ಪಣಜಿ: ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಣಜಿ ವೈಲ್ಡ್ ಅನಿಮಲ್ ಟೆಂಪರರಿ ಶೆಲ್ಟರ್ ಸೆಂಟರ್ ಸಿಬ್ಬಂದಿ ಹಾಗೂ ದ್ರಷ್ಟಿ ಲೈಫ್ ಸೇವರ್ ಸಂಸ್ಥೆಯ ಸಿಬ್ಬಂದಿ ಮೀನಿನ ಅಂತ್ಯಸಂಸ್ಕಾರ ನೆರವೇರಿಸಿದರು. 12 ಅಡಿ ಉದ್ದದ ಡಾಲ್ಫಿನ್ ಮೃತಪಡಲು ಕಾರಣವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ವನ್ಯಜೀವಿ ತಾತ್ಕಾಲಿಕ ಆಶ್ರಯ ಕೇಂದ್ರದ ಸಿಬ್ಬಂದಿ ದ್ಯಾನೇಶ್ವರ್ ಟಕ್ಕರ್ ಮತ್ತು ಮೆಲ್ವಿನ್ ಡಿಸಿಲ್ವಾ ಅವರು ಡಾಲ್ಫಿನ್ ಕನಿಷ್ಠ ನಾಲ್ಕು ದಿನಗಳ ಹಿಂದೆ …
Read More »2 ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆಗೆ ಮತ್ತೆ ಕಳೆ
ಕೊರಟಗೆರೆ : ಇತಿಹಾಸ ಪ್ರಸಿದ್ಧ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಕಳೆದ 2 ವರ್ಷಗಳಿಂದ ಕೊರೋನಾ ನಂತರ ಚರ್ಮ ಗಂಟು ರೋಗದಿಂದ ಕಲೆಗೊಂಡಿದ್ದ ದನಗಳ ಜಾತ್ರೆ ಈಗ ಸಾವಿರಾರು ರಾಸುಗಳು ಸೇರುವ ಮುಖಾಂತರ ಪ್ರತಿ ವರ್ಷದಂತೆ ಸಾಂಪ್ರದಾಯಿಕ ಮುಂದುವರೆಯುವ ಮೂಲಕ ಕ್ಯಾಮೇನಹಳ್ಳಿ ದನದ ಜಾತ್ರೆಗೆ ಕಳೆ ಬಂದಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲೂಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಧನಗಳ ಜಾತ್ರೆ …
Read More »ಹದಿನಾರು ಚುನಾವಣೆ ಕಂಡ ಶತಾಯುಷಿ ಅಜ್ಜಿ
ಕೊಪ್ಪಳ: ದೇಶಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿರುವ ಹೊತ್ತಲ್ಲಿ ಕಳೆದ 75 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದವರು ಕಾಣಸಿಗೋದು ಬಹಳ ಅಪರೂಪ. ಆದರೆ ಕೊಪ್ಪಳ ಜಿಲ್ಲೆಯ ಶತಾಯುಷಿಯೊಬ್ಬರು 1952ರಿಂದ ನಡೆದ ಎಲ್ಲ ಚುನಾವಣೆಗಳಲ್ಲೂ ಮತದಾನ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಬಸಮ್ಮ ಮಡಿವಾಳಯ್ಯ ಭೂಸನೂರಮಠ ಮೊದಲ ಚುನಾವಣೆ ಯಿಂದ ಹಿಡಿದು ಈವರೆಗಿನ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಮತದಾನದ ಹಕ್ಕು ಚಲಾಯಿಸಿ ದಾಖಲೆ …
Read More »ಇಂದು ಸಾರಿಗೆ ನೌಕರರ ಧರಣಿ; ಬಸ್ ಸೇವೆ ಅಬಾಧಿತ
ಬೆಂಗಳೂರು: ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಜ. 24(ಮಂಗಳವಾರ)ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇದರಿಂದ ಸಾರಿಗೆ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗುವುದಿಲ್ಲ. ಆದರೆ ಇದರಿಂದ ಸಾರಿಗೆ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗುವುದಿಲ್ಲ. ಜಿಲ್ಲಾ ಬಸ್ ಘಟಕಗಳ (ಡಿಪೋ) ಮುಂಭಾಗ, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು ಸಾರಿಗೆ ನಿಗಮಗಳ ವಿಭಾಗೀಯ ಕಚೇರಿ ಮುಂಭಾಗ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ …
Read More »ಪಿಎಸ್‌ಐ ಕೇಸ್ ಗೆ ಟ್ವಿಸ್ಟ್: ಸಿಐಡಿ ಅಧಿಕಾರಿಗೆ 76 ಲಕ್ಷ ರೂ. ಲಂಚ ನೀಡಿದ ಆರೋಪ
ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಿಂದ ಪಾರು ಮಾಡಲು ತಾನು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ 76 ಲಕ್ಷ ರೂ ನೀಡಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ. ಇದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ದೊರೆತಂತಾಗಿದೆ. ದೂರಿನೊಂದಿಗೆ 8.4 ನಿಮಿಷ ಅವಧಿಯ ಆಡಿಯೋದ ಪೆನ್ ಡ್ರೈವ್ ದಾಖಲೆಯಾಗಿ ನೀಡಿದ್ದಾರೆ. ಈ ಸಂಬಂದ ‘ಆರ್.ಡಿ. ಪಾಟೀಲ ಯುವ ಬ್ರಿಗೇಡ್’ ಹೆಸರಿನ ಫೇಸ್‌ಬುಕ್ ಪೇಜ್ ಮೂಲಕ …
Read More »ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುರುಘರಾಜೇಂದ್ರಗೌಡ ಹಾಟ್ ಬಾಕ್ಸ್ ವಿತರಿಸುವ ಮೂಲಕ ಜನರನ್ನು ಓಲೈಸುತ್ತಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಎಲೆಕ್ಷನ್ ಪ್ರಚಾರ ಭರ್ಜರಿಯಿಂದ ಸಾಗುತ್ತಿದೆ. ಪಕ್ಷಗಳು, ಟಿಕೆಟ್ ಆಕಾಂಕ್ಷಿಗಳು ತಮ್ಮ ಗೆಲುವಿಗಾಗಿ ಮತ ಬೇಟೆಗೆ ಇಳಿದಿವೆ. ಇಂಥಾ ಸಮಯಲ್ಲಿ ಕುಂದಾನಗರಿ ಬೆಳಗಾವಿ ಜಿಲ್ಲೆ ಜನರಿಗೆ ಭರಪೂರದ ಉಡುಗೊರೆ ಭಾಗ್ಯ ಸಿಕ್ಕಿದೆ. ರಾಜಕಾರಣಿಗಳು ಮತದಾರರ ಓಲೈಕೆಗಾಗಿ ವಿವಿಧ ಗಿಫ್ಟ್ ನೀಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುರುಘರಾಜೇಂದ್ರಗೌಡ ಹಾಟ್ ಬಾಕ್ಸ್ ವಿತರಿಸುವ ಮೂಲಕ ಜನರನ್ನು ಓಲೈಸುತ್ತಿದ್ದಾರೆ. ಅರಿಶಿಣ ಕುಂಕುಮ …
Read More »ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಭೀಕರ ಅಪಘಾತ: ವೃದ್ಧೆ ಸಾವು
ಬೆಳಗಾವಿ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿರೋ ಘಟನೆ ಬೈಲಹೊಂಗಲ ತಾಲೂಕಿನ ಶಿಗೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಗವ್ವ ಕಂಬಾರ (56) ಮೃತ ವೃದ್ಧೆ. ಟ್ರ್ಯಾಕ್ಟರ್ವೊಂದು ರಸ್ತೆಯ ಪಕ್ಕದ ಗುಡಿಸಲು ಮೇಲೆ ಪಲ್ಟಿಯಾಗಿದೆ. ಇದರ ಪರಿಣಾಮ ಗುಡಿಸಲಿನಲ್ಲಿದ್ದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜೊತೆಗೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಶ್ರೀ ಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ; ಫೋಟೋ ಇಲ್ಲಿದೆ
ಬೆಳಗಾವಿ: ಶ್ರೀ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಬೃಹತ್ ಕೃಷಿ ಮೇಳವನ್ನ ಆಯೋಜಿಸಲಾಗಿತ್ತು. ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಈ ಮೇಳದಲ್ಲಿ ಶ್ವಾನ ಪ್ರದರ್ಶನವೂ ನಡೀತು. ವಿವಿಧ ತಳಿಯ ಶ್ವಾನಗಳ ಪ್ರದರ್ಶನ ನೀಡಿವೆ. ಸುಮಾರು 65ಕ್ಕೊ ಹೆಚ್ಚು ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಕರ್ನಾಟಕ, ಮಹಾರಾಷ್ಟ್ರದಿಂದ ನೂರಾರು ಮಂದಿ ತಮ್ಮ ಶ್ವಾನಗಳನ್ನ ಸ್ಪರ್ಧೆಗೆ ಕರೆ ತಂದಿದ್ರು. ಈ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನಗಳು ವಿಷೇಶವಾದ ಕೂದಲು, ಬಣ್ಣ, ದೇಹಾಕಾರದಿಂದ ಪ್ರೇಕ್ಷಕರನ್ನು …
Read More »ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ಬೊಮ್ಮಾಯಿ
ಬೆಳಗಾವಿ: ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸರಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋವಾ ನಾಯಕರಿಗೆ ಸ್ಪಷ್ಟವಾಗಿ ತಿರುಗೇಟು ನೀಡಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈಗಾಗಲೇ ಯೋಜನೆಯ ಸಮಗ್ರ ಪರಿಷ್ಕೃತ ವರದಿ ಗೆ ಅನುಮೋದನೆ ಸಿಕ್ಕಿದೆ. ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದರು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ …
Read More »ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಇಬ್ಬರು ಪುತ್ರರ ವಿವಾಹ ಸಮಾರಂಭ ಸೋಮವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸೋಮವಾರ ಬೆಳಗಾವಿಗೆ ಗಣ್ಯರ ದಂಡೇ ಹರಿದು ಬರಲಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಇಬ್ಬರು ಪುತ್ರರ ವಿವಾಹ ಸಮಾರಂಭ ಸೋಮವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹೊರಡಲಿರುವ ಬೊಮ್ಮಾಯಿ 12.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. ಅಲ್ಲಿಂದ ಸಿಪಿಎಡ್ ಮೈದಾನಕ್ಕೆ ಆಗಮಿಸಿ ವಿವಾಹ ಸಮಾರಂಭದಲ್ಲಿ …
Read More »