Breaking News

ರಾಷ್ಟ್ರೀಯ

1 – 10ನೇ ತರಗತಿ ಮಕ್ಕಳಿಗೆ ಭರ್ಜರಿ ಸುದ್ದಿ: ಶಾಲಾ ಬ್ಯಾಗ್ ಹೊರೆ ಇಳಿಕೆ

ಬೆಂಗಳೂರು: ಯಶಪಾಲ ಶರ್ಮಾ ಸಮಿತಿಯ ಹೊರೆಯಿಲ್ಲದ ಕಲಿಕೆ ಅನುಸಾರ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ತಗ್ಗಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.   ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣವನ್ನು ರೂಪಿಸುವ ಸಲುವಾಗಿ Centre for Child and Law, NLSUI, Benga ri ರವರ ಸಹಯೋಗದೊಂದಿಗೆ ಡಿ.ಎಸ್.ಇ.ಆರ್.ಟಿ ರವರು ಅಧ್ಯಯನ …

Read More »

ಸರ್ವರ್ ಹ್ಯಾಕ್ ವಿಚಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟೀಕರಣ .

ಚಿಕ್ಕೋಡಿ: ಗ್ಯಾರಂಟಿ ಯೋಜನೆಗಳನ್ನು ಅರ್ಜಿ ಹಾಕಲು ಕೇಂದ್ರ ಸರ್ಕಾರ ಕಂಪ್ಯೂಟರ್ ಸರ್ವರ್ ಹ್ಯಾಕ್ ಮಾಡಿದೆ ಎಂಬ ಹೇಳಿಕೆ ನೀಡಿದ್ದೆನು. ಆದರೆ ಇದೊಂದು ರಾಜಕೀಯ ಹೇಳಿಕೆ. ಬಿಜೆಪಿಯವರು ಇಂಥ ಹೇಳಿಕೆಗಳನ್ನು ಬಹಳ ಸಲ ಹೇಳಿದ್ದುಂಟು. ಇವೆಲ್ಲ ರಾಜಕೀಯ ಎಂದು ಸರ್ವರ್ ಹ್ಯಾಕ್ ವಿಚಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಇಂದು ಸ್ಪಷ್ಟೀಕರಣ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಕೆಲವು ಸರ್ವರ್ ಹ್ಯಾಕ್ ಮಾಡಿದೆ ಎಂಬ …

Read More »

ಸಿದ್ದರಾಮಯ್ಯ- ಅಮಿತ್‌ ಶಾ ಭೇಟಿ

ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಅನ್ನಭಾಗ್ಯ ಯೋಜನೆ ಹಾಗೂ ಅದರ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ನೀಡುವ ಕುರಿತಾದ ಭರವಸೆ ಈಡೇರಿಸುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಕೋರಿ ಎಫ್​ಸಿಐಗೆ ಜೂನ್ 9ರಂದು ಪತ್ರ …

Read More »

500 ಮದ್ಯದ ಅಂಗಡಿಗಳನ್ನು ಮುಚ್ಚಲು ತೀರ್ಮಾನ!

ಚೆನ್ನೈ : ರಾಜ್ಯದಲ್ಲಿರುವ 500 ಮದ್ಯದ ಅಂಗಡಿಗಳನ್ನು ಮುಚ್ಚಲು ತಮಿಳುನಾಡು ಸರ್ಕಾರ ತೀರ್ಮಾನಿಸಿದೆ. ಜೂನ್ 22 ರಿಂದ ಆರಂಭಗೊಂಡು 500 ಮದ್ಯದ ಮಳಿಗೆಗಳನ್ನು ಮುಚ್ಚಲಾಗುವುದು ಎಂದು ತಮಿಳು ನಾಡು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಯಾಗಿರುವ ತಮಿಳುನಾಡು ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ (TASMAC) ಹೇಳಿದೆ. ರಾಜ್ಯದಲ್ಲಿ 500 ಮದ್ಯದ ಮಳಿಗೆಗಳನ್ನು ಗುರುತಿಸಿದ್ದು, ಏಪ್ರಿಲ್ 20, 2023 ರಂದು ಹೊರಡಿಸಲಾದ ಸರ್ಕಾರದ ಆದೇಶದ ಆಧಾರದನ್ವಯ ಗುರುವಾರ (ಜೂನ್ 22) ದಿಂದ ಮಳಿಗೆಗಳನ್ನು ಮುಚ್ಚಲು …

Read More »

ಬೆಳಗಾವಿ ಜಿಲ್ಲೆಯ ರಕ್ಕಸಕೊಪ್ಪ, ಘಟಪ್ರಭಾ, ಮಲಪ್ರಭಾ ಜಲಾಶಯಗಳು ಖಾಲಿ

ಮಹಾರಾಷ್ಟ್ರ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಜೀವಜಲ‌ ಮೂಲವಾದ ಡ್ಯಾಮ್ ಗಳೂ ಖಾಲಿ ಖಾಲಿ ಆಗ್ತಿವೆ. ಮಳೆಗಾಗಿ ದೇವರ ಮೊರೆ ಹೋದ್ರು ಪ್ರಯೋಜನವಾಗಿಲ್ಲ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ, ಮಳೆಗಾಗಿ ಮೊಡ ಬಿತ್ತನೆಗೆ ಸರ್ಕಾರ ಚಿಂತನೆ ನಡೆಸಲಿದೆ ಅಂತಾ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮುನ್ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಳೆದ 19 ದಿನಗಳಿಂದ ಮುಂಗಾರು ಮಳೆಯ ಸುಳಿವಿಲ್ಲ. ಇದರಿಂದ ಮಹಾರಾಷ್ಟ್ರದ ಮತ್ತು ಕರ್ನಾಟಕದಲ್ಲಿ ಬರಗಾಲದ …

Read More »

ಕೆರೆಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಅನಾರೋಗ್ಯದ ಕಾರಣದಿಂದ ಮಹಿಳೆಯೊಬ್ಬಳು ಮನನೊಂದು ಕೆರೆಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ನಡೆದಿದೆ. ಬಸವ್ವ ಚಿಕ್ಕನೇರ್ತಿ ಎಂಬುವ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ನೆರೆಗಲ್ಲನಿಂದ ತವರು ಮನೆಯಾಗಿರುವ ಶಿರಗುಪ್ಪಿಗೆ ಬಂದಿದ್ದ ಬಸವ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸ್ ತನಿಖೆಯ ನಂತರವೇ ಆತ್ಮಹತ್ಯೆಗೆ …

Read More »

ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮ

ಬೆಂಗಳೂರು : 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯುಷ್ಯ ಇಲಾಖೆಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಯೋಗ-ವಸುದೈವ ಕುಟುಂಬಕ್ಕಾಗಿ” ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.   ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ರಾಜ್ಯಪಾಲರು ಯೋಗದ ಮಹತ್ವವನ್ನ ತಿಳಿಸಿದರು. ” ನಮ್ಮ ಸಂಸ್ಕೃತಿಯಲ್ಲಿ ಯೋಗಕ್ಕೆ ತನ್ನದೇ ಆದ ಹೆಸರಿದೆ. ಯೋಗದ ಮಹತ್ವ ಕುರಿತು ನಮ್ಮ ಹಳೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಯೋಗಭ್ಯಾಸದಿಂದ ಭೌತಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತದೆ. …

Read More »

ಪ್ರಧಾನಿ ಮೋದಿ ಇಂದು ವಿಶ್ವಸಂಸ್ಥೆ ಕಚೇರಿಯಲ್ಲಿ ವಿಶ್ವಯೋಗ ದಿನವನ್ನು ಆಚರಣೆ

ನವದೆಹಲಿ: ಪ್ರಧಾನಿ ಮೋದಿ ಇಂದು ವಿಶ್ವಸಂಸ್ಥೆ ಕಚೇರಿಯಲ್ಲಿ ವಿಶ್ವಯೋಗ ದಿನವನ್ನು ಆಚರಣೆ ಮಾಡಲಿದ್ದಾರೆ. ಪ್ರಾಚೀನ ಭಾರತೀಯ ಆಚರಣೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಯುಎನ್​ ಕೇಂದ್ರ ಕಚೇರಿ ಸೇರಿದಂತೆ ವಿಶ್ವಾದ್ಯಂತ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ INS ವಿಕ್ರಾಂತ್‌ನಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ನೌಕಾ ಕಲ್ಯಾಣ ಮತ್ತು …

Read More »

ಭಾರಿ ಮಳೆ: ರಸ್ತೆಗಳು ಜಲಾವೃತ

ದಾವಣಗೆರೆ : ಕಳೆದ ಹಲವು ದಿನಗಳಿಂದ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ಕೃಪೆ ತೋರಿದ್ದಾನೆ. ನಿನ್ನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಾದಂತ್ಯ ಧಾರಾಕಾರ ಮಳೆ ಸುರಿದಿದ್ದು, ಇಡೀ ಪಟ್ಟಣ ಅಸ್ತವ್ಯಸ್ತವಾಗಿತ್ತು. ಚನ್ನಗಿರಿ ಪಟ್ಟಣದಲ್ಲಿ ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಕೆಲ ರಸ್ತೆಗಳು ದ್ವೀಪದಂತಾಗಿದ್ದವು. ಮಳೆ ಅವಾಂತರ : ನಿನ್ನೆ ಸುರಿದ ಮಳೆ ಚನ್ನಗಿರಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಉದ್ಯೋಗಿಗಳು, ಶಾಲಾ ಕಾಲೇಜಿನ ಮಕ್ಕಳು ಮನೆ ಸೇರಲು ಪರದಾಡಿದರು. ರಸ್ತೆಗಳ ಮೇಲೆ ಭಾರಿ …

Read More »

ಮುಂದಿನ ತಿಂಗಳಿನಿಂದ ವಿದ್ಯುತ್‌ ಬಿಲ್‌ ಬರಲ್ಲ, ಅರ್ಜಿ ಸಲ್ಲಿಕೆ ಮಾತ್ರ ಕಡ್ಡಾಯ: ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಪೈಕಿ ಒಂದಾದ ‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸಲು ನಾಗರಿಕರು ಧಾವಂತಪಡಬೇಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೋಮವಾರ ಸಲಹೆ ನೀಡಿದ್ದಾರೆ. ಗೃಹಬಳಕೆ ಗ್ರಾಹಕರಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಕೆಗೆ ಇಂಧನ ಇಲಾಖೆ ಆದೇಶ ಹೊರಡಿಸಿದೆ. ನಿಗದಿತ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಭಾನುವಾರದಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವೇ ಹಲವು ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಅರ್ಜಿ ಸಲ್ಲಿಕೆಗೆ ತೊಡಕಾಗಿತ್ತು. …

Read More »