(ಯಾದಗಿರಿ ಜಿಲ್ಲೆ): ಸೋಮವಾರ ಬಿಜೆಪಿಗೆ ಕೈಕೊಟ್ಟ ಕಲ್ಯಾಣ ಕರ್ನಾಟಕ ಭಾಗದ ವರ್ಣರಂಜಿತ ರಾಜಕಾರಣಿ, ಮಾಜಿ ಎಂಎಲ್‌ಸಿ ಬಾಬುರಾವ ಚಿಂಚನಸೂರ ಬುಧವಾರ (ಮಾ.22)ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಸಮ್ಮುಖ ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆಯಾಗಿದ್ದಾರೆ. ಚಿಂಚನಸೂರ ಪಕ್ಷ ಸೇರ್ಪಡೆಯಿಂದ ಕ್ಷೇತ್ರದ ಟಿಕೆಟ್ ‘ಕೈ’ಗಿಟ್ಟಿದೆ ಎನ್ನುವ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ. ಕೆಲ ದಿನಗಳ ಹಿಂದೆ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ್ದ ಚಿಂಚನಸೂರ ‘ಲೋಕಸಭಾ ಚುನಾವಣೆಯಲ್ಲಿ ತೊಡೆತಟ್ಟಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದೆ, …
Read More »ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್
ಚಾಮರಾಜನಗರ: ಸಚಿವ ವಿ ಸೋಮಣ್ಣ (V Somanna) ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಚಾಮರಾಜನಗರ (Chamarajanagar) ಜಿಲ್ಲಾ ಬಿಜೆಪಿ ವಕ್ತಾರನಿಗೆ (BJP Spokesperson) ನೋಟಿಸ್ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್‌ಗೆ ನೋಟೀಸ್ ಜಾರಿ ಮಾಡಲಾಗಿದೆ. ಸಚಿವ ಸೋಮಣ್ಣ ಅವರಿಗೆ ಮೈಸೂರು ವಿಭಾಗದ ಉಸ್ತುವಾರಿ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಬೇಡ ಎಂದು ಬಿಜೆಪಿ ವಕ್ತಾರ ಶಿವಕುಮಾರ್ ಒತ್ತಾಯ ಮಾಡಿದ್ದರು. ಚಾಮರಾಜನಗರದಲ್ಲಿ ಟಿಕೆಟ್ ನೀಡಿದರೆ ಗೋ ಬ್ಯಾಕ್ ಚಳವಳಿ …
Read More »ಗೋಕರ್ಣ: ಅಥರ್ವಣ ವೇದ ಪಂಡಿತ ಆಚಾರ್ಯ ಶ್ರೀಧರ ಅಡಿ ವಿಧಿವಶ
ಗೋಕರ್ಣ: ಖ್ಯಾತ ಅಥರ್ವಣವೇದ ಪಂಡಿತರಾಗಿದ್ದ ಗೋಕರ್ಣದ ಆಚಾರ್ಯ ಶ್ರೀಧರ ಅಡಿ ಬುಧವಾರ ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಪುತ್ರಿ ಸೇರಿ ಅಪಾರ ಶಿಷ್ಯವರ್ಗ, ಬಂಧುಗಳನ್ನು ಅಗಲಿದ್ದಾರೆ. ವಾರಾಣಸಿಯಲ್ಲಿ ಋಗ್ವೇದ ಮತ್ತು ಯಜುರ್ವೇದ ಅಧ್ಯಯನ ಮುಗಿಸಿ ನಂತರ ಅಥರ್ವಣ ವೇದ ಪಾರಂಗತರಾಗಿ ವಿವಿಧೆಡೆ ವೇದ ಮಹತ್ವ ಸಾರಿ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದ್ದರು. ಸಂಸ್ಕೃತ ಪಾಂಡಿತ್ಯ ಹೊಂದಿದ್ದ ಅವರು ವಾಗ್ಮಿಯೂ …
Read More »ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ
ಬೆಂಗಳೂರು: ದೂರು ನೀಡಲು ಬಂದಿದ್ದ ಯುವತಿ ಜೊತೆ ದುರ್ವರ್ತನೆ ತೋರಿದ ಕೂಡಿಗೆಹಳ್ಳಿ ಠಾಣೆ ಪೊಲೀಸ್ ಇನಸ್ಪೆಕ್ಟರ್ ನ್ನು ಅಮಾನತುಗೊಳಿಸಲಾಗಿದೆ. ರಾಜಣ್ಣ ಅಮಾನತುಗೊಂಡವ. ಪ್ರಕರಣವೊಂದರ ಸಂಬಂಧ ದೂರು ನೀಡಲು ಠಾಣೆಗೆ ಬಂದಿದ್ದ ಯುವತಿಯ ಮೊಬೈಲ್ ಸಂಖ್ಯೆ ಪಡೆದಿದ್ದ ರಾಜಣ್ಣ, ನಂತರ ಆಕೆಯೊಂದಿಗೆ ಅಸಭ್ಯ ಚಾಟಿಂಗ್ ಮಾಡಿದ್ದ. ಇನ್ನೊಮ್ಮೆ ಠಾಣೆಗೆ ಕರೆಸಿ ಡ್ರೈ ಫ್ರುಟ್ ಬಾಕ್ಸ್ ನೀಡಿ ತನ್ನ ರೂಮ್ ಗೆ ಬರುವಂತೆ ಕರೆದಿದ್ದ. ರಾಜಣ್ಣನ ವರ್ತನೆಯಿಂದ ಬೇಸತ್ತ ಯುವತಿ ದಾಖಲೆಗಳ ಸಮೇತ ಹಿರಿಯ …
Read More »ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ: ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕಳೆದ ಭಾನುವಾರದಂದು ಸಿದ್ಧೇಶ್ವರ ಸ್ವಾಮಿಜಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ …
Read More »₹40 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಎಸ್‌ಐ, ಕಾನ್‌ಸ್ಟೆಬಲ್ ಬಂಧನ
ರಾಣೆಬೆನ್ನೂರು: ವ್ಯಕ್ತಿಯೊಬ್ಬರಿಂದ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ₹ 40 ಸಾವಿರ ಲಂಚ ಪಡೆಯುತ್ತಿದ್ದಾಗ ಇಲ್ಲಿನ ಅಶೋಕನಗರ ಠಾಣೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಹಾಗೂ ಕಾನ್‌ಸ್ಟೆಬಲ್ ಸಚಿನ್ ಓಲೇಕಾರ ಸಿಕ್ಕಿಬಿದ್ದವರು. ಇವರ ಜೊತೆಗೆ ಉಡುಪಿ ಟಿಸ್ಟಾಲ್ ಮಾಲೀಕ ಸಂತೋಷ್ ಶೆಟ್ಟಿ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ದೂರುದಾರ ಸಿದ್ಧೇಶ್ವರ ನಗರದ ಅಫ್ರೋಜ್ ಅಹ್ಮದ್ ನೂರ ಅಹ್ಮದ್‌ಸಾಬ್ ಊದಗಟ್ಟಿ ಅವರಿಗೆ …
Read More »ಯುಗಾದಿ.. ಅರ್ಥ ಆಚರಣೆ ವಿಶ್ಲೇಷಣೆ
ಭಾರತೀಯ ಸಂಸ್ಕೃತಿಯೇ ಹಾಗೆ! ಜೀವನವನ್ನು, ಮನುಷ್ಯನನ್ನು, ಜೀವನಕ್ರಮವನ್ನು, ಜೀವನಕ್ಕೆ ಆಶ್ರಯ, ಪುಷ್ಟಿ, ತುಷ್ಟಿಗಳನ್ನು ನೀಡುವ ಭೂಮಿ, ನೀರು, ಆಕಾಶ, ಗಾಳಿಗಳನ್ನು, ಇದಕ್ಕೆ ಆಧಾರವಾಗಿ ನಿಲ್ಲುವ ದೇಶ, ಮಾತಾಪಿತೃಗಳು, ಗುರುಹಿರಿಯರು, ರಾಜ, ಪಶುಪಕ್ಷಿಗಳನ್ನು ದೈವೀಕರಿಸಿ ಉದಾತ್ತೀಕರಿಸಿ ಇವುಗಳೆಡೆಗೆ ಉತ್ಸಾಹ, ಹುಮ್ಮಸ್ಸುಗಳು ಪ್ರತಿನಿತ್ಯವೂ ಧುಮ್ಮಿಕ್ಕುವಂತೆ ಇದು ಮಾಡುವುದರ ಪರಿಯನ್ನು ನೋಡಿಯೇ ತಿಳಿಯಬೇಕು. ವೇದಗಳಲ್ಲಿ ಬರುವ ಈ ಜೀವನೋತ್ಸಾಹ ಮತ್ತೆಲ್ಲಿ ಕಾಣಲಾದೀತು! ಪಶ್ಯೇಮ ಶರದಃ ಶತಂ| ಜೀವೇಮ ಶರದಃ ಶತಂ | ಶೃಣುಯಾಮ ಶರದಃ …
Read More »ಬೆಳಗಾವಿಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಜಿಲ್ಲೆಯ ಸಂಭಾವ್ಯ ಅಭ್ಯರ್ಥಿಗಳ ಲೇಟೆಸ್ಟ್ ಮಾಹಿತಿ
ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬುಧವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು 125 – 150 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು. ಇದರಲ್ಲಿ ಬೆಳಗಾವಿ ಜಿಲ್ಲೆಯ 12-14 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯ 2 -4 ಕಡೆಗಳಲ್ಲಿ ಅಚ್ಛರಿಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸುವ ನಿರೀಕ್ಷೆ ಇದೆ. ಬೆಳಗಾವಿ ಜಿಲ್ಲೆಯ ಸಂಭಾವ್ಯ ಅಭ್ಯರ್ಥಿಗಳ ಲೇಟೆಸ್ಟ್ ಮಾಹಿತಿ ಇಲ್ಲಿದೆ: ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ …
Read More »ಸಿಆರ್‌ಪಿಎಫ್‌ನಲ್ಲಿ 9,212 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಮೆಟ್ರಿಕುಲೇಷನ್ ಅಥವಾ 10 ನೇ ತರಗತಿ ಮುಗಿಸಿ ವಿವಿಧ ಕೌಶಲ್ಯ ಹೊಂದಿರುವವರಿಗೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ದೊಡ್ಡ ಪ್ರಮಾಣದ ನೇಮಕಾತಿಗೆ ಚಾಲನೆ ನೀಡಲಾಗಿದೆ. ಸಿಆರ್‌ಪಿಎಫ್‌ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ‘ಟೆಕ್ನಿಷಿಯನ್’ ಹಾಗೂ ‘ಟ್ರೇಡ್ಸ್‌ಮನ್’ ಕಾನ್‌ಸ್ಟೆಬಲ್ ಎಂಬ ಒಟ್ಟು 9,212 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇದರಲ್ಲಿ 9,105 ಹುದ್ದೆಗಳು -ಪುರುಷರಿಗೆ ಹಾಗೂ 107 ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. ಹುದ್ದೆಗಳು ರಾಜ್ಯವಾರು ಹಂಚಿಕೆಯಾಗಿದ್ದು ಇದೇ ಮಾರ್ಚ್ 27 ರಿಂದ www.crpf.gov.in …
Read More »ಜ್ಞಾನವಿದ್ದರೆ ಸಾಲದು, ಬದುಕುವ ಕಲೆಯೂ ಗೊತ್ತಿರಬೇಕು
ಬೆಳಗಾವಿ: ‘ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಬಳಿ ಜ್ಞಾನವಿದ್ದರಷ್ಟೇ ಸಾಲದು. ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕು’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ ಅಭಿಪ್ರಾಯಪಟ್ಟರು. ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದ 11ನೇ ವಾರ್ಷಿಕ ಘಟಿಕೋತ್ಸವದ ಭಾಷಣ ಮಾಡಿದ ಅವರು, ‘ಶಿಕ್ಷಣ ಸಂಸ್ಥೆಗಳು ವೃತ್ತಿಪರರನ್ನು ಸೃಷ್ಟಿಸಿದರೆ ಸಾಲದು. ವಿದ್ಯಾರ್ಥಿಗಳಲ್ಲಿ ವೃತ್ತಿಯಾಚೆಗಿನ ನೈತಿಕ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಕಲಿಕೆಗೆ ಯಾವುದೇ …
Read More »