ಎಲ್ಲರೂ ಗುಜರಾತ್ ಮಾಡೆಲ್ ಅಂತಾರೆ, ಅದರೆ ಗುಜರಾತ್ ನ ಗ್ರಾಮಗಳಿಗೆ ಭೇಟಿ ನೀಡಿದ್ರೆ ಗುಜರಾತ್ ಮಾಡೆಲ್ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಫೈಲ್ಸ್ ರೀತಿಯಲ್ಲೇ ಗುಜರಾತ್ ಫೈಲ್ಸ್ ಪುಸ್ತಕ ಇದೆ. ಗುಜರಾತ್ ಗಲಭೆ ವೇಳೆ ಏನೆಲ್ಲಾ ಆಯ್ತು ಅನ್ನೋದು ಪುಸ್ತಕದಲ್ಲಿ ಇದೆ. ಗುಜರಾತ್ ಪೈಲ್ಸ್ ಪುಸ್ತಕದಲ್ಲಿ ಗಲಭೆಯ ಸಂಪೂರ್ಣ ಮಾಹಿತಿ ಇದೆ ಎಂದರು. ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಪ್ರಧಾನಿ ಮೋದಿ ಅವರು …
Read More »ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿ ಹೆಸರು, ಜನ್ಮದಿನಾಂಕ ಸೇರಿ ಇತರೆ ತಿದ್ದುಪಡಿ : ರಾಜ್ಯ ಸರ್ಕಾರದಿಂದ ಪರಿಷ್ಕೃತ ಸುತ್ತೋಲೆ
ಬೆಂಗಳೂರು : ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಹೆಸರು/ಪೋಷಕರ ಹೆಸರು, ಜನ್ಮದಿನಾಂಕ, ಜಾತಿ ಇತ್ಯಾದಿ ತಿದ್ದುಪಡಿ ಸಂಬಂದ ರಾಜ್ಯ ಸರ್ಕಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿ ಹೆಸರು/ಪೋಷಕರ ಹೆಸರು, ಜಾತಿ, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿ ಮಾಡುವ ಸಂಬಂಧ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿ ಅಧಿಕಾರವನ್ನು ಉಲ್ಲೇಖಿತ ಸುತ್ತೋಲೆಗಳಲ್ಲಿ ಜಿಲ್ಲಾ ಉಪನಿರ್ದೇಶಕರಿಗೆ ಪ್ರತ್ಯಾಯೋಜಿಸಿ ಅದರಂತೆ ಕ್ರಮವಹಿಸಲಾಗುತ್ತಿದೆ. ಈ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ …
Read More »ಬೊಮ್ಮಾಯಿಯವರು ಕಣ್ಣು ಬಿಡಲು ಇನ್ನೆಷ್ಟು ಶಿಕ್ಷಕರ ಹೆಣ ಬೀಳಬೇಕು?: ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಮೂಲದ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲಕ ಶಂಕರಪ್ಪ ಬೋರಡ್ಡಿ ಅವರು ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ …
Read More »15ನೇ ವಿಧಾನಸಭೆ ಅಧಿವೇಶನ ಅಂತ್ಯ; ಪರಸ್ಪರ ಶುಭಾಶಯ ಕೋರಿದ ಸದಸ್ಯರು
ಬೆಂಗಳೂರು: 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ವಿಧಾನಸಭೆಯಲ್ಲಿ ವಿದಾಯ ಭಾಷಣದ್ದೇ ಕಾರುಬಾರು. ಕಳೆದ 5 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ, ಜನತೆಯ ಹಿತಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ತನುಮನದಿಂದ ದುಡಿದ ಸಂತೃಪ್ತ, ಸಾರ್ಥಕ ಭಾವನೆಯನ್ನು ಎಲ್ಲ ಸದಸ್ಯರುಗಳು ವ್ಯಕ್ತಪಡಿಸಿ, ಪರಸ್ಪರ ಶುಭಾಶಯ,, ಅಭಿನಂದನೆಗಳ ವಿನಿಮಯ ಮಾಡಿಕೊಂಡರು. ಜತೆಗೆ ಮತ್ತೆ ಚುನಾವಣೆಯಲ್ಲಿ ಗೆದ್ದು ಸದನಕ್ಕೆ ಬರೋಣ ಶುಭ ಹಾರೈಕೆಗಳ ವಿನಿಮುಂವೂ ಸದನದಲ್ಲಿ ಆಯಿತು. 2018ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ …
Read More »ಮದ್ಯಪಾನವನ್ನೇ ಮುಂದಿಟ್ಟುಕೊಂಡು ಸರ್ಕಾರಗಳು ರಾಜಕಾರಣ ಮಾಡುತ್ತಿವೆ! ಮುತಾಲಿಕ್
ಉಡುಪಿ: ರಾಜ್ಯ ಸರ್ಕಾರ ಮದ್ಯಪಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿರುವು ಆಘಾತಕಾರಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಮದ್ಯ ಸೇವನೆ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿದೆ. ದೇಶದಾದ್ಯಂತ ಮದ್ಯಪಾನವನ್ನು ನಿಷೇಧ ಮಾಡಬೇಕೆಂದು ಗಾಂಧೀಜಿ 75 ವರ್ಷದ ಹಿಂದೆಯೇ ಸಲಹೆ ಕೊಟ್ಟಿದ್ದರು. ಆದರೆ ಮದ್ಯಪಾನವನ್ನೇ ಅನುಸರಿಸಿ ಸರಕಾರಗಳು ರಾಜಕಾರಣ ಮಾಡುತ್ತಿವೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದರು. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಮಧ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. …
Read More »ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ : ಮಾಜಿ ಸಿಎಂ ಬಿಎಸ್ ವೈ ಘೋಷಣೆ
ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಸಿಸುವ ಮಾತೇ ಇಲ್ಲ ಎಂದು . ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ತರಲು ಪ್ರಯತ್ನಿಸಲಾಗುವುದು. ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಎಂದು ಹೇಳಿದ್ದಾರೆ. ನಮ್ಮೆಲ್ಲರಿಗೂ ಹೆಚ್.ದೇವೇಗೌಡರೇ ಆದರ್ಶವಾಗಿದ್ದಾರೆ. ಇದು ನನ್ನ …
Read More »SC/ST ಮೀಸಲಾತಿ ಹೆಚ್ಚಳ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ SC/ST ಕಾಯ್ದೆ 2023ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್,… ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ SC/ST ಕಾಯ್ದೆ 2023ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. …
Read More »ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು:ಯು.ಟಿ ಖಾದರ್
ಬೆಂಗಳೂರು: ಇಂದು ವಿಧಾನಸಭೆ ಕಲಾಪದಲ್ಲಿ ಬಿ.ಎಸ್ ಯಡಿಯೂರಪ್ಪ ಕೊನೆಯ ಅಧಿವೇಶದ ಭಾಷಣ ಮಾಡಿದ್ದರು. ಇದಕ್ಕೆ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು ಎಂದು ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರಿಂದ ಮುಕ್ತವಾಗಿ ಓಡಾಡಲು ಸಾಧ್ಯವಾಯ್ತು. ಜನರ ಕೆಲಸ ಫುಟ್ಬಾಲ್ ರೀತಿ ಆಗಬಾರದು. ಆಧಿಕಾರಿಗಳು ಕೆಲಸ ಮಾಡಬೇಕು, ನಾವು ನೇರಾನೇರ ಇರಬೇಕು. ಎಲ್ಲವನ್ನೂ ಗಳಿಸಿ ಪರಿಸ್ಥಿತಿ ವಿಷಮವಾದರೆ …
Read More »ಕನ್ನಡಕ್ಕೆ ಅಗ್ರಸ್ಥಾನ: ಮಸೂದೆ ಅಂಗೀಕಾರ
ಬೆಂಗಳೂರು: ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶ ಕಲ್ಪಿಸಲು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022’ ರೂಪಿಸುವ ಉದ್ದೇಶದಿಂದ ಸರ್ಕಾರ ಮಂಡಿಸಿದ ಮಸೂದೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಸೂದೆಯನ್ನು ಮಂಡಿಸಿದರು. ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಇದೇ ಮಸೂದೆಯನ್ನು ಮಂಡಿಸಲಾಗಿತ್ತು. ಆಗ ಸಾರ್ವಜನಿಕ ವಲಯದಿಂದ ಕೆಲವು ಆಕ್ಷೇಪಣೆಗಳು, ಸಲಹೆಗಳು ಬಂದ ಕಾರಣ, ಅದರಲ್ಲಿನ ಕೆಲವು …
Read More »ಕಾಂಗ್ರೆಸ್ ಪ್ರಮುಖ ಸಭೆಗೆ ಗಾಂಧಿ ಕುಟುಂಬದ ಗೈರು; ಖರ್ಗೆಗೆ ಫುಲ್ ಪವರ್
ಹೊಸದಿಲ್ಲಿ: ಛತ್ತೀಸ್‌ಗಡದ ರಾಯ್ಪುರದಲ್ಲಿ ಇಂದು ನಡೆಯುವ ಕಾಂಗ್ರೆಸ್ ನ ಹಾಥ್ ಸೇ ಹಾಥ್ ಜೋಡೋ ಅಧಿವೇಶನದ ಪ್ರಮುಖ ಸಭೆಗೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಸ್ವಾತಂತ್ಯ ನೀಡುವ ಉದ್ದೇಶದಿಂದ ಗಾಂಧಿ ಕುಟುಂಬ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆದಾಗ್ಯೂ ಸಮಾವೇಶದ ಉಳಿದ ಭಾಗಕ್ಕೆ ಹಾಜರಾಗುತ್ತಾರೆ. …
Read More »