ಬೆಂಗಳೂರು: ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದ್ದಾರೆ. ಶಕ್ತಿ ಯೋಜನೆ …
Read More »1 ಗಂಟೆ ಪೊಲೀಸ್ ಆದ 8 ವರ್ಷದ ಪೋರ… ಆಜಾನ್ ಖಾನ್
ಶಿವಮೊಗ್ಗ: ಎಂಟೂವರೆ ವರ್ಷದ ಪುಟ್ಟ ಬಾಲಕ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾನೆ. ಪುಟ್ಟ ಬಾಲಕನ ಆದೇಶಕ್ಕೆ ಎಲ್ಲ ಪೊಲೀಸರು ಸೆಲ್ಯೂಟ್ ಹೊಡೆದು ಎಸ್ ಸಾರ್ ಅಂದ್ರು. ಹೌದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬುಧವಾರ ಒಂದು ಗಂಟೆಯ ಮಟ್ಟಿಗೆ ಎಂಟೂವರೆ ವರ್ಷದ ಬಾಲಕ ಪೊಲೀಸ್ ಇನ್ಸ್ಪೆಕ್ಟ್ರ್ ಆಗಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು. ಈ ಬಾಲಕನ ಹೆಸರು ಆಜಾನ್ ಖಾನ್. ಈತ …
Read More »ಸಮುದಾಯದ ಬಗ್ಗೆ ಕೀಳು ಮಾತು ಸಹಿಸಲ್ಲ, ಕಾನೂನು ಪ್ರಕಾರ ಕ್ರಮ- ಸಚಿವ ಜಿ.ಪರಮೇಶ್ವರ್
ಬೆಂಗಳೂರು: “ನಾಣ್ನುಡಿ ಇದೆ ಅಂತ ಸಮುದಾಯದ ಬಗ್ಗೆ ಕೀಳಾಗಿ ಮಾತಾಡೋದು ಸರಿಯಲ್ಲ. ಆ ತರ ಹೇಳಿಕೆಗಳನ್ನು ನಾನು ಸಹಿಸುವುದಿಲ್ಲ. ಸಚಿವರೇ ಆಗಲಿ, ಯಾರೇ ಆಗಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಪರಿಶಿಷ್ಟ ಜಾತಿಯವರ ವಿರುದ್ಧ ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಯಾರೂ ಕೂಡಾ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಹೀಗೆ ಮಾತನಾಡೋರು ಅರ್ಥ …
Read More »ಸಿಎಂ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಸಭೆ; ಶೀಘ್ರ ಕಾಮಗಾರಿ ಬಿಲ್ ಬಿಡುಗಡೆಗೆ ಮನವಿ
ಬೆಂಗಳೂರು : ಆದಷ್ಟು ಬೇಗ ಬಿಬಿಎಂಪಿ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ, ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಶಾಸಕರು ಸಿಎಂ ನಡೆಸಿದ ಸಭೆಯಲ್ಲಿ ಒತ್ತಾಯಿಸಿದರು. ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ, ಪ್ರಮುಖವಾಗಿ ಬಾಕಿ ಬಿಲ್, ಅಭಿವೃದ್ಧಿ ಸಂಬಂಧ ಹೆಚ್ಚಿನ ಚರ್ಚೆ ನಡೆಸಲಾಯಿತು. ಉಳಿದಂತೆ ಕ್ಷೇತ್ರದ ಅಭಿವೃದ್ಧಿ, ಅನುದಾನ, ಸರ್ಕಾರ- ಪಕ್ಷದ ಜತೆಗಿನ ಸಮನ್ವಯ, ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು …
Read More »ಚಿಕನ್ ಕರಿಯಲ್ಲಿ ಸತ್ತ ಇಲಿ ಮರಿ! ರೆಸ್ಟೋರೆಂಟ್ ಮ್ಯಾನೇಜರ್, ಇಬ್ಬರು ಕುಕ್ಗಳ ಬಂಧನ
ಮುಂಬೈ (ಮಹಾರಾಷ್ಟ್ರ): ರೆಸ್ಟೋರೆಂಟ್‌ವೊಂದರಲ್ಲಿ ಪೂರೈಕೆ ಮಾಡಿದ್ದ ಚಿಕನ್ ಕರಿಯಲ್ಲಿ ಸತ್ತ ಇಲಿ ಮರಿ ಸಿಕ್ಕಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಈ ಕುರಿತು ಗ್ರಾಹಕರು ನೀಡಿದ ದೂರಿನ ಮೇರೆಗೆ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಮಧ್ಯಪ್ರದೇಶ ಮೂಲದ ಅನುರಾಗ್ ದಿಲೀಪ್ ಸಿಂಗ್ ಎಂಬವರು ಗೋರೆಗಾಂವ್ ಪಶ್ಚಿಮ ವಿಭಾಗದಲ್ಲಿರುವ ಖಾಸಗಿ ಬ್ಯಾಂಕ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 13ರಂದು ತಮ್ಮ …
Read More »ರಾಜಕಾರಣ ಬೇಡವೆನಿಸಿದರೆ ನಿವೃತ್ತಿಯಾಗುತ್ತೇನೆಯೇ ಹೊರತು ಕಾಂಗ್ರೆಸ್ ಸೇರುವುದಿಲ್ಲ- ಮುನಿರತ್ನ
ಬೆಂಗಳೂರು: “ನನಗೆ ಕಾಂಗ್ರೆಸ್ಸಿನ ಅವಶ್ಯಕತೆ ಇಲ್ಲ, ನಾನು ಬಿಜೆಪಿಯಲ್ಲೇ ಇರುತ್ತೇನೆ. ಒಂದು ವೇಳೆ ರಾಜಕೀಯ ಬೇಡವೆನಿಸಿದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆಯೇ ಹೊರತು, ಕಾಂಗ್ರೆಸ್ ಪಕ್ಷವನ್ನು ಮಾತ್ರ ಸೇರಲ್ಲ. ಕಾಂಗ್ರೆಸ್ ಬಾಗಿಲು ತಟ್ಟುವ ಕೆಲಸವನ್ನೂ ಮಾಡುವುದಿಲ್ಲ” ಎಂದು ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು. ವೈಯಾಲಿಕಾವಲ್ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಜೊತೆ ಬಿಜೆಪಿಗೆ ಬಂದವರಲ್ಲಿ ಯಾರೇ ಪಕ್ಷ ತೊರೆಯಲು ಮುಂದಾದರೂ ನಾನು ಯಾರ ಮನವೊಲಿಕೆ ಮಾಡುವುದಿಲ್ಲ. ನನಗೆ …
Read More »ಅಕ್ಕಿ ಬದಲು ಆಗಸ್ಟ್ ತಿಂಗಳ ಡಿಬಿಟಿ ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ- ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿ ಬದಲಾಗಿ ಆಗಸ್ಟ್ ತಿಂಗಳ ಡಿಬಿಟಿ (ನೇರ ನಗದು ವರ್ಗಾವಣೆ) ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಹೋಗಲಿದೆ ಎಂದು ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಅಕ್ಕಿ ಬದಲಾಗಿ ಡಿಬಿಟಿ ಮೂಲಕ ಹಣ ಕೊಡಲಾಗುತ್ತಿದೆ. ಅಕ್ಕಿಯನ್ನು ಪ್ರತಿ ತಿಂಗಳು 10 ಅಥವಾ 11ನೇ ತಾರೀಖು ಕೊಡುತ್ತಿದ್ದೆವು. ಡಿಬಿಟಿ ತಡವಾಗ್ತಿದೆ. ಸಿಸ್ಟಮ್ …
Read More »ಆ.18ರಂದು ಬೆಂಗಳೂರಿನಲ್ಲಿ ‘ಶೂನ್ಯ ನೆರಳು’ ಗೋಚರ
ಬೆಂಗಳೂರು: ನಗರದಲ್ಲಿ ನೆಲೆಸಿರುವ ಜನರು ಆಗಸ್ಟ್ 18ರಂದು ಮತ್ತೊಮ್ಮೆ ಶೂನ್ಯ ನೆರಳು ದಿನ ಕಣ್ತುಂಬಿಕೊಳ್ಳಲಿದ್ದಾರೆ. ಅಪರೂಪದ ಶೂನ್ಯ ನೆರಳು ದಿನಕ್ಕೆ ಬೆಂಗಳೂರಿಗರು ಈ ವರ್ಷ ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು. ಪ್ರಾತಿನಿಧಿಕ ಚಿತ್ರಆ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡು ಬಂದಿರಲಿಲ್ಲ. ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ …
Read More »ರೈತರೊಂದಿಗೆ ಭತ್ತ ನಾಟಿ ಮಾಡಿದ ಐಎಎಸ್ ಅಧಿಕಾರಿ
ಗಂಗಾವತಿ (ಕೊಪ್ಪಳ) : ‘ರೈತರೊಂದಿಗೆ ಒಂದು ದಿನ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಹುಲ್ ರತ್ನಂ ಪಾಂಡೆ ಅವರಿಂದು ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತಾಲೂಕಿನ ಮರಳಿ ಹೋಬಳಿಯ ಕೋಟಯ್ಯ ಕ್ಯಾಂಪಿನಲ್ಲಿ ರೈತರೊಂದಿಗೆ ಭತ್ತದ ಗದ್ದೆಗಿಳಿದು, ಸಸಿಗಳನ್ನು ನಾಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಬಿಳಿ ಪಂಚೆ, ಟಿ ಶರ್ಟ್ ಧರಿಸಿದ್ದರು. ಬಳಿಕ ಹೊಲದಲ್ಲೇ ಕುಳಿತು ಮಧ್ಯಾಹ್ನದ ಭೋಜನ ಸವಿದರು. ಜನರೊಂದಿಗೆ ಮಧ್ಯಾಹ್ನದ ಭೋಜನ …
Read More »ವಿಧಾನ ಪರಿಷತ್ ಸದಸ್ಯ ಸ್ಥಾನದ ನಾಮನಿರ್ದೇಶನಕ್ಕೆ ಎಂ.ಆರ್.ಸೀತಾರಾಮ್, ಸುಧಾಂ ದಾಸ್, ಉಮಾಶ್ರೀ ಹೆಸರು ಶಿಫಾರಸು ಮಾಡಲು ರಾಜ್ಯ ಸರ್ಕಾರ ತೀರ್ಮಾನ
ಬೆಂಗಳೂರು: ಪರಿಷತ್ ಸ್ಥಾನದ ನಾಮನಿರ್ದೇಶನಕ್ಕೆ ಎಂ.ಆರ್. ಸೀತಾರಾಮ್, ಸುಧಾಂ ದಾಸ್ ಹಾಗೂ ಉಮಾಶ್ರೀ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ನಾಳೆ ರಾಜ್ಯಪಾಲರಿಗೆ ಈ ಮೂವರ ಹೆಸರನ್ನು ನಾಮನಿರ್ದೇಶನಕ್ಕಾಗಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಎಐಸಿಸಿಯಿಂದ ಮೂವರ ಹೆಸರನ್ನು ಅಂತಿಮಗೊಳಿಸಿದೆ. ಈ ಮುಂಚೆ ಕೇಳಲ್ಪಟ್ಟಿದ್ದ ಮನ್ಸೂರ್ ಖಾನ್ ಹೆಸರು ಕೈ ಬಿಡಲಾಗಿದೆ. ಇದೀಗ ಮೂವರ ಹೆಸರನ್ನು ನಾಮನಿರ್ದೇಶನಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಗೋಚರಿಸಿದೆ. …
Read More »
Laxmi News 24×7