ಕೋಲಾರ: ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್ನ 22ನೇ ಶಾಖೆ ಉದ್ಘಾಟನೆಗೊಂಡಿದೆ. ಸಂಸ್ಥೆಯ ಒಟ್ಟಾರೆ 109 ನೇ ಶಾಖೆ ಇದಾಗಿದೆ. ಕಂಪನಿ ಎಂಡಿ ಶೈಲಜಾ ಕಿರಣ್ ಅವರು ಈ ಶಾಖೆಯನ್ನು ವರ್ಚುಯಲ್ ಆಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು. ನೂತನ ಶಾಖೆ ಉದ್ಘಾಟನೆ ಬಳಿಕ ಮಾತನಾಡಿದ ಮಾರ್ಗದರ್ಶಿ ಚಿಟ್ಸ್ ನಿರ್ದೇಶಕರಾದ ಪಿ ಲಕ್ಷ್ಮಣ್ರಾವ್, ಕೋಲಾರ ಜನತೆಯ ಸಹಕಾರ ಅಮೂಲ್ಯವಾದದ್ದು ಎಂದು ಹೇಳಿದರು. ಜನತೆ ಮಾರ್ಗದರ್ಶಿ ಚಿಟ್ಸ್ ಕಂಪನಿಯಿಂದ ಸೌಲಭ್ಯಗಳನ್ನು …
Read More »ಜಿಲ್ಲಾ ಆರೋಗ್ಯ ಅಧಿಕಾರಿಗಳ ಒಂದೇ ಹುದ್ದೆಗಾಗಿ ಪರಸ್ಪರ ಹಗ್ಗಜಗ್ಗಾಟ
ಬಾಗಲಕೋಟೆ: ಜಿಲ್ಲಾ ಮಟ್ಟದ ಅಧಿಕಾರಿಗಳಿಬ್ಬರು ಒಂದೇ ಹುದ್ದೆಗಾಗಿ ಪರಸ್ಪರ ಹಗ್ಗಜಗ್ಗಾಟ ನಡೆಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ ಅವರು ತಮ್ಮ ವರ್ಗಾವಣೆ ಆದೇಶ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದಿದ್ದರು. ಈ ಮಧ್ಯೆ ಡಾ.ಜಯಶ್ರೀ ಎಮ್ಮಿ ರಜೆಯಲ್ಲಿ ತೆರಳಿದ್ದಾಗ ಸರ್ಕಾರದ ಆದೇಶ ತಂದು ಡಾ.ರಾಜಕುಮಾರ್ ಯರಗಲ್ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಒಂದೇ ಹುದ್ದೆಗೆ ಒಬ್ಬರ ನಡುವೆ ಕಿತ್ತಾಟ ನಡೆಯಿತು. ”ವಿಜಯಪುರ ಜಿಲ್ಲೆಯಲ್ಲಿ …
Read More »ಗುಜರಾತ್ನಲ್ಲಿ ಹಾವು ಕಡಿತ: ಉತ್ತರ ಪ್ರದೇಶದಲ್ಲಿ ಚಿಕಿತ್ಸೆ… 1300ಕಿ.ಮೀ ಕ್ರಮಿಸಿ ಬದುಕುಳಿದ ಧೀರ
ಕಾನ್ಪುರ(ಉತ್ತರ ಪ್ರದೇಶ): ಗುಜರಾತಿನಲ್ಲಿ ಹಾವು ಕಡಿತಕ್ಕೊಳಗಾದ ಯುವಕನೊಬ್ಬ ಚಿಕಿತ್ಸೆಗಾಗಿ ಸುಮಾರು 1,300 ಕಿ.ಮೀ ಕ್ರಮಿಸಿ ಉತ್ತರ ಪ್ರದೇಶದ ಕಾನ್ಪುರ ತಲುಪಿ ಬದುಕುಳಿದಿರುವ ಅಚ್ಚರಿಯ ಘಟನೆ ನಡೆದಿದೆ. ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮ ಫತೇಪುರದ ಸುನಿಲ್ ಕುಮಾರ್ (20) ನೇ ಹೀಗೆ ಬದುಕುಳಿದ ಯುವಕನಾಗಿದ್ದಾನೆ. ಈತ ಗುಜರಾತ್ನ ರಾಜ್ಕೋಟ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 15ರಂದು ಆತನಿಗೆ ಹಾವು ಕಚ್ಚಿದೆ. ತಕ್ಷಣವೇ ಅವನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ …
Read More »ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಪ್ರಯಾಣಿಕರ ಸಾವು: 6 ಮಂದಿ ಅಸ್ವಸ್ಥ
ಆಗ್ರಾ(ಉತ್ತರ ಪ್ರದೇಶ): ಭಾನುವಾರ ವಾರಣಸಿಯಿಂದ ಮಥುರಾಗೆ ಪ್ರಯಾಣಿಸುತ್ತಿದ್ದ ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್ (13237) ರೈಲಿನಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, ಆರು ಮಂದಿ ಅಸ್ವಸ್ಥರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಪ್ರಯಾಣಿಕರು ಹವಾನಿಯಂತ್ರಿತವಲ್ಲದ ಸ್ಲೀಪರ್ ಕೋಚ್ ಸಂಖ್ಯೆ ಎಸ್-2ರಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಆರೋಗ್ಯ ಹದಗೆಟ್ಟಿರುವ ಕುರಿತು ಆಗ್ರಾದ ರೈಲ್ವೆ ಅಧಿಕಾರಿಗಳಿಗೆ ತುರ್ತು ಕರೆ ಬಂದಿದೆ. ಭಾನುವಾರ ಸಂಜೆ ರೈಲು ಆಗ್ರಾ ಕ್ಯಾಂಟ್ ನಿಲ್ದಾಣಕ್ಕೆ ಆಗಮಿಸಿದ ಬಳಿಕ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆದರೆ, …
Read More »ಬೆಳಗಾವಿ ಬಿಜೆಪಿ ಲೋಕಸಭಾ ಟಿಕೆಟ್ ಯಾರಿಗೆ?
ಲೋಕಸಭಾ ಟಿಕೆಟ್ ಗಾಗಿ ಬೆಳೆಗಾವಿ ಬಿಜೆಪಿಯಲ್ಲಿ ಪೈಪೋಟಿ ಹೇಗಿದೆ ಬನ್ನಿ ನೋಡಣ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ ಈಗಾಗಲೇ ಮಾಜಿ ಶಾಸಕರಾದ ಸಂಜಯ ಪಾಟೀಲ್, ಅನಿಲ್ ಬೆನಕೆ, ಮಾಜಿ ಎಂಎಲಸಿ ಮಹಾಂತೇಶ ಕವಟಗಿಮಠ, ಬಿಎಸವೈ ಆಪ್ತ ಶಂಕರಗೌಡ ಪಾಟೀಲ್ ಲಾಬಿ ನಡೆಸಿದ್ದಾರೆ ಇನ್ನೂ ಗೋಕಾಕ, ಅರಬಾವಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ ತಾಲ್ಲೂಕಿನಲ್ಲಿ ಲಿಂಗಾಯತ ಮತಗಳೇ ಪ್ರಾಬಲ್ಯ ಇರುವುದರಿಂದ ರಾಜ್ಯಸಭಾ …
Read More »ಎರಡು ತಿಂಗಳಿನಿಂದ ಆಭರಣದ ಸುಪರ್ದಿಗಾಗಿ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಕೊನೆಗೂ ಗೋಕಾಕ ತಾಲೂಕಾಡಳಿತದಿಂದ ಅಂತ್ಯ
ಎರಡು ತಿಂಗಳಿನಿಂದ ಆಭರಣದ ಸುಪರ್ದಿಗಾಗಿ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಕೊನೆಗೂ ಗೋಕಾಕ ತಾಲೂಕಾಡಳಿತದಿಂದ ಅಂತ್ಯ ಕಾಣಿತು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮುಜರಾಯಿ ಇಲಾಖೆಯ ಆಧಿನದಲ್ಲಿರುವ ಕೊಣ್ಣೂರಿನ ಶ್ರೀಲಕ್ಷ್ಮೀ ದೇವಸ್ಥಾನದ ಅರ್ಚಕರ ಕುಟುಂಬ ಮತ್ತು ಕಮಿಟಿಯವರ ನಡುವೆ ದೇವಸ್ಥಾನದ ಆಭರಣಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ನಡೆದಿದ್ದ ಜಗಳವನ್ನು ಸಂಧಾನ ಮಾಡಲು ಹಲವಾರು ಬಾರಿ ಗೋಕಾಕ ತಹಸಿಲ್ದಾರ ಕೆ, ಮಂಜುನಾಥ ಮತ್ತು ಪೋಲಿಸ್ ಅಧಿಕಾರಿಗಳು ಪ್ರಯತ್ನ ಪಟ್ಟರು ಸಹ ಹೊಂದಾಣಿಕೆ ಆಗದೆ …
Read More »ಪಿಎಂ ಮಿತ್ರ ಟೆಕ್ಸ್ ಟೈಲ್ ಪಾರ್ಕ್.. ಒಂದು ತಿಂಗಳಲ್ಲಿ ಜಮೀನು ಹಸ್ತಾಂತರಕ್ಕೆ ಸಚಿವ ಶಿವಾನಂದ ಪಾಟೀಲ ಸೂಚನೆ
ಕಲಬುರಗಿ: ಜಿಲ್ಲೆಯ ಜೇವರ್ಗಿ ರಸ್ತೆಯ ಫಿರೋಜಾಬಾದ್ ಬಳಿ ಕೇಂದ್ರ ಸರ್ಕಾರದ ಪಿಎಂ ಮಿತ್ರ ಯೋಜನೆಯಡಿ ಸ್ಥಾಪಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್ಟೈಲ್ ಪಾರ್ಕ್‌ಗೆ ಆರಂಭಿಕವಾಗಿ 1,000 ಎಕರೆ ಜಮೀನನ್ನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ, ಆರ್.ಟಿ.ಸಿಯಲ್ಲಿ ಹೆಸರು ಸೇರಿಸಬೇಕೆಂದು ರಾಜ್ಯದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟೆ ಸಚಿವ ಶಿವಾನಂದ ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ …
Read More »ಯೋಧರ ಸೇವೆ ಸದಾ ಸ್ಮರಣೀಯ..’: ಲಡಾಖ್ ದುರಂತಕ್ಕೆ ಮೋದಿ, ಖರ್ಗೆ, ರಾಹುಲ್ ಸೇರಿದಂತೆ ಗಣ್ಯರ ಸಂತಾಪ
ನವದೆಹಲಿ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಜಿಲ್ಲೆಯ ಕಯಾರಿ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಸೇನಾ ಟ್ರಕ್ ಆಳವಾದ ಕಂದಕಕ್ಕೆ ಉರುಳಿಬಿದ್ದು ಜೂನಿಯರ್ ಕಮಿಷನ್ಡ್ ಆಫೀಸರ್ ಜೆಸಿಒ (Junior Commissioned Officer-JCO) ಸೇರಿದಂತೆ ಒಂಬತ್ತು ಮಂದಿ ಸೈನಿಕರು ಮೃತಪಟ್ಟ ದುರ್ಘಟನೆ ನಿನ್ನೆ ನಡೆದಿದೆ. ಯೋಧರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿ ಕಾರ್ಯಾಲಯವು ಸಾಮಾಜಿಕ …
Read More »ರಾಜೀವ್ ಗಾಂಧಿ 79ನೇ ಜನ್ಮದಿನ: ‘ವೀರ ಭೂಮಿ’ಗೆ ಸೋನಿಯಾ, ಪ್ರಿಯಾಂಕಾ, ಖರ್ಗೆ ಪುಷ್ಪ ನಮನ
ನವದೆಹಲಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 79ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಇಂದು ಬೆಳಗ್ಗೆ ದೆಹಲಿಯ ‘ವೀರ ಭೂಮಿ’ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮಗಳು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪತಿ ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಾಜಿ ಪ್ರಧಾನಿಯ ಸಮಾಧಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ವೀರಭೂಮಿಯ ಹೊರಗೆ …
Read More »ಚಂದ್ರಯಾನ-3: ಲ್ಯಾಂಡರ್‌ನ ವೇಗ ತಗ್ಗಿಸುವ ಅಂತಿಮ ಹಂತದ ಪ್ರಕ್ರಿಯೆ ಯಶಸ್ವಿ
Chandrayaan-3: ‘ಚಂದ್ರಯಾನ-3’ ಯೋಜನೆಯ ಲ್ಯಾಂಡರ್ ಘಟಕವನ್ನು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ (South Pole) ಇಸ್ರೋ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ನಿಟ್ಟಿನಲ್ಲಿ ಡೀಬೂಸ್ಟ್ (ಲ್ಯಾಂಡರ್‌ನ ವೇಗ ತಗ್ಗಿಸುವುದು) ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸುತ್ತಿದೆ. ಬೆಂಗಳೂರು/ನವದೆಹಲಿ : ಚಂದ್ರಯಾನ-3 ಗಗನನೌಕೆಯು ಭೂಮಿಯ ಏಕೈಕ ಉಪಗ್ರಹ ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು …
Read More »