Breaking News

ರಾಷ್ಟ್ರೀಯ

ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠದ ಶ್ರೀ

ಜಮಖಂಡಿ ಫೆಬ್ರವರಿ 4: ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ಭರದಿಂದ ಸಾಗುತ್ತಿದೆ. ಇನ್ನೇನು ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಯವನ್ನು ಚುರುಕುಗೊಳಿಸಲಿವೆ. ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚುಣಿಯಲ್ಲಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಮತ್ತೊಂದು ರಾಜಕೀಯ ಭವಿಷ್ಯ …

Read More »

ಸುದೀಪ್ ಭೇಟಿಯಾದ ಡಿ.ಕೆ. ಶಿ. ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದ?

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಕಿಚ್ಚನ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರನ್ನು ಬೆಂಗಳೂರಿನ ಅವರ ಮನೆಯಲ್ಲಿ ಭೇಟಿ ಮಾಡಿದರು. ಈ ಭೇಟಿಯ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ರಾಜಕೀಯ ಪದಾರ್ಪಣೆ ಕುರಿತು ಅವರು ಚರ್ಚಿಸಿದ್ದಾರೆಯೇ ಎಂಬುದನ್ನು ನಟ …

Read More »

ಬಿಡಿಸಿಸಿ ಬ್ಯಾಂಕಿನಿಂದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪತ್ತು ಮಂಜೂರು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

    *ಗೋಕಾಕ*: ಬಿಡಿಸಿಸಿ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತಗಳನ್ನು ಮಂಜೂರು ಮಾಡಿಸಲಾಗುತ್ತಿದ್ದು, ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು ಇತ್ತಿಚೇಗೆ ತಾಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನವಾಗಿ ನಿರ್ಮಿಸಿದ ಎರಡನೇ ಮಹಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಅಭಿವೃದ್ಧಿಯಲ್ಲಿ ಪ್ರಾಥಮಿಕ …

Read More »

ಮುಂದಿನ 50 ದಿನಗಳ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲಡಿ.ಕೆ.ಶಿ

ಬೆಂಗಳೂರು: ‘ಮುಂದಿನ 50 ದಿನಗಳ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಎರಡು- ಮೂರು ಸಮೀಕ್ಷೆ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 136 ಶಾಸಕರು ಗೆಲ್ಲುವುದು ಖಚಿತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.   ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಕ್ಕೆ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ರಾಮನಗರ ಹಾಗೂ ಬೀದರ್ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ …

Read More »

ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿದ ಬಿಜೆಪಿ

ಬಾಗಲಕೋಟೆ: ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಿಂದ ಬಸವನಾಡು ಎಂಬ ಖ್ಯಾತಿ ಪಡೆದರೆ, ಆಲಮಟ್ಟಿ ಜಲಾಶಯದಿಂದ ಆವರಿಸಿದ ಹಿನ್ನೀರಿನಿಂದ ಮುಳುಗಡೆಗೊಂಡು ಮುಳುಗಡೆ ಜಿಲ್ಲೆ ಎಂಬ ಹಣೆಪಟ್ಟಿಯೂ ಈ ಜಿಲ್ಲೆ ಕಟ್ಟಿಕೊಂಡಿದೆ. ಇದೆಲ್ಲದರ ನಡುವೆ ರಾಜಕೀಯ ಕ್ಷೇತ್ರದಲ್ಲಿ ಸದಾ ಗಮನ ಸೆಳೆಯುವ ವೈಶಿಷ್ಟ್ಯತೆ ಮೆರೆದಿದೆ. ಅದಕ್ಕೆ ಕಾರಣ ಹಲವು. ನಾಡಿನ ಮುಖ್ಯಮಂತ್ರಿ, ದೇಶಕ್ಕೆ ರಾಷ್ಟ್ರಪತಿ (ಹಂಗಾಮಿ)ಯಾಗಿದ್ದ ಬಿ.ಡಿ. ಜತ್ತಿ ಅವರನ್ನು ಜಮಖಂಡಿ ಕ್ಷೇತ್ರ ನೀಡಿದ್ದರೆ; ರಾಜಕೀಯ ಲೆಕ್ಕಾಚಾರದ ಲಾಭ-ನಷ್ಟಗಳ ಮಧ್ಯೆಯೇ ಹುನಗುಂದ ಕ್ಷೇತ್ರದ ಎಸ್‌.ಆರ್‌. …

Read More »

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗುಡ್ ನ್ಯೂಸ್ : `ಗ್ರಾಚ್ಯುಟಿ’ ಘೋಷಣೆ ಮಾಡಿ ರಾಜ್ಯ ಸರ್ಕಾರ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚ್ಯುಟಿ ಘೋಷಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.   ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸಭೆ ನಡೆಸಿ ಗ್ರಾಚ್ಯುಟಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು …

Read More »

ಹಳ್ಳಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತ್ಯು. ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ಕುರುಗೋಡು: ಕುರುಗೋಡು: ಗುತ್ತಿಗನೂರು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಹಳ್ಳದಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಗುತ್ತಿಗನೂರು ಗ್ರಾಮದ ಕುರುಬ ಸಮುದಾಯದ ತಂದೆ ಮಲ್ಲಿಕಾರ್ಜುನ ತಾಯಿ ಲಕ್ಷ್ಮಿ ಅವರ ಮೊದಲನೇ ಮಗ ಮತ್ತು ಕೊನೆಯ ಮಗ ಬೇರೆ ಗ್ರಾಮಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಂಗಳವಾರ ಗ್ರಾಮದಲ್ಲಿ ಅಂಬಾದೇವಿ ಜಾತ್ರಾ ಮಹೋತ್ಸವ ಇದ್ದ ಕಾರಣಕ್ಕೆ ಗ್ರಾಮಕ್ಕೆ ಬಂದಿದ್ದಾರೆ, ಗುರುವಾರ ಮಧ್ಯಾಹ್ನ ಗ್ರಾಮದ ಹಳ್ಳದ ತೀರಕ್ಕೆ …

Read More »

ಕುಷ್ಠರೋಗಕ್ಕೆ ಔಷಧೋಪಚಾರವಿದೆ, ಪಡುವ ಅಗತ್ಯವಿಲ್ಲ : ಡಾ.ಮಹೇಶ ಕೋಣಿ

ಬೆಳಗಾವಿ: ಕುಷ್ಠರೋಗಕ್ಕೆ ಈಗ ಸೂಕ್ತ ಔಷಧೋಪಚಾರವಿದೆ. ಜನರು ಇದಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಹೆಳಿದರು. ಸ್ಪರ್ಶ ಕುಷ್ಠರೋಗ ಜಾಗೃತಿ ಅರಿವು ಆಂದೋಲನ- 2023ರ ಅಂಗವಾಗಿ ಆಯೋಜಿಸಿದ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ’ ಎಂಬುದು ಈ ಬಾರಿಯ ಘೋಷಣೆಯಾಗಿದೆ’ ಎಂದರು.   ಕುಷ್ಠರೋಗಕ್ಕೆ ಎಲ್ಲ ಸರ್ಕಾರಿ …

Read More »

ಮನಸೂರೆಗೊಂಡ ರಾಣಿ ಚನ್ನಮ್ಮ ನಾಟಕ

ಚಿಕ್ಕೋಡಿ: ಮಬ್ಬುಗತ್ತಲು ಆವರಿಸುತ್ತಿದ್ದಂತೆಯೇ ಅ‍ಪಾರ ಸಂಖ್ಯೆಯಲ್ಲಿ ಜಮಾಯಿಸಿದ ಜನ. ಸ್ವತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ, ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟದ ಮರುಸೃಷ್ಟಿಯ ಮೆಗಾ ನಾಟಕ ಕಣ್ತುಂಬಿಕೊಳ್ಳುವ ಕಾತರ. ನೂರಾರು ಕಲಾವಿದರು, ಆನೆ, ಒಂಟೆ, ಕುದುರೆಗಳನ್ನು ಒಳಗೊಂಡ ಅದ್ಧೂರಿ ರಂಗಸಜ್ಜಿಕೆ. ಆಕರ್ಷಕ ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಮೂಡಿ ಬಂದ ನಾಟಕವನ್ನು ವೀಕ್ಷಿಸಿ, ಪುಳಕಿತಗೊಂಡ ಪ್ರೇಕ್ಷಕ ಗಣ… ಪಟ್ಟಣದ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಾಗೂ ಸೋಮವಾರ ‘ವೀರರಾಣಿ ಕಿತ್ತೂರು ಚನ್ನಮ್ಮ’ ನಾಟಕ …

Read More »

ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ*

    *ಮೂಡಲಗಿ* : ನರೇಗಾ ಯೋಜನೆಯಡಿ ಮಂಜೂರಾಗಿರುವ 16 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಗೃಹದಲ್ಲಿ ಬುಧವಾರದಂದು ಜರುಗಿದ ಅರಭಾವಿ ಕ್ಷೇತ್ರದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರುವರಿ ತಿಂಗಳ ಅಂತ್ಯದೊಳಗೆ ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು …

Read More »