ಬೆಳಗಾವಿ : ಸಿ.ಟಿ ರವಿ ಮೂರು ಸಾವಿರ ಕೋಟಿ ಆಸ್ತಿ ಬಗ್ಗೆ ಕಾಂಗ್ರೆಸ್ ಆರೋಪದಿಂದ ತಲೆ ಕೆಟ್ಟು ಕಳ್ಳಬಟ್ಟಿ ಕುಡಿದು ಮಾತಾನ್ನಾಡುತ್ತಾರೆ ಎಂಬ ಬಿಕೆ ಹರಿಪ್ರಸಾದ್ ಆರೋಪಕ್ಕೆ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ. ನನ್ನ ಬ್ಲಡ್ ನಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಏನಾದ್ರೂ ಸಿಕ್ಕಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅವರ ರಕ್ತದಲ್ಲಿ ಏನಾದ್ರು ಸಿಕ್ಕರೆ ಏನು? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅಧಿವೇಶನಕ್ಕೂ ಮುನ್ನ ಮಾತಾನಾಡಿದ ಶಾಸಕ ಸಿ ಟಿ ರವಿ, …
Read More »ಅನಾರೋಗ್ಯದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್ ಗೆ ದಾಖಲ
ನವದೆಹಲಿ: ಅನಾರೋಗ್ಯದಿಂದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( Union Finance Minister Nirmala Sitharaman ) ಅವರನ್ನು ಸೋಮವಾರ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 63 ವರ್ಷದ ಅವರನ್ನು ಆಸ್ಪತ್ರೆಯ ಖಾಸಗಿ ವಾರ್ಡ್ ನಲ್ಲಿ ದಾಖಲಿಸಲಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯದ ಬಗ್ಗೆ ಮತ್ತಷ್ಟು ಮಾಹಿತಿ …
Read More »ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸದಸ್ಯರ ಪ್ರತಿಭಟನೆ
ಅಕ್ಷರದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಬಿಸಿಯೂಟ ತಯಾರಕರಿಗೆ 2023-24 ನೇ ಬಜೆಟನಲ್ಲಿ ಕನಿಷ್ಟ ವೇತನ 31 ಸಾವಿರ ರೂ. ಮಾಸಿಕ ವೇತನ. ಬಿಸಿಯೂಟ ತಯಾರಕರಿಗೆ ಸೇವೆ ಸಲ್ಲಿಸಿ ನಿವೃತ್ತಿಯಾದವರಿಗೆ ಮತ್ತು ನಿವೃತ್ತಿ ಅಂಚಿನಲ್ಲಿರುವವರಿಗೆ ಇಡಿಗಂಟು 1.50 ಲಕ್ಷ ರೂ ಮತ್ತು ಮಾಸಿಕ ಪಿಂಚಣಿ 5 ಸಾವಿರ …
Read More »Dharwad-Belagavi; ಹೊಸ ರೈಲು ಮಾರ್ಗಕ್ಕೆ ಮೋದಿಯಿಂದ ಶಂಕು ಸ್ಥಾಪನೆ
ಧಾರವಾಡ, ಡಿಸೆಂಬರ್ 26; ಬಹುವರ್ಷಗಳ ಬೇಡಿಕೆಯಾದ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ನೇರ ರೈಲು ಮಾರ್ಗ ಯೋಜನೆಗೆ ಇನ್ನೂ ಶಂಕುಸ್ಥಾಪನೆಯಾಗಿಲ್ಲ. ಈ ಯೋಜನೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಬೆಳಗಾವಿ ಸಂಸದ ದಿ. ಸುರೇಶ್ ಅಂಗಡಿ ಕನಸಾಗಿದೆ. 2023ರಲ್ಲಿ ಧಾರವಾಡ-ಕಿತ್ತೂರು-ಬೆಳಗಾವಿನೇರ ರೈಲು ಮಾರ್ಗ ಯೋಜನೆಗೆ ಶಂಕು ಸ್ಥಾಪನೆ ನಡೆಯಲಿದೆ. ಎರಡು ವರ್ಷಗಳ ಹಿಂದೆ ಘೋಷಣೆಯಾದ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. 2021-22ರ ಕೇಂದ್ರ ಬಜೆಟ್‌ನಲ್ಲಿ ಈ …
Read More »ನಮ್ಮ ತಾಲೂಕಾ ಆಡಳಿತಕ್ಕೆ ನಾಚಿಗೆ ಆಗಬೇಕು, ತಹಶೀಲ್ದಾರರ ಏನು ಕಣ್ಮುಚ್ಚಿ ಕುಳಿತಿದಿರಾ: ಬಸನಗೌಡ ಪಾಟೀಲ
ಖಾನಾಪೂರ ತಾಲೂಕಿನ ತೋಲಗಿ ಗ್ರಾಮದಲ್ಲಿ ಗಂಟು ರೋಗ ಬಾಧೆಯಿಂದ ಮತ್ತೊಂದು ಜಾನುವಾರು ಬಲಿ, ಶಂಕರ್ ದೊಡ್ಡಪ್ಪನವರ ಎಂಬುವರ 70000 ರೂಪಾಯಿ ಕಿಮ್ಮತ್ತಿನ ಆಕಳು ಗಂಟು ರೋಗ ಬಾಧೆಯಿಂದ ಮರಣಹೊಂದಿತ್ತು. ಹೌದು ಖಾನಾಪೂರ ತಾಲೂಕಿನಲ್ಲಿ ಇತ್ತಿಚಿನ ದಿನಗಳಲ್ಲಿ ಗಂಟು ರೋಗ ಬಾಧೆಯಿಂದ ಜಾನುವಾರು ಮರಣಹೊಂದುತ್ತಿವೆ. ಸರಿಯಾದ ಚಿಕಿತ್ಸೆ ಕಾಣದೇ ಜಾನುವಾರು ಮರಣ ಹೊಂದುತ್ತಿವೆ ಅದರಲ್ಲಿ ಪಶು ವೈದ್ಯರ ಕೊರತೆ ಕೂಡ ಎದ್ದು ಕಾಣುತ್ತಿದ್ದು ಕೇವಲ ಸಹಾಯಕ ಅಧಿಕಾರಿ ಇಲ್ಲಿ ವೈದ್ಯನಂತೆ ಚಿಕಿತ್ಸೆ …
Read More »ಇಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ: ಆರ್ ಅಶೋಕ
ಇಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ ನಡೆಯಲಿದೆ, ನಾನು ಹಾಗು ಸುಧಾಕರ್ ನೇತೃತ್ವದಲ್ಲಿ ಸಭೆ ಜರುಗಿಸಲಾಗುವದು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು. ಅವರು ಇಂದು ಸುವರ್ಣಸೌಧ ಮುಂಭಾಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ವಿದೇಶದಲ್ಲಿ ಕೊರೊನಾ ಹೆಚ್ಚಳವಾಗಿದ್ದರಿಂದ ರಾಜ್ಯದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮ ಜರುಗಿಸಲು ಆರೋಗ್ಯ ಸಚಿವ ಕೆ ಸುಧಾಕರ ಒಳಗೊಂಡು ಅಧಿಕಾರಿಗಳು ಮತ್ತು ಎಕ್ಸಪರ್ಟ ಜೋತೆ ಸಭೆ ಜರುಗಿಸಿ ಮುಂದಿನ ಕ್ರಮ ಕೈಕೋಳ್ಳಲಾಗುವದು ಎಂದರು. ಜನರು ಯಾವುದೇ …
Read More »ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ನೌಕರರನ್ನು ರಾತ್ರಿ ಸಮಯ ಏಕಾಏಕಿ ಹೊತ್ತೊಯ್ದ ಪೊಲೀಸರು
ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿಯ ಬಸ್ತವಾಡ ಗ್ರಾಮದಲ್ಲಿ ಸಾರಿಗೆ ನೌಕರರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ವೇಳೆ ರವಿವಾರ ಪೊಲೀಸರು ಏಕಾಏಕಿ ಬಂದು ಉಪವಾಸ ನಿರತ 14 ಜನರನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ರವಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ಮೊಟಕುಗೊಳಿಸುವಂತೆ ಪೊಲೀಸರು ಹೇಳಿದ್ದಾರೆ. ಆದರೆ …
Read More »ಉರುಳಿದ ಗಾಲಿಗೆ ಸಿಲುಕುವವರು ಯಾರು?
ಗಾಲಿ ಒಂದು ಸುತ್ತು ಉರುಳಿದೆ. ಗಾಲಿ ರಭಸ ಪಡೆದು ಎದುರಾಳಿಗಳನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ! ನಿರೀಕ್ಷೆಯಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಿಸಿದ್ದಾರೆ. ಅವರ ಈ ಉದ್ದೇಶದಲ್ಲೇ ಎದುರಾಳಿಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬುದು ಅಡಗಿದಂತಿದೆ. ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಲು ಅಷ್ಟೆಲ್ಲ ದುಡಿದರೂ ಪಕ್ಷದ ಸರಕಾರದಿಂದಲೇ ತಮಗೆ ಅನ್ಯಾಯ ವಾಗಿದೆ. ಸರಕಾರದ ಏಜೆನ್ಸಿಗ ಳಿಂದ ತಮಗೆ ಸಂಕಷ್ಟ ತಪ್ಪಲಿಲ್ಲ ಎಂಬ ರೆಡ್ಡಿ ಅವರ ಆಕ್ರೋಶ ಬಿಜೆಪಿ …
Read More »ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ
ಬೆಂಗಳೂರು: ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿರುವುದು ಹೊಸ ಭರವಸೆ ಮೂಡಿಸಿದೆ. ಗಮನಾರ್ಹ ವಿಚಾರವೆಂದರೆ ಪ್ರತಿನಿತ್ಯ ಜನರೊಂದಿಗೆ ಹೆಚ್ಚು ಒಡನಾಡಬೇಕಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಗೃಹ ಇಲಾಖೆಗಳಲ್ಲೇ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲವು ತಿಂಗಳಲ್ಲಿ ಒಂದಿಷ್ಟು ನೇಮಕಾತಿ ಪ್ರಕ್ರಿಯೆಗಳು ನಡೆದಿದ್ದರೂ, …
Read More »ಡಿ.31 ರಿಂದ ಜ.3ರವರೆಗೆ ಗಡಿ ಭಾಗದ ಯಕ್ಸಂಬಾ ಪಟ್ಟಣದಲ್ಲಿ ಪ್ರೇರಣಾ ಉತ್ಸವ
ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ವತಿಯಿಂದ ನಡೆಯುವ 11ನೇ ವರ್ಷದ ಪ್ರೇರಣಾ ಉತ್ಸವ ಡಿ.31 ರಿಂದ ಜ.3 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ತಿಳಿಸಿದರು. ಶನಿವಾರ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರುಪ್ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜೊಲ್ಲೆ ಗ್ರುಪ್ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ಅಂಗವಾಗಿ ಪ್ರತಿ …
Read More »