Breaking News

ರಾಷ್ಟ್ರೀಯ

ಆಟೋ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ ಹಿನ್ನೆಲೆ ; ಪೊಲೀಸ್ ಸಿಬ್ಬಂದಿ ಅಮಾನತು.!

ಮಂಡ್ಯ : ಮಂಡ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೊಬ್ಬರು, ಆಟೋ ಚಾಲಕನಿಗೆ ನಡು ರಸ್ತೆಯಲ್ಲೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಮಹೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಅಮಾನತು ಮಾಡಿದ್ದಾರೆ. ಪೊಲೀಸ್ ಕಾನ್ಸ್‌ಸ್ಟೇಬಲ್‌ ಸಾರ್ವಜನಿಕವಾಗಿ ಎಲ್ಲರ ಮುಂದೆ ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಕೆಲವರು ಟ್ವೀಟ್‌ ಮೂಲಕ ಮಂಡ್ಯ ಎಸ್‌ಪಿ ಹಾಗೂ ಪೊಲೀಸ್ …

Read More »

ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಪತ್ರ: ರಾಜ್ಯಕ್ಕೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ

ಬೆಳಗಾವಿ: ಬೇಸಿಗೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಿನ ಅಗತ್ಯವಿದೆ. ಹಾಗಾಗಿ 5 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಲಿರುವುದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಒಟ್ಟಾರೆ ಐದು ಟಿಎಂಸಿ ನೀರು ಬಿಡುಗಡೆ ಮಾಡಬೇಕು …

Read More »

ಟ್ರಾಫಿಕ್ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಬೈಕ್ ಸವಾರ

ಬೆಳಗಾವಿ : ರಸ್ತೆ ಸಂಚಾರ ದಟ್ಟಣೆ ಕಂಡು ಬಂದರೆ ವಾಹನ ಸವಾರರು ಪೊಲೀಸರ ವಿರುದ್ಧ ಗೊಣಗುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಬೈಕ್ ಸವಾರ ಸಂಚಾರ ದಟ್ಟಣೆ ವೇಳೆ ತಾವೇ ಸ್ವತಃ ಸಂಚಾರ ನಿರ್ವಹಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ನಗರದ ಕಪಿಲೇಶ್ವರ ಮೇಲ್ಸೇತುವೆ ಬಳಿಯ ಶನಿಮಂದಿರ ಕ್ರಾಸ್​ನಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರಿ ಪೊಲೀಸರಿಂದ ಮೆಚ್ಚುಗೆಇದೇ ರಸ್ತೆಯ ಮೂಲಕ ಬೈಕ್​ನಲ್ಲಿ …

Read More »

21 ಸಾವಿರ ಸರಕಾರಿ ನೌಕರರಿಂದ ಸರಕಾರಿ ಸೌಲಭ್ಯಗಳ ದುರ್ಬಳಕೆಯ ಕಳ್ಳಾಟ

ಬೆಂಗಳೂರು: ಸರಕಾರಿ ನೌಕರರ ನೆರವಿನಿಂದ ಸರಕಾರಿ ಸೌಲಭ್ಯಗಳ ದುರ್ಬಳಕೆಯ ಕಳ್ಳಾಟಗಳು ಸಾಮಾನ್ಯ. ಆದರೆ ಸರಕಾರದ ಸೌಲಭ್ಯವೊಂದನ್ನು ಸಾವಿರಾರು ಸಂಖ್ಯೆಯ ಸರಕಾರಿ ನೌಕರರೇ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸಿದೆ. ರಾಜ್ಯದಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿದ 4.6 ಲಕ್ಷ ಜನರಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 13.5 ಕೋಟಿ ರೂ. ದಂಡ ಸಂಗ್ರಹಿಸಿದೆ. ಈ ಪೈಕಿ  21,232 ಸಾವಿರ ಜನ ಸರಕಾರಿ ನೌಕರರು ಎಂಬ ವಿಷಯವನ್ನು ಇಲಾಖೆ ದೃಢಪಡಿಸಿದೆ. …

Read More »

ಲೋಕಾಯುಕ್ತ ದಾಳಿ: ಏಳು ಕೋಟಿ ಮೌಲ್ಯದ ಬಂಗಲೆ ಒಡೆಯ ಪಿಡಿಒ!

ದೊಡ್ಡಬಳ್ಳಾಪುರ: ಬೆಂಗಳೂರಿನ ರಾಜಾನುಕುಂಟೆಯ ಕಾಕೋಳು ರಸ್ತೆಯಲ್ಲಿ ಅಂದಾಜು ₹7 ಕೋಟಿ ಬೆಲೆ ಬಾಳುವ ಭವ್ಯ ಬಂಗಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಸೋತೇನಹಳ್ಳಿ ಗ್ರಾಮದಲ್ಲಿ ಮನೆ, ಗುಂಜೂರು ಗ್ರಾಮದ ಸಮೀಪದ ಕೃಷಿ ಜಮೀನು, ದೊಡ್ಡಬಳ್ಳಾಪುರದ ಟಿ.ಬಿ.ನಾರಾಯಣಪ್ಪ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ…   ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಂಗಸ್ವಾಮಿ ಮನೆಯಲ್ಲಿ ದಾಖಲೆ ಪರಿಶೀಲನೆಯಲ್ಲಿ ದೊರೆತ ಆಸ್ತಿಗಳ ದಾಖಲೆ ಕಂಡು ಖುದ್ದು …

Read More »

ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ.

ಬೆಳಗಾವಿ: ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅಧಿಕಾರವಧಿಯಲ್ಲಿ ಇಲ್ಲಿನ ಅಶೋಕ ನಗರದಲ್ಲಿ ನಿರ್ಮಾಣಗೊಂಡಿದ್ದ ಕ್ರೀಡಾ ಸಂಕೀರ್ಣಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ.   ಈಗ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಿದ್ದು, ಈಗಲಾದರೂ ಅದು ಬಳಕೆಯಾಗುವುದೇ? ಅಥವಾ ನಿಷ್ಪ್ರಯೋಜಕವಾಗಿಯೇ ಉಳಿಯುವುದೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ನ ಫಿರೋಜ್‌ ಸೇಠ್‌ ಉತ್ತರ ಕ್ಷೇತ್ರದ ಶಾಸಕರಾಗಿದ್ದಾಗ ಮಹಾನಗರ ಪಾಲಿಕೆ …

Read More »

ಮನಬಂದಂತೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು

ಬೆಳಗಾವಿ: ಇಲ್ಲಿನ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆಯಿಂದ ಲಿಂಗರಾಜ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ಇದೇ ರಸ್ತೆಯಲ್ಲಿ ಆಟದ ಮೈದಾನವಿದೆ. ಅಕ್ಕ-ಪಕ್ಕದಲ್ಲೇ ಶಿಕ್ಷಣ ಸಂಸ್ಥೆಗಳಿವೆ. ಈ ರಸ್ತೆ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ, ಕೆಲವರು ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ರಸ್ತೆಬದಿ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವುದರಿಂದ ಸಂಚಾರ ಸಮಸ್ಯೆ ತಲೆದೋರುತ್ತಿದೆ. ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸಿ, ಮನಬಂದಂತೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. …

Read More »

ಕುಡಚಿ: ಇನ್ನೂ ಕಾಡುತ್ತಿದೆ ಮೂಲಸೌಕರ್ಯ ಕೊರತೆ

ಕುಡಚಿ: ಪರಿಶಿಷ್ಟ ಜಾತಿಗೆ ಮೀಸಲಾದ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕುಡಚಿ ಕೂಡ ಒಂದು. ಹಿಂದುಳಿದ, ಪರಿಶಿಷ್ಟ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಜನ ಇಲ್ಲಿ ಹೆಚ್ಚಾಗಿದ್ದಾರೆ. ನೂತನ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಈ ಎಲ್ಲ ಸಮುದಾಯಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಮತ್ತು ಅವರ ಬೇಡಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಅವರ ಯಶಸ್ಸು ನಿಂತಿದೆ.   ಕುಡಚಿಯು ಬೆಳಗಾವಿ ಜಿಲ್ಲಾ ಕೇಂದ್ರದಿಂದ 104 ಕಿ.ಮೀ ದೂರವಿದೆ. ಕ್ಷೇತ್ರದ ಜನ …

Read More »

K.S.R.T.C. ಬಸ್ ಮತ್ತು ಕಾರ್ ನಡುವೆ ಬುಧವಾರ ಮಧ್ಯಾಹ್ನ ಮುಖಾಮುಖಿ ಡಿಕ್ಕಿ

ಶಿರಸಿ: ಇಲ್ಲಿನ ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ಕೆ‌ಎಸ್‌ಆರ್ ಟಿಸಿ ಬಸ್ ಮತ್ತು ಕಾರ್ ನಡುವೆ ಬುಧವಾರ ಮಧ್ಯಾಹ್ನ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಹಾಗೂ ಬಸ್ ನಲ್ಲಿದ್ದವರು ಎಲ್ಲರೂ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಬಸ್ ಭಟ್ಕಳದಿಂದ ಗೋಕಾಕ ಕಡೆ ಸಾಗುತ್ತಿತ್ತು. ಕಾರು ಗುಜರಾತ್ ಮೂಲದ ಕುಟುಂಬಕ್ಕೆ ಸೇರಿದೆ. ಅಪಘಾತ ಸಂಭವಿಸಿದ ವೇಳೆ ಸ್ಥಳದಲ್ಲಿದ್ದ ಆರ್ ಎನ್ ಎಸ್ ಕಂಪನಿಯ ಗೋವಿಂದ ಭಟ್ ಅವರು  ಪೋಲೀಸರಿಗೆ ಮಾಹಿತಿ ನೀಡಿದರಲ್ಲದೆ  ವಾಹನ …

Read More »

ಭಾರಿ ಸೇಕೆಯಿಂದ ಕೂಡಿದ್ದ ಬೆಳಗಾವಿಗೆ ನಿನ್ನೆ ರಾತ್ರಿಯಿಂದ ಕೊಂಚ ನಿರಾಳ

ಬೆಳಗಾವಿ: ಬುಧವಾರ ರಾತ್ರಿ ಬೆಳಗಾವಿಯಲ್ಲಿ ಉತ್ತಮ ಮಳೆಯಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಮಳೆ ಮಧ್ಯರಾತ್ರಿ ನಂತರವೂ ಮುಂದುವರಿದಿತ್ತು.  ರಾತ್ರಿಯಾಗುತ್ತಿದ್ದಂತೆ ಅನಿರೀಕ್ಷಿತವಾಗಿ ಮಳೆ ಆರಂಭವಾಯಿತು. ಅಬ್ಬರವಿಲ್ಲದಿದ್ದರೂ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಿರಂತರವಾಗಿ ಮಳೆ ಮುಂದುವರಿದಿತ್ತು. ಭಾರೀ ಸೆಕೆಯಿಂದಾಗಿ ಜನರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ಮಳೆ ತಂಪೆರೆಯಿತು.

Read More »