ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೇಸ್ಗಳ ಸಂಖ್ಯೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 6,806 ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 3,454 ಕೇಸ್ಗಳು ಬೆಂಗಳೂರಿನಲ್ಲೇ ಇವೆ. ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕ ಮೂಡಿಸಿದೆ. 2022ರಲ್ಲಿ ಇದೇ ವೇಳೆಗೆ ರಾಜ್ಯದಲ್ಲಿ 5,500 ಪ್ರಕರಣಗಳು ಪತ್ತೆಯಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ 1,058 ಪ್ರಕರಣಗಳು ವರದಿಯಾಗಿದ್ದವು. 2021ರ ಸೆಪ್ಟೆಂಬರ್ ಅಂತ್ಯಕ್ಕೆ ನಗರದಲ್ಲಿ 520 ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿ ಉಂಟಾಗುತ್ತಿರುವ ಹಮಾಮಾನ ಬದಲಾವಣೆಯಿಂದಾಗಿ …
Read More »ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ.. ಪಂದ್ಯ ಜಯಿಸಿದವರಿಗೆ ಸೂಪರ್ ಫೋರ್ನಲ್ಲಿ ಸ್ಥಾನ
ಲಾಹೋರ್(ಪಾಕಿಸ್ತಾನ): ಏಷ್ಯಾಕಪ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿ ಆಗುತ್ತಿದೆ. ಈ ಪಂದ್ಯದ ಫಲಿತಾಂಶದಿಂದ ಬಿ ಗುಂಪಿನಲ್ಲಿ ಯಾರು ಸೂಪರ್ ಫೋರ್ಗೆ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಹಿಂದಿನ ಪಂದ್ಯದ ತಂಡದಲ್ಲೇ ಮುಂದುವರೆದಿವೆ. ಏಷ್ಯಾಕಪ್ನ ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತುಅಫ್ಘಾನಿಸ್ತಾನ ಇದೆ. ಬಾಂಗ್ಲಾದೇಶ, ಶ್ರೀಲಂಕಾದ ವಿರುದ್ಧ ಸೋಲು …
Read More »ಬೆಳಗಾವಿಯ ರಿದ್ಧಿವಿಷನ್ ಕೇಬಲ್ ನಿರ್ದೇಶಕಿ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತೆ ನಿಶಾ ನಾಗೇಶ್ ಛಾಬ್ರಿಯಾ ನಿಧನ
ಬೆಳಗಾವಿಯ ರಿದ್ಧಿವಿಷನ್ ಕೇಬಲ್ ನಿರ್ದೇಶಕಿ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತೆ ನಿಶಾ ನಾಗೇಶ್ ಛಾಬ್ರಿಯಾ ಅವರು ಅನಾರೋಗ್ಯದಿಂದ ಇಂದು ಮುಂಬೈನಲ್ಲಿ ನಿಧನರಾದರು. ಅವರು ಮೆಟ್ರೋಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಎಂಡಿ, ಪತಿ ನಾಗೇಶ್ ಮಗ ಸುಮುಖ್, ಮಗಳು ರಿದ್ಧಿ, ಸೊಸೆ, ಅಳಿಯನನ್ನು ಅಗಲಿದ್ದಾರೆ. ನಿಶಾ ಛಾಬ್ರಿಯಾ ಅವರು ತಮ್ಮ ಪತಿ ನಾಗೇಶ್ ಛಾಬ್ರಿಯಾ ಅವರೊಂದಿಗೆ ಬೆಳಗಾವಿಯಲ್ಲಿ ರಿದ್ಧಿವಿಷನ್ ಎಂಬ ಮೊದಲ ಕೇಬಲ್ ಸೇವೆಯನ್ನು ಪ್ರಾರಂಭಿಸುವಲ್ಲಿ ಬಹಳ ತೊಡಗಿಸಿಕೊಂಡಿದ್ದರು. ನಿಶಾ ಮತ್ತು …
Read More »ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ.. ಕೆಎಲ್ ರಾಹುಲ್ಗೆ ಸ್ಥಾನ
ನವದೆಹಲಿ: 2023ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದೆ. 15 ಸದಸ್ಯರ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಏಷ್ಯಾ ಕಪ್ ತಂಡದ ಭಾಗವಾಗಿರುವ ಹೆಚ್ಚಿನ ಆಟಗಾರರಿಗೆ ಅವಕಾಶ ಸಿಕ್ಕಿದೆ. ರೋಹಿತ್ ಶರ್ಮಾ ಮುನ್ನಡೆಸಲಿರುವ ವಿಶ್ವಕಪ್ ತಂಡದಲ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಆರಂಭಿಕ ಆಟಗಾರ ಶುಭಮನ್ ಗಿಲ್, ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ …
Read More »ಎಂಟು ವರ್ಷದ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯ ಅತ್ಯಾಚಾರಕ್ಕೆ ಯತ್ನ
ಗಂಗಾವತಿ (ಕೊಪ್ಪಳ): ಎಂಟು ವರ್ಷದ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಅಬ್ದುಲ್ ರಜಾಕ್ ಎಂದು ಗುರುತಿಸಲಾಗಿದೆ. ಬಾಲಕಿಯ ತಂದೆ-ತಾಯಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆಕೆಗೆ ಬ್ಯಾಟ್, ಬಾಲ್ ಕೊಡುವುದಾಗಿ ಹೇಳಿ ಪುಸಲಾಯಿಸಿ, ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ತಾಯಿ ಮನೆಗೆ ಬಂದಾಗ ಬಾಲಕಿಯು ನಡೆದ …
Read More »ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಗಜಪಡೆಗೆ ಪೂಜೆ, ಅರಮನೆಗೆ ಅದ್ಧೂರಿ ಸ್ವಾಗತ…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಅರಣ್ಯಾಧಿಕಾರಿಗಳು ಮಂಗಳವಾರ ಗಜಪಡೆಗೆ ಪೂಜೆ ನೆರವೇರಿಸಿದರು. ಇಲ್ಲಿನ ಅರಣ್ಯ ಭವನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಗಜಪೂಜೆ ನಂತರ ನೈವೇದ್ಯ ಅರ್ಪಣೆ ಮಾಡಲಾಯಿತು. ಅರಣ್ಯಾಧಿಕಾರಿಗಳು ಗಜಪಡೆಗೆ ಪುಷ್ಪಾರ್ಚನೆ ಮಾಡಿದರು. ವಾದ್ಯಗೋಷ್ಠಿ ಮೂಲಕ ಅರಮನೆಯತ್ತ ಗಜಪಡೆ ಕಾಲ್ನಡಿಗೆಯಲ್ಲಿ ತೆರಳಿತು. ಕ್ಯಾಪ್ಟನ್ ಅಭಿಮನ್ಯು ಹಾಗೂ ಗಜಪಡೆಯು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆಗಮಿಸಿದ ವೇಳೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಜನಪದ ಕಲಾ ತಂಡಗಳೊಂದಿಗೆ ನಗರದ ಅಶೋಕಪುರಂನ …
Read More »ಕಲಬುರಗಿಯಲ್ಲಿ ಭಾರಿ ಮಳೆ
ಕಲಬುರಗಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೊಂದೆಡೆ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಿಡಿಲು ಬಡಿದು ಒಂದು ಪ್ರಾಣ ಹಾನಿ ಸಂಭವಿಸಿದ್ದು, ಕೆಲವು ಜಾನುವಾರುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದು ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೆಪ್ಟೆಂಬರ್ ಮೊದಲ ವಾರದಲ್ಲೇ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಇಂದು ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. …
Read More »ಎನ್ಎಸ್ಇಯಲ್ಲಿ ಕನ್ನಡ ಮಾಧ್ಯಮ ಸೇರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು : ಭಾರತೀಯ ಭೌತಶಾಸ್ತ್ರ ಉಪನ್ಯಾಸಕರ ಒಕ್ಕೂಟ ನಡೆಸುತ್ತಿರುವ ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ (NSE)ಯಲ್ಲಿ ಕನ್ನಡ ಮಾಧ್ಯಮ ಸೇರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಭಾರತೀಯ ಭೌತಶಾಸ್ತ್ರ ಉಪನ್ಯಾಸಕರ ಒಕ್ಕೂಟ ನಡೆಸುವ ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ (NSE)ಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುವ ಆಯ್ಕೆ ನೀಡದಿರುವುದರಿಂದ ನಮಗೆ ನೋವಾಗಿದೆ. NSE ಭೌತಶಾಸ್ತ್ರ, ಕೆಮಿಸ್ಟ್ರಿ, ಜೀವಶಾಸ್ತ್ರ ಮತ್ತು ಖಗೋಳಶಾಸ್ತ್ರ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ …
Read More »ವಿಕ್ರಮ್ ಲ್ಯಾಂಡರ್‌ನ ಯಶಸ್ವಿ ಹಾಪ್ ಪ್ರಯೋಗ ಕೈಗೊಂಡ ಇಸ್ರೋ: ಭವಿಷ್ಯದ ಬಾಹ್ಯಾಕಾಶ ಅನ್ವೇಷಣೆಗಳಿಗೆ ವೇದಿಕೆ ಸಿದ್ಧ
ಚಂದ್ರನ ದಕ್ಷಿಣ ಧ್ರುವದಲ್ಲಿರುವ ವಿಕ್ರಂ ಲ್ಯಾಂಡರ್ನ್ನು ಶಿವಶಕ್ತಿ ಪಾಯಿಂಟ್ನಿಂದ 40 ಸೆಂ.ಮೀ ಎತ್ತರಕ್ಕೆ ಹಾರಿಸಿ ಮತ್ತೆ ನಂತರ 30ರಿಂದ 40 ಸೆಂ.ಮೀ ಪಕ್ಕಕ್ಕೆ ಲ್ಯಾಂಡ್ ಮಾಡಿಸಲಾಗಿದ್ದು, ಇಸ್ರೋದ ಈ ಸಾಧನೆ ಕುರಿತಂತೆ ಬಾಹ್ಯಾಕಾಶ ಲೇಖಕರು ಹಾಗೂ ರಕ್ಷಣಾ ಮತ್ತು ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರು ವಿವರಿಸಿದ್ದಾರೆ. ಇಸ್ರೋದ ವಿಕ್ರಮ್ ಲ್ಯಾಂಡರ್ ತನ್ನ ಸಾಮರ್ಥ್ಯದ ವಿಚಾರದಲ್ಲಿ ಎಲ್ಲ ನಿರೀಕ್ಷೆಗಳನ್ನು ಮೀರಿ ಸಾಧನೆ ನಿರ್ಮಿಸಿದೆ ಎಂದು ಇಸ್ರೋ ಟ್ವೀಟ್ ಮೂಲಕ …
Read More »ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ ರೋಜರ್ ಬಿನ್ನಿ, ರಾಜೀವ್ ಶುಕ್ಲಾ
ಅಮೃತಸರ (ಪಂಜಾಬ್): ಏಷ್ಯಾಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿದೆ. ಪಾಕಿಸ್ತಾನದ ಲಾಹೋರ್ನಲ್ಲಿ ಸಪ್ಟೆಂಬರ್ 5 ಮತ್ತು 6ರಂದು ನಡೆಯಲಿರುವ ಪಂದ್ಯದಲ್ಲಿ ಬಿಸಿಸಿಐನ ಇಬ್ಬರು ಅಧಿಕಾರಿಗಳು ಇರಲಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದಾರೆ.. ನಾಳೆ (ಮಂಗಳವಾರ) ನಡೆಯುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಗಡಾಫಿ ಕ್ರೀಡಾಂಗಣದಲ್ಲಿ …
Read More »
Laxmi News 24×7