Breaking News

ರಾಷ್ಟ್ರೀಯ

4ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ರೆಡಿಯಾಗುತ್ತಿರುವ ಕ್ಯಾಪ್ಟನ್​ ಅಭಿಮನ್ಯು: ವಿಡಿಯೋ

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿದೆ. ನಾಲ್ಕನೇ ಬಾರಿಗೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಸಿದ್ದವಾಗುತ್ತಿರುವ ಕ್ಯಾಪ್ಟನ್​ ಅಭಿಮನ್ಯು ಆನೆಯನ್ನು ವಿಶೇಷ ಆತಿಥ್ಯದೊಂದಿಗೆ ತಯಾರು ಮಾಡಲಾಗುತ್ತಿದೆ. ಈಗಾಗಲೇ 3 ಬಾರಿ ಅಂಬಾರಿ ಹೊತ್ತಿರುವ ‘ಆಪರೇಷನ್ ಕಿಂಗ್’ ಅಭಿಮನ್ಯು ಸೈ ಎನ್ನಿಸಿಕೊಂಡಿದ್ದಾನೆ. ಈ ಬಾರಿಯೂ ಗಣಪಡೆಯನ್ನು ಮುನ್ನಡೆಸುತ್ತಿದ್ದು, ಪ್ರತಿನಿತ್ಯ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಸೆಪ್ಟೆಂಬರ್ 5ರಂದು ಮೊದಲ ಹಂತದ ಗಜಪಡೆಯ ನೇತೃತ್ವ ವಹಿಸಿದ್ದ ಅಭಿಮನ್ಯು ಅರಮನೆ ಆವರಣ ಪ್ರವೇಶ ಮಾಡಿತ್ತು. …

Read More »

ಬರಿಗಾಲಲ್ಲಿ ಬಂದು ಮುಂಬೈ ಸಿದ್ಧಿ ನಿನಾಯಕನ ದರ್ಶನ ಪಡೆದ ರಾಮ್ ಚರಣ್

ನಟ ರಾಮ್ ಚರಣ್ ತೇಜ (Ram Charan Teja) ದೊಡ್ಡ ಸೂಪರ್ ಸ್ಟಾರ್ ಆಗಿರುವ ಜೊತೆಗೆ ಮಹಾನ್ ದೈವ ಭಕ್ತ. ದೇವರ ಪ್ರತಿಯಾಗಿ ಅಪಾರ ಭಕ್ತಿ, ನಂಬಿಕೆ ಮತ್ತು ಶ್ರದ್ಧೆ ಹೊಂದಿದ್ದಾರೆ. ವ್ರತ ಆಚರಣೆ ಇತ್ಯಾದಿಗಳಲ್ಲಿ ಅಪಾರವಾದ ನಂಬಿಕೆ ಹೊಂದಿದ್ದಾರೆ. ಅದರಲ್ಲಿಯೂ ಶಬರಿಮಲೆ ಅಯ್ಯಪ್ಪನ ಕಟ್ಟಾ ಭಕ್ತರಾಗಿರುವ ರಾಮ್ ಚರಣ್ ತೇಜ ಹಲವು ದಿನಗಳ ಕಾಲ ಮಾಲಧಾರಿಯಾಗಿದ್ದ ವ್ರತ ಆಚರಿಸಿ ಮಲೆ ಏರಿಹಯೋಗಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಮಾಲಧಾರಣೆ ಮಾಡಿದ್ದ …

Read More »

ಉಜ್ವಲ ಫಲಾನುಭವಿಗಳಿಗೆ ಕೇಂದ್ರದಿಂದ ಖುಷಿ ಸುದ್ದಿ: ಎಲ್​ಪಿಜಿ ಸಿಲಿಂಡರ್​ ಸಬ್ಸಿಡಿ 300 ರೂ.ಗೆ ಹೆಚ್ಚಳ

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುವ ಎಲ್​ಪಿಜಿ ಸಿಲಿಂಡರ್​ಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಪ್ರಸ್ತುತ 200 ರೂಪಾಯಿ ಇದ್ದ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಿಸಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್​ ಈ ಮಾಹಿತಿ ನೀಡಿದರು. 14.2 ಕೆಜಿಯ ಸಿಲಿಂಡರ್​ ಬೆಲೆ ಮಾರುಕಟ್ಟೆಯಲ್ಲಿ 903 ರೂ. ಇದೆ. ಸದ್ಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿಯೊಂದಿಗೆ 703 …

Read More »

ಮೊಮ್ಮಗಳ ಸಿಟಿ ಸ್ಕ್ಯಾನ್​ ಮಾಡಿಸಲು ಆಸ್ಪತ್ರೆಗೆ ರಿವಾಲ್ವರ್ ತಂದ ಬಿಹಾರ ಶಾಸಕ

 ಸಂಯುಕ್ತ ಜನತಾದಳ (ಜೆಡಿ​ಯು) ಶಾಸಕರೊಬ್ಬರು ತಮ್ಮ ಮೊಮ್ಮಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಆತ್ಮರಕ್ಷಣೆಗಾಗಿ ನೀಡಿರುವ ರಿವಾಲ್ವರ್ ಅನ್ನು ಸಾರ್ವಜನಿಕವಾಗಿ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ದು, ಆತಂಕದ ಜೊತೆಗೆ ಅಚ್ಚರಿಗೂ ಕಾರಣವಾಗಿದೆ.   ಜೆಡಿ​ಯು ಶಾಸಕ ಗೋಪಾಲ್ ಮಂಡಲ್ ಎಂಬವರು ಮಂಗಳವಾರ ಸಂಜೆ ಭಾಗಲ್‌ಪುರದ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಮೊಮ್ಮಗಳನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಭದ್ರತಾ ಸಿಬ್ಬಂದಿಯೂ ಜೊತೆಗಿದ್ದರು. ಆದರೂ, ಶಾಸಕರು ಕೈಯಲ್ಲಿ …

Read More »

ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಸಚಿನ್ ತೆಂಡೂಲ್ಕರ್‌ ‘ಜಾಗತಿಕ ರಾಯಭಾರಿ’

ನವದೆಹಲಿ: ಭಾರತ ಆತಿಥ್ಯದ 2023ರ ವಿಶ್ವಕಪ್​ ಕ್ರಿಕೆಟ್​ಗೆ ಸಚಿನ್​ ತೆಂಡೂಲ್ಕರ್​ ಅವರನ್ನು ಜಾಗತಿಕ ರಾಯಭಾರಿಯಾಗಿ ಹೆಸರಿಸಲಾಗಿದೆ. ಕ್ರಿಕೆಟ್​ ದೇವರೆಂದೇ ಕರೆಯಲ್ಪಡುವ ಸಚಿನ್​ ಅವರಿಗೆ ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಶೇಷ ಗೌರವ ನೀಡಿದೆ. ಈ ಹಿಂದೆ ಸಚಿನ್, 2013 ಮತ್ತು 2015 ವಿಶ್ವಕಪ್​ನ ಅಂಬಾಸಿಡರ್​ ಆಗಿ​ ನೇಮಕವಾಗಿದ್ದರು. ಉದ್ಘಾಟನಾ ಪಂದ್ಯದ ವೇಳೆ ಸಚಿನ್​ ವಿಶ್ವಕಪ್​ ಟ್ರೋಫಿಯನ್ನು ಮೈದಾನಕ್ಕೆ ತರಲಿದ್ದಾರೆ. ಹಾಗೆಯೇ ವಿಶ್ವಕಪ್​ಗೆ ಚಾಲನೆಯನ್ನೂ ನೀಡಲಿದ್ದಾರೆ.       …

Read More »

ಬಿಜೆಪಿ ಸರಕಾರ ಸಾವಿರಾರು ರೌಡಿ ಶೀಟರ್‌ಗಳನ್ನು ಬೀದಿಗೆ ಬಿಟ್ಟಿದೆ: ಡಿ.ಕೆ.ಶಿ.

ಬಿಜೆಪಿ ಸರಕಾರ ಕೋಮು ಘಟನೆಗೆ ಸಂಬಧಪಟ್ಟ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟಿದೆ. ಜತೆಗೆ ಸಾವಿರಾರು ರೌಡಿ ಶೀಟರ್‌ಗಳನ್ನು ಬೀದಿಗೆ ಬಿಟ್ಟಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳು, ಗಲಭೆ ಪ್ರಕರಣ ಹಿಂಪಡೆಯುವಂತೆ ನೀವು ಪತ್ರ ಬರೆದಿದ್ದೀರಾ ಎನ್ನುವುದನ್ನು ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ ಎಂದು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂಪಡೆಯಲಾದ ಕೋಮು ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು ಬಿಜೆಪಿಯವರಿಗೆ ತಮ್ಮ ಮನೆ …

Read More »

ಹಾಲಿ 107 ಶಾಸಕ, ಸಂಸದರ ಮೇಲಿದೆ ದ್ವೇಷ ಭಾಷಣ ಕೇಸ್​; ಇದರಲ್ಲಿ ಬಿಜೆಪಿ ಜನಪ್ರತಿನಿಧಿಗಳೇ ಹೆಚ್ಚು-ಎಡಿಆರ್​ ವರದಿ

ನವದೆಹಲಿ: ಕಳೆದ ಕಳೆದ 5 ವರ್ಷಗಳಲ್ಲಿ ವಿವಿಧ ಚುನಾವಣೆಯಲ್ಲಿ ಸ್ಪರ್ಧಿಸಿದ 480 ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣದ ಕೇಸ್​ ಹಾಕಲಾಗಿದೆ. ಅದರಲ್ಲಿ ಹಾಲಿ ಇರುವ 107 ಶಾಸಕ, ಸಂಸದರ ಮೇಲೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಪ್ರಚೋದನಕಾರಿ, ದ್ವೇಷ ಭಾಷಣ ಮಾಡಿದ ಪ್ರಕರಣ ಇದೆ. ಜೊತೆಗೆ ಇದರಲ್ಲಿ ಬಿಜೆಪಿ ಜನಪ್ರತಿನಿಧಿಗಳೇ ಹೆಚ್ಚು ಎಂಬುದು ಗಮನಾರ್ಹ ಅಂಶವಾಗಿದೆ. ಈ ಬಗ್ಗೆ ದೆಹಲಿ ಮೂಲದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ನ್ಯಾಷನಲ್​ ಎಲೆಕ್ಷನ್​ ವಾಚ್​ …

Read More »

ಸಾಂಬ್ರಾ ವಿಮಾನ ನಿಲ್ದಾಣದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚುವರಿ ಜಮೀನಿನ ಬೇಡಿಕೆ ಇಟ್ಟ ಹಿನ್ನೆಲೆ ಮಂಗಳವಾರ ಸ್ಥಳ ಪರಿಶೀಲನೆ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ನನ್ನ ಸಹಕಾರವಿದೆ. ಆದರೆ ಸುತ್ತಲಿನ ಹಳ್ಳಿಗಳಿಗೆ ಮತ್ತು ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚುವರಿ ಜಮೀನಿನ ಬೇಡಿಕೆ ಇಟ್ಟ ಹಿನ್ನೆಲೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ನಡೆದ ಉನ್ನತಾಧಿಕಾರ ಮಟ್ಟದ ಸಭೆಯಲ್ಲಿ …

Read More »

ಕುರುಬ ಸಮುದಾಯಕ್ಕೆ 5 ಸಾವಿರ ಕೋಟಿ ಅನುದಾನದ ಗ್ಯಾರಂಟಿ ಕೊಡಿ: ಬಂಡೆಪ್ಪ ಕಾಶಂಪುರ

ಬೆಳಗಾವಿ, ಅ.3: ಕುರುಬ ಸಮುದಾಯಕ್ಕೆ ಐದು ಸಾವಿರ ಕೋಟಿ ಕುರಿಗಾರರಿಗೆ ಅನುದಾನದ ಗ್ಯಾರಂಟಿ ಕೊಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ (Bandeppa Kashempur) ಅವರು ಸರ್ಕಾರದ ಮುಂದೆ ಬೇಡಿಕೆ ಮುಂದಿಟ್ಟಿದ್ದಾರೆ. ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ವತಿಯಿಂದ ನಡೆದ ಕುರುಬ ಸಮುದಾಯದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಎರಡು ವರ್ಷದಲ್ಲಿ ಐದರಿಂದ ಹತ್ತು ಪಟ್ಟು ಸರ್ಕಾರಕ್ಕೆ ಕೊಡುವ ಶಕ್ತಿ ನಮ್ಮ ಸಮಾಜಕ್ಕಿದೆ ಎಂದರು. ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಕೊಟ್ಟಿದ್ದು ಸ್ವಾಗತ. ಈ ವೇಳೆ ಕುರುಬ …

Read More »

ಕನ್ನಡದ ಬಿಗ್​ ಬಾಸ್​ ಸೀಸನ್​ 10ಕ್ಕೆ ‘ಚಾರ್ಲಿ’ ಶ್ವಾನ ಸೇರಿದಂತೆ 17 ಸ್ಪರ್ಧಿಗಳು ಎಂಟ್ರಿಯಾಗಲಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಬಿಗ್​ ಬಾಸ್’​ ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈವರೆಗೆ ಒಂಬತ್ತು ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ ಬಾಸ್​ ಇದೀಗ ಮತ್ತೆ ಬಂದಿದೆ. ಬಿಗ್​ ಬಾಸ್​ 10ನೇ ಸೀಸನ್​ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಈ ಹಿಂದಿನ ಎಲ್ಲಾ ಸೀಸನ್​ಗಿಂತ ಈ ಬಾರಿಯ ಬಿಗ್​ ಬಾಸ್​ ಸಂಥಿಂಗ್​ ಸ್ಪೆಷಲ್​ ಆಗಿರಲಿದೆ. ಸದ್ಯ ಪ್ರೋಮೋದಿಂದಲೇ ಕುತೂಹಲ …

Read More »