ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲಿ ಎಐಸಿಸಿ, ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕನೇ ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ 7 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಪಶ್ಚಿಮ- ದೀಪಕ್ ಚ್ಂಚೋರೆ ಲಿಂಗಸಗೂರು- ದುರ್ಗಪ್ಪ ಎಸ್ ಹುಲಗೇರಿ ಶಿಗ್ಗಾವಿ-ಮೊಹಮ್ಮದ್ ಯೂಸೂಫ್ ಸವಣೂರು ಹರಿಹರ- ನಂದಗಾವಿ ಶ್ರೀನಿವಾಸ್ ಚಿಕ್ಕಮಗಳೂರು-ಹೆಚ್.ಡಿ.ತಮ್ಮಯ್ಯ ಶ್ರವಣಬೆಳಗೊಳ-ಎಂ.ಎ.ಗೋಪಾಲಸ್ವಾಮಿ
Read More »ಕುಸಿದು ಬಿದ್ದ ಕಬ್ಬಿಣದ ಹೋರ್ಡಿಂಗ್ : ಐವರು ಸಾವು.!
ಮುಂಬೈ-ಪುಣೆ ಹೆದ್ದಾರಿಯ ರಾವೆಟ್ ಕಿವಾಲೆ ಪ್ರದೇಶದ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೆಲವರು ಬಿರುಗಾಳಿಯಿಂದ ಕಬ್ಬಿಣದ ಹೋರ್ಡಿಂಗ್ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಹೋರ್ಡಿಂಗ್ ಅವರ ಮೇಲೆ ಕುಸಿದು ಬಿದ್ದಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಐದು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ ಯಾರಾದರೂ ಹೋರ್ಡಿಂಗ್ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂದು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. …
Read More »ಪ್ರಚಾರಕ್ಕೆ ತೆರಳಿದ್ದ ವಿ.ಸೋಮಣ್ಣ, ಪ್ರತಾಪ ಸಿಂಹಗೆ ತೀವ್ರ ತರಾಟೆ
ಮೈಸೂರು; ಪ್ರಚಾರಕ್ಕೆ ತೆರಳಿದ್ದ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ ಸಿಂಹಗೆ ಜನರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ವರುಣಾ ಕ್ಷೇತ್ರದಲ್ಲಿ ನಡೆದಿದೆ. ವಿ.ಸೋಮಣ್ಣ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ಇಂದು ವರುಣಾ ಕ್ಷೇತ್ರ ವ್ಯಾಪ್ತಿಯ ಲಲಿತಾದ್ರಿಪುರಂನಲ್ಲಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ಲಲಿತಾದ್ರಿಪುರಂ ಗ್ರಾಮಸ್ಥರು, ನೀವು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಸೋಮಣ್ಣ ಹಾಗೂ ಪ್ರತಾಪ ಸಿಂಹ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. …
Read More »ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ::ಶೆಟ್ಟರ್
ಹುಬ್ಬಳ್ಳಿ: ಬಿಜೆಪಿಯಲ್ಲಿ ನನಗೆ ಅವಕಾಶ ಸಿಕ್ಕಾಗ ಒಳ್ಲೆಯ ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಬಿಜೆಪಿಯ ಕೆಲ ನಾಯಕರಿಂದ ನಾನು ನೋವನುಭವಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುವವರೆಗೆ ಸುಮ್ಮನಿದ್ದೆ. ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಕಾರಣ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪಕ್ಷದಿಂದ ಹೊರ ಬರುವಂತೆ ಮಾಡಿದರು. ಅವರು ಯಾರು …
Read More »ಅಥಣಿಯಲ್ಲಿ ಯುವಕನ ಬರ್ಬರವಾಗಿ ಹತ್ಯ
ಅಥಣಿ: ಅಥಣಿಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯ ಮಾಡಲಾಗಿದೆ. ಕೊಕಟನೂರು ರಸ್ತೆಯ ಶಾಂತಿನಾಥ ಬಡಾವಣೆಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಲಾಗಿದೆ. ನಂದಗಾಂವ್ ನಿವಾಸಿಯಾಗಿದ್ದ ಜ್ಯೋತಿಬಾ ಗಾಯಕವಾಡ (35) ಕೊಲೆಯಾದಾತ. ಅಥಮಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.
Read More »ಶೆಟ್ಟರ್ ಬಳಿಕ ಬಿಜೆಪಿ ತೊರೆದ ಮತ್ತೊಬ್ಬ ಧಾರವಾಡದ ನಾಯಕ!
ಧಾರವಾಡ, ಏಪ್ರಿಲ್ 17; ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಧಾರವಾಡ ಜಿಲ್ಲೆಯ ಮತ್ತೊಬ್ಬ ನಾಯಕ ಶೆಟ್ಟರ್ ಹಾದಿ ತುಳಿದಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಧಾರವಾಡಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಎಸ್. ಐ. ಚಿಕ್ಕನಗೌಡ್ರ ಸೋಮವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ …
Read More »ಕೈ ನಾಲ್ಕನೇ ಪಟ್ಟಿಗೆ ಇಂದು ಮುಕ್ತಿ?
ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮುಗಿದ ಬೆನ್ನಲ್ಲೇ ಬಾಕಿ ಇರುವ 15 ಕ್ಷೇತ್ರಗಳಿಗೆ “ಕೈ’ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದ್ದು, ಸೋಮವಾರ ಬಹುತೇಕ ನಾಲ್ಕನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಹಾಲಿ-ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರಗಳು ಸೇರಿ ಹಲವು ಪ್ರತಿಷ್ಠಿತ ಕಣಗಳಲ್ಲಿ ಆ ಪಕ್ಷದ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬೀಳಲಿದೆ. ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತಹ ಕ್ಷೇತ್ರಗಳಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿತ್ತು. ಅಂತಹ …
Read More »ಪಕ್ಷ ಬೇರೆ, ವೈಯಕ್ತಿಕ ಸಂಬಂಧ ಬೇರೆ: ಜಗದೀಶ ಶೆಟ್ಟರ್ ಸಹೋದರ ಪ್ರದೀಪ
ಹುಬ್ಬಳ್ಳಿ: ‘ಪಕ್ಷಕ್ಕೆ ಸಂಬಂಧಿಸಿದ ನಿಲುವು ಬೇರೆ, ವೈಯಕ್ತಿಕ ಸಂಬಂಧ ಬೇರೆ…’ – ಬಿಜೆಪಿಯ ಹಿರಿಯ ನಾಯಕ ಜಗದೀಶ ಶೆಟ್ಟರ್ ಅವರು ಪಕ್ಷ ತೊರೆಯುವುದರ ಕುರಿತು, ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರ ಅಭಿಪ್ರಾಯವಿದು. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಣ್ಣನ ಮನೆಗೆ ನಾನು ದಿನಾ ಹೋಗುತ್ತೇನೆ. ಊಟ ಮಾಡುತ್ತೇನೆ. ವೈಯಕ್ತಿಕ ಸಂಬಂಧ ಬೇರೆ, ಪಕ್ಷ ಬೇರೆ. ಇಷ್ಟಕ್ಕೂ ಅವರಿನ್ನೂ ಬಿಜೆಪಿಯಲ್ಲೇ ಇದ್ದಾರೆ. …
Read More »ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದಿದ ದೇಗುಲಗಳಲ್ಲಿ ನಂ. 1 ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 123 ಕೋಟಿ ರೂ. ಸಂಗ್ರಹ
ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮತ್ತು ರಾಜ್ಯದಲ್ಲೇ ಅತಿ ಹೆಚ್ಚಿನ ಆದಾಯ ಹೊಂದಿದ ಮುಜರಾಯಿ ದೇಗುಲಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 2022 -23ನೇ ಸಾಲಿನಲ್ಲಿ 123.64 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಕಡಿಮೆ ಆದಾಯ ಬಂದಿತ್ತು. 2019-20 ನೇ ಸಾಲಿನಲ್ಲಿ 98.92 ಕೋಟಿ ರೂ., 2020 -2021 ರಲ್ಲಿ 68.94 ಕೋಟಿ ರೂ., 2021 -22 …
Read More »ಪಕ್ಷ ಬದಲಾವಣೆ ಚರ್ಚೆ: ಎಸ್.ಆರ್. ಪಾಟೀಲಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್
ಬಾಗಲಕೋಟೆ: ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್ ಪಾಟೀಲ ಅವರನ್ನು ಬೆಂಗಳೂರಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ. ಕಾಂಗ್ರೆಸ್ ಮುಖಂಡ ವೇಣುಗೋಪಾಲ್ ಅವರು ಭೇಟಿಯಾಗುವಂತೆ ಕರೆ ಮಾಡಿ ಆಹ್ವಾನಿಸಿದ್ದಾರೆ. ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು. ಪಕ್ಷ ಬದಲಾವಣೆ ಮಾಡಬಹುದು ಎಂಬ ಚರ್ಚೆಯ ಹಿನ್ನಲೆಯಲ್ಲಿ ಮಾತುಕತೆಗೆ ಕರೆಯಲಾಗಿದೆ.
Read More »