Breaking News

ರಾಷ್ಟ್ರೀಯ

ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್‌ ಪಾಟೀಲ್‌ ಅವರ ಪತಿ ನಿಧನ

ಪುಣೆ: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್‌ ಪಾಟೀಲ್‌ ಅವರ ಪತಿ ದೇವಿಸಿಂಗ್‌ ರಣಸಿಂಗ್‌ ಪಾಟೀಲ್‌ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಪ್ರತಿಭಾ ದೇವಿ ಸಿಂಗ್‌ ಪಾಟೀಲ್‌, ಪುತ್ರ, ಕಾಂಗ್ರೆಸ್‌ ನಾಯಕ ರಾಜೇಂದ್ರ ಸಿಂಗ್‌ ಶೆಖಾವತ್‌ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.   ಫೆ.12 ರಂದು ತನ್ನ ಪುಣೆಯ ನಿವಾಸದಲ್ಲಿ ಹುಲ್ಮಾಲುಹಾಸಿನ ಮೇಲೆ ಕುಸಿದುಬಿದ್ದಿದ್ದರು ಎಂದು ಹೇಳಲಾಗಿದೆ. ಆ ಬಳಿಕ …

Read More »

ಆಪರೇಶನ್‌ ಕಮಲದ ಮೂವರು ಬಾಂಬೆ ಫ್ರೆಂಡ್ಸ್‌ ಮತ್ತೆ ಕಾಂಗ್ರೆಸ್ಸಿಗೆ?

ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರೂ ಶತ್ರುಗಳಿಲ್ಲ, ಮಿತ್ರರೂ ಇಲ್ಲ ಎನ್ನುವ ಮಾತನ್ನು ನಾಡಿನ ರಾಜಕಾರಣಿಗಳು ಚುನಾವಣೆಯ ವೇಳೆ ನಿಜವೆಂದು ರುಜುವಾತು ಪಡಿಸುತ್ತಾರೆ. ಇದಕ್ಕೆ ಪೂರಕವಾದ ರಾಜಕೀಯ ವಿದ್ಯಮಾನಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವುದು ಗೊತ್ತಿರುವ ವಿಚಾರ. ಈಗಾಗಲೇ ಹಲವರು ಪಕ್ಷ ನಿಯತ್ತನ್ನು ಬದಲಿಸಿಯಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಗೆ ದಿನಗಣನೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇನ್ನೇನು ಹದಿನೈದು ದಿನಗಳಲ್ಲಿ ಚುನಾವಣಾ ಆಯೋಗ ತಾರೀಕು ನಿಗದಿ ಪಡಿಸುತ್ತದೆ …

Read More »

ಮುಂದಿನ ತಿಂಗಳಲ್ಲೇ 7ನೇ ವೇತನ ಆಯೋಗ ಜಾರಿ – ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಗೆ ಈಡೇರಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅಸ್ತು ಎಂದಿದ್ದಾರೆ. 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು ಮಾರ್ಚ್ ಗೆ ಜಾರಿಗೊಳಿಸೋದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.   ಈ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆಯಲ್ಲಿ ಮಾತನಾಡಿದಂತ ಅವರು, ಈಗಾಗಲೇ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ …

Read More »

ದಿ|ಆನಂದ ಮಾಮನಿ ಅವರ ಸ್ಥಾನ ತುಂಬುವವರು ಬಿಜೆಪಿಯವರೇ ಅಥವಾ ಕಾಂಗ್ರೆಸ್‌ನವರೇ

ಬೆಳಗಾವಿ: ಸತತ ಮೂರು ಬಾರಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿ ಯಲ್ಲಮ್ಮ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಶಾಸಕ ದಿ|ಆನಂದ ಮಾಮನಿ ಅವರ ಸ್ಥಾನವನ್ನು ತುಂಬುವ ವರು ಯಾರು? -ಇದು ಸವದತ್ತಿ ಕ್ಷೇತ್ರದಾದ್ಯಂತ ಈಗ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಕುತೂಹಲದ ಪ್ರಶ್ನೆ. ಮಾಮನಿ ಅವರ ಸ್ಥಾನ ತುಂಬುವವರು ಬಿಜೆಪಿಯವರೇ ಅಥವಾ ಕಾಂಗ್ರೆಸ್‌ನವರೇ ಎಂಬ ಚರ್ಚೆ ನಿರಂತರವಾಗಿ ನಡೆದಿದೆ. ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ದಿಂದ ಟಿಕೆಟ್‌ ಯಾರಿಗೆ ಎಂಬುದು ಅಂತಿಮವಾಗಿಲ್ಲ. ಎರಡೂ …

Read More »

ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಡಾ| ಹಿಮ್ಮಡಿ; ದಳವಾಯಿ

ರಾಯಬಾಗ: ಒಬ್ಬ ಅಧ್ಯಾಪಕನನ್ನು ಆತನ ವಿದ್ಯಾರ್ಥಿಗಳು ಮಾತ್ರ ಸರಿಯಾಗಿ ಬಲ್ಲವರಾಗಿರುತ್ತಾರೆ. ಹಿಮ್ಮಡಿಯವರ ವಿದ್ಯಾರ್ಥಿ ಬಳಗ ನೋಡಿದರೆ, ಅವರ ಬೋಧನೆ ಎಂತಹದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಹೇಳಿದರು.   ಪಟ್ಟಣದ ಮಹಾವೀರ ಭವನದಲ್ಲಿ ಡಾ| ಯಲ್ಲಪ್ಪ ಹಿಮ್ಮಡಿ ಅವರ ಸೇವಾ ನಿವೃತ್ತಿ ಪ್ರಯುಕ್ತ ವಿದ್ಯಾರ್ಥಿ ಬಳಗದಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಂದ ವಿಚಾರ ಸಮರ್ಪಣೆ, ಗುರುವಿಗೆ ವಂದನೆ, ಶಿಷ್ಯರಿಗೆ ಅಭಿನಂದನೆ ಹಾಗೂ ಡಾ|ಹಿಮ್ಮಡಿ ದಂಪತಿಗೆ ಅಭಿನಂದನೆ ಸಮರ್ಪಣೆ …

Read More »

ಮೀಸಲು ಕ್ಷೇತ್ರಗಳಲ್ಲೇ ಕೈ ಟಿಕೆಟ್‌ಗೆ ಹೆಚ್ಚು ಫೈಟ್‌: 51 ಕ್ಷೇತ್ರಗಳಿಗೆ 350 ಮಂದಿ ಅರ್ಜಿ

ಬೆಂಗಳೂರು: ರಾಜ್ಯ ವಿಧಾನಸಭೆಯ ಮೀಸಲು ಕ್ಷೇತ್ರಗಳಲ್ಲೇ ಕಾಂಗ್ರೆಸ್‌ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ನಡೆದಿದೆ. ಹಾಲಿ ಶಾಸಕರು, ಮಾಜಿ ಸಚಿವರು ಪ್ರತಿನಿಧಿಸುವ ಕ್ಷೇತಗಳಲ್ಲೂ ಟಿಕೆಟ್‌ ಬಯಸಿರುವವರ ಪಟ್ಟಿ ದೊಡ್ಡದಿದೆ. ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಒಂದು ಡಜನ್‌ ಮೀರಿರುವುದೇ ಈಗ “ಆಯ್ಕೆ’ ಬಹುದೊಡ್ಡ ತಲೆನೋವಾಗಿದೆ.   ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಪರಿಶಿಷ್ಟ ಜಾತಿ ಹಾಗೂ 15 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಒಟ್ಟು 51 ಕ್ಷೇತ್ರಗಳಿವೆ. ಈ ಮೀಸಲು ಕ್ಷೇತ್ರಗಳಲ್ಲಿ ಸಿಂಹಪಾಲು …

Read More »

ಬದುಕಿರುವಾಗಲೇ 2 ಕೋಟಿ ರೂ. ಇನ್ಶೂರೆನ್ಸ್​ ಹಣಕ್ಕಾಗಿ ತಾಯಿ,ಮಗನ ಮಾಸ್ಟರ್​ ಪ್ಲ್ಯಾನ್:​​​ ಬಯಲಾಯ್ತು ಅಸಲಿ ಕಥೆ

ಮಹಾರಾಷ್ಟ್ರ: ಮಹಿಳೆಯೊಬ್ಬರು ತನ್ನ 29 ವರ್ಷದ ಮಗ ಸಾವನ್ನಪ್ಪಿದ್ದಾನೆಂದು ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ ವಿಮೆ ಪಡೆಯಲು ಪ್ರಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದಿನೇಶ್ 2015ರಲ್ಲಿ ಎಲ್​ಐಸಿ ಪಾಲಿಸಿಯನ್ನು ಖರೀದಿಸಿ ಪ್ರೀಮಿಯಂ ಪಾವತಿಸಿದ್ದರು. ದಿನೇಶ್ 2016 ಡಿಸೆಂಬರ್ 25 ರಂದು ಅಹಮದ್ ನಗರ ಜಿಲ್ಲೆಯ ನಗರ ಪುಣೆ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು 2017 ಮಾರ್ಚ್ 14 ರಂದು ಆತನ ತಾಯಿ ನಂದಾಬಾಯಿ ತಕ್ಸಾಲೆ ಇನ್ಶೂರೆನ್ಸ್ ಹಣಕ್ಕೆ ಅರ್ಜಿಸಲ್ಲಿಸಿದ್ದರು. ವಿಮೆ …

Read More »

ಸಾಲದ ಹೊರೆಗೆ ಒಂದೇ ಕುಟುಂಬದ ಮೂವರು ಪ್ರಾಣ ತ್ಯಾಗ

ಹಾವೇರಿ : ತರಕಾರಿ ಮಾರಾಟ ಮಾಡಿ ಮಗಳನ್ನು ಸಾಕಿ ವಿದ್ಯಾಭ್ಯಾಸ ನೀಡಿ ಮದುವೆ ಮಾಡಿಕೊಟ್ಟಿದ್ದ ಕುಟುಂಬ ಇದೀಗ ಮಗಳ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದೆ. ಒಂದೇ ಕುಟುಂಬದ ಮೂವರು ಸದಸ್ಯರ ಆತ್ಮಹತ್ಯೆಗೆ ಕಾರಣ ಹೊಸ ಮನೆ, ಮಗಳ ಮದುವೆ ಎನ್ನಲಾಗಿದೆ.   ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಮೃತರು. ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಸಾವಿಗೆ …

Read More »

ಸೈಬರ್ ಅಪರಾಧಗಳಿಂದಾಗಿ ಪ್ರತಿ ದಿನ ಕೋಟಿ-ಕೋಟಿ ಹಣ ಕಳೆದುಕೊಳ್ಳುತ್ತಿರುವ ಕರ್ನಾಟಕದ ಜನ

ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಕರ್ನಾಟಕವು ಪ್ರತಿ ವರ್ಷ ಕೋಟ್ಯಾಂತರ ಹಣವನ್ನು ಕಳೆದುಕೊಳ್ಳುತ್ತಿದೆ. ಇದರಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮೈಸೂರು ಹಾಗೂ ಮಂಡ್ಯ ನಂತರದ ಸ್ಥಾನದಲ್ಲಿವೆ. ಬೆಚ್ಚಿಬೀಳಿಸುವ ಈ ಮಾಹಿತಿಯನ್ನು ರಾಜ್ಯ ಗೃಹ ಇಲಾಖೆ ನೀಡಿದೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಅಪರಾಧ ವರದಿ ಮಾಡುವಲ್ಲಿ ವಿಳಂಬವಾಗುತ್ತಿದೆ. ರಾಜ್ಯಗಳ ನಡುವೆ ಸಮನ್ವಯದ ಕೊರತೆ ಇದೆ. ಇದೆಲ್ಲ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸೈಬರ್ …

Read More »

ಅಥಣಿಯ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ರಾಜಕಾರಣದ ಅಖಾಡಕ್ಕೆ ಎಂಟ್ರಿ

ಬೆಳಗಾವಿ: ಕುಡಚಿ ಶಾಸಕ ಪಿ.ರಾಜೀವ್ ಮಾದರಿಯಲ್ಲೇ ಅಥಣಿ ಮತಕ್ಷೇತ್ರಕ್ಕೆ ಮತ್ತೋರ್ವ ಪೋಲಿಸ್ ಅಧಿಕಾರಿ ರಾಜಕಾರಣದ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯಾರಂತೀರಾ ಇಲ್ಲಿದೆ ನೋಡಿ ಡೀಟೇಲ್ಸ್. ಅಥಣಿಯಲ್ಲಿ ಪಿಎಸ್ ಐ(PSI) ಆಗಿದ್ದಾಗ ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರಿತಿಸಿಕೊಂಡಿದ್ದ ಸದ್ಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬೀಸನಕೊಪ್ಪ ಈಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.   ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ …

Read More »