Breaking News

ರಾಷ್ಟ್ರೀಯ

ಕಿಸಾನ್​ ಕಾರ್ಡ್​ ಹೊಂದಿರುವ ರೈತರಿಗೆ ಹೆಚ್ಚುವರಿ 10 ಸಾವಿರ ರೂ. ಸಹಾಯಧನ!

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಕೃಷಿಕರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನೇಕ ಕೊಡುಗೆಗಳನ್ನು ನೀಡಿದ್ದು ಈ ವರ್ಷದಿಂದ ರೈತರಿಗೆ ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಹೆಚ್ಚುವರಿ 10 ಸಾವಿರ ರೂ. ಸಹಾಯಧನ ನೀಡುವ ಬಗ್ಗೆ ಘೋಷಿಸಲಾಗಿದೆ.   ಇನ್ನು ಪ್ರಮುಖವಾಗಿ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ ಘೋಷಿಸಲಾಗಿದ್ದು ರೈತರಿಗೆ 10 ಸಾವಿರ ಸಹಾಯಧನ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ, ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗಲಿದೆ. ಈ …

Read More »

2 ಗಂಟೆ 35 ನಿಮಿಷ ಬಜೆಟ್​ ಓದಿದ ಸಿಎಂ ಬೊಮ್ಮಾಯಿ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸರ್ಕಾರದ ಕೊನೆಯ ಹಾಗೂ ಸಿಎಂ ಆಗಿ ಎರಡನೇ ಬಜೆಟ್​ ಮಂಡನೆ ಮಾಡಿದರು. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಜೆಟ್​ನಲ್ಲಿ ಭರಪೂರ ಅನುದಾನ ಮೀಸಲಿಟ್ಟಿದ್ದಾರೆ.   ಬೆಳಗ್ಗೆ 10.15 ಬೆಜಟ್​ ಮಂಡನೆ ಆರಂಭಿಸಿದ ಸಿಎಂ ಬೊಮ್ಮಾಯಿ ಅವರು ಸುಮಾರು 2.35 ಗಂಟೆ ಬಜೆಟ್​ ಭಾಷಣವನ್ನು ಓದಿದರು. ಬಜೆಟ್​ ಮಂಡನೆ ಮುಗಿದ ಬಳಿಕ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು …

Read More »

ಬಜೆಟ್ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ ಸಿಎಂ!

ಬೆಂಗಳೂರು: ಬಿಜೆಪಿ ಅವಧಿಯ ಕೊನೆಯ ಬಜೆಟ್ ಮಂಡನೆ ಇದಾಗಿದ್ದು ಮುಖ್ಯಮಂತ್ರಿ ಬೊಮ್ಮಾಯಿಯ ಎರಡನೇ ಆಯವ್ಯಯ ಮಂಡನೆ ಇದಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇ ಬೇಕು ಎನ್ನುವ ಗುರಿ ಹೊತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಬಾರಿಯ ಬಜೆಟ್​ ಮೂಲಕವೂ ಎಲ್ಲಾ ವರ್ಗದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.   ಕೃಷಿ: ಕೃಷಿಕರಿಗೆ ಅನುಕೂಲವಾಗಲಿ ಎಂದು ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆಯ ಅಡಿಯಲ್ಲಿ ರೈತರಿಗೆ 10 ಸಾವಿರ …

Read More »

ಖೈದಿಗಳ ಜೀವನ ಸುಧಾರಣೆಗೆ ಅಗತ್ಯ ಕ್ರಮ!

ಬೆಂಗಳೂರು: ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದ್ದು, ಖೈದಿಗಳ ಜೀವನ ಸುಧಾರಣೆಗೆ ಮತ್ತು ಶಿಕ್ಷೆಯ ಅವಧಿಯ ನಂತರ ಪುನರ್ವಸತಿಗೆ ಸಶಕೀರಣಗೊಳಿಸಲು ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಖೈದಿಗಳಿಗೆ ನೀಡುವ ಕೂಲಿ ದರಗಳನ್ನು ಕನಿಷ್ಠ ವೇತನ ಕಾಯಿದೆ ಅನ್ವಯ ಹೆಚ್ಚಿಸಲು ಕ್ರಮವಹಿಸಲಾಗಿದ್ದು, ಕಾರಾಗೃಹಗಳ ಆಸ್ಪತ್ರೆಗಳ ನಿರ್ವಹಣೆಯನ್ನು ಸುಧಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್​ನಲ್ಲಿ ಘೋಷಣೆ ಮಾಡಿದರು. ವಿಜಯಪುರ, ಬೀದರ್, …

Read More »

ಅಪಘಾತದಲ್ಲಿ ಎಸ್​ಐ, ಪೇದೆ ಸಾವು ಪ್ರಕರಣ: ಹುತಾತ್ಮ ಖಾಕಿ ಕುಟುಂಬಕ್ಕಿಲ್ಲ ಬಿಡಿಗಾಸು, ಫಲ ಕೊಡದ ಸಿಎಂ ಭರವಸೆ

ಬೆಂಗಳೂರು: ರಾಜಕೀಯ ಪಕ್ಷದ ಅಥವಾ ಸಂಘಟನೆಯೊಂದರಲ್ಲಿ ಮುಖಂಡ, ಕಾರ್ಯಕರ್ತನಾಗಿ ನನ್ನ ಮಗ ಸಾವನ್ನಪ್ಪಿದ್ದರೆ ಇಷ್ಟರಲ್ಲಿ ಪರಿಹಾರ ಸಿಗುತ್ತಿತ್ತು. ಸಬ್​ಇನ್​ಸ್ಪೆಕ್ಟರ್ ಆಗಿದ್ದರ ಕಾರಣ ಇಂದು ಪುತ್ರನೂ ಇಲ್ಲ. ಪರಿಹಾರವೂ ಇಲ್ಲದಂತೆ ಆಗಿದೆ… ಇದು 2022ರ ಜೂ.7ರಂದು ಡ್ರಗ್ಸ್ ಪೆಡ್ಲರ್​ಗಳ ಬಂಧನ ಕಾರ್ಯಾಚರಣೆ ವೇಳೆ ಆಂಧ್ರಪ್ರದೇಶದ ಚಿತ್ತೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಾಜಿನಗರ ಠಾಣೆ ಎಸ್​ಐ ಅವಿನಾಶ್ ಅವರ ತಂದೆ ಕಾಶಿನಾಥ್ ನೋವಿನ ಮಾತುಗಳು. 40 ವರ್ಷ ಪೊಲೀಸ್ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ …

Read More »

7ನೇ ವೇತನ ಆಯೋಗ; ಶೀಘ್ರವೇ ಲಭಿಸಲಿದೆ ಸಿಹಿ ಸುದ್ದಿ

ಹೊಸದಿಲ್ಲಿ: ಕೇಂದ್ರ ಸರಕಾರ ದೇಶದಲ್ಲಿರುವ ತನ್ನ ಒಂದು ಕೋಟಿಗೂ ಅಧಿಕ ಸಿಬ್ಬಂದಿ ಹಾಗೂ ಪಿಂಚಣಿದಾರರರ 18 ತಿಂಗಳ ಹಳೆಯ ತುಟ್ಟಿಭತ್ಯೆ ಬಾಕಿ, ಅದರ ಫಿಟ್ಮೆಂಟ್ ಅಂಶಗಳು ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಪಾವತಿಯ ಔಪಚಾರಿಕ ದೃಢೀಕರಣಕ್ಕೆ ಮುಂದಾಗಿದೆ. ಕೇಂದ್ರ ಸರಕಾರದ ನೌಕರರು ಹಾಗೂ ಸಿಬ್ಬಂದಿ ಶೀಘ್ರವೇ ಈ ಕುರಿತ ಸಿಹಿ ಸುದ್ದಿ ಪಡೆಯಲಿದ್ದಾರೆ. ಈ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಸರಕಾರದಿಂದ ಘೋಷಣೆ ನಿರೀಕ್ಷಿಸಲಾಗಿದೆ. 2020ರ ಜುಲೈ ತಿಂಗಳಿನಿಂದ ಜನವರಿವರೆಗಿನ ಕೇಂದ್ರ ಸರಕಾರಿ ನೌಕರರ …

Read More »

ಪತ್ನಿ ಅನುಮಾನಕ್ಕೆ ಶಿಕ್ಷಕ ಮಹಾಶಯನೊಬ್ಬ ಆಕೆಯನ್ನೇ ಕೊಲೆಗೈದಿ

ಕಲಬುರ್ಗಿ: ಮನುಷ್ಯನಿಗೆ ಅನುಮಾನ ಎನ್ನುವುದು ಶುರುವಾದರೆ ಎಂಥಹ ಕೃತ್ಯವೆಸಗಲೂ ಹಿಂದೆಮುಂದೆ ನೋಡಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮೇಲಿನ ಅನುಮಾನಕ್ಕೆ ಶಿಕ್ಷಕ ಮಹಾಶಯನೊಬ್ಬ ಆಕೆಯನ್ನೇ ಕೊಲೆಗೈದಿರುವ ಘಟನೆ ಕಲಬುರ್ಗಿಯ ಅಂಬಿಕಾ ನಗರದಲ್ಲಿ ನಡೆದಿದೆ. ಫರಿದಾ ಬೇಗಂ ಪತಿಯಿಂದ ಕೊಲೆಯಾದ ಮಹಿಳೆ. ಏಜಾಜ್ ಅಹ್ಮದ್ ಹಾಗೂ ಫರೀದಾ ಬೇಗಂ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಲ್ಲದೇ ಪತಿ-ಪತ್ನಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಪತ್ನಿ …

Read More »

ಜಾಕ್‌ವೆಲ್‌ ಮುತ್ತಿಗೆ ಯತ್ನ: ಲಘು ಲಾಠಿ ಪ್ರಹಾರ

ಸವದತ್ತಿ: ಬಾಕಿ ವೇತನ ಹಾಗೂ ನೇಮಕಾತಿ ಆದೇಶ ನೀಡಲು ಆಗ್ರಹಿಸಿ ಧಾರವಾಡದ ಜಲಮಂಡಳಿಯ ದಿನಗೂಲಿ ಕಾರ್ಮಿಕರು ಪಟ್ಟಣದಲ್ಲಿ ಬುಧವಾರ ನಡೆಸಿದ ಧರಣಿ ವೇಳೆ, ನೂಕಾಟ- ತಳ್ಳಾಟ ನಡೆದಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಈ ಸಂದರ್ಭದಲ್ಲಿ 12 ಮಂದಿಗೆ ಸಣ್ಣಪುಟ್ಟ ಗಾಯಗಳಾದವು.   ಹುಬ್ಬಳಿ- ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುವ ಇಲ್ಲಿನ ಜಾಕ್‌ವೆಲ್ ಬಳಿ ಬೆಳಿಗ್ಗೆಯಿಂದ ಶಾಂತಿಯುತ ಧರಣಿ ನಡೆಸಲಾಯಿತು. ಮಧ್ಯಾಹ್ನದವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ, …

Read More »

ಜಾಹೀರಾತಿನಲ್ಲೇ ಉಸಿರಾಡುತ್ತಿರುವ ಸರ್ಕಾರ: ವೀರಪ್ಪ ಮೊಯಿಲಿ

ಮೈಸೂರು: ‘ಬಡತನದ ರೇಖೆ ಕೆಳಗೆ ಜಾರುತ್ತಿರುವ ಲಕ್ಷಾಂತರ ಜನರನ್ನು ಸಂರಕ್ಷಣೆ ಮಾಡುತ್ತಿಲ್ಲ. ಜಾಹೀರಾತಿನ ಮೂಲಕವೇ ರಾಜ್ಯ ಬಿಜೆಪಿ ಸರ್ಕಾರ ಉಸಿರಾಡುತ್ತಿದೆ’ ಎಂದು ಎಐಸಿಸಿ ಚುನಾವಣಾ ಸಮಿತಿ ಸದಸ್ಯ ಎಂ.ವೀರಪ್ಪ ಮೊಯಿಲಿ ಟೀಕಿಸಿದರು. ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ‘ಬಡವರ ಸಂರಕ್ಷಣೆ ಮಾಡಬೇಕಾದ್ದು, ಸರ್ಕಾರದ ಬದ್ಧತೆ. ಆದರೆ, ಬಿಜೆಪಿ ಅವಧಿಯಲ್ಲಿ ಶ್ರೀಮಂತರು ಮತ್ತೂ ಶ್ರೀಮಂತರಾಗುತ್ತಿದ್ದಾರೆ. ಹೀಗಾಗಿಯೇ ಶೇ 95ರಷ್ಟು ಚುನಾವಣಾ ಬಾಂಡ್‌ಗಳು ಬಿಜೆಪಿ ಪಾಲಾಗಿವೆ’ …

Read More »

ಸುನೀಲ್‌ ಕುಮಾರ್‌ ಅವರಂತೆ ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಹೊಂದಿಲ್ಲ: ಪ್ರಮೋದ್ ಮುತಾಲಿಕ್

ಉಡುಪಿ: ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬಂದಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ಸಚಿವ ಸುನೀಲ್‌ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ. ಏನು ಆಗಿದ್ದರು, ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದರು.   ಸಚಿವ ಸುನೀಲ್‌ ಕುಮಾರ್ ಮಾಡಿರುವ ಆರೋಪಗಳಿಗೆ ನಗರದಲ್ಲಿ ಇಂದು ಅವರು ತಿರುಗೇಟು ನೀಡಿದ್ದಾರೆ. ನನ್ನ ಸ್ಪರ್ಧೆಯಿಂದ ಸುನೀಲ್‌ ಕುಮಾರ್ ಹತಾಶರಾಗಿದ್ದಾರೆ. ಅವರು …

Read More »