ಚೆನ್ನೈ(ತಮಿಳುನಾಡು): ಚೆನ್ನೈ ಸೆಂಟ್ರಲ್ ಸಬರ್ಬನ್ ರಿಸರ್ವೇಶನ್ ಸೆಂಟರ್ ಎದುರು ಕೈಯಲ್ಲಿ ನೋಟ್ ಪ್ಯಾಡ್ ಹಿಡಿದು ರೈಲು ಪ್ರಯಾಣಿಕರಿಗೆ ನಕಲಿ ಟಿಕೆಟ್ ನೀಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ರೈಲ್ವೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ತನಿಖೆಯ ವೇಳೆ ಈತ ರಾಜಸ್ಥಾನ ಮೂಲದ ಜಿತೇಂದ್ರ ಶಾ (38) ಎಂದು ಗೊತ್ತಾಗಿದ್ದು, ಚೆನ್ನೈನ ಕೊಡಂಗಯ್ಯೂರಿನಲ್ಲಿ ಆರೋಪಿ ವಾಸವಾಗಿದ್ದ ಎಂಬುದು ತಿಳಿದು ಬಂದಿದೆ. 10ನೇ ತರಗತಿ ಓದಿರುವ ಅಪರಾಧಿ, ತಂದೆಯ ಆಭರಣ ಅಂಗಡಿಯಲ್ಲಿ ಲೆಕ್ಕಪರಿಶೋಧಕನಾಗಿ ಕೆಲಸ …
Read More »ಈಗ ನಾನೇ ವಿರೋಧ ಪಕ್ಷದ ನಾಯಕ!: ಅಚ್ಚರಿಯ ಹೇಳಿಕೆ ನೀಡಿದ ಬಿಜೆಪಿ ರೆಬೆಲ್ ಸದಸ್ಯ
ಬೆಂಗಳೂರು: 15 ದಿನಗಳ ಕಾಲ ನಡೆದ ಬಜೆಟ್ ಅಧಿವೇಶನಕ್ಕೆ ತೆರೆ ಬಿದ್ದಿದ್ದು, ಪ್ರತಿಪಕ್ಷಗಳ ಗೈರಿನಲ್ಲೇ ಧನ ವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ. ಸದನ ನಡೆಸಲು ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು. ಬಜೆಟ್ ಮೇಲಿನ ಚರ್ಚೆಯ ನಂತರ ಮಾತನಾಡಿದ ಸಭಾನಾಯಕ ಬೋಸರಾಜ್, ಕಲಾಪ ನಡೆಸಲು ಸಹಕರಿಸಿದ ಸದಸ್ಯರು, ಸಚಿವರು,ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ನಂತರ ಸಭಾಪತಿ ಬಸವರಾಜ ಹೊರಟ್ಟಿ, ಸಭಾನಯಕರ ನಂತರ …
Read More »ಬಿಜೆಪಿ ಹತ್ತು ಶಾಸಕರ ಅಮಾನತು ಯಾರ ಒತ್ತಡದಿಂದ ಮಾಡಿಲ್ಲ ಎಂದು ಸ್ಪೀಕರ್
ಬೆಂಗಳೂರು: ಬಿಜೆಪಿ ಹತ್ತು ಶಾಸಕರ ಅಮಾನತು ಯಾರ ಒತ್ತಡದಿಂದ ಮಾಡಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದರು. ಅಧಿವೇಶನ ಮುಕ್ತಾಯದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ನಡೆಸುವುದು ಎಲ್ಲ ನಾಯಕರ ಜವಾಬ್ದಾರಿ. ಅದಕ್ಕಾಗಿ ಎಲ್ಲರ ಸಹಕಾರ ಬೇಕು. ಯಾರೇ ಸದಸ್ಯರು ಪೀಠಕ್ಕೆ ಅಗೌರವದಿಂದ ನಡೆದುಕೊಂಡರೆ ಆ ಪೀಠದ ಸಭಾಧ್ಯಕ್ಷನಾಗಿ ನಾನು ಕ್ರಮ ಕೈಗೊಂಡಿದ್ದೇನೆ ಎಂದರು. ಇದರಲ್ಲಿ ಪಕ್ಷದ ವಿಚಾರ ಇಲ್ಲ. ನೋಟೀಸ್ ನೀಡದೇ ಇದ್ದರೂ ಅವರಿಗೆ ಮಾತನಾಡಲು ಅವಕಾಶ …
Read More »ಬಸ್ನಲ್ಲಿ ಮೂರ್ಛೆ ಹೋದ ಪ್ರಯಾಣಿಕ: ಆಸ್ಪತ್ರೆಗೆ ಸೇರಿಸಿ ಪ್ರಾಣ ಕಾಪಾಡಿದ ಚಾಲಕ – ನಿರ್ವಾಹಕ.
ತುಮಕೂರು : ಚಲಿಸುತ್ತಿದ್ದ ಬಸ್ನಲ್ಲಿ ಮೂರ್ಛೆ ಹೋದ ಪ್ರಯಾಣಿಕನನ್ನು ತಕ್ಷಣ ಚಿಕಿತ್ಸೆ ಕೊಡಿಸಲು ಬಸ್ನ ಚಾಲಕ ಮತ್ತು ನಿರ್ವಾಹಕ ಸಮಯ ಪ್ರಜ್ಞೆ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಬಸ್ನಲ್ಲಿಯೇ ಮೂರ್ಛೆ ತಪ್ಪಿ ಬಿದ್ದು ಪ್ರಯಾಣಿಕನಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಪ್ರಯಾಣಿಕರ ಸಮೇತ ಬಸ್ ಅನ್ನು ಆಸ್ಪತ್ರೆ ಕಡೆ ಓಡಿಸಿದ ಚಾಲಕ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ತುಮಕೂರಿನ ತಿಪಟೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಆಂಬ್ಯುಲೆನ್ಸ್ ರೀತಿ ಬಸ್ ಚಲಾಯಿಸಿ ಡ್ರೈವರ್ ಪ್ರಯಾಣಿಕನ ಪ್ರಾಣ …
Read More »ಯುವಕರ ಬೈಕ್ ವೀಲಿಂಗ್‌ನಿಂದ ಶಿಕ್ಷಕಿಗೆ ಗಂಭೀರ ಗಾಯ; ICUನಲ್ಲಿ ಜೀವನ್ಮರಣದ ಹೋರಾಟ
ಮೈಸೂರು: ಯುವಕರ ಅಪಾಯಕಾರಿ ಬೈಕ್ ವೀಲಿಂಗ್ ಕ್ರೇಜ್‌ನಿಂದಾಗಿ ಶಿಕ್ಷಕಿಯೋರ್ವರು ಗಂಭೀರವಾಗಿ ಗಾಯಗೊಂಡು ಇದೀಗ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಘಟನೆ ನಡೆದಿದೆ. ಪೊಲೀಸ್ ಪಬ್ಲಿಕ್ ಸ್ಕೂಲ್ ವಿಜ್ಞಾನ ಶಿಕ್ಷಕಿ ಎಚ್.ಬಿ.ಅನಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈ 18ರಂದು ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದರು. ಗಾಯತ್ರಿಪುರಂ ಚರ್ಚ್ ಸಮೀಪ ಮೂವರಿದ್ದ ಕೆಟಿಎಂ ಬೈಕ್ ವೇಗವಾಗಿ ಬಂದು ಶಿಕ್ಷಕಿ ಸಂಚರಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಶಿಕ್ಷಕಿಯ ತಲೆಗೆ ತೀವ್ರ ಸ್ವರೂಪದ …
Read More »ಇಂದು ಸದನ ಬಹಿಷ್ಕರಿಸಿರುವ ಬಿಜೆಪಿ ಶಾಸಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು: ಹತ್ತು ಮಂದಿ ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಸದನ ಬಹಿಷ್ಕರಿಸಿ ಬಿಜೆಪಿ ಉಭಯ ಸದನ ಸದಸ್ಯರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಎರಡನೇ ದಿನವಾದ ಇಂದೂ ಪ್ರತಿಭಟನೆ ನಡೆಸಿದರು. ಹತ್ತು ಶಾಸಕರ ಅಮಾನತು ಖಂಡಿಸಿ, ಶಿಷ್ಟಾಚಾರ ಉಲ್ಲಂಘಿಸಿ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ವಿರೋಧಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿ ಬಿಜೆಪಿ ಶಾಸಕರು ತಮ್ಮ ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ಹಿಟ್ಲರ್ ಎಂಬ ಘೋಷಣೆಗಳನ್ನು …
Read More »ಬೆಲೆ ಏರಿಕೆಗೆ ಮಿಸ್ಟರ್ ಮೋದಿ ಕಾರಣ,: ಸಿದ್ದರಾಮಯ್ಯ
ಬೆಂಗಳೂರು: ದೇಶದಲ್ಲಿನ ಬೆಲೆ ಏರಿಕೆಗೆ ಮಿಸ್ಟರ್ ನರೇಂದ್ರ ಮೋದಿ ಕಾರಣ. ದೇಶವನ್ನು ದಿವಾಳಿಯತ್ತ ತಂದಿದ್ದು ಮೋದಿ ಸಾಧನೆ. ಇಂತಹ ಮೋದಿಯನ್ನು ಬಿಜೆಪಿಯವರು ವಿಶ್ವಗುರು ಎನ್ನುತ್ತಾರೆ. ಇವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲೂ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನ ಪರಿಷತ್ನಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ತಮ್ಮ ಇಡೀ ಭಾಷಣದುದ್ದಕ್ಕೂ ಪ್ರಧಾನಿ ಮೋದಿಯನ್ನು ಟೀಕಿಸಿದರು. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ …
Read More »ಅಜಿತ್ ಪವಾರ್ಗೆ ಮತ್ತಷ್ಟು ಬಲ; ನಾಗಾಲ್ಯಾಂಡ್‌ನ ಎಲ್ಲ 7 ಎನ್‌ಸಿಪಿ ಶಾಸಕರ ಬೆಂಬಲ
ನವದೆಹಲಿ: ರಾಜಕೀಯ ಚಾಣಕ್ಯ ಎಂದು ಕರೆಯಲ್ಪಡುವ ಮಹಾರಾಷ್ಟ್ರದ ನಾಯಕ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ನಾಗಾಲ್ಯಾಂಡ್‌ನ ಎಲ್ಲ ಏಳೂ ಎನ್‌ಸಿಪಿ ಶಾಸಕರು ಅಜಿತ್ ಪವಾರ್ ಬಣಕ್ಕೆ ಬೆಂಬಲ ಸೂಚಿಸಿ, ಶರದ್ ಪವಾರ್ಗೆ ಶಾಕ್ ನೀಡಿದ್ದಾರೆ. ಈಶಾನ್ಯ ರಾಜ್ಯದ ಈ ಎನ್‌ಸಿಪಿ ಶಾಸಕರು ಗುರುವಾರ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ಗೆ ಬೆಂಬಲ ಸೂಚಿಸಿ ಪತ್ರ ಕಳುಹಿಸಿರುವುದಾಗಿ ನಾಗಾಲ್ಯಾಂಡ್‌ನ ಎನ್‌ಸಿಪಿ ಅಧ್ಯಕ್ಷ ವಂತುಂಗೋ …
Read More »ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ನಾಲ್ವರು ಅಪರಾಧಿಗಳಿಗೆ ಮರಣದಂಡನೆಯೇ ಸೂಕ್ತ ಎಂದ ಮಣಿಪುರ ಸಿಎಂ
ಇಂಫಾಲ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಗುಂಪಿನಲ್ಲಿ ಭಾಗಿಯಾಗಿ, ಅವರನ್ನು ಅಮಾನುಷವಾಗಿ ಎಳೆದುಕೊಂಡು ಹೋಗುತ್ತಿದ್ದ ಓರ್ವ ವ್ಯಕ್ತಿ ಸೇರಿದಂತೆ ಗುರುವಾರ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ನಿನ್ನೆ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದು ಅಮಾನವೀಯ ಘಟನೆ. ಅಪರಾಧಿಗಳು ಮರಣದಂಡನೆಗೆ ಅರ್ಹರು” ಎಂದು ಹೇಳಿದರು. ಇದಾದ ಕೆಲವೇ …
Read More »ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೋಟೆಲ್ ಕ್ಯಾಶಿಯರ್ನ ಕೊಲೆಯಾಗಿದೆ.
ಬೆಂಗಳೂರು : ನಗರದ ಪ್ರತಿಷ್ಠಿತ ಹೋಟೆಲ್ ಕ್ಯಾಶಿಯರ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಖಾಸಗಿ ಹೋಟೆಲ್ ಅಂಡ್ ಸರ್ವಿಸ್ ಅಪಾರ್ಟ್‌ಮೆಂಟಿನ ಕ್ಯಾಶಿಯರ್ ಸುಭಾಷ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುಭಾಷ್ ವಾಸವಿದ್ದ ರೂಮಿನಲ್ಲಿ ಸೋಫಾ ಮೇಲೆ ಮಲಗಿದ್ದಾಗ ಆತನಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಬೆಳಗ್ಗೆ …
Read More »