Breaking News

ರಾಷ್ಟ್ರೀಯ

ಹಾಕಲು ಅಮೆರಿಕದಿಂದ ಲಕ್ಷಾಂತರ ರೂ ಖರ್ಚು ಮಾಡಿ ಬಂದರು, ಆದರೆ ಆಗಿದ್ದೇ ಬೇರೆ!

ದಾವಣಗೆರೆ: ಮತದಾನಕ್ಕಾಗಿಯೇ ದೂರದ ಅಮೇರಿಕಾದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ದಾವಣಗೆರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣಕ್ಕೆ ಮತದಾನದಿಂದ ವಂಚಿತರಾಗಿದ್ದಾರೆ. ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ರಾಘವೇಂದ್ರ ಕಮಾಲಕರ್ ಮತದಾನಕ್ಕಾಗಿಯೇ ದಾವಣಗೆರೆಗೆ ಬಂದಿದ್ದಾರೆ. ಆದರೆ, ಅವರ ಹೆಸರೇ ಮತದಾನದ ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಜನವರಿ ತಿಂಗಳಲ್ಲಿ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಮಾಹಿತಿಯೂ ಬಂದಿತ್ತು. ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ನಾನು ಮತ …

Read More »

ಹಲವೆಡೆ ಕೈಕೊಟ್ಟ ಮತಯಂತ್ರ; ಹಸೆಮಣೆ ಏರುವ ಮುನ್ನ ಮತಚಲಾಯಿಸಿದ ನವವಧು

ಚಿಕ್ಕಮಗಳೂರು:ಪ್ರಜಾಪ್ರಭುತ್ವದ ಹಬ್ಬ ಕಾಫಿನಾಡಿನಲ್ಲಿ ಜೋರಾಗಿದ್ದು, ಯುವಕರು, ಯುವತಿಯರು, ಮಹಿಳೆಯರು, ಪುರುಷರು ಅತ್ಯುತ್ಸಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯ ಮೂಡಿಗೆರೆಯಲ್ಲಿ ಬುಧವಾರ (ಮೇ 10) ಮದು ಮಗಳು ಹಸೆಮಣೆ ಏರುವ ಮೊದಲು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಯವ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ. ಮೂಡಿಗೆರೆಯ ಚಂದ್ರಾಪುರ ಗ್ರಾಮದ ಎಸ್.ಎಂ.ರಾಜು ಅವರ ಮಗಳಾದ ಸುಶ್ಮಿತ ಅವರ ವಿವಾಹವು ಬುಧವಾರ ಮೂಡಿಗೆರೆ ರೈತಭವನದಲ್ಲಿ ಇದ್ದು, ಮದುಮಗಳು ಶೃಂಗಾರಗೊಂಡು ಮಾಕೋನ ಹಳ್ಳಿಯಲ್ಲಿ ತೆರೆಯಲಾಗಿದ್ದ …

Read More »

85 ವರ್ಷದ ಹಿರಿಯ ಮಹಿಳೆ ಮತಗಟ್ಟೆಯ ಎದುರೇ ಧರಣಿ ಕುಳಿತು ಆಕ್ರೋಶ

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ 85 ವರ್ಷದ ಹಿರಿಯ ಮಹಿಳೆಯೊಬ್ಬರು ಮತಗಟ್ಟೆಯ ಎದುರೇ ಧರಣಿ ಕುಳಿತು ಆಕ್ರೋಶ ಹೊರಹಾಕಿದ್ದಾರೆ. ಮುಕ್ತುಂಬೀ ದೊಡ್ಡಮನಿ ಹೆಸರಿನ ಅಜ್ಜಿ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ತಮ್ಮ ಮೊಮ್ಮಗನ ಜೊತೆಗೆ ಮತದಾನಕ್ಕೆ ಬಂದಿದ್ದರು. ಮತಗಟ್ಟೆಯಲ್ಲಿ ಮತ ಚಲಾಯಿಸುವ ವೇಳೆ ಮೊಮ್ಮಗನೊಂದಿಗೆ ಮತಯಂತ್ರದ ಬಳಿ ಹೋಗುವ ಅಜ್ಜಿ ನಿರ್ಧಾರಕ್ಕೆ ಮತಗಟ್ಟೆ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಅಜ್ಜಿ ಪರಿಪರಿಯಾಗಿ ಹೇಳಿದರೂ ಕೇಳದಿದ್ದಾಗ ಅಧಿಕಾರಿಗಳೇ ಮತ ಚಲಾವಣೆಗೆ ನೆರವಿಗೆ ಬಂದಿದ್ದಾರೆ. ಆದರೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಶೇ.20.42ರಷ್ಟು ಮತದಾನ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನ ಚುರುಕುಗೊಂಡಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಯವರೆಗೆ ರಾಜ್ಯದಲ್ಲಿ ಶೇ.20.99ರಷ್ಟು ಮತದಾನವಾಗಿದೆ. ಬೆಂಗಳುರು ಕೇಂದ್ರದಲ್ಲಿ ಶೇ.19.30ರಷ್ಟು ಮತದಾನ, ಬೆಂಗಳೂರು ಉತ್ತರದಲ್ಲಿ ಶೇ.17.50ರಷ್ಟು ಮತದಾನ, ಬೆಂಗಳೂರು ದಕ್ಷಿಣದಲ್ಲಿ ಶೇ.17ರಷ್ಟು, ಬೆಂಗಳೂರು ನಗರ ಶೇ.17.72ರಷ್ಟು ಮತದಾನ, ಬೆಂಗಳೂರು ಗ್ರಾಮಾಂತರ ಶೇ.20.23ರಷ್ಟು ಮತದಾನವಾಗಿದೆ.   ಬೆಳಗಾವಿ ಜಿಲ್ಲೆಯಲ್ಲಿ ಶೇ.20.42ರಷ್ಟು ಮತದಾನವಾಗಿದೆ. ಕೊಡಗು ಶೇ.26.49ರಷ್ಟು ಮತದಾನ, ಕೊಪ್ಪಳದಲ್ಲಿ ಶೇ.21.46ರಷ್ಟು …

Read More »

ಮತದಾನಕ್ಕೆ ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವು

ಬೆಳಗಾವಿ: ವಿಧಾನಸಭಾ ಚುನವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತದಾನ ಚುರುಕುಗೊಂಡಿದ್ದು, ಬೆಳಗಾವಿಯ ಸವದತ್ತಿಯಲ್ಲಿ ಮತದಾನಕ್ಕೆಂದು ಬಂದ ವೃದ್ಧೆಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸವದತ್ತಿ ಯೆಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಪಾರವ್ವ ಸಿದ್ನಾ (70) ಮೃತ ಮಹಿಳೆ. ಮತಚಲಾಯಿಸಲು ಮತದಾರರ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಪಾರವ್ವ ಅವರು ಲೋ ಬಿಪಿಯಿಂದಾಗಿ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ವಿಧಾನಸಭಾ ಚುನಾವಣೆ ತಮ್ಮ ಮತದಾನದಹಕ್ಕು ಚಲಾಯಿಸಿದ ಸಂತೋಷ ಜಾರಕಿಹೊಳಿ ದಂಪತಿಗಳು

ಗೋಕಾಕ ನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ದ ಸಂತೋಷ್ ಜಾರಕಿಹೊಳಿ ದಂಪತಿಗಳು ಗೋಕಾಕ: ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ಇಂದು ಮತದಾನ ಇನ್ನು ಮೂರನೇ ದಿನಕ್ಕೆ ಇದರ ತೀರ್ಪು ಗೋಕಾಕ ನಲ್ಲಿ ಸಂತೋಷ್ ಜಾರಕಿಹೊಳಿ ಹಾಗೂ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ತಮ್ಮ ಮತದಾನ ಹಕ್ಕನ್ನ ಚಲಾವಣೆ ಮಾಡಿದ್ದಾರೆ. ಗೋಕಾಕ ವಿಧಾನಸಭೆ ಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಮಹಾಂ ತೇಶ್ ಕಡಾಡಿ ಅವರ್ ವಿರುದ್ಧ ಸ್ಪರ್ದೆ ಮಾಡಿದ್ದಾರೆ …

Read More »

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮತ ಚಲಾಯಿಸಿದ್ದಾರೆ.

ಹಾವೇರಿ: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಾಲ್ಲಿ ಮತದಾನ ಚುರುಕುಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮತ ಚಲಾಯಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ ಸರಕಾರಿ ಕನ್ನಡ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 102ರಲ್ಲಿ ಕುಟುಂಬ ಸಮೇತರಾಗಿ ಬಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.

Read More »

ವೊಟರ್ ಐಡಿ ಇಲ್ಲದಿದ್ದರೂ ಈ ದಾಖಲೆಗಳಿದ್ದರೆ ಮತದಾನ ಮಾಡಬಹುದು

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಉತ್ಸಾಹದಿಂದಲೆ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ವೋಟರ್ ಐಡಿ ಇಲ್ಲದಿದ್ದರೂ ಮತದಾರರು ಈ ದಾಖಲೆಗಳು ಇದ್ದರೆ ಮತದಾನ ಮಾಡಬಹುದು. ಪಾಸ್ ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಎಂನರೇಗಾ ಜಾಬ್ ಕಾರ್ಡ್, ಕಚೇರಿ, ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಫೋಟೋ …

Read More »

ರಾಜ್ಯಾದ್ಯಂತ ಮತದಾನ ಆರಂಭ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಆರಂಭವಾಗಿದೆ. 224 ವಿಧಾನ ಸಭೆ ಕ್ಷೇತ್ರಗಳಿಗೆ ಒಟ್ಟೂ 58,545 ಮತಗಟ್ಟೆ ತೆರೆಯಲಾಗಿದ್ದು, ಎಲ್ಲ ಕಡೆ ಶಾಂತವಾಗಿ ಮತದಾನ ನಡೆಯುತ್ತಿದೆ. ಒಟ್ಟೂ 5.30 ಕೋಟಿ ಜನ ಮತದಾನದ ಹಕ್ಕು ಹೊಂದಿದ್ದಾರೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮತಗಟ್ಟೆಗೆ ತೆರಳಿದ್ದಾರೆ. ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪುತ್ರ ಭರತ ಹಾಗೂ ಪುತ್ರಿ …

Read More »

ರಾಮದುರ್ಗದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಬೆಳಗಾವಿಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಾಮದುರ್ಗದಲ್ಲಿ ಸಿಡಿಲು ಬಡಿದ ಪರಿಣಾಮ ಓರ್ವ ರೈತ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಮದುರ್ಗದ ಓಬಳಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪಾರ್ಲೆಷ್ ರಾಠೋಡ್ ಮೃತ ವ್ಯಕ್ತಿ. ಸ್ಥಳಕ್ಕೆ ರಾಮದುರ್ಗ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Read More »