ಮೂಡಲಗಿ : ಸಂತ ಶ್ರೇಷ್ಠ ಕನಕದಾಸ ಮತ್ತು ಶೂರ ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರನ್ನು ಪಡೆದಿರುವುದು ಹಾಲುಮತ ಸಮಾಜದ ಸೌಭಾಗ್ಯವಾಗಿದೆ. ಆದರೂ ಇಂತಹ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲ ಸಮಾಜಗಳು ಇವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಮಂಗಳವಾರದಂದು ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ವಿಶ್ವಜ್ಯೋತಿ ಕನಕದಾಸರ ನೂರೆಂಟು ನಾಮಾವಳಿಯ …
Read More »ಆಕ್ಷೇಪಾರ್ಹ ಪದ ಬಳಕೆ ಆರೋಪ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ದೂರು
ಬೆಂಗಳೂರು : ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ರಾಜ್ಯ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದಿವಾಕರ್ ಎಂಬವರು ನೀಡಿದ ದೂರಿನ ಮೇರೆಗೆ ಸಚಿವರ ವಿರುದ್ಧ ಗಂಭೀರವಲ್ಲದ ಅಪರಾಧ ಪ್ರಕರಣ (ಎನ್‌ಸಿಆರ್) ದಾಖಲಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಚಿವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರಿಗೆ ನೀಡಲಾಗಿದೆ. ಸಚಿವರು ಮಾತನಾಡಿರುವ ಸ್ಥಳ …
Read More »SBI ಗ್ರಾಹಕರೇ, ಯಾವುದೇ ಗ್ಯಾರೆಂಟಿ ಇಲ್ಲದೇ ಬ್ಯಾಂಕ್ 50 ಸಾವಿರ ಸಾಲ ನೀಡ್ತಿದೆ, ನೀವೂ ಅರ್ಜಿ ಸಲ್ಲಿಸಿ
ಕೆಲವರು ತಾವು ಮಾಡುತ್ತಿರುವ ಉದ್ಯೋಗಕ್ಕಿಂತ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇನ್ನು ಕೆಲವರು ಯಾವುದಾದರೂ ಸಣ್ಣ ವ್ಯಾಪಾರ ಮಾಡಿದರೆ ಉತ್ತಮ ಎಂದು ಭಾವಿಸುತ್ತಾರೆ. ಆದ್ರೆ, ಹಣದ ಸಮಸ್ಯೆ ಅವರನ್ನ ಹಿಂದೆ ಸರಿಯುವಂತೆ ಮಾಡುತ್ತೆ. ಅಂತಹವರ ಪಟ್ಟಿಯಲ್ಲಿ ನೀವೂ ಇದ್ದೀರಾ.? ಹಾಗಿದ್ರೆ, ನಿಮಗಿದು ಗುಡ್ ನ್ಯೂಸ್ ಆಗುವುದು. ನಿಮಗಾಗಿ SBI ಮುದ್ರಾ ಸಾಲವನ್ನ ಒದಗಿಸಲಾಗಿದೆ. ಈ ಯೋಜನೆಯ ಮೂಲಕ ತಕ್ಷಣವೇ 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯುವ ಸೌಲಭ್ಯ ಒದಗಿಸುತ್ತಿದೆ. …
Read More »ಹರ್ ಘರ್ ತಿರಂಗ ವೆಬ್ಸೈಟ್ ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆಯುವುದು ಹೇಗೆ ?
ನವದೆಹಲಿ:ಭಾರತವು ನಾಳೆ 76 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಸಿದ್ಧವಾಗಿದೆ. ಈ ದಿನವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಹರ್ ಘರ್ ತಿರಂಗ ವೆಬ್‌ಸೈಟ್‌ನಲ್ಲಿ ಸುಮಾರು 40 ಮಿಲಿಯನ್ ಜನರು ತಮ್ಮ ಸೆಲ್ಫಿಗಳನ್ನು ಉಪಕ್ರಮದ ಭಾಗವಾಗಿ ಅಪ್‌ಲೋಡ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರನ್ನು ಅಭಿಯಾನದ ಭಾಗವಾಗುವಂತೆ ಆಹ್ವಾನಿಸಿದರು ಮತ್ತು ಅಭಿಯಾನದ ಭಾಗವಾಗಿ ತಮ್ಮ …
Read More »ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಶಿಫಾರಸ್ಸು ಮಾಡಲು ಸಿಎಂಗೆ ಮನವಿ ಮಾಡ್ತೇವೆ: ಸಿದ್ಧರಾಮ ಸ್ವಾಮೀಜಿ
ಗದಗ: ”2018ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್ಗೆ ಸೋಲಾಗಲಿಲ್ಲ. ಕೆಲವರು ಬೇಕಂತಲೇ ಈ ರೀತಿ ಉಯಿಲು ಎಬ್ಬಿಸಿದರು. ನಾವು ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಶಿಫಾರಸ್ಸು ಮಾಡಲು ಸಿಎಂಗೆ ಮನವಿ ಮಾಡ್ತೇವೆ” ಎಂದು ಗದಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಸಿದ್ದರಾಮಯ್ಯನವರು ಬದ್ಧತೆಗೆ ಹೆಸರಾಗಿರುವಂತವರು. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಅನ್ನೋದನ್ನು ಮನಗಂಡಿದ್ದರು. ಹೀಗಾಗಿ ನಾಗಮೋಹನ್ ದಾಸ್ ಅವರ ವರದಿಯನ್ನು …
Read More »ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಮೂವರು ಅಪರಾಧಿಗಳಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್
ನವದೆಹಲಿ: ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಗಂಭೀರವಾದುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೋಚ್‌ಗೆ ಕಲ್ಲೆಸೆದು, ಪ್ರಯಾಣಿಕರನ್ನು ದೋಚಿದ್ದ ಮೂವರು ಆರೋಪಿಗಳ ಜಾಮೀನನ್ನು ಸೋಮವಾರ ತಿರಸ್ಕರಿಸಿದೆ. 2002 ರ ಫೆಬ್ರವರಿ 27 ರಂದು ಗುಜರಾತ್ನ ಗೋಧ್ರಾದಲ್ಲಿ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ದುರ್ಘಟನೆಯಲ್ಲಿ 59 ಜನರು ಅಗ್ನಿಗಾಹುತಿಯಾಗಿ, ಹಲವರು ಗಾಯಗೊಂಡಿದ್ದರು. ಬಳಿಕ ಇದು ರಾಜ್ಯದ ಅನೇಕ ಭಾಗಗಳಲ್ಲಿ ದೊಡ್ಡ ಗಲಭೆ, ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ಅಂತಹ ಪ್ರಕರಣದ …
Read More »ಶನಿವಾರ ಒಂದೇ ದಿನ ರಾಜ್ಯಾದ್ಯಂತ 31 ಅಪಘಾತದಲ್ಲಿ 38 ಮಂದಿ ಸಾವು
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಕುರಿತು ಆತಂಕ ವ್ಯಕ್ತಪಡಿಸಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಶನಿವಾರ ಒಂದೇ ದಿನ ಸಂಭವಿಸಿದ ಅಪಘಾತಗಳನ್ನ ಆಧರಿಸಿ ‘ಕರಾಳ ಶನಿವಾರ’ ಎಂದಿದ್ದಾರೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ, ಚಿತ್ರದುರ್ಗದಲ್ಲಿ ಕಾರು-ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಸಾವನ್ನಪ್ಪಿದ ಪ್ರಕರಣ ಸೇರಿದಂತೆ ಶನಿವಾರ ಒಂದೇ ದಿನ ರಾಜ್ಯಾದ್ಯಂತ ವಿವಿಧ ಅಪಘಾತಗಳಲ್ಲಿ ಒಟ್ಟು 38 ಜನ ಪ್ರಾಣ …
Read More »ಉಪೇಂದ್ರ ಅವರ ಹೇಳಿಕೆಯಿಂದ ಇಡೀ ಸಮಾಜಕ್ಕೆ ನೋವಾಗಿದೆ: ಸಚಿವ ಮಹದೇವಪ್ಪ
ಮೈಸೂರು: ಸಮಾಜಕ್ಕೆ ಮಾರ್ಗದರ್ಶನ ಮಾಡುವವರೇ ಈ ರೀತಿ ಮಾತನಾಡುವುದು ಎಷ್ಟು ಸರಿ. ಶತಮಾನಗಳಿಂದ ಶೋಷಿತವಾಗಿರುವ ಸಮುದಾಯವನ್ನು ಮತ್ತೆ ಯಾಕೆ ನೋಯಿಸುತ್ತೀರಿ. ಉಪೇಂದ್ರ ಅವರ ಹೇಳಿಕೆಯಿಂದ ಇಡೀ ಸಮಾಜಕ್ಕೆ ನೋವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹದೇವಪ್ಪ ಹೇಳಿದರು. ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಟ ಉಪೇಂದ್ರ ಹೇಳಿಕೆ ಅವರ ಕೊಳಕು ಮನಸ್ಸನ್ನು ತೋರಿಸುತ್ತದೆ. ಅವರಾಡಿದ ಮಾತಿನಿಂದ ಇಡೀ ಸಮಾಜಕ್ಕೆ ನೋವಾಗಿದೆ. ಅವರ ವಿರುದ್ಧ …
Read More »ಮಾನಸಿಕ ಖಿನ್ನತೆಯಲ್ಲಿ ಅಶ್ವತ್ಥನಾರಾಯಣ್ ಅವರಿದ್ದಾರೆ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು : ಇವರು ಅಶ್ವತ್ಥನಾರಾಯಣ್ ಅಲ್ಲ. ನವರಂಗಿ ನಾರಾಯಣ. ಕಳ್ಳರನ್ನು ರಕ್ಷಣೆ ಮಾಡುವಲ್ಲಿ ಇವರು ಡಾಕ್ಟರೇಟ್ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಮನಗರ ಕ್ಲೀನ್ ಮಾಡುತ್ತೇನೆ ಎಂದು ಬಂದವರು, ಜಿಲ್ಲೆಯಲ್ಲಿ ಅವರ ಪಕ್ಷವನ್ನೇ ಕ್ಲೀನ್ ಮಾಡಿದರು. ಆ ಮಾನಸಿಕ ಖಿನ್ನತೆಯಲ್ಲಿ ಅವರಿದ್ದಾರೆ. ಅಶ್ವತ್ಥನಾರಾಯಣ್ ಅವರು ತಮ್ಮ ಇಲಾಖೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ …
Read More »ಲೋಕಸಭೆಗೆ ಶೀಘ್ರದಲ್ಲೇ ಬಿಜೆಪಿ ಆಕಾಂಕ್ಷಿಗಳ ಪಟ್ಟಿ:B.S.Y.
ಶಿವಮೊಗ್ಗ : “ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯನ್ನು ಶೀಘ್ರದಲ್ಲೇ ತಯಾರಿಸಲಾಗುವುದು” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಇಂದು ಶಿವಮೊಗ್ಗದ ವಿನೋಬ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಸಭೆ ಚುನಾವಣೆ ಆಕಾಂಕ್ಷಿಗಳ ಬಗ್ಗೆ ಚರ್ಚೆ ಶುರುವಾಗಿಲ್ಲ. ಆದಷ್ಟು ಬೇಗ ಸ್ಪರ್ಧಿಸುವ ಆಕಾಂಕ್ಷಿಗಳ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಕಳೆದ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ 25ಕ್ಕೆ 25 ಕ್ಷೇತ್ರವನ್ನೂ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ” …
Read More »
Laxmi News 24×7