ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಆಲಿಕಲ್ಲು ಮಳೆ ಸುರಿದಿದೆ. ಉಜಿರೆ, ಕಕ್ಕಿಂಜೆ, ಚಾರ್ಮಾಡಿ ಭಾಗದಲ್ಲಿ ಸುರಿದ ಮಳೆಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿದೆ. ವಿಮಾನಗಳು ಡೈವರ್ಟ್: ಭಾರೀ ಮಳೆಯ ಪರಿಣಾಮ ಮಂಗಳೂರಿನಲ್ಲಿ ಕಳೆದ ರಾತ್ರಿ ಇಳಿಯಬೇಕಿದ್ದ ಮೂರು ವಿಮಾನಗಳನ್ನು ಕೇರಳಕ್ಕೆ ಡೈವರ್ಟ್ ಮಾಡಲಾಗಿತ್ತು. ಹೈದರಾಬಾದ್ನ ಒಂದು ವಿಮಾನ ಮತ್ತು ಬೆಂಗಳೂರಿನ ಎರಡು ವಿಮಾನಗಳನ್ನು ಕೇರಳದ ಕಣ್ಣೂರಿಗೆ ಡೈವರ್ಟ್ ಮಾಡಲಾಯಿತು. ವಾತಾವರಣ ಸರಿಯಾದ ಬಳಿಕ ಮತ್ತೆ …
Read More »ಸಮುದ್ರದಲ್ಲಿ ಮೀನುಗಾರರಿಂದ ವಿನೂತನ ಪ್ರತಿಭಟನೆ
ಕಾರವಾರ: ಅಂಕೋಲಾದ ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ವಿರೋಧಿಸಿ ಸ್ಥಳೀಯ ಮೀನುಗಾರರ ಆಕ್ರೋಶ ಮತ್ತೆ ಜೋರಾಗಿದೆ. ಉದ್ದೇಶಿತ ಈ ವಾಣಿಜ್ಯ ಬಂದರನ್ನು ಕೈ ಬಿಡುವಂತೆ ಒತ್ತಾಯಿಸಿ ಅಂಕೋಲಾದ ಬೇಲೆಕೇರಿ ಕಡಲತೀರದಲ್ಲಿ ನೂರಾರು ಮೀನುಗಾರರು ಮಾನವ ಸರಪಳಿ ನಿರ್ಮಿಸಿ ಹಾಗೂ ಬೋಟ್‌ಗಳ ಮೂಲಕ ಸಮುದ್ರಕ್ಕೆ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೇಣಿ ಹಾಗೂ ಭಾವಿಕೇರಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಕಾರಣ ತಾಲೂಕಿನ ಬೇಲೆಕೇರಿ ಕಡಲತೀರದಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ …
Read More »ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ
ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಇದರ ಜೊತೆಗೆ, ಬಾಲ್ಯ ವಿವಾಹ ಪ್ರಕರಣಗಳು ಏರಿಕೆ ಕಾಣುತ್ತಿರುವ ಆತಂಕಕಾರಿ ವಿಚಾರವನ್ನು ರಾಜ್ಯ ಸರ್ಕಾರ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಾದ ಮಕ್ಕಳ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದ ಬಿಜೆಪಿ ಶಾಸಕ ಚನ್ನಬಸಪ್ಪ ಅವರ ಪ್ರಶ್ನೆಗೆ ರಾಜ್ಯ ಸರ್ಕಾರ ಈ ಆತಂಕಕಾರಿ ಉತ್ತರ ನೀಡಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ ಕಂಡಿರುವುದಾಗಿ …
Read More »ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ನಾವು ಯಾವುದೇ ಶಾಸಕರ ಹಕ್ಕನ್ನು ಮೊಟಕು ಮಾಡುವುದಿಲ್ಲ ಎಂದ ಸಿಎಂ
ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಶಾಸಕರ ಹಕ್ಕುಚ್ಯುತಿ ಆಗದಂತೆ ಸೂಚನೆ ನೀಡಲಾವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಂಬಂಧ ಧರಣಿ ನಡೆಸುತ್ತಿದ್ದ ಪ್ರತಿಪಕ್ಷಗಳಿಗೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು ಯಾವುದೇ ಶಾಸಕರ ಹಕ್ಕನ್ನು ಮೊಟಕು ಮಾಡುವುದಿಲ್ಲ. ಶಾಸಕರಿಗೆ ಎಷ್ಟು ಗೌರವ ಇದೆ ನನಗೂ ಅಷ್ಟೇ ಗೌರವ ಇದೆ. ನಿಮಗೆ ಅಗೌರವ ಆಗುವ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರಿಗೆ ಅವಕಾಶ …
Read More »ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ: ಪರಮೇಶ್ವರ್
ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ: ಪರಮೇಶ್ವರ್ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಖಾಸಗಿ ವಾಹನಗಳ ಮೇಲೆ “ಪೊಲೀಸ್” ಎಂದು ಬರೆಯುವುದು ಕಾನೂನುಬಾಹಿರ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.ಇಂತಹ ಕ್ರಮ ಕಾನೂನು ಉಲ್ಲಂಘನೆಯಾಗುತ್ತದೆ ಮತ್ತು 2022ರ ಸರ್ಕಾರದ ಸುತ್ತೋಲೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ವಿಷಯ ಶ್ರವಣಬೆಳಗೊಳ ಶಾಸಕರ ಪ್ರಶ್ನೆಗೆ ಲಿಖಿತ ಉತ್ತರವಾಗಿ ನೀಡಲಾಗಿದೆ. …
Read More »ಪರಸ್ಪರ ಸಹಕರಿಸಿ ಹೋಳಿ ಮತ್ತು ರಂಗ ಪಂಚಮಿ ಹಾಗೂ ರಮಜಾನ ಹಬ್ಬವನ್ನು ಆಚರಿಸುವಂತೆ ಖಾನಾಪೂರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಂಡಿ ಕರೆ
ಪರಸ್ಪರ ಸಹಕರಿಸಿ ಹೋಳಿ ಮತ್ತು ರಂಗ ಪಂಚಮಿ ಹಾಗೂ ರಮಜಾನ ಹಬ್ಬವನ್ನು ಆಚರಿಸುವಂತೆ ಖಾನಾಪೂರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಂಡಿ ಕರೆ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬ ಮತ್ತು ರಮಜಾನ ಮಾಸದ ಹಿನ್ನೆಲೆಯಲ್ಲಿ ಶಾಂತತಾ ಸಭೆ ಆಯೋಜಿಸಿತ್ತು ಈ ಸಭೆಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಂಡಿ ಅವರು ಮಾತನಾಡಿ ಸಣ್ಣ ಪುಟ್ಟ ವಿಷಯಗಳಿಗೆ ವಾದಗಳನ್ನು ಹುಟ್ಟುಹಾಕದೆ ಪರಸ್ಪರ ಸಹಕರಿಸಿ ಹೋಳಿ ಮತ್ತು ರಂಗ …
Read More »ಹುಬ್ಬಳ್ಳಿಯಲ್ಲಿ ನಕಲಿ ಆಹಾರ ಇಲಾಖೆ ಅಧಿಕಾರಿಗಳ ಹಾವಳಿ
ಹುಬ್ಬಳ್ಳಿ, ಮಾರ್ಚ್ 12: ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ (Hubballi) ನಕಲಿ ಮದ್ಯ ತಯಾರಿಕೆ ಗ್ಯಾಂಗ್ ಅಬಕಾರಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಇದಕ್ಕೂ ಮುನ್ನ ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ನಕಲಿ ಅಧಿಕಾರಿಗಳು ತಲೆ ಎತ್ತಿದ್ದಾರೆ.ಹಣ ಮಾಡೋ ಉದ್ದೇಶಕ್ಕೆ ಕೆಲವರು ಅಧಿಕಾರಿಗಳ ಸೋಗಿನಲ್ಲಿ ರೋಲ್ ಕಾಲ್ಗೆ ಇಳದಿದ್ದಾರೆ. ಆಹಾರ ಇಲಾಖೆ ಹೆಸರಿನಲ್ಲಿ ದುರ್ಗದ ಬೈಲ್ನಲ್ಲಿನ ಕಿರಾಣಿ ಅಂಗಡಿಗಳ …
Read More »ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ರನ್ಯಾ ರಾವ್ ನಿವಾಸ, ವಿವಾಹ ಜರುಗಿದ ಹೋಟೆಲ್‌ನಲ್ಲಿ ಸಿಬಿಐ ಶೋಧ
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಬೆಂಗಳೂರಿನಲ್ಲಿರುವ ರನ್ಯಾ ರಾವ್‌ರ ನಿವಾಸ, ಅವರ ವಿವಾಹ ಜರುಗಿದ ಹೋಟೆಲ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಜೊತೆಗೆ ಸಂಪರ್ಕ ಹೊಂದಿರುವವರ ಕುರಿತು ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದರ ಭಾಗವಾಗಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳು, ಬಂದಿರುವ ದುಬಾರಿ ಉಡುಗೊರೆಗಳು ಕುರಿತು …
Read More »ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ,
ಬೆಂಗಳೂರು: ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಕೊಡುವ 135 ಸಂಚಾರಿ ಆಸ್ಪತ್ರೆಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಸಜ್ಜುಗೊಳಿಸಿರುವ 135 “ಸಂಚಾರಿ ಆರೋಗ್ಯ ಘಟಕ” ಆ್ಯಂಬುಲೆನ್ಸ್ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಬಸವಣ್ಣನವರ ಕಾಯಕ – ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು. ಸಮಾಜದಲ್ಲಿ ದುಡಿಯುವ ವರ್ಗ …
Read More »ರಂಗಪಂಚಮಿ ವೇಳೆ ಅಶಾಂತಿ ಮೂಡಿಸಲು ಯತ್ನಿಸಿದರೇ ಹುಷಾರ್: ಕಮಿಷನರ್
ರಂಗಪಂಚಮಿ ವೇಳೆ ಅಶಾಂತಿ ಮೂಡಿಸಲು ಯತ್ನಿಸಿದರೇ ಹುಷಾರ್: ಕಮಿಷನರ್ ರಂಗಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹುಬ್ಬಳ್ಳಿಯಲ್ಲಿ ಕಾಮದೇವರನ್ನು ಪ್ರತಿಸ್ಥಾಪನೆ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಶಾಂತಿಯುತ ಹಬ್ಬ ಆಚರಣೆಗೆ ಕರೆ ಕೊಟ್ಟರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಬಾರಿ ಹೋಳಿಹಬ್ಬವನ್ನು ಧಾರವಾಡದಲ್ಲಿ ಮಾರ್ಚ್ 15, ಹುಬ್ಬಳ್ಳಿಯಲ್ಲಿ 18 ನೇ ತಾರೀಖು ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಹೊರ …
Read More »