Breaking News

ರಾಷ್ಟ್ರೀಯ

ಕೊಡಲಿಯಿಂದ ಹೊಡೆದು ಮಗನ ಕೊಲೆ ಮಾಡಿದ ತಂದೆ

ಕಾಗವಾಡ: ತಾಲ್ಲೂಕಿನ ಉಗಾರ ಬಿ.ಕೆ. ಗ್ರಾಮದಲ್ಲಿ ಮಂಗಳವಾರ ತಂದೆ ಮಗನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಭರತೇಶ ಉರೂಫ್‌ ಚೇತನ್‌ ಖಾಂಜೆ (30) ಕೊಲೆಯಾದ ಯುವಕ. ಜಿನ್ನಪ್ಪ ಪಾಯಪ್ಪ ಖಾಂಜೆ (64) ಕೊಲೆ ಆರೋಪಿ. ‘ಭರತೇಶ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಂದೆ- ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿರಲಿಲ್ಲ. ಕುಡಿತದ ಚಟ ಬೆಳೆಸಿಕೊಂಡಿದ್ದ. ಮದ್ಯಕ್ಕಾಗಿ ಹಣ ಕೊಡುವಂತೆ ಪದೇ ಪದೇ ಹೆತ್ತವರೊಂದಿಗೆ ಜಗಳವಾಡುತ್ತಿದ್ದ. ಮಂಗಳವಾರ ಕೂಡ ಇದೇ ಕಾರಣಕ್ಕೆ ಜಗಳ ನಡೆದಿದ್ದು, ಆವೇಶದಲ್ಲಿ ಕೊಲೆಯಾಗಿದೆ’ …

Read More »

10 ಲಕ್ಷ ನೌಕರರನ್ನು ಸರಕಾರ ಜೈಲಿಗೆ ಹಾಕುವುದಾದರೆ ಹಾಕಲಿ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸ

ಬೆಂಗಳೂರು – 7ನೇ ವೇತನ ಆಯೋಗದ ವರದಿ ಜಾರಿ ಮತ್ತು ಹಳೆ ಪಿಂಚಣಿ ಯೋಜನೆ ಜಾರಿ ಬೇಡಿಕೆಗಳನ್ನು ಮುಂದಿಟ್ಟು ಸರಕಾರಿ ನೌಕರರು ಬುಧವಾರದಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸಲು ನೌಕರರ ಸಂಘ ನಿರ್ಧರಿಸಿದೆ. ತುರ್ತು ಸೇವೆ ಹೊರತುಪಡಿಸಿ ಯಾವುದೇ ನೌಕರರು ಕೆಲಸಕ್ಕೆ ಹಾಜರಾಗಬಾರದೆಂದು ತಿಳಿಸಿದೆ. ಇದರ ಬೆನ್ನಲ್ಲೆ ಮಂಗಳವಾರ ಸರಕಾರಿ ಕಠಿಣ ಎಚ್ಚರಿಕೆ ನೀಡುವ ಸುತ್ತೋಲೆಯೊಂದನ್ನು ಹೊರಡಿಸಿದೆ. ಸರಕಾರದ ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಆದಿತ್ಯ …

Read More »

ಐತಿಹಾಸಿಕ ವಿಶೇಷ ಕಾರಿಡಾರ್ ನಿರ್ಮಾಣಕ್ಕೆ ಅನುದಾನ: ಬನವಾಸಿಯಲ್ಲಿ ಸಿಎಂ ಬೊಮ್ಮಾಯಿ

ಕಾರವಾರ(ಬನವಾಸಿ): ಕನ್ನಡ ರಾಜ್ಯವನ್ನು ಆಳಿದ ರಾಜ್ಯ ಮನೆತನಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರ ಗತವೈಭವನ್ನು ಸಾರುವ ಕಾರ್ಯಕ್ರಮಗಳಿಗೆ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡಲಾಗಿದ್ದು, ಐತಿಹಾಸಿಕ ವಿಶೇಷ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಪಂಪನ ಆಶಯದಂತೆ ಈ ಭಾಗದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿರಸಿ ತಾಲೂಕಿನ ಬನವಾಸಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ …

Read More »

ಬನವಾಸಿಗೆ ಆಗಮಿಸಿದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾಂಗ್ರೆಸ್ ಪ್ರಮುಖರು

ಶಿರಸಿ: ಕನ್ನಡ ಪ್ರಥಮ ರಾಜಧಾನಿ ಬನವಾಸಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಎದುರು ಸ್ಥಳೀಯ ಕಾಂಗ್ರೆಸ್ ಪ್ರಮುಖರು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆದಿದೆ. ಜನರ ಉತ್ಸವವನ್ನಾಗಿ ಕದಂಬೋತ್ಸವವನ್ನು ಆಚರಿಸಬೇಕಿತ್ತು. ಇದು ಬಿಜೆಪಿ ಉತ್ಸವದಂತೆ ನಡೆಸಲಾಗುತ್ತಿದೆ. ಬಿಜೆಪಿ ಚಿಹ್ನೆಯ ಟಿಶರ್ಟ್ ಹಂಚಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಾವು ಕಾಂಗ್ರೆಸ್ ಶಾಲು ಹಾಕಿ ಬಂದಿದ್ದು ಕೆಲ‌ ಕಾಲ ಗೊಂದಲ‌ ಉಂಟಾಗಿತ್ತು. ಸಿಎಂ ತೆರಳುವ ಮಾರ್ಗದಲ್ಲಿ …

Read More »

ಕಲ್ಮೇಶ್ವರ ದೇವರ ಬೆಳ್ಳಿ ಮೂರ್ತಿ ಕಳವು

ನವಲಗುಂದ: ತಾಲ್ಲೂಕಿನ ಶಿರಕೋಳ ಗ್ರಾಮದಲ್ಲಿರುವ ಕಲ್ಮೇಶ್ವರ ದೇವರ 11 ಕೆ.ಜಿ ತೂಕದ ಬೆಳ್ಳಿಯ ಮೂರ್ತಿ ಕಳ್ಳರು ಕಳವು ಮಾಡಿದ್ದಾರೆ. ಭಾನುವಾರ ತಡರಾತ್ರಿ ಈ ಕೃತ್ಯ ನಡೆದಿದೆ. ಕಳ್ಳ ದೇವಸ್ಥಾನದಲ್ಲಿ ಅತ್ತ ಇತ್ತ ತಿರುಗಾಡಿದ್ದಾನೆ. ಅಲ್ಲಿ ಮಲಗಿದ್ದವರು ಎಚ್ಚರಗೊಳ್ಳದಂತೆ ನೋಡಿಕೊಂಡು, ಕೀಲಿ ಮುರಿದು ಗರ್ಭಗುಡಿ ಪ್ರವೇಶಿಸಿ, ಆ ಬೆಳ್ಳಿ ಮೂರ್ತಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಮಾಯಿಸಿದ ಜನ: ಮೂರ್ತಿ ಕಳವು ಸುದ್ದಿ ತಿಳಿಯುತ್ತಿದ್ದಂತೆ …

Read More »

ಮುಷ್ಕರ ನಡೆಯುವುದು ಶತಸಿದ್ಧ; ವದಂತಿಗಳಿಗೆ ಕಿವಿಗೊಡದಿರಿ: ಷಡಾಕ್ಷರಿ

ಬೆಂಗಳೂರು: “ಬುಧವಾರದಿಂದ ಮುಷ್ಕರ ನಡೆಯುವುದು ಶತಸಿದ್ಧ. ಯಾವ ಕಾರಣಕ್ಕೂ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ,ಈ ವಿಷಯದಲ್ಲಿ ರಾಜ್ಯ ಸರಕಾರಿ ನೌಕರರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು” ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಹಿರಿಯ ಅಧಿಕಾರಿಗಳೂ ಸೇರಿದಂತೆ ರಾಜ್ಯ ಸರಕಾರದ ಎಲ್ಲ ನೌಕರರು ಈ ಮುಷ್ಕರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಅವರು …

Read More »

ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲು

ಕಲಬುರಗಿ: ಬಹು ದಿನಗಳ ಬೇಡಿಕೆಯಾಗಿದ್ದ ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ಡಾ. ಉಮೇಶ ಜಾಧವ್ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.   ಸದ್ಯಕ್ಕೆ ಒಂದೇ ಡೆಮು ರೈಲು ಇದ್ದು, ನಿತ್ಯ ಎರಡು ಬಾರಿ ಸಂಚರಿಸುತ್ತದೆ. ಹೊಸದಾಗಿ ಆರಂಭವಾಗುವ ಡೆಮು ರೈಲು ನಿತ್ಯ ಬೆಳಿಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 10.15ಕ್ಕೆ ಬೀದರ್‌ …

Read More »

ಖಾನಾಪುರ: ಕ್ರೀಡಾ ವಿಜೇತರಿಗೆ ನಗದು ಬಹುಮಾನ

ಖಾನಾಪುರ: ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗನಮಠ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಿಗೆ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್‌ ಭಾನುವಾರ ನಗದು ಬಹುಮಾನ ವಿತರಿಸಿದರು. ಚಾಂಪಿಯನ್‌ ತಂಡಕ್ಕೆ ₹50 ಸಾವಿರ, ದ್ವಿತೀಯ ಸ್ನಾನ ಪಡೆದ ತಂಡಕ್ಕೆ ₹ 25 ಸಾವಿರ, ತೃತೀಯ ಸ್ಥಾನದ ಆಟಗಾರರಿಗೆ ₹ 10 ಸಾವಿರದ ಚೆಕ್‌ಗಳನ್ನು ಅವರು ನೀಡಿದರು.   ನಂತರ ಮಾತನಾಡಿ, ‘ಮುಂದಿನ ವರ್ಷದಿಂದ ಈ ನಗದು ಬಹುಮಾನ ಮೊತ್ತವನ್ನು ₹ 5 ಲಕ್ಷಕ್ಕೆ ಏರಿಸಲಾಗುವುದು. …

Read More »

ವಿದ್ಯಾರ್ಥಿಗಳಿಗೆ ವಿಎಸ್‍ಎಂ ಫೌಂಡೇಷನ್ ನೆರವು

ನಿಪ್ಪಾಣಿ: ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅವರು ತಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಡ ವಿದ್ಯಾರ್ಥಿಗಳ ಮನೆಗಳಿಗೆ ಶನಿವಾರ ತೆರಳಿ ಆರೋಗ್ಯ ವಿಚಾರಿಸಿ, ವಿಎಸ್‍ಎಂ ಫೌಂಡೇಷನ್‍ನಿಂದ ₹21 ಸಾವಿರ ಧನಸಹಾಯ ಮಾಡಿದರು.   5ನೇ ತರಗತಿಯ ಅಭಿಷೇಕ ವಿಕ್ರಮ ಕದಮ, 6ನೇ ತರಗತಿ ಆರ್ಯನ್ ಕುಂದನ್ ಖೋತ ಶಸ್ತ್ರಚಿಕಿತ್ಸೆಗೆ ಒಳಗಾದವರು.

Read More »

ನಿಪ್ಪಾಣಿ: ‘ನಿರ್ಲಕ್ಷಿತ ಗ್ರಾಮದಲ್ಲಿ ಅಭಿವೃದ್ಧಿ’

ನಿಪ್ಪಾಣಿ: ‘ರಾಜ್ಯದ ಕಟ್ಟಕಡೆಯ ಗಾಯಕವಾಡಿ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ನನ್ನ ಆಡಳಿತಾವಧಿಯಲ್ಲಿ ಗ್ರಾಮದಲ್ಲಿ ಈವರೆಗೆ ₹8.4 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.   ತಾಲ್ಲೂಕಿನ ಗಾಯಕವಾಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಮೋದನೆಗೊಂಡ ₹ 85 ಲಕ್ಷ ಅನುದಾನದ ಗಾಯಕವಾಡಿ-ಕೋಡಣಿ ಗ್ರಾಮಗಳ ನಡುವಿನ ಹಳ್ಳದ ಬ್ರಿಜ್ ಕಂ ಬ್ಯಾರೇಜ್ ಮತ್ತು ಲೋಕೋಪಯೋಗಿ ಇಲಾಖೆಯಿಂದ ವಿವೇಕ ಶಾಲಾ ಯೋಜನೆಯಡಿ ಅನುಮೋದನೆಗೊಂಡ ₹15 …

Read More »