದಿಂದ ಕಾಮಗಾರಿ ಸಂಪೂರ್ಣ ಗೊಂಡಿದ್ಧು   ನಮ್ಮ ಶಾಸಕರಿಗೆ ಹಾಗೂ ಅವರ ಆಪ್ತ ಸಹಾಯಕರಾದ ಅರವಿಂದ್ ಕಾರ್ಚಿ ಅವರಿಗೆ ನಮ್ಮೆಲ್ಲ ಕಾರ್ಯಕರ್ತರು ಹಾಗೂ …

Read More »

ಕಲಬುರಗಿ: ಕಮಲಾಪುರ ಬಳಿ ಭೀಕರ ಬಸ್ ದುರಂತ; ನಾಲ್ವರ ಸಜೀವ ದಹನ

ಕಲಬುರಗಿ: ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಭೀಕರ ಬಸ್​ ದುರಂತ ಸಂಭವಿಸಿದ್ದು, ಸುಮಾರು ನಾಲ್ವರು ಪ್ರಯಾಣಿಕರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ತೆಲಂಗಾಣದ ಹೈದರಬಾದ್‌ನಿಂದ ಗೋವಾಕ್ಕೆ ಮೂರು ಕುಟುಂಬಗಳ 29 ಜನ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಅಪಘಾತ ಸಂಭವಿಸಿದೆ. ಗೂಡ್ಸ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಖಾಸಗಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವು ವರದಿಗಳ ಪ್ರಕಾರ ಬಸ್​ನಲ್ಲಿ 20ಕ್ಕೂ ಹೆಚ್ಚು ಜನ ಪ್ರಯಾಣಿಕರು …

Read More »

ದಕ್ಷಿಣ ಕನ್ನಡದಲ್ಲಿ ಕಟ್ಟಡವೊಂದರ ಮೇಲಿಂದ ಸುರಿಯಿತು ಹಣದ ಮಳೆ!

ಬಂಟ್ವಾಳ(ದಕ್ಷಿಣ ಕನ್ನಡ): ಬಿ.ಸಿ.ರೋಡ್​ನ ಹೃದಯಭಾಗದಲ್ಲಿರುವ ಕಟ್ಟಡವೊಂದರ ಕೊಠಡಿಯಿಂದ ಗುರುವಾರ ಹಣದ ಮಳೆ ಸುರಿದಿದೆ! ಕಟ್ಟಡದ ಮೇಲಿಂದ ಹಣ ಬೀಳುವುದನ್ನು ಕಂಡ ಜನ ಹಣ ಹೆಕ್ಕಲು ಮುಗಿಬಿದ್ದಿದ್ದರಿಂದ ಕೆಲಕಾಲ ಸರ್ವೀಸ್​ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.   ಬಿ.ಸಿ.ರೋಡ್​ನ ಕಟ್ಟಡದಲ್ಲಿ ನಡೆಯುತ್ತಿದ್ದ ರಿಕ್ರಿಯೇಶನ್​ ಕ್ಲಬ್​ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಸಹಾಯಕ ಪೊಲೀಸ್​ ಅಧೀಕ್ಷಕರ ಅನುಮತಿ ಪಡೆದು ಪೊಲೀಸ್​ ನಿರೀಕ್ಷಕ ವಿವೇಕಾನಂದ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. …

Read More »

ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ʻಹಾರ್ದಿಕ್ ಪಟೇಲ್ʼ!

ಗಾಂಧಿನಗರ (ಗುಜರಾತ್): ಕಳೆದ ತಿಂಗಳು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಹಾರ್ದಿಕ್ ಪಟೇಲ್ ಇಂದು ಭಾರತೀಯ ಜನತಾ ಪಕ್ಷ(BJP)ಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಹಾರ್ದಿಕ್ ಪಟೇಲ್ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲೇ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯ ಮುಖಂಡ ಸಿಆರ್ ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇಂದು ಮುಂಜಾನೆ, ಪಟೇಲ್ ಅವರು ಕೆಲಸ ಮಾಡಲು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದರು. ‘ಇಂದು ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ, …

Read More »

ರಾಕೇಶ್ ಟಿಕಾಯತ್ ಗೆ ‘ಮಸಿ’ ಬಳಿದಿದ್ದರ ಹಿಂದಿನ ಕಾರಣ ಬಹಿರಂಗ

ರೈತ ನಾಯಕ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಕೆಲವರು ಅವರ ಮುಖಕ್ಕೆ ಮಸಿ ಬಳಿದಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.   ಇದೀಗ ಆರೋಪಿಗಳ ವಿಚಾರಣೆ ವೇಳೆ ಕುತೂಹಲಕಾರಿ ಅಂಶವೊಂದು ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಭರತ್ ಶೆಟ್ಟಿ, ಹೀಗೆ ಮಾಡಿದರೆ ತಾನು ಜನಪ್ರಿಯನಾಗಬಹುದೆಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದ ಎನ್ನಲಾಗಿದ್ದು ಜೊತೆಗೆ ಮೋದಿ ಎಂಬ …

Read More »