ಬೆಂಗಳೂರು: ರಾಜ್ಯದ 18 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ ಉಂಟಾಗಿದೆ. ವಯಸ್ಸಿನ ಕಾರಣ ಮತ್ತು ಕ್ಷೇತ್ರದಲ್ಲಿ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಕೆಲವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎನ್ನುವ ಸುದ್ದಿ ಬಂದಿದೆ. ಭಾನುವಾರ ರಾತ್ರಿ ಅಥಾ ಸೋಮವಾರ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು ಇದರಲ್ಲಿ ಸುಮಾರು 75 -80 ಹಾಲಿ ಶಾಸಕರ ಹೆಸರು ಇರುವ ಸಾಧ್ಯತೆ ಇದೆ. ವಯಸ್ಸಿನ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ರಾಮದುರ್ಗದ ಮಹಾದೇವಪ್ಪ ಯಾದವಾಡ, ಕಲಘಟಗಿಯ …
Read More »ಕಿತ್ತೂರನ ಚೆಕ್ ಪೋಸ್ಟ್ ನಲ್ಲಿ 4.5 ಲಕ್ಷ ರೂ. ಮೌಲ್ಯದ ಆಭರಣ ವಶ
ಬೆಳಗಾವಿ: ಕಿತ್ತೂರಿನ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. 4.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಾರು ಸಮೇತ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಆಭರಣಗಳಿಗೆ ಯಾವುದೇ ದಾಖಲೆಗಳಿಲ್ಲದ್ದರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
Read More »ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಏ.11 ರವರೆಗೆ ಅವಕಾಶ
ಬೆಳಗಾವಿ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಏ.11 ರವರೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಏ.20 ಕಡೆಯ ದಿನವಾಗಿರುತ್ತದೆ. ಸಾರ್ವಜನಿಕರು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್(ಎನ್.ವಿ.ಎಸ್.ಪಿ) ಲಾಗಿನ್ ಆಗುವ ಮೂಲಕ ತಮ್ಮ ಹೆಸರು ನೋಂದಾಯಿಸಲು ಅಥವಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದಲ್ಲದೇ ಅರ್ಹ ಮತದಾರರು ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕವೂ ನಮೂನೆ-6 …
Read More »ಇಂದು ರಾತ್ರಿಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್
ಬೆಂಗಳೂರು: ದಿಲ್ಲಿಯಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ, ಇಂದು ರಾತ್ರಿ ಅಥವಾ ನಾಳೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನೇತೃತ್ವದ ಈ ಸಭೆಯಲ್ಲಿ 140ಕ್ಕೂ ಹೆಚ್ಚು ಹೆಸರುಗಳನ್ನು ಒಳಗೊಂಡಿರುವ ಮೊದಲ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿದ್ದು, ಪಟ್ಟಿ ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. …
Read More »ಕರಡಿಗುದ್ದಿ, ಡಾ.ದೀಕ್ಷಿತ್‌ಗೆ ‘ಸಿರಿಗನ್ನಡ ಗೌರವ’
ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022ನೇ ಸಾಲಿನ ‘ಸಿರಿಗನ್ನಡ ಗೌರವ’ ಮತ್ತು 2021ನೇ ಸಾಲಿನ ‘ಸಿರಿಗನ್ನಡ ಪುಸ್ತಕ ಪ್ರಶಸ್ತಿ’ ಪ್ರಕಟಿಸಿದೆ. ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೊ.ರಾಜಶೇಖರ ಎಂ. ಕರಡಿಗುದ್ದಿ ಮತ್ತು ಡಾ.ಮಾಧವ ದೀಕ್ಷಿತ ಭಾಜನರಾಗಿದ್ದಾರೆ. ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ ‘ಉರಿಯ ಪೇಟೆಯಲ್ಲಿ’ ಕೃತಿ ಮತ್ತು ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ ‘ಬೆಳಕ ನಿಚ್ಚಣಿಕೆ’ ಕೃತಿ ಆಯ್ಕೆಯಾಗಿವೆ. ಜೀವನಮಾನ ಸಾಧನೆ ಪ್ರಶಸ್ತಿಗಳು: …
Read More »ಬೆಳಗಾವಿ ಗ್ರಾಮೀಣ: ಹೈ ವೋಲ್ಟೇಜ್ ಕ್ಷೇತ್ರದಲ್ಲಿ ತಂತ್ರ- ಪ್ರತಿತಂತ್ರ
ಬೆಳಗಾವಿ: ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಕದನದಿಂದಾಗಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡ ‘ಬೆಳಗಾವಿ ಗ್ರಾಮೀಣ’ದಲ್ಲಿ ಈ ಬಾರಿ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಇಬ್ಬರ ತಿಕ್ಕಾಟದಲ್ಲಿ ಗೆಲುವಿನ ದಡ ಸೇರಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪ್ರಯತ್ನಿಸುತ್ತಿದೆ. ‘ಭಾಷಾ ರಾಜಕಾರಣ’ಕ್ಕೆ ಹೆಸರಾದ ಈ ಕ್ಷೇತ್ರ 2008ರಲ್ಲಿ ಪುನರ್ ವಿಂಗಡಣೆಯಾಗಿದೆ. ಹಿರೇಬಾಗೇವಾಡಿ ಕ್ಷೇತ್ರದ ಕೆಲವು ಹಳ್ಳಿಗಳನ್ನು ಸೇರಿಸಿ, ‘ಬೆಳಗಾವಿ ಗ್ರಾಮೀಣ’ ಕ್ಷೇತ್ರ ರಚಿಸಲಾಗಿದೆ. ಕಳೆದ ಮೂರು …
Read More »ಯರಗಟ್ಟಿ ಚೆಕ್ ಪೋಸ್ಟ್ಪೋಸ್ಟ್ ನಲ್ಲಿ1,37,000=00 ರೂ ವಶ
ದಿವಸ ದಿನಾಂಕ 8 4 2023 ರಂದು 17 -20 ಗಂಟೆಗೆ ಯರಗಟ್ಟಿ ಚೆಕ್ ಪೋಸ್ಟ್ ನಲ್ಲಿ ಮಿನಿ ಲಾರಿ ನಂಬರ್ KA- 05 D-9343 ರಲ್ಲಿ ತಪಾಸಣೆ ಮಾಡುವ ಕಾಲಕ್ಕೆ ಆನಂದ್ ತಟ್ಟಿ ಇವರ ಕಡೆಗೆ ಯಾವುದೇ ದಾಖಲಾತಿ ಇಲ್ಲದೆ ಇರುವ 1,37,000=00 ರೂಗಳನ್ನು ಜಪ್ ಮಾಡಿದ್ದು ಮುಂದಿನ ಕ್ರಮಕ್ಕಾಗಿ ಎಫ್ ಎಸ್ ಟಿ ರವರು ತಮ್ಮ ತಾಬಾಕ್ಕೆ ತೆಗೆದುಕೊಂಡಿರುತ್ತಾರೆ
Read More »ಕೆಲಸದ ಒತ್ತಡದ ನಡುವೆಯೂ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡ:S.P
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲಸದ ಒತ್ತಡದ ನಡುವೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ತಂಡ ಶನಿವಾರ ನಡೆಸಿದ 11ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು. ಎಂದಿನಂತೆ ಸಾರ್ವಜನಿಕರು ಕರೆ ಸ್ವೀಕರಿಸಿದ ಎಸ್ಪಿ ನಮಸ್ಕಾರ್ ರೀ.. ನಾನ ಎಸ್ಪಿ ಮಾತನಾಡುತ್ತಿದ್ದೇನೆ ಹೇಳ್ರಿ ಎನ್ನುತ್ತಲೇ ಸಾರ್ವಜನಿಕರ ಸಮಸ್ಯೆ ಆಲಿಸಿದರು. ನಗರದ ಶಹಾಪುರದ ವ್ಯಕ್ತಿಯೊರ್ವ …
Read More »ಸಾರ್ವಜನಿಕರ ಗಮನಕ್ಕೆ : ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಏಪ್ರಿಲ್ 10 ಕೊನೆಯ ದಿನ
ಧಾರವಾಡ : ಕರ್ನಾಟಕ ವಿಧಾನಸಭೆಗೆ ಭಾರತ ಚುನಾವಣಾ ಆಯೋಗವು ಮಾರ್ಚ್ 29 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ. ಅದರಂತೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20 (ಗುರುವಾರ) ಆಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರ್ಹ ಮತದಾರರು, ಮತದಾರರ ಯಾದಿಯಲ್ಲಿ ಹೆಸರುಗಳ ಸೇರ್ಪಡೆಯಾಗಿರುವ ಬಗ್ಗೆ https://ceo.karnataka.gov.in, https://www.nvsp.in ವೆಬ್‌ಸೈಟ್‌ಗಳಲ್ಲಿ ಹಾಗೂ Voter …
Read More »ರೀಲ್ಸ್ ಮಾಡುವ ನೆಪದಲ್ಲಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ
ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Ranebennuru) ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ ಮಾಡಲೆತ್ನಿಸಿದ ಘಟನೆ ನಡೆದಿದೆ. ಮಾರ್ಚ್ 3ರಂದು ಹರಪನಹಳ್ಳಿ (Harapanahalli) ತಾಲೂಕಿನ ಮೂಲದ ದೇವೇಂದ್ರಗೌಡ ಎಂಬಾತನ ಜೊತೆ 17 ವರ್ಷದ ಅಪ್ರಾಪ್ತೆಯ ನಿಶ್ಚಿತಾರ್ಥವಾಗಿತ್ತು. ಆದರೆ ಅಪ್ರಾಪ್ತೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪ್ರೀತಿಸುತ್ತಿದ್ದ ಗೆಳೆಯನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕೊಲೆಗೆ ಅಪ್ರಾಪ್ತೆ ಮುಂದಾಗಿದ್ದಳು ಎಂದು ತಿಳಿದುಬಂದಿದೆ. …
Read More »
Laxmi News 24×7