ಅಲ್ಲ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರನ್ನ ಓದಗಿಸುವ ಜಲಾಶಯ. ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದೆ. ಆದರೆ ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದಿರೋ ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸುವುದನ್ನ ನಿಲ್ಲಿಸಿ, ಇದೀಗ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದು ಜಿಲ್ಲೆಯ ರೈತರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ. ಹೌದು ತಮಿಳುನಾಡು (Tamil Nadu) ಸರ್ಕಾರದ ಒತ್ತಡಕ್ಕೆ ರಾಜ್ಯ ಸರ್ಕಾರ (Karnataka government) ಮಣಿಯಿತಾ …
Read More »NIA: ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 43 ಅಕ್ರಮ ಬಾಂಗ್ಲಾ ವಲಸಿಗರು,
ಬೆಂಗಳೂರು, ಆಗಸ್ಟ್ 11: ಇತ್ತೀಚೆಗೆ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು (illegal Bangladeshi immigrants) ಪತ್ತೆಯಾಗಿದ್ದು, ಆ ಪ್ರಕರಣದ ಪರಿಶೀಲನೆ ವೇಳೆ ಪತ್ತೆಯಾಗಿದ್ದು ಮೂವರಲ್ಲ 43 ಬಾಂಗ್ಲಾ ವಲಸಿಗರು ಎಂದು ತಿಳಿದುಬಂದಿದೆ. ಬೆಳ್ಳಂದೂರಿನಲ್ಲಿ ಒಟ್ಟು 43 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿರುವ ಬಗ್ಗೆ ಎನ್ಐಎ(National Investigation Agency -NIA) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಕೇವಲ ಮೂವರು ಬಾಂಗ್ಲಾದೇಶಿ ಅಕ್ರಮ ವಲಸಿಗರು ಇದ್ದಾರೆ ಎಂಬ ಮಾಹಿತಿ ಇತ್ತು. ಬಾಂಗ್ಲಾ ಪ್ರಜೆಗಳು ದೇಶದಲ್ಲಿ …
Read More »21 ನಾಯಕರನ್ನೊಳಗೊಂಡ ಜೆಡಿಎಸ್ ಕೋರ್ ಕಮಿಟಿ ರಚನೆ, ಜಿಟಿ ದೇವೇಗೌಡ ಅಧ್ಯಕ್ಷ
ಬೆಂಗಳೂರು, (ಆಗಸ್ಟ್ 18): ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಮುಗ್ಗರಿಸಿರುವ ಜೆಡಿಎಸ್ ಇದೀಗ ಮುಂಬರುವ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿದೆ. ಹೀಗಾಗಿ ಪಕ್ಷವನ್ನು ಬಲಪಡಿಸಲು ಇಂದು ಜೆಡಿಎಸ್ ಕೋರ್ ಕಮಿಟಿ(jds core committee) ರಚನೆ ಮಾಡಲಾಗಿದೆ. ಒಟ್ಟು 21 ಜೆಡಿಎಸ್ (JDS) ನಾಯಕರನ್ನೊಳಗೊಂಡ ಕೋರ್ ಕಮಿಟಿಗೆ ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಅವರು ಜೆಡಿಎಸ್ ಕೋರ್ ಕಮಿಟಿಯ …
Read More »ಸಿದ್ದರಾಮಯ್ಯ ಇಸ್ರೋಕ್ಕೆ ಭೇಟಿ ನೀಡಿ ಅಭಿನಂದಿಸಿದ ಕ್ಷಣ
ಬೆಂಗಳೂರು: ಇಸ್ರೋದ ಮಹೋನ್ನತ ಸಾಧನೆಗೆ ಇಡೀ ವಿಶ್ವವೇ ಅಭಿನಂದಿಸಿ ಕೊಂಡಾಡುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದರು. ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಿದರು. ಇಸ್ರೋ ಅಧ್ಯಕ್ಷರಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಪೇಟಾ ತೊಡಿಸಿ ಅಭಿನಂದನೆ ಸಲ್ಲಿಸಿದರು. ಜತೆಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಇಸ್ರೋ ಸಾಧನೆ ಕುರಿತು ಸಿಎಂ ಸಿದ್ದರಾಮಯ್ಯ ಸಂತಸ …
Read More »ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ.: ಡಿ.ಕೆ.ಶಿ
ಮೈಸೂರು : “ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ನಮ್ಮ ಪಕ್ಷದ ವರ್ಚಸ್ಸು ಮತ್ತು ಸಿದ್ಧಾಂತವನ್ನು ಒಪ್ಪಿ ಬಿಜೆಪಿ, ಜೆಡಿಎಸ್ ನಾಯಕರುಗಳು ಅವರಾಗಿಯೇ ಬರುತ್ತೇವೆ ಎನ್ನುತ್ತಿದ್ದಾರೆ. ಹಾಗೆ ಬರುವವರಿಗೆ ನಮ್ಮ ಸ್ವಾಗತ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಇಂದು ಆಗಮಿಸಿದ ಡಿ.ಕೆ.ಶಿವಕುಮಾರ್, ಮೈಸೂರಿನ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದರು. “ನಾವಾಗಿಯೇ ಯಾರನ್ನೂ ಕರೆತರುವ ಪ್ರಯತ್ನ ಮಾಡುತ್ತಿಲ್ಲ. …
Read More »ಅನ್ನಭಾಗ್ಯ ಯೋಜನೆ .. ಡಿಬಿಟಿ ಮೂಲಕ ಆಗಸ್ಟ್ ತಿಂಗಳ ಹಣ ಪಾವತಿ
ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಆಗಸ್ಟ್ ತಿಂಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಪಡಿತರದಾರರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ರಾಜ್ಯ ಸರ್ಕಾರವು ಜುಲೈ ತಿಂಗಳಿನಿಂದ ರಾಜ್ಯದ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಹೊಂದಿರುವ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಿಸುವುದಾಗಿ ಘೋಷಿಸಿತ್ತು. ಈ ಅಕ್ಕಿಯ ಅಗತ್ಯವನ್ನು FCI (ಫುಡ್ ಕಾರ್ಪೋರೇಷನ್)ನಿಂದ ದೇಶೀಯ ಮುಕ್ತ ಮಾರುಕಟ್ಟೆಯಲ್ಲಿ (OMSS(D) ಅಕ್ಕಿಯನ್ನು …
Read More »KSRTC: ಕೆಂಪು ಬಣ್ಣದ ಬಸ್ಗಳಿಗೆ ಹೈಟೆಕ್ ಸ್ಪರ್ಶ
ಬೆಂಗಳೂರು : ಇನ್ಮುಂದೆ ಕೆಎಸ್ಆರ್ಟಿಸಿಯ ಕೆಂಪು ಬಣ್ಣದ ಬಸ್ಗಳಲ್ಲಿ ಪ್ರಯಾಸದ ಪ್ರಯಾಣಕ್ಕೆ ಗುಡ್ ಬೈ ಹೇಳಿ ಆರಾಮದಾಯಕ ಅನುಭವದ ಪ್ರಯಾಣ ಮಾಡಬಹುದಾಗಿದೆ. ಪುಷ್ ಬ್ಯಾಕ್ ಹೊರತುಪಡಿಸಿ ಬಹುತೇಕ ರಾಜಹಂಸ ಬಸ್ ಪ್ರಯಾಣದ ಅನುಭವ ನೀಡುವ ವ್ಯವಸ್ಥೆಯನ್ನು ಸಾಮಾನ್ಯ ಸಾರಿಗೆಯಲ್ಲಿ ನೀಡಲು ಸಂಸ್ಥೆ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಪ್ರೋಟೋಟೈಪ್ ಬಸ್ಗಳು ಅಕ್ಟೋಬರ್ ವೇಳೆಗೆ ರಸ್ತೆಗಿಳಿಯಲಿವೆ. ಹತ್ತು ಹಲವು ಪ್ರಯೋಗಗಳ ಮೂಲಕ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ …
Read More »ಕಾಂಗ್ರೆಸ್ ಆಹ್ವಾನ ನಿಜವೆಂದು ಸೋಮಶೇಖರ್ ಒಪ್ಪಿಕೊಂಡಿದ್ದಾರೆ, ಪಕ್ಷ ಬಿಡಲ್ಲ ಅಂತಲೂ ಸ್ಪಷ್ಟಪಡಿಸಿದ್ದಾರೆ: ಆರ್ ಅಶೋಕ್
ಬೆಂಗಳೂರು: ಕಾಂಗ್ರೆಸ್ ಸೇರುವಂತೆ ಹಾಗು ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿದ್ದು ನಿಜ ಎನ್ನುವುದನ್ನು ಶಾಸಕ ಎಸ್ ಟಿ ಸೋಮಶೇಖರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ಗೆ ಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಅವರಿಗೆ ಹೇಳಿದ್ದೇನೆ, ಅವರೂ ಕೂಡ ಪಕ್ಷ ತೊರೆಯುವುದಿಲ್ಲ ಎಂದೇ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ತಿಳಿಸಿದ್ದಾರೆ. ಆಪರೇಷನ್ ಹಸ್ತ ಪ್ರಯತ್ನಗಳ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲು ಆಗಮಿಸುವಂತೆ ಮಾಜಿ ಡಿಸಿಎಂ ಆರ್ ಅಶೋಕ್ ಸೂಚನೆಯಂತೆ …
Read More »ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ನವದೆಹಲಿ: 69ನೇ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು (ಗುರುವಾರ) ಪ್ರಕಟಿಸಿದೆ. ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ಅವರ ‘ಚಾರ್ಲಿ 777’ ಸಿನಿಮಾ ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘ಆರ್ಆರ್ಆರ್’ ಸಿನಿಮಾಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ, ನೃತ್ಯ ನಿರ್ದೇಶನ ಪ್ರಶಸ್ತಿಗಳ ಗೌರವ ಸಿಕ್ಕಿದೆ. ‘ಉಪ್ಪೇನಾ’ ಸಿನಿಮಾವನ್ನು ಅತ್ಯುತ್ತಮ ತೆಲುಗು ಚಲನಚಿತ್ರವಾಗಿ ಘೋಷಿಸಲಾಗಿದೆ. ‘ಹೋಮ್’ ಅತ್ಯುತ್ತಮ ಮಲಯಾಳಂ ಚಿತ್ರ. ‘ಸರ್ದಾರ್ ಉಧಮ್’ ಅತ್ಯುತ್ತಮ ಹಿಂದಿ …
Read More »‘ಪ್ರತಿ ತಿಂಗಳು 35 ಸಾವಿರ ಲಂಚ ಕೊಡಬೇಕಾ?”..ಅಬಕಾರಿ ಇಲಾಖೆಗೆ ಪ್ರಶ್ನೆ ಮಾಡಿ ಬೆವರಿಳಿಸಿದ ಸಂಸದ ಪ್ರಜ್ವಲ್ ರೇವಣ್ಣ
ಹಾಸನ: ಪ್ರತಿ ತಿಂಗಳು ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆಗೆ “35 ಸಾವಿರ ಲಂಚ” ಕೊಡಬೇಕಾ ಎಂದು ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಗಂಭೀರವಾಗಿ ಆರೋಪ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಅಕ್ರಮ ಮದ್ಯ ಮತ್ತು ಲಂಚ ಪಡೆಯುತ್ತಿರುವ ಬಗ್ಗೆ ಗಂಭೀರವಾಗಿ ಅಬಕಾರಿ ಇಲಾಖೆ ಮೇಲೆ ಆರೋಪ ಮಾಡಿದ ಪ್ರಜ್ವಲ್ ರೇವಣ್ಣ ‘ಪ್ರತಿ ತಿಂಗಳು 35 ಸಾವಿರ ಲಂಚ ತಗೋತಿರಲ್ಲ, ಅದನ್ನು …
Read More »
Laxmi News 24×7