Breaking News

ರಾಷ್ಟ್ರೀಯ

ಹೈಕೋರ್ಟ್‌ಗೆ ಬೇಸಿಗೆ ರಜೆ 24ರಿಂದ

ಬೆಂಗಳೂರು: ಹೈಕೋರ್ಟ್‌ಗೆ ಇದೇ 24ರಿಂದ ಮೇ 20ರವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ.   ‘ತಡೆಯಾಜ್ಞೆ, ಮಧ್ಯಂತರ ನಿರ್ದೇ ಶನ ಮತ್ತು ತಾತ್ಕಾಲಿಕ ಪ್ರತಿಬಂಧಕ ಆದೇಶ ಸೇರಿದಂತೆ ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ …

Read More »

ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟಿಸಿದಸುರೇಬಾನ ಗ್ರಾಮಸ್ಥರು

ಸುರೇಬಾನ: ನಮ್ಮ ಮನೆಗಳಿಗೆ ಹೋಗಿ ಬರಲು ದಾರಿ ಇಲ್ಲ ಎಂದು ಕಿತ್ತೂರ ಗ್ರಾಮದ ಪ್ಲಾಟ್ ನಿವಾಸಿಗಳು ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟನೆ ಮಾಡಿದ ಘಟನೆ ಬುಧವಾರ ನಡೆದಿದೆ. ಕಳೆದ ಹಲವಾರು ದಿನಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ಪಿಡಿಓಗೆ ನಮಗಾಗುವ ತೊಂದರೆಗಳ ಕುರಿತು ಮನವಿ ಮಾಡಿಕೊಂಡರು ಅವರು ಕ್ಯಾರೆ ಎನ್ನುತ್ತಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟಿಸಿದರು. ತಮ್ಮ ನಿತ್ಯದ ಕಾರ್ಯ ಕಲಾಪಗಳಿಗೆ ಹೋಗಿ …

Read More »

ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಡೆಲ್​ಗಳು ಸಿಕ್ಕಿ ಬಿದ್ದಿದ್ದಾರೆ.

 ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಿರುತೆರೆ ನಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರತಿ ಹರೀಶ್​ಚಂದ್ರ ಮಿತ್ತಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿ ಹರೀಶ್​ಚಂದ್ರ ಮಿತ್ತಲ್ ಮಾಡೆಲ್​​ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದು, ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಪ್ನಾಪನ್’ ಸೇರಿ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಆರತಿ ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪವಿತ್ತು. ಹೀಗಾಗಿ ಮಾರುವೇಷದಲ್ಲಿ ಹೋದ ಪೊಲೀಸರು ತಾವು ಗ್ರಾಹಕರು ಎಂದು …

Read More »

ಸವದತ್ತಿ ಜೆಡಿಎಸ್ ಅಭ್ಯರ್ಥಿ ಹೆಸರಿನಲ್ಲಿರುವ 42.92 ಲಕ್ಷ ರೂ. ಮೊತ್ತದ ಪರಿಕರಗಳು ವಶಕ್ಕೆ

ಸವದತ್ತಿ: ಗೋದಾಮೊಂದರ ಮೇಲೆ ದಾಳಿ ನಡೆಸಿರುವ ಎಫ್‌ಎಸ್‌ಟಿ ಪೊಲೀಸ್ ಮತ್ತು ಜಿಎಸ್‌ಟಿ ಅಧಿಕಾರಿ ತಂಡ ಸವದತ್ತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೌರಭ ಆನಂದ ಚೋಪ್ರಾ ಅವರ ಹೆಸರಿನಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಹೊಲಿಗೆ ಯಂತ್ರಗಳು, ಕಬ್ಬಿಣದ ಸ್ಟ್ಯಾಂಡ್ ಹಾಗೂ ಟಿಫಿನ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದೆ.                     ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ …

Read More »

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಆಯನೂರು ಮಂಜುನಾಥ್ ರಾಜೀನಾಮೆ

ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಆಯನೂರು ಮಂಜುನಾಥ್ ರಾಜೀನಾಮೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯನೂರು ಮಂಜುನಾಥ್, ಪರಿಷ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ವಿಧಾನಸಭೆಗೆ ಹೋಗಬೇಕು ಎಂದಿದ್ದೇನೆ. ಆದರೆ ಯಾವಪಕ್ಷದಿಂದ ಸ್ಪರ್ಧೆ ಎಂಬುದನ್ನು ನಾಳೆ ಹೆಳುತ್ತೆನೆ ಎಂದರು. ಇದೇ ವೇಳೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನದೆಸಿದ ಆಯನೂರು ಮಂಜುನಾಥ್, ಮನಸ್ಸಿಗೆ ಬಂದಂತೆ ಮಾತನಾಡುವ ಬಾಯಿಗೆ ಹೊಲಿಗೆ ಬೀಳಲಿ. ಈಗಾಗಲೇ …

Read More »

ನಾಳೆ ಈ ವರ್ಷದ ಮೊದಲ `ಸೂರ್ಯ ಗ್ರಹಣ’ : ಎಲ್ಲೆಲ್ಲಿ ಗೋಚರವಾಗಲಿದೆ?ಇಲ್ಲಿದೆ ಮಾಹಿತಿ|

ನವದೆಹಲಿ : ಏ.20 ರ ನಾಳೆ 2023 ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಸೂರ್ಯಗ್ರಹಣವು ಬೆಳಗ್ಗೆ 7:04 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ಒಟ್ಟು ಸಮಯವು ಐದು ಗಂಟೆಗಳಿಗಿಂತ ಹೆಚ್ಚು ಇರುತ್ತದೆ.   ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ? ಗ್ರಹಣವು ಆಸ್ಟ್ರೇಲಿಯಾ, ಪೂರ್ವ ಮತ್ತು ದಕ್ಷಿಣ ಏಷ್ಯಾ, ಪೆಸಿಫಿಕ್ ಮಹಾಸಾಗರ, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರದಿಂದ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಗೋಚರಿಸುವುದಿಲ್ಲ. ‘ವಾರ್ಷಿಕ ರಿಂಗ್ ಆಫ್ …

Read More »

ಕಾಲೇಜು ಉಪನ್ಯಾಸಕಿಯ ಅನುಮಾನಾಸ್ಪದ ಸಾವು. ಅಂಕೋಲಾದಲ್ಲಿ ಪ್ರಕರಣ ದಾಖಲು

ಅಂಕೋಲಾ: ಯಾದಗಿರಿ ಜಿಲ್ಲೆಯ ಹುಣಸಗಿಯ ಎಸ್. ಕೆ.ಕಾಲೇಜಿನಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅಂಗಡಿಬೈಲ್ ನ ಯುವತಿ ಮೃತ ಪಟ್ಟಿದ್ದು ಸಾವಿನ ಕುರಿತಂತೆ ಸಂಶಯ ವ್ಯಕ್ತಪಡಿಸಿದ ಯುವತಿಯ ಮನೆಯವರು ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.   ಅಂಗಡಿಬೈಲ್ ನಾಕಮನೆ ನಿವಾಸಿ ನಿವೇದಿತಾ ನರಸಿಂಹ ಭಟ್ಟ (24) ಮೃತ ದುರ್ದೈವಿಯಾಗಿದ್ದು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್. ಸಿ ಪದವಿ ಬಂಗಾರದ ಪದಕ ವಿಜೇತೆಯಾಗಿದ್ದ ಈಕೆ ಕಳೆದ …

Read More »

ಬೆಳಗಾವಿ: ತೋಟಗಳು ಹೆಚ್ಚಿದರೂ ತಗ್ಗಿದ ಮಾವು ಇಳುವರಿ

ಬೆಳಗಾವಿ: ಜಿಲ್ಲೆಯಲ್ಲಿ ಮಾವಿನ ತೋಟಗಳ ವ್ಯಾಪ್ತಿ ಹೆಚ್ಚಾಗುತ್ತಿದ್ದರೂ ಈ ಬಾರಿ ಮಾವು ಇಳುವರಿಯಲ್ಲಿ ಇಳಿಕೆ ಆಗುವ ಸಾಧ್ಯತೆ ಇದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಬದಲಾದ ಹವಾಮಾನ ಹಾಗೂ ಇನ್ನೊಂದೆಡೆ ಗಾಳಿ-ಮಳೆಯ ರಭಸಕ್ಕೆ ಮಾವು ಇಳುವರಿ ಇಳಿಮುಖವಾಗಲಿದೆ. ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಗಳಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಉತ್ಪಾದನೆ ಕಡಿಮೆ ಆಗಲಿದೆ. ಕಳೆದ ಸಲಕ್ಕಿಂತಲೂ ಈ ಬಾರಿ ಶೇ. 30ರಿಂದ 40ರಷ್ಟು ಉತ್ಪಾದನೆ ಕಡಿಮೆ ಆಗಲಿದ್ದು, ಬಂಡವಾಳ …

Read More »

ಬೆಳಗಾವಿ ಜಿಲ್ಲೆಯಲ್ಲಿ 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆದಿದ್ದು, ಈವರೆಗೆ ಒಟ್ಟು 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಶಿಕಲಾ ಜೊಲ್ಲೆ, ಜೆಡಿಎಸ್ ದಿಂದ ರಾಜಾರಾಮ ಪವಾರ, ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಮೋಹನ ಮೋಟನ್ನವರ, ರಿಪಬ್ಲಿಕ್ ಮೂಮೆಂಟ್ ಪಾರ್ಟಿಯಿಂದ ಅಪ್ಪಾಸಾಹೇಬ ಕುರಣೆ, ಕಾಂಗ್ರೆಸ್ ನಿಂದ ಗಣೇಶ ಹುಕ್ಕೇರಿ, ಅಥಣಿ‌ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ನಾಮಪತ್ರ …

Read More »

ಕಲಾಬಿಂಬ ವಸ್ತು ಪ್ರದರ್ಶನ ಮಹಾವೀರ ಭವನದಲ್ಲಿ ಯಶಸ್ವಿ

ಬೆಳಗಾವಿ: ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳು ದೇಶಪಾಂಡೆ ಸ್ಟಾರ್ಟ್ ಅಪ್ ಸಹಯೋಗದೊಂದಿಗೆ ಗೋವಾವೇಸದಲ್ಲಿರುವ ಮಹಾವೀರ ಭವನದಲ್ಲಿ ಕಲಾಬಿಂಬ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವಸ್ತು ಪ್ರದರ್ಶನ 15 ಮತ್ತು 16 ಎರಡು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿತು ಸುಮಾರು 40 ಮಾರಾಟ ಮಳಿಗೆಗಳು ಹಾಗೂ 10 ಉಪಹಾರ ಮಳಿಗೆಗಳು ಬಂದಿದ್ದವು ಈ ಕಲಾಬಿಂಬ ವಸ್ತು ಪ್ರದರ್ಶನದಿಂದ ಬಂದ ಹಣವನ್ನು ತಿಲಕವಾಡಿಯ ಮಂಡೋಳಿ ರಸ್ತೆಯ ಶಾಂತಿನಗರದ ಆಶ್ರಮದಲ್ಲಿ …

Read More »