Breaking News

ರಾಷ್ಟ್ರೀಯ

ಸಮಾಜ ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ.: H.D.K.

ಮಂಡ್ಯ: ಸಮಾಜ ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ಪಾಪ ಕಾಂಗ್ರೆಸ್​ನವರು ಸತ್ಯಹರಿಶ್ಚಂದ್ರನ ವಂಶದವರು ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜಾತಿಗಣತಿಗೆ ಒಕ್ಕಲಿಗರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಎಂ ಟ್ವೀಟ್ ಅನ್ನು ನಾನು ಗಮನಿಸಿದ್ದೇನೆ. ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಕಾಂತರಾಜು ವರದಿ ಮೂಲ ಪ್ರತಿ ಕಳ್ಳತನವಾದ ಮಾಹಿತಿ ಇದೆ. ಒಂದು …

Read More »

ಆನೇಕಲ್: ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಐವರಿಗೆ ಗಂಭೀರ ಗಾಯ

ಆನೇಕಲ್ (ಬೆಂಗಳೂರು): ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಗಾಯಗೊಂಡಿರುವ ಘಟನೆ ಇಂದು ಇಲ್ಲಿನ ಬೆಂಗಳೂರು-ವೀವರ್ಸ್ ಕಾಲೊನಿಯ ಮಾರುತಿ ಬಡಾವಣೆಯಲ್ಲಿ ಸಂಭವಿಸಿತು. ಮಾರ್ಟಿನ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್ (32), ನಾಜಿಯಾ (22), ಇರ್ಫಾನ್ (21), ಗುಲಾಬ್ (18) ಹಾಗು ಶಹಜಾದ್ (9) ಗಾಯಗೊಂಡಿದ್ದಾರೆ. ಮುಂಜಾನೆ 5:30ರ ಸುಮಾರಿಗೆ ವಿದ್ಯುತ್‌ ಬಲ್ಬ್‌ ಸ್ವಿಚ್ ಆನ್ ಮಾಡಿದಾಗ ಆಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ …

Read More »

ಐಡಿಬಿಐನಲ್ಲಿ 2,100 ಹುದ್ದೆಗಳ ಭರ್ತಿಗೆ

ಬೆಂಗಳೂರು: ಇಂಡಸ್ಟ್ರಿಯಲ್​ ಡೆವಲಪ್‌ಮೆಂಟ್​​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ (ಐಡಿಬಿಐ) ಖಾಲಿ ಇರುವ 2,100 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಭಾರತದಾದ್ಯಂತ ನೇಮಕಾತಿ ನಡೆಯಲಿದೆ. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಹುದ್ದೆಗಳ ವಿವರ: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​ 800, ಎಕ್ಸಿಕ್ಯುಟಿವ್​ (ಸೇಲ್ಸ್​ ಆಯಂಡ್​ ಆಪರೇಷನ್ಸ್​​) 1,300 ಹುದ್ದೆಗಳಿವೆ. ಅಧಿಸೂಚನೆವಿದ್ಯಾರ್ಹತೆ: ಅಧಿಕೃತ ವಿಶ್ವವಿದ್ಯಾಲಯ/ಮಂಡಳಿಯಿಂದ ಪದವಿ ಶಿಕ್ಷಣ. ವೇತನ: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​​ಗೆ ವಾರ್ಷಿಕ ಪ್ಯಾಕೇಜ್​ 6,14,00-6,50,000 ರೂ. ಎಕ್ಸಿಕ್ಯೂಟಿವ್​ (ಸೇಲ್ಸ್​ ಆಯಂಡ್​ …

Read More »

ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ

ಏಕದಿನ ವಿಶ್ವಕಪ್ ಕ್ರಿಕೆಟ್ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ 5 ಟಿ20 ಪಂದ್ಯಗಳ ಸರಣಿ ಆಡುತ್ತಿದ್ದು, ಮೊದಲ ಪಂದ್ಯ ನಾಳೆ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ವಿಶಾಖಪಟ್ಟಣಂ(ಆಂಧ್ರ ಪ್ರದೇಶ): 2024ರ ಟಿ20 ವಿಶ್ವಕಪ್​ಗೆ ಇನ್ನೂ 8 ತಿಂಗಳಿದ್ದರೂ ಈಗಾಗಲೇ ಎಲ್ಲಾ ರಾಷ್ಟ್ರೀಯ ತಂಡಗಳು ಸಿದ್ಧತೆ ಆರಂಭಿಸಿವೆ. ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​ ಮುಗಿಯುತ್ತಿದ್ದಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟಿ20 ಪಂದ್ಯಗಳ ಸರಣಿ ಶುರುವಾಗುತ್ತಿದೆ. ನಾಳೆ ಮೊದಲ ಪಂದ್ಯ ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ …

Read More »

ಬೆಂಗಳೂರು ಕಂಬಳ: ನಾಳೆ ಮೆರವಣಿಗೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಣಗಳ ನಿರ್ಗಮನ

ಮಂಗಳೂರು: ಬೆಂಗಳೂರು ಕಂಬಳಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರಲ್ಲೂ ಕುತೂಹಲ ಆವರಿಸಿದೆ. ಕರಾವಳಿ ಜಿಲ್ಲೆಗಳ ಜಾನಪದೀಯ ಕ್ರೀಡೆ ಕಂಬಳ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರು ಕಂಬಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದೆ. ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿರುವ ಕೋಣಗಳು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಿಂದ ತೆರಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಿಂದ ಕಂಬಳದ ಕೋಣಗಳು ಒಟ್ಟಾಗಿ ತೆರಳಲಿದೆ. ಈಗಾಗಲೇ …

Read More »

ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ:B.S.Y.

ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಬುಧವಾರ) ತೆಲಂಗಾಣಕ್ಕೆ ತೆರಳುವರು. ಬೆಳಿಗ್ಗೆ 7.40ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್​ಗೆ ಪ್ರಯಾಣಿಸಲಿದ್ದಾರೆ. ಬೆಳಿಗ್ಗೆ 11.20ಕ್ಕೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಜಹೀರಾಬಾದ್​ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ ಅವರು ಮಧ್ಯಾಹ್ನ 2ಕ್ಕೆ ರ‍್ಯಾಲಿಯಲ್ಲಿ ಭಾಗವಹಿಸುವರು. ಬಳಿಕ ಬೀದರ್​ಗೆ ಆಗಮಿಸಿ, ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ …

Read More »

ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು:ಡಿ .ಕೆ. ಶಿ.

ಬೆಂಗಳೂರು : ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು …

Read More »

ತಾಯಿ, ಮಗು ಸಾವು ಪ್ರಕರಣ: ಸಚಿವ ಜಾರ್ಜ್ ರಾಜೀನಾಮೆಗೆ ಆರ್​ ಅಶೋಕ್ ಆಗ್ರಹ

ಬೆಂಗಳೂರು : ನಗರದಲ್ಲಿ ಇತ್ತೀಚೆಗೆ ವಿದ್ಯುತ್​ ಅವಘಡದಲ್ಲಿ ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬೂಬುಗಳನ್ನು ಹೇಳುವುದನ್ನು ಬಿಟ್ಟು ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ ಜೆ ಜಾರ್ಜ್​ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವೈರ್​ಗಳಿಗೆ ಇಲಿ ಕಚ್ಚಿ ಘಟನೆ ಸಂಭವಿಸಿದೆ ಎಂಬ ನೆಪ ಹೇಳಿಕೊಂಡು ತಿಪ್ಪೆ ಸಾರಿಸುವ ಮಟ್ಟಕ್ಕೆ ಸಚಿವರು ಇಳಿದಿರುವುದು …

Read More »

ಹಣಕಾಸಿನ ವಿಚಾರ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ 12 ಜನ ಆರೋಪಿಗಳ ಬಂಧನ

ವಿಜಯಪುರ: ಹಣಕಾಸಿನ ವಿಚಾರದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗನ್ನು ಗೋಲಗುಂಬಜ್‌ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.   ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ”ಹಣಕಾಸಿನ ವ್ಯವಹಾರ ಹಿನ್ನೆಲೆ ಫೈರಿಂಗ್ ಮಾಡಿದ್ದ ರೌಡಿಶೀಟರ್ ಹೈದರ್ ಅಲಿ ನದಾಫ್ ಸೇರಿದಂತೆ 12 ಜನ ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. ನವೆಂಬರ್ 10ರಂದು ನಗರದ ಒಡ್ಡರ ಓಣಿಯಲ್ಲಿ ಸೋಹೆಲ್ ಕಕ್ಕಳಮೇಲಿ ಎಂಬವರ …

Read More »

ಬೈಲಹೊಂಗಲ | ಕಬ್ಬಿನ ಜಮೀನಿಗೆ ಬೆಂಕಿ; ₹12 ಲಕ್ಷ ಹಾನಿ

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ರೈತರೊಬ್ಬರ ಕಬ್ಬಿನ ಜಮೀನಿಗೆ ವಿದ್ಯುತ್ ತಗುಲಿ ಮಂಗಳವಾರ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾಗಿದೆ. ಗ್ರಾಮದ ರೈತ ಬಾಳಪ್ಪ ತುಕ್ಕನ್ನವರ ಅವರಿಗೆ ಸೇರಿದ ಸುಮಾರು ಆರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವಿಗೆ ಬಂದಿತ್ತು. ಕಬ್ಬಿನ ಬೆಳೆಗೆ ತಾಗಿಕೊಂಡು ವಿದ್ಯುತ್ ಪ್ರಸರಣದ ತಂತಿಗಳು ಜೋತು ಬಿದ್ದಿದ್ದವು. ಜೋತು ಬಿದ್ದ ವಿದ್ಯುತ್ ತಂತಿಗಳನ್ನು ತೆರುವುಗೊಳಿಸುವಂತೆ ರೈತರು ಸಂಬಂಧಿಸಿದ ಹೆಸ್ಕಾಂ ಇಲಾಖೆಗೆ ಸಾಕಷ್ಟು ಮನವಿ ಮಾಡಿದ್ದರು. …

Read More »