Breaking News

ರಾಷ್ಟ್ರೀಯ

2023 | ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ಸಜ್ಜು

ಬೆಂಗಳೂರು: ರಾಜ್ಯದಲ್ಲಿ ಪಕ್ಷದ ಪರ ಅಲೆ ಎಬ್ಬಿಸಲು ಬಿಜೆಪಿಯು ಮಾರ್ಚ್‌ 1 ರಿಂದ ‘ವಿಜಯ ಸಂಕಲ್ಪ ಯಾತ್ರೆ’ ಆರಂಭಿಸಲಿದೆ. ಮಾ.1 ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾ. 2 ರಂದು ಬೆಳಗಾವಿ ಜಿಲ್ಲೆಯ ನಂದಗಢದಲ್ಲಿರುವ ಸಂಗೊಳ್ಳಿ ರಾಯಣ್ಣ ಸ್ಮಾರಕದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮಾ.3 ರಂದು ಬೀದರ್‌ ಜಿಲ್ಲೆ ಬಸವಕಲ್ಯಾಣ ಅನುಭಮಂಪಟದ ಸ್ಥಳದಿಂದ ಕೇಂದ್ರ ಗೃಹ ಸಚಿವ ಅಮಿತ್‌ …

Read More »

ಚಾಮುಂಡೇಶ್ವರಿ ಆಶೀರ್ವಾದ ಇದೆ, ಮತ್ತೆ ನಾನೇ ಮುಖ್ಯಮಂತ್ರಿ: H.D.K.

ಚನ್ನಪಟ್ಟಣ: ನಾಡಿನ ಅಧಿದೇವತೆ ಚಾಮುಂಡೇಶ್ವರಿ ಆಶೀರ್ವಾದವಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ನಾನೇ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.   ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆದ ಬಮೂಲ್‌ ಉತ್ಸವದಲ್ಲಿ ಬೃಹತ್‌ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವ ಉದ್ದೇಶದಿಂದ ಈಗಾಗಲೇ ರಾಜ್ಯಾದ್ಯಂತ 73ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ 15ರಿಂದ 18 ಗಂಟೆಗಳ ಕಾಲ ನಿರಂತರ ಪಂಚರತ್ನ ಯಾತ್ರೆ …

Read More »

ನಿರ್ಮಾಣ ಹಂತದಲ್ಲೇ ಬೆಂಗಳೂರು-ಮೈಸೂರು ದಶಪಥ ಉದ್ಘಾಟನೆ?

ಬೆಂಗಳೂರು-ಮೈಸೂರು ದಶಪಥ ನಿರ್ಮಾಣ ಕಾರ್ಯವು ಮಂಡ್ಯ, ಮೈಸೂರು ವ್ಯಾಪ್ತಿಯ ವಿವಿಧೆಡೆ ಸಂಪೂರ್ಣ ಮುಗಿಯದಿದ್ದರೂ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೊದಲ ಹಂತದ ಕಾಮಗಾರಿ ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಿಂದ ಜಿಲ್ಲೆಯ ನಿಡಘಟ್ಟದವರೆಗೆ ಪೂರ್ಣಗೊಂಡಿದೆ.

Read More »

ಬಿಎಸ್ ವೈ ಬಿಟ್ಟು ಚುನಾವಣೆ ಇಲ್ಲ ಎಂಬ ಸಂದೇಶ ನೀಡಿದರಾ ಮೋದಿ?

ಬೆಂಗಳೂರು: ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ ಹೊಗಳಿರುವುದು ಈಗ ರಾಜಕೀಯ ವಲಯದಲ್ಲಿ ಅದರಲ್ಲೂ ಮುಖ್ಯವಾಗಿ ಬಿಜೆಪಿಯಲ್ಲಿ ತೀವ್ರ ಅಚ್ಚರಿಗೆ ಕಾರಣವಾಗಿದೆ.   ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ‌ ಮೋದಿ ಈ ವೇದಿಕೆಯಲ್ಲಿ ಯಡಿಯೂರಪ್ಪ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಕರ್ಮಭೂಮಿಯಲ್ಲಿ ಆಡಿದ ಈ ಹೊಗಳಿಕೆಯ ಮಾತುಗಳು ಚುನಾವಣಾ ಹೊತ್ತಿನಲ್ಲಿ ಪ್ರಬಲ ವೀರಶೈವ- …

Read More »

ಮೋದಿ- ಶಾ ಚುನಾವಣಾ ಏಜೆಂಟ್ ಗಳಾಗಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ವಿಚಾರದಲ್ಲಿ ಸುಳ್ಳು ಹೇಳಿರುವ ಮೋದಿಯವರು ಜನರ ಕ್ಷಮೆ ಕೇಳಬೇಕು. ರಾಜ್ಯದ ಪಾಲಿನ ಅನುದಾನಗಳನ್ನು ನ್ಯಾಯಯುತವಾಗಿ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ನಮ್ಮ ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಪ್ರವಾಹ, ಬರ, ಕೋವಿಡ್ ನಂತಹ ಮಾರಕ ಕಾಯಿಲೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ, ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಾನು ಮೋದಿಯವರು ರಾಜ್ಯಕ್ಕೆ ಬಂದಾಗಲೆಲ್ಲ ಕರ್ನಾಟಕದ ಜನರಿಂದ …

Read More »

ಯುವ ರಾಜಕುಮಾರ ಮೊದಲ ಸಿನಿಮಾಗೆ ನಾಯಕಿ ಫೈನಲ್ : ಯಾರು ಈ ಲಕ್ಕಿ ಗರ್ಲ್?

ದೊಡ್ಮನೆ ಅಭಿಮಾನಿಗಳ ಪಾಲಿನ ಯುಗಾದಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮ ದಿನದಂದೆ ಸೆಟ್ಟೇರಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರೋ ಸಂತೋಷ್ ಚಿತ್ರಕ್ಕೆ ಪವರ್ ಫುಲ್ ಟೈಟಲ್ ಫಿಕ್ಸ್ ಮಾಡಿಕೊಂಡಿದ್ದಾರೆ. ಜೊತೆಗೆ ನಾಯಕಿಯನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಸಂತಸದ ವಿಷ್ಯ ಅಂದ್ರೆ ಸಂತೋಷ್ ಆನಂದ್ ರಾಮ್ ನುಡಿದಂತೆ ಕನ್ನಡತಿಯನ್ನೆ ಯುವಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡ್ಕೊಂಡಿದ್ದಾರೆ. ಹಾಗಾದ್ರೆ ಅಣ್ಣಾವ್ರ ಮೊಮ್ಮಗನ ಮೊದಲ ಚಿತ್ರದ ಅವಕಾಶ ಗಿಟ್ಟಿಸಿದ ಆ ಲಕ್ಕಿ ಹುಡುಗಿ …

Read More »

ಪ್ರಧಾನಿ ಮೋದಿಯವರು ಇಂದಿನ ವಿಶ್ವ ಮಾನವ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಬಣ್ಣನೆ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ಹೇಳಿದ ವಿಶ್ವಮಾನ ತತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಉದಾಹರಣೆ. ಪ್ರಧಾನಿ ಮೋದಿ ಅವರು ಇಂದಿನ ವಿಶ್ವಮಾನವ. ವಸುದೈವ ಕುಟುಂಬಿಕಂ ಆಶಯವನ್ನು ಈಡೇರಿಸುತ್ತಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಸಿದರು.   ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ನಿಮ್ಮ ಹುಟ್ಟುಹಬ್ಬದ ದಿನವೇ ವಿಮಾ ನಿಲ್ದಾಣ ಉದ್ಘಾಟನೆ ಮಾಡಬೇಕು. ಅಂದು ನಾನು ಬಂದೇ ಬರುತ್ತೇನೆ ಎಂದು …

Read More »

ಬೆಳಗಾವಿಗೆ ಮದುವಣಗಿತ್ತಿಯ ಕಳೆ

ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಸೋಮವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಅವರ ಅಭೂತಪೂರ್ವ ಸ್ವಾಗತಕ್ಕೆ ಇಡೀ ಜಿಲ್ಲೆಯ ಜನರು ಕಾತುರದಿಂದ ಕಾಯುತ್ತಿದ್ದಾರೆ. ಕಮಲ ಪಾಳೆಯ ಹಬ್ಬೋಪಾದಿಯಲ್ಲಿ ಎಲ್ಲ ಸಿದ್ಧತೆ ಕೈಗೊಂಡಿದೆ. ನರೇಂದ್ರ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಮದುವಣಗಿತ್ತಿಯ ಕಳೆಬಂದಿದೆ. ಮಧ್ಯಾಹ್ನ 2 ಗಂಟೆಗೆ ನಗರಕ್ಕೆ ಆಗಮಿಸುವ ಪ್ರಧಾನಿ ಅವರು ಇದೇ ಪ್ರಥಮ ಬಾರಿಗೆ ನಗರದಲ್ಲಿ ಆಯೋಜಿಸಲಾಗಿರುವ 10.45 ಕಿ.ಮೀ. ರೋಡ್ ಶೋ ದಲ್ಲಿ ಭಾಗವಹಿಸಿ ಜನರ …

Read More »

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್‌ ಸಂಗ್ರಹ ಸೋಮವಾರದಿಂದ ಆರಂಭ

ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್‌ ಸಂಗ್ರಹ ಸೋಮವಾರದಿಂದ ಆರಂಭವಾಗಲಿದೆ. ಬೆಂಗಳೂರು- ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್‌ ಕಾರ್ಯಾಚರಣೆ ಆರಂಭಿಸಲಾಗಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ರಸ್ತೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಲಘು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಹಾಗೂ ಅದೇ ದಿನ ಮರು ಸಂಚಾರಕ್ಕೆ 205 ರೂ., ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌ಗಳ ಏಕಮುಖ …

Read More »

ಸಿದ್ದರಾಮಯ್ಯ – ಖರ್ಗೆ ರಹಸ್ಯ ಚರ್ಚೆ | ಹೆಚ್ಚಿದ ಆಕಾಂಕ್ಷಿಗಳ ಕುತೂಹಲ

ಬೆಂಗಳೂರು: ಛತ್ತೀಸಗಢದ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾಧಿವೇಶನದ ವೇಳೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಮಾರು 45 ನಿಮಿಷ ರಹಸ್ಯ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ಮಧ್ಯೆ ಇಬ್ಬರ ನಡುವಿನ ಚರ್ಚೆ ಟಿಕೆಟ್‌ ಆಕಾಂಕ್ಷಿಗಳ ಕುತೂಹಲ ಹೆಚ್ಚಿಸಿದೆ. ‘ಸಿದ್ದರಾಮಯ್ಯ ವಾಸ್ತವ್ಯವಿದ್ದ ಹೋಟೆಲ್‌ ಕೊಠಡಿಯ ಎದುರಿನ ಕೊಠಡಿಯಲ್ಲಿ ಖರ್ಗೆ ಕೂಡಾ ಇದ್ದಾರೆ. ಶನಿವಾರ ರಾತ್ರಿ …

Read More »