Breaking News

ರಾಷ್ಟ್ರೀಯ

ಐಪಿಎಸ್ ಅಧಿಕಾರಿಯ ಮನೆಯಲ್ಲಿ ಪತ್ತೆಯಾದ ಮಹಿಳಾ ಎಎಸ್‌ಐ!

ಕಲಬುರಗಿ: ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರೊಂದಿಗೆ ತನ್ನ ಪತ್ನಿ ಹೊಂದಿರುವ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಅಧಿಕಾರಿ ಜತೆ ಸೇರಿ ಪತ್ನಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಪೊಲೀಸ್ ಕಾನ್‌ಸ್ಟೆಬಲ್‌ಯೊಬ್ಬರು ಸ್ಟೇಷನ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   ಆಂತರಿಕಾ ಭದ್ರತಾ ಘಟಕದ ಎಸ್ಪಿಯಾಗಿದ್ದ ಅರುಣ್ ರಂಗರಾಜನ್ ಹಾಗೂ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯ ಪತಿ ಕಂಟೆಪ್ಪ ದೂರು ದಾಖಲಿಸಿದ್ದಾರೆ. ಎಸ್ಪಿ …

Read More »

ಬಿಜೆಪಿಯ 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ಡೌಟ್‌! ‘ಕೊಕ್‌ʼ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಬೆಂಗಳೂರು,ಮಾರ್ಚ್‌ 13: ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜ್ಯ ಬಿಜೆಪಿ ಹಲವು ರೀತಿಯ ತಂತ್ರಗಾರಿಕೆಯನ್ನ ನಡೆಸುತ್ತಿದೆ. ಚುನಾವಣೆಯಲ್ಲಿ ಮಿಷನ್‌ 150 ಟಾರ್ಗೆಟ್‌ ಹಾಕಿಕೊಂಡಿರುವ ಬಿಜೆಪಿ ಹಲವು ಸಮರಾಭ್ಯಾಸವನ್ನ ನಡೆಸುತ್ತಿದೆ. ಇತ್ತ ಹಲವು ಹಲವು ಸಮೀಕ್ಷೆಗಳನ್ನ ನಡೆಸಿರುವ ಬಿಜೆಪಿಗೆ ಸರ್ವೆಯಿಂದ ದೊಡ್ಡ ಅಘಾತ ಉಂಟಾಗಿದೆ. ಹೀಗಾಗಿ ಪ್ರತಿ ಕ್ಷೇತ್ರದಲ್ಲಿಯೂ ಗೆಲ್ಲುವ ಕುದುವೆ ಹುಡುಕಾಟವನ್ನ ಬಿಜೆಪಿ ನಡೆಸುತ್ತಿದ್ದು, ಪ್ರತಿ ಕ್ಷೇತ್ರಕ್ಕೂ ಅಳೆದು ತೂಗಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಬೇಕು ಎನ್ನುವ …

Read More »

ನನ್ನ ಬಳಿ 10 ಸಿಡಿಗಳಿವೆ, ಆದರೇ ಬಹಿರಂಗ ಮಾಡಲ್ಲ: ಶಾಸಕ ರಮೇಶ್ ಜಾರಕಿಹೊಳಿ

ಬೆಳಗಾವಿ: ನನ್ನ ಬಳಿ 10 ಸಿಡಿಗಳಿದ್ದಾವೆ. ನಾವು ಯುದ್ಧ ಮಾಡುವ ಜನ, ಷಡ್ಯಂತರ ಮಾಡುವವರಲ್ಲ. ಹೀಗಾಗಿ ಬಿಡುಗಡೆ ಮಾಡುವುದಿಲ್ಲ ಎಂಬುದಾಗಿ ಶಾಸಕ ರಮೇಶ್ ಜಾರಕಿಹೊಳಿ ( MLA Ramesh Jarkiholi ) ಹೇಳಿದ್ದಾರೆ. ಬೆಳಗಾವಿಯ ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಓರ್ ಮಂತ್ರಿಯನ್ನು ಬರ್ತಿರೋ, ಸಿಡಿ ಬಿಡಗಡೆ ಮಾಡಲೋ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆದರಿಸುತ್ತಾನೆ. ಸಿಡಿ ಪಾಟನರ್ ಹಾಗೂ ಆಕ್ಟರ್ ಬೆಳಗಾವಿಯಲ್ಲೇ ಇದ್ದಾನೆ. ಅದಕ್ಕೆ ಎಲ್ಲರೂ …

Read More »

ಭಾವೈಕ್ಯತೆಯ ಸಂಕೇತ ಹೊಸೂರು ಉರುಸ್

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಸಿರಾಜಸಾಬ್ ಮತ್ತು ಮುರಾದಸಾಬ್ ದರ್ಗಾದ ಉರುಸ್ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಇಲ್ಲಿಯ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಂದಾಗಿ ಉರುಸ್ ಆಚರಣೆ ಮಾಡುತ್ತಿದ್ದು, ಇದು ಭಾವ್ಯಕ್ಯತೆಯ ಸಂಕೇತದ ಉರುಸ್ ಆಗಿದೆ. ಐದು ದಿನಗಳ ಕಾಲ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ರಬಕವಿ, ಬನಹಟ್ಟಿ, ರಾಮಪುರ ಹಾಗೂ ಹೊಸೂರಿನ ಹಿಂದೂಗಳು ಮತ್ತು ಮುಸ್ಲಿಂರು ಯಾವುದೆ ಬೇಧ ಭಾವವಿಲ್ಲದೆ ಒಂದಾಗಿ ನೂರಾರು ವರ್ಷಗಳಿಂದ ಅಚರಿಸುತ್ತ ಬಂದಿದ್ದಾರೆ. …

Read More »

ರಮೇಶ್‌ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರ ಕುರಿತಂತೆ ಸಿ.ಡಿ ಸೃಷ್ಟಿಸಿ ಅವರಿಗೆ ಕಿರುಕುಳ ಕೊಡುವುದೇ ಕಾಂಗ್ರೆಸ್‌ ಕೆಲಸ: ಡಾ.ಅಶ್ವತ್ಥನಾರಾಯಣ

ಬಂಗಾರಪೇಟೆ (ಕೋಲಾರ): ‘ರಮೇಶ್‌ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರ ಕುರಿತಂತೆ ಸಿ.ಡಿ ಸೃಷ್ಟಿಸಿ ಅವರಿಗೆ ಕಿರುಕುಳ ಕೊಡುವುದೇ ಕಾಂಗ್ರೆಸ್‌ ಕೆಲಸವಾಗಿದೆ. ಕಾಂಗ್ರೆಸ್‌ ಎಂದರೆ ಸಿ.ಡಿ ಪಕ್ಷ, ಬ್ಲ್ಯಾಕ್‌ ಮೇಲ್‌ ಪಕ್ಷ. ಕೆಪಿಸಿಸಿ ಅಧ್ಯಕ್ಷರೇ ಇದರ ಪರಿಣತ’ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ ಯಾವತ್ತೂ ಉತ್ತಮ ಆಡಳಿತದ ಬಗ್ಗೆ ಮಾತನಾಡಲ್ಲ. ಅದು ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟಿರುವ ಕಳಂಕಿತ …

Read More »

ಫೋನ್‌ ಟ್ಯಾಪಿಂಗ್: ಡಿಜಿಪಿಗೆ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ ದೂರು

ವಿಜಯಪುರ: ‘ನನ್ನ ಹಾಗೂ ನನ್ನ ಕುಟುಂಬ ಮತ್ತು ನನ್ನ ಆಪ್ತರ ಫೋನ್ ಕರೆಗಳ ವಿವರವನ್ನು ಕೆಲವರು ತೆಗೆಸಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಆದ ಕಾರಣ ಯಾರಿಗೂ ನನ್ನ ಫೋನ್‌ ಕರೆಗಳ ವಿವರವನ್ನು(ಕಾಲ್‌ ಹಿಸ್ಟರಿ) ನೀಡಬಾರದು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು, ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ದೂರು ನೀಡಿದ್ದಾರೆ.   ‘ರಾಜಕೀಯ ದುರುದ್ದೇಶದಿಂದ ಕೆಲವರು ವಿಜಯಪುರ ಜಿಲ್ಲೆ ಹೊರತು ಪಡಿಸಿ ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ಇತರೆ …

Read More »

ಕೊಪ್ಪಳದ ಗವಿಮಠ ದರ್ಶನ ಪಡೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ

ಕೊಪ್ಪಳ: ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಸೋಮವಾರ ಕೊಪ್ಪಳಕ್ಕೆ ಭೇಟಿ ನೀಡಿದರು‌. ಇಲ್ಲಿನ ಪ್ರಸಿದ್ಧ ಗವಿಮಠಕ್ಕೆ ಬಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರೊಂದಿಗೆ ಕೆಲ ಹೊತ್ತು ಚರ್ಚಿಸಿ ಮಠದ ಪರಂಪರೆ, ಇತಿಹಾಸ, ಜಾತ್ರೆಯ ವಿಶೇಷತೆ, ಜಾತ್ರೆಗೆ ಬರುವ ಭಕ್ತರಿಗೆ ಊಟದ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಹೀಗೆ ಹಲವು ಮಾಹಿತಿಗಳನ್ನು ಪಡೆದುಕೊಂಡರು.   ಅಸ್ಸಾಂನಲ್ಲಿರುವ ವಾತಾವರಣ, ಅಲ್ಲಿನ ಜನರ ಬಗ್ಗೆ ಸ್ವಾಮೀಜಿ‌ ಮಾಹಿತಿ ಪಡೆದರು. …

Read More »

ಇತಿಹಾಸ ಬರೆದ ಆರ್ ಆರ್ ಆರ್; ಆಸ್ಕರ್ ಪ್ರಶಸ್ತಿ ಗೆದ್ದ ‘ನಾಟು ನಾಟು’

ಲಾಸ್ ಏಂಜಲೀಸ್: ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ …

Read More »

ಗೋವಾ: ದೆಹಲಿ ಪ್ರವಾಸಿಗರ ಮೇಲೆ ಮಾರಕಾಯುಧಗಳಿಂದ ದಾಳಿ

ಪಣಜಿ : ಪ್ರವಾಸಿ ತಾಣ ಗೋವಾಕ್ಕೆ ಭೇಟಿ ನೀಡಿದ್ದ ದೆಹಲಿಯ ಕುಟುಂಬದ ಮೇಲೆ ಅಂಜುನಾ ಪ್ರದೇಶದಲ್ಲಿ ಸ್ಥಳೀಯರು ಕತ್ತಿಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಗೋವಾ ಪೊಲೀಸರು ಮೂವರನ್ನು ಬಂಧಿಸಿದ್ದು, ಕೊಲೆ ಯತ್ನ ಆರೋಪ ಹೊರಿಸಿದ್ದಾರೆ. ದಾಳಿಕೋರರ ಬಗ್ಗೆ ಪೊಲೀಸರು ಮೃದು ಧೋರಣೆ ತೋರಿದ್ದಾರೆ ಎಂದು ಸಂತ್ರಸ್ತರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ವಿರುದ್ಧ ಪ್ರಾಥಮಿಕ ತನಿಖೆಯನ್ನೂ ಆರಂಭಿಸಲಾಗಿದೆ. ದೆಹಲಿ ನಿವಾಸಿ …

Read More »

ರೌಡಿಗೆ ಕೈಮುಗಿದ ಪ್ರಧಾನಿಬಿಜೆಪಿ ನಾಯಕರನ್ನು ಅಣಕಿಸಿದಕಾಂಗ್ರೆಸ್

ಬೆಂಗಳೂರು: ಭ್ರಷ್ಟಾಚಾರವನ್ನೆ ಉಸಿರಾಗಿಸಿಕೊಂಡಿರುವ 40% ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಮರ್ಯಾದೆ! ಕಳ್ಳರ ಬೆಂಬಲ ಕಳ್ಳರಿಗಷ್ಟೆ ಅಲ್ವೇ ಸಿಎಂ ಬೊಮ್ಮಾಯಿ ಅವರೇ ಎಂದು ರಾಜ್ಯ   ಬಿಜೆಪಿ ನಾಯಕರನ್ನು ಅಣಕಿಸಿದೆ. ಪ್ರಧಾನಿಯೇ ರೌಡಿಗೆ ಕೈಮುಗಿಯುವಾಗ ಇವರು ಭ್ರಷ್ಟರಿಗೆ ಬಡ್ತಿ ನೀಡದೆ ಇರುತ್ತಾರ? ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಭ್ರಷ್ಟೋತ್ಸವ ನಡೆಸುತ್ತಿರುವ ಭ್ರಷ್ಟ ಜನತಾ ಪಾರ್ಟಿ! ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ. ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ! ಖಾಲಿ ಕುರ್ಚಿಗಳು ಬಿಜೆಪಿ ನಿರ್ನಾಮದ …

Read More »