ವಿಜಯಪುರ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಕಾನಬಾವಿಯಲ್ಲಿ ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿರುವ ಆರೋಪದ ಹಿನ್ನೆಲೆ ಯುವಕನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ ಘಟನೆ ನಡೆದಿದೆ. ನಾಲತವಾಡ ಪಟ್ಟಣದ ಕಾನಬಾವಿ ಓಣಿಯ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಇಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ವಿಜಯಪುರದ ದರ್ಗಾ ಜೈಲಿಗೆ ಕಳುಹಿಸಿದ್ದಾರೆ. ವೀರೇಶ, ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ …
Read More »ಬೈಕ್ ಕಾರು ಡಿಕ್ಕಿ : ಸ್ಥಳದಲ್ಲೇ ಮೂವರ ಸಾವು.!
ಗದಗ : ಗದಗ ತಾಲೂಕಿನ ಅಡವಿ ಸೋಮಾಪೂರ ಬಳಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿಗಳು ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ನಿವಾಸಿಗಳು ಶಿವಪ್ಪ ನಾಯಕ್ (50), ಶಿವಾನಂದ ಲಮಾಣಿ (33) ಕೃಷ್ಣಪ್ಪ ಚೌಹ್ವಾನ್ ಎಂದು ತಿಳಿದುಬಂದಿದೆ. ಅಡವಿ ಸೋಮಾಪುರ ಗ್ರಾಮದಿಂದ ಮುಂಡರಗಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಟಿವಿಎಸ್ ಎಕ್ಸೆಲ್, ಹೀರೋ ಸ್ಪ್ಲೆಂಡರ್ ಹಾಗೂ ಚವರ್ಲೆಟ್ ಕಾರ್ಮ ಮಧ್ಯೆ ಸರಣಿ ಅಪಘಾತ ಅಪಘಾತ ಸಂಭವಿಸಿದೆ. …
Read More »ಸಿದ್ದರಾಮಯ್ಯನವರೇ ನೂರಕ್ಕೆ ನೂರರಷ್ಟು ಮುಖ್ಯಮಂತ್ರಿ: ಕೆ.ಎನ್.ರಾಜಣ್ಣ
ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯನವರೇ ನೂರಕ್ಕೆ ನೂರರಷ್ಟು ಮುಖ್ಯಮಂತ್ರಿ ಆಗ್ತಾರೆ ಎಂದು ಶಾಸಕ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ. ಮೇ 18ರಂದು ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಹೈಕಮಾಂಡ್ ಒಲವು ಕೂಡ ಸಿದ್ದರಾಮಯ್ಯ ಪರವಾಗಿಯೇ ಇದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಕೂಡ ಸಹಕಾರ ಕೊಡುತ್ತಾರೆ ಎಂದರು. ನೂತನ ಸಿಎಂ ವಿಚಾರ ಇಂದು ಫೈನಲ್ ಆಗಲೇಬೇಕು. ಸಧ್ಯಕ್ಕೆ ಸಿದ್ದರಾಮಯ್ಯ ಒಬ್ಬರೇ ಪ್ರಮಾಣವಚನ ಸ್ವೀಕರಿಸಬಹುದು. ಸಚಿವ …
Read More »ಯುವತಿ ಅಪಹರಿಸಿ ಹಣಕ್ಕಾಗಿ ಡಿಮ್ಯಾಂಡ್
ಶಿವಮೊಗ್ಗ: ಯುವತಿಯೊಬ್ಬಳನ್ನು ಅಪಹರಿಸಿರುವ ದುಷ್ಕರ್ಮಿಗಳು ಹಣಕಾಗಿ ಬೇಡಿಕೆ ಇರಿಸಿದ್ದು ಈ ಸಂಬಂಧ ದೂರು ದಾಖಲಾಗಿದೆ. ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಯುವತಿ ಅಪಹರಣಕ್ಕೊಳಗಾದವಳು. ಈಕೆ ಉನ್ನತ ವ್ಯಾಸಂಗ ಮಾಡುತ್ತಿದ್ದು ಈಕೆಯನ್ನು ದುಷ್ಕರ್ಮಿಗಳು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಪಹರಣಕಾರರು ಯುವತಿಯ ದೂರವಾಣಿ ಸಂಖ್ಯೆಯಿಂದಲೇ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಕರೆ ಮಾಡಿ 20 ಲಕ್ಷ ರೂಪಾಯಿ ನೀಡಿದರೆ ಮಾತ್ರ ಆಕೆಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಯುವತಿ …
Read More »ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸುವ ಶಾಸಕರು
ಬೆಳಗಾವಿ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳ ಶಾಸಕರು ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ರಾಜಕೀಯ ಪವರ್ ಸೆಂಟರ್ ಎಂದೇ ಬಿಂಬಿತವಾಗಿರುವ ಬೆಳಗಾವಿಯಲ್ಲಿ ಈ ಬಾರಿ ಕೆಲ ಪ್ರಭಾವಿಗಳು ಪರಾಭವಗೊಂಡಿದ್ದು, ಹೊಸ ತಲೆಮಾರಿನ ನಾಯಕರು ಗೆದ್ದಿರುವುದು ವಿಶೇಷವಾಗಿದೆ. ಬಾಬಾಸಾಹೇಬ ಪಾಟೀಲ: ವೀರ ವನಿತೆ ಚನ್ನಮ್ಮನ ನಾಡು ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿರುವ ಬಾಬಾಸಾಹೇಬ ಪಾಟೀಲ (77,536 ಮತ) ಇದೇ ಮೊದಲ …
Read More »ಈ ಬಾರಿ ಸತೀಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಸಿಗುವುದು ಪಕ್ಕಾ,ಯಾವ್ಯಾವ ಶಾಸಕರಿಗೆ ಒಲಿಯುತ್ತೆ ಮಂತ್ರಿ ಸ್ಥಾನ
ಬೆಳಗಾವಿಯ ಜಿಲ್ಲೆಯಿಂದ 11 ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಸಚಿವ ಸ್ಥಾನ ಪಡೆಯಲು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಬೆಳಗಾವಿ: ಕಾಂಗ್ರೆಸ್ನಲ್ಲಿ ಒಂದೆಡೆ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದ್ದರೆ. ಮತ್ತೊಂದೆಡೆ ಅತೀ ಹೆಚ್ಚು ಶಾಸಕರನ್ನು ಗೆಲ್ಲಿಸಿ ಕೊಟ್ಟಿರುವ ಬೆಳಗಾವಿ ಜಿಲ್ಲೆಗೆ ಈ ಬಾರಿ ಹೆಚ್ಚು ಸಚಿವ ಸ್ಥಾನ ಸಿಗುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ, ದಿ. ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, …
Read More »ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ ಟಾಪ್ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ.
ಬೆಳಗಾವಿ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿರುವ 10 ಶಾಸಕರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರು ಶಾಸಕರು ಸ್ಥಾನ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವ ಹೊಂದಿರುವ ಜಿಲ್ಲೆ. ಇಲ್ಲಿ ಯಾವ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಆ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ. ಅಲ್ಲದೇ ಹಲವು ರಾಜಕೀಯ ವಿದ್ಯಮಾನಗಳಿಂದಲೂ ಸದಾ ಸುದ್ದಿಯಲ್ಲಿರುವ ಬೆಳಗಾವಿ ಜಿಲ್ಲೆ …
Read More »ದೆಹಲಿಗೆ ತೆರಳಲಿರುವ ಡಿಕೆಶಿ: ಅನಾರೋಗ್ಯದ ನಡುವೆಯೂ ವರಿಷ್ಠರ ಭೇಟಿ
ಬೆಂಗಳೂರು: ಸಿಎಂ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವುಂಟಾಗಿದ್ದು, ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಎಐಸಿಸಿ ವರಿಷ್ಠರು ಸಿಎಂ ಸಿದ್ದಾರಮಯ್ಯ ಮತ್ತು ಡಿಕೆಶಿ ಅವರಿಗೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಬೆಳಗ್ಗೆ 9.50 ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಸ್ತಾರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಿನ್ನೆಯೇ ದೆಹಲಿಗೆ ತರಳಬೇಕಿದ್ದ ಡಿಕೆಶಿ ಅನಾರೋಗ್ಯದ …
Read More »ಕುಡಿದ ಮತ್ತಿನಲ್ಲಿ ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಪೊಲೀಸರ ವಶಕ್ಕೆ
ನವದೆಹಲಿ: ದುಬೈ-ಅಮೃತಸರಕ್ಕೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗಗನಸಖಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ವ್ಯಕ್ತಿಯನ್ನು ಪೊಲೀಸರು ಬಂದಿಸಿದ್ದಾರೆ. ಪಂಜಾಬ್‌ನ ಜಲಂಧರ್ ಕೋಟ್ಲಿ ಗ್ರಾಮದವರಾದ ರಾಜಿಂದರ್ ಸಿಂಗ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಗನಸಖಿಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ವಾಗ್ವಾದಕ್ಕೆ ಇಳಿದಿದ್ದಾನೆ ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗಗನಸಖಿ ವಿಮಾನದ ಇತರ ಸಿಬಂದಿಗಳಲ್ಲಿ ಹೇಳಿಕೊಂಡಿದ್ದು ಘಟನೆಗೆ ಸಂಬಂಧಿಸಿ ಅಮೃತಸರದ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಮಾನ …
Read More »ಹರಿಹರ: ಆಸ್ತಿ ವಿಚಾರದ ಗಲಾಟೆ; ಅಣ್ಣನನ್ನು ಇರಿದು ಕೊಂದ ತಮ್ಮ
ದಾವಣಗೆರೆ: ಆಸ್ತಿ ವಿಚಾರವಾಗಿ ಅಣ್ಣನನ್ನು ತಮ್ಮ ಚಾಕುನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಹರಿಹರದಲ್ಲಿ ಭಾನುವಾರ ರಾತ್ರಿ ನಡೆದಿದೆ ಪ್ರಶಾಂತ್ ನಗರದ ನಿವಾಸಿ ಕೆ.ಜಿ ಕುಮಾರ (31) ಕೊಲೆಯಾದ ವ್ಯಕ್ತಿ. ಹರಿಹರದ ಗುಂಡಪ್ಪ ಎಂಬುವರಿಗೆ ಇಬ್ಬರು ಪತ್ನಿಯರಿದ್ದು ನಗರದ ಭರಂಪುರ ನಿವಾಸಿ ಎರಡನೇ ಪತ್ನಿ ರತ್ನಮ್ಮನ ಪುತ್ರ ರಾಜು ಹಾಗೂ ಮೊದಲನೇ ಪತ್ನಿ ಲಕ್ಷಮ್ಮ ಕೊನೆಯ ಮಗನಾದ ಕುಮಾರ್ ನಡುವೆ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು. ಇವರಿಬ್ಬರ …
Read More »