ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು. ಜಿಲ್ಲೆಯ ಇಂಡಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷದಿಂದ ಬಿಜೆಪಿ ಸರ್ಕಾರ ಶ್ರೀಮಂತರ ಪರ ಕೆಲಸ ಮಾಡಿದೆ ಎಂದು ಆರೋಪಿಸಿದರು. ಸಿಲಿಂಡರ್ ಸೇರಿದಂತೆ ದಿನ ಬಳಕೆ ವಸ್ತುಗಳು ಗಗನಕ್ಕೆ ಏರಿವೆ, ಇದರ ಜೊತೆಗೆ 40 ಪರ್ಸ್‌ಂಟ್ …
Read More »ಪಕ್ಷ ಬದಲಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು.
ಬೆಳಗಾವಿ : ಕಾಂಗ್ರೆಸ್ ಮತ್ತು ಜೆಡಿಎಸ್ ಶಾರ್ಟ್ ಕಟ್ ಆಡಳಿತದ ಬಗ್ಗೆ ಎಚ್ಚರಿಕೆ ಇರಬೇಕು. ಪಕ್ಷ ಬದಲಾದರೂ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಂತೆ ಜೆಡಿಎಸ್ ಕೂಡ ಒಡೆದು ಆಳುವ ನೀತಿ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದರು. ಬೈಲಹೊಂಗಲ ಮತಕ್ಷೇತ್ರದ ಬೈಲವಾಡದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಸವದತ್ತಿ, ರಾಮದುರ್ಗ, ಖಾನಾಪುರ, ಗೋಕಾಕ್, ಅರಭಾವಿ, ಯಮಕನಮರಡಿ, ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಧಾರವಾಡ …
Read More »ಖಾನಾಪುರ, ದಕ್ಷಿಣ, ಉತ್ತರ ಮತಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದೇನೆ: ಸಂಜಯ ರಾವತ್
‘ಬೆಳಗಾವಿ: ”ಮಹಾರಾಷ್ಟ್ರ ಏಕೀಕರಣ ಸಮಿತಿ ಸಮಸ್ಯೆಗಳು ಯಾವಗಲೂ ನ್ಯಾಯಾಲಯದಿಂದ ಪ್ರಾರಂಭವಾಗುತ್ತವೆ. ನಮ್ಮ ಪ್ರಕರಣ ಇದ್ದಿದ್ದರಿಂದ ನಾನು ಕೋರ್ಟ್ಗೆ ಹಾಜರಾಗಿದ್ದೇನೆ” ಎಂದು ಶಿವಸೇನಾ ಸಂಸದ ಸಂಜಯ ರಾವತ್ ಹೇಳಿದರು. ಇಂದು ಬೆಳಗಾವಿಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಸಮಾಜಕ್ಕಾಗಿ ಹೋರಾಟ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಂಘಟನೆಯ ಸಮಸ್ಯೆಗಳು ಯಾವಾಗಲೂ ನ್ಯಾಯಾಲಯದಲ್ಲಿ ಇರುತ್ತದೆ. ಅದರ ವಿಚಾರವಾಗಿ ನಾನು ಜಾಮೀನಿಗಾಗಿ ಬಂದಿದ್ದೆ. ವಿಚಾರಣೆ ನಡೆದಿದೆ” ಎಂದರು. ”ಅಲ್ಲದೆ, ಚುನಾವಣೆಯ …
Read More »ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ ನಿಷೇಧ:H.D.K.
ಚಿಕ್ಕೋಡಿ(ಬೆಳಗಾವಿ): ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆಯಾದರೆ ಕ್ರಿಕೆಟ್ ಬೆಟ್ಟಿಂಗ್, ರಮ್ಮಿಯನ್ನು ರದ್ದು ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಮಾಳಿಗೆ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆನಂದ್ ಮಾಳಗಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿಗೆ ಹಾಗೂ ದೇಶಕ್ಕೆ ಮಾರಕವಾಗಿರುವ ಹಲವು ಜೂಜಾಟಗಳಿಗೆ ನಿಷೇಧ ಕಾಯ್ದೆ …
Read More »ಮೇ 6ಕ್ಕೆ ಸೋನಿಯಾ ಗಾಂಧಿ ಚುನಾವಣಾ ಅಬ್ಬರ.. ಶೆಟ್ಟರ್ ಕ್ಷೇತ್ರದಿಂದಲೇ ರಣಕಹಳೆ
ನವದೆಹಲಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಪ್ರವೇಶಿಸಲಿದ್ದಾರೆ. ಮೇ 6 ರಂದು ಹುಬ್ಬಳ್ಳಿಯಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ”ಸೋನಿಯಾ ಅವರು ಹುಬ್ಬಳ್ಳಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಅವರ ಭೇಟಿ ಕಾಂಗ್ರೆಸ್ ಪ್ರಚಾರಕ್ಕೆ ಪ್ರಮುಖ ಉತ್ತೇಜನ ನೀಡಲಿದೆ” ಎಂದು ರಾಜ್ಯದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಈಟಿವಿ ಭಾರತಗೆ ತಿಳಿಸಿದ್ದಾರೆ. ಶೆಟ್ಟರ್ ಸ್ಪರ್ಧಿಸಿರುವ ಕ್ಷೇತ್ರದಿಂದಲೇ …
Read More »ನಾಲಾಯಕ್, ವಿಷಕನ್ಯೆ, ಅರೆಹುಚ್ಚ, ವಿಷಸರ್ಪ..: ಬೈಗುಳ ರಾಜಕೀಯಕ್ಕೆ ಚು.ಆಯೋಗ ಹೇಳಿದ್ದೇನು
ಬೆಂಗಳೂರು: ಚುನಾವಣಾ ರಣಕಣದಲ್ಲಿ ಮತ ಪ್ರಚಾರ ಕಾವೇರುತ್ತಿದೆ. ಎಲ್ಲಾ ಅಭ್ಯರ್ಥಿಗಳು ಬಿರುಸಿನ ಕ್ಯಾಂಪೇನ್‌ನಲ್ಲಿ ತೊಡಗಿದ್ದಾರೆ. ಜಿದ್ದಾಜಿದ್ದಿನ ಪೈಪೋಟಿಯ ಹೋರಾಟದಲ್ಲಿ ಅಭ್ಯರ್ಥಿಗಳಿಂದ ಪರಸ್ಪರ ವಿವಾದಾತ್ಮಕ ಹೇಳಿಕೆಗಳೂ ಸದ್ದು ಮಾಡುತ್ತಿವೆ. ರಾಜಕಾರಣಿಗಳು ಒಬ್ಬರ ಮೇಲೊಬ್ಬರು ತೀಕ್ಷ್ಣ ಟೀಕೆಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟೀಕಾಸ್ತ್ರಗಳು ಇನ್ನೂ ಜೋರಾಗಿವೆ. ವಿವಾದಿತ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗಕ್ಕೂ ಪರಸ್ಪರ ದೂರುಗಳನ್ನು ದಾಖಲಿಸಲಾಗುತ್ತಿದೆ. ಬಹಿರಂಗ ಪ್ರಚಾರಕ್ಕೆ ಇನ್ನಿರುವುದು ಆರು ದಿನ. ರಾಜಕೀಯ ಪಕ್ಷಗಳ ನಾಯಕರ ಮಾತಿನ ಭರಾಟೆ …
Read More »ಸಮಾಜದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಬಜರಂಗದಳ ನಿಷೇಧಿಸುವ ಉದ್ದೇಶ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಬಜರಂಗದಳ ಇಡೀ ದೇಶದಲ್ಲಿ ಇರುವ ಸಂಘಟನೆಯಾಗಿದ್ದು, ಕಾಂಗ್ರೆಸ್ಗೆ ದೇಶದಲ್ಲಿ ಅಧಿಕಾರವೇ ಇಲ್ಲ, ಅದನ್ನು ಹೇಗೆ ನಿಷೇಧಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಬಜರಂಗದಳ ನಿಷೇಧಿಸುವ ಬಗ್ಗೆ ಕಾಂಗ್ರೆಸ್ನವರು ಮಾತುಗಳನ್ನು ಆಡಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್’ನ ಪ್ರಣಾಳಿಕೆ ಮೋಸದ ಪ್ರಣಾಳಿಕೆ, ಜನರನ್ನು ಮರಳು ಮಾಡುವ ಪ್ರಣಾಳಿಕೆ. ಜನರು ಇದನ್ನು ದಿಕ್ಕರಿಸಲಿದ್ದಾರೆ. ನಾವು ಈಗಾಗಲೇ ಮಾಡಿದ …
Read More »ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ, ಮೇಲೆ ಪ್ರಕರಣ ದಾಖಲ
ಬೆಳಗಾವಿ: ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಮಲಪ್ರಭಾ ಶುಗರ್ಸ್ ಮಾಜಿ ಅಧ್ಯಕ್ಷ ಮೋಹನ ಸಂಬರಗಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಕುರಿತು ಕುರಿತು ನಂದಗಡ ಠಾಣೆಯಲ್ಲಿ ಬುಧವಾರ ಎಫ್ಐಆರ್ ದಾಖಲಿಸಲಾದೆ. ಇವರೆಲ್ಲರೂ ಮಂಗಳವಾರ ರಾತ್ರಿ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಲಿಂಗಾಯತ ಸಮಾಜದ 500 ಕ್ಕೂ ಹೆಚ್ಷು ಮುಖಂಡರನ್ನು ಸೇರಿಸಿ ಬಿಜೆಪಿ …
Read More »ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾರೆಪ್ರಧಾನಿ ನರೇಂದ್ರ ಮೋದಿ
ಬೆಳಗಾವಿ: ವಿಧಾನಸಭಾ ಚುನಾವಣೆಗೆ ಒಂದು ವಾರ ಮಾತ್ರ ಬಾಕಿ ಇದ್ದು, ಬಿಜೆಪಿ ಪರ ಮತ ಬೇಟೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾರೆ. ಕೇಸರಿ ಪಾಳಯದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ನಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್, ಜೆಡಿಎಸ್ ನವರು ಕೇವಲ …
Read More »ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದ ಖ್ಯಾತ ನಟ
ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಹಾಗೂ ನಿರ್ದೇಶಕ ಮನೋಬಾಲ (Manobala)ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ನಟ ಮನೋಬಾಲ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಲಿವರ್ ಹಾನಿಯಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ಕೆಲ ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ. ತಮಿಳು ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕುಟುಂಬಸ್ಥರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. …
Read More »