Breaking News

ರಾಷ್ಟ್ರೀಯ

ತೆಲಂಗಾಣ ಹೈಕೋರ್ಟ್​ ನ್ಯಾಯಮೂರ್ತಿ ಸಿ. ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್​ಗೆ ವರ್ಗಾವಣೆ

ಬೆಂಗಳೂರು : ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಸಿ ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವರ್ಗಾವಣೆ ಮಾಡಿರುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಂದ್ರ ಕಶ್ಯಪ್ ಅವರು ತಿಳಿಸಿದ್ದಾರೆ. ನ್ಯಾಯಮೂರ್ತಿ ಸುಮಲತಾ ಅವರನ್ನು ಈ ಹಿಂದೆ ಗುಜರಾತ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಸುಪ್ರೀಂಕೋರ್ಟ್ ಕೊಲಿಜಿಯಂಗೆ …

Read More »

ಮನೆಗೆ ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್ ಸಂಪರ್ಕ ಪಡೆದ :H.D.K.

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್​​ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ …

Read More »

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಾಣ

ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ಇಲ್ಲಿ ಒಲಿಂಪಿಕ್​ಗೂ ತಯಾರಿ ನಡೆಸಲು ತರಬೇತಿ ಸಿಗುತ್ತದೆ ಎಂಬುದು ವಿಶೇಷವಾಗಿದೆ. ನಗರದ ಎಮ್ಮೆಕೆರೆಯಲ್ಲಿ 2.50 ಎಕರೆ ಪ್ರದೇಶದಲ್ಲಿ ಈ ಈಜುಕೊಳ ನಿರ್ಮಾಣಗೊಂಡಿದೆ. ಸಾಧಾರಣವಾಗಿ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಕೆಲವೊಂದು ಬಹುಮಹಡಿಯ ಮೇಲಂತಸ್ತಿನಲ್ಲಿ ಸಣ್ಣ ಮಟ್ಟಿನ ಈಜುಕೊಳ ಇದೆಯಾದರೂ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಆದರೆ ಮಂಗಳೂರಿನಲ್ಲಿ …

Read More »

ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: ‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್​

ವಿನಯ್​ ರಾಜ್​ಕುಮಾರ್​ ನಟನೆಯ ‘ಗ್ರಾಮಾಯಣ’ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ವಿಶೇಷ ವಿಡಿಯೋವೊಂದನ್ನು ರಿಲೀಸ್​ ಮಾಡಿದೆ. ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: ‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್​ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಡಮ್​ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್​ಕುಮಾರ್. ಸದ್ಯ ‘ಪೆಪೆ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿನಯ್​ ರಾಜ್​ಕುಮಾರ್ ಅವರ​ ತಾತ ಹುಟ್ಟಿದ ಮನೆ ಅಂದ್ರೆ ಡಾ.ರಾಜ್​ಕುಮಾರ್​ ಅವರ ಮನೆ ಗಾಜನೂರಿನಲ್ಲಿ ಬಹಳ ವಿಶೇಷವಾಗಿ …

Read More »

ಪತ್ನಿ ನವಾಜ್​ರಿಂದ ಬೇರ್ಪಟ್ಟ ರೇಮಂಡ್ಸ್​ ಅಧ್ಯಕ್ಷ ಗೌತಮ್ ಸಿಂಘಾನಿಯಾ

ನವದೆಹಲಿ: ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಸಿಂಘಾನಿಯಾ ಸೋಮವಾರ ಬೇರ್ಪಡುವುದಾಗಿ ಘೋಷಿಸಿದ್ದಾರೆ.   “ಈ ದೀಪಾವಳಿ ಹಿಂದಿನಂತೆ ಇರುವುದಿಲ್ಲ. ದಂಪತಿಗಳಾಗಿ ಒಟ್ಟಿಗೆ 32 ವರ್ಷ ಕಳೆದಿದ್ದೇವೆ, ಪೋಷಕರಾಗಿ ಜವಾಬ್ದಾರಿ ನಿಭಾಯಿಸಿದ್ದೇವೆ ಮತ್ತು ಯಾವಾಗಲೂ ಪರಸ್ಪರ ಶಕ್ತಿಯ ಮೂಲವಾಗಿದ್ದೆವು… ನಮ್ಮ ಜೀವನದಲ್ಲಿ ಮತ್ತೆರಡು ಸುಂದರ ಜೀವಗಳು ಸೇರ್ಪಡೆಯಾಗಿದ್ದರಿಂದ ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಪ್ರಯಾಣಿಸಿದ್ದೇವೆ” ಎಂದು ಗೌತಮ್ ಸಿಂಘಾನಿಯಾ ಎಕ್ಸ್ (ಟ್ವಿಟರ್) …

Read More »

ಲೋಕಸಭೆ ಚುನಾವಣೆ: ಬೆಳಗಾವಿ ಲಿಂಗಾಯತ, ಚಿಕ್ಕೋಡಿ ಕುರುಬರಿಗೆ ಟಿಕೆಟ್ ಚಿಂತನೆ – ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಚಿಂತನೆ ನಡೆದಿದೆ. ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಗುರಿ ಹೊಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಕಾಂಗ್ರೆಸ್​ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿದ್ದೇವೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿದ್ದು, ಎಲ್ಲ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ …

Read More »

ರಾಣಿಪೇಟೆಯಲ್ಲಿ ಪಟಾಕಿ ಸಿಡಿದು ಬಾಲಕಿ ಸಾವು; ಬೆಳಕಿನ ಹಬ್ಬದಲ್ಲಿ ಕತ್ತಲಾದ ಬದುಕು

ರಾಣಿಪೇಟೆ (ತಮಿಳುನಾಡು) : ಬೆಳಕಿನ ಹಬ್ಬದ ಸಂಭ್ರಮದಲ್ಲಿ ಅವಘಡವೊಂದು ನಡೆದು ಬದುಕು ಕತ್ತಲಾಗಿದೆ. ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಮಂಪಕ್ಕಂನ ಆದಿ ದ್ರಾವಿಡರ ವಸತಿ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸಿದೆ. ಭಾನುವಾರ ಪಟಾಕಿ ಸಿಡಿಸುವ ಸಮಯದಲ್ಲಿ ಪುಟ್ಟ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಆದಿ ದ್ರಾವಿಡರ ವಸತಿ ಪ್ರದೇಶದ ನಿವಾಸಿಗಳಾದ ರಮೇಶ್ (28) ಮತ್ತು ಅಶ್ವಿನಿ (25) ಎಂಬುವರ 4 ವರ್ಷದ ಕಂದಮ್ಮ ಮೃತ ದುರ್ದೈವಿ. ದೀಪಾವಳಿ ಹಬ್ಬದ ನಿಮಿತ್ತ ರಮೇಶ್ ಅವರ …

Read More »

ವಯಸ್ಸಾದ ಪೋಷಕರ ರಕ್ಷಣೆ ಮಕ್ಕಳ ಜವಾಬ್ದಾರಿ: ಹೈಕೋರ್ಟ್ ಆದೇಶ

ಬೆಂಗಳೂರು: ವಯಸ್ಸಾದ ಪೋಷಕರನ್ನು ಸಂಧ್ಯಾಕಾಲದಲ್ಲಿ ಅವರ ಆರೈಕೆ ಮಾಡುವ ಜವಾಬ್ದಾರಿ ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.   ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದ ನಂತರ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ ಪುತ್ರಿ ಮತ್ತು ಅಳಿಯನ ವರ್ತನೆ ಗಮನಿಸಿ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಪೋಷಕರು ಆಸ್ತಿಯನ್ನು ಉಡುಗೊರೆಯಾಗಿ ನೀಡಿದಾಗ ಈ ಜವಾಬ್ದಾರಿ …

Read More »

ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ,

ಬಳ್ಳಾರಿ : ಜಿಲ್ಲೆಯ ತೋರಣಗಲ್ಲು ರೈಲು ನಿಲ್ದಾಣ ಪ್ರದೇಶದ 11ನೇ ವಾರ್ಡ್‌ನ ಘೋರ್ಪಡೆ ನಗರದಲ್ಲಿ ಎಚ್‌ಎಲ್‌ಸಿ ಕಾಲುವೆಯ ಬಳಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ದಾಳಿ ನಡೆದಿದೆ. ಪರಿಣಾಮ ಪುರಸಭೆ ಸದಸ್ಯ ನಾಗರಾಜ ನಾಯ್ಕ (32) ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ವಾರ್ಡ್ ನಿವಾಸಿ ಶಿವಕುಮಾರ್ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿ. ನಾಗರಾಜ ನಾಯ್ಕ ಅವರಿಗೆ ತಲೆ, ಬೆನ್ನಿಗೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ …

Read More »

ದೇವೇಗೌಡರ ಆಶೀರ್ವಾದ ಪಡೆದ ವಿಜಯೇಂದ್ರ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಬಿ.ವೈ. ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಮಾಜಿ ಪ್ರಧಾನಮಂತ್ರಿ ದೇವೇಗೌಡರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ, ಅವರ ಆಶೀರ್ವಾದ ಪಡೆದಿದ್ದೇನೆ ಎಂದರು. ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಜವಾಬ್ದಾರಿ ಕೊಟ್ಟ ಬಗ್ಗೆ ಹೆಮ್ಮೆ …

Read More »