Breaking News

ರಾಷ್ಟ್ರೀಯ

ಮಗಳಿಗೆ 50 ಕೋಟಿ ಮೌಲ್ಯದ ಬಂಗಲೆ ಉಡುಗೊರೆಯಾಗಿ ಕೊಟ್ಟ ಬಿಗ್ ಬಿ

ಜನಪ್ರಿಯ ನಟ ಅಮಿತಾಭ್​​ ಬಚ್ಚನ್ ತಮ್ಮ ಹೆಸರಿನಲ್ಲಿದ್ದ ಬಂಗಲೆಯನ್ನು ಮಗಳ ಹೆಸರಿಗೆ ಮಾಡಿಸಿದ್ದಾರೆ. ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಅಪಾರ ಬೆಲೆಬಾಳುವ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಹೆಸರಿನಲ್ಲಿದ್ದ ಬಂಗಲೆಯನ್ನು ಮಗಳ ಹೆಸರಿಗೆ ಮಾಡಿಸಿದ್ದಾರೆ. ಈಗಾಗಲೇ ನೋಂದಣಿ ಕಾರ್ಯ ಕೂಡ ಮುಗಿದಿದೆ ಎಂಬ ಮಾತು ಕೇಳಿ ಬರುತ್ತಿವೆ. ಅಲ್ಲದೇ ಬಂಗಲೆಯ ಮೌಲ್ಯ ತಿಳಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ ಪ್ರಸಿದ್ಧ ನಟ …

Read More »

ಸಾವಿನಲ್ಲೂ ಸಾರ್ಥಕತೆ ಮೆರೆದ ಶುಶ್ರೂಷಕ​: ಅಂಗಾಂಗ ದಾನ ಮಾಡಿ 6 ಜನರಿಗೆ ಜೀವ ತುಂಬಿದ ಶೇಖರ್​!

ಎರ್ನಾಕುಲಂ (ಕೇರಳ): ಮೆದುಳು ನಿಷ್ಕ್ರಿಯಗೊಂಡು ಸಾವಿಗೀಡಾದ ತಮಿಳುನಾಡಿನ ಶುಶ್ರೂಷಕರೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರ ಬಾಳಿಗೆ ಹೊಸ ಬೆಳಕು ನೀಡಲಿದ್ದಾರೆ. ಇದರಲ್ಲಿ ಕೊಚ್ಚಿಯ ವ್ಯಕ್ತಿಯೊಬ್ಬರಿಗೆ ಹೃದಯ ಕಸಿ ಮಾಡಲಾಗಿದೆ. ಇನ್ನೂ ಐವರಿಗೆ ವಿವಿಧ ಅಂಗಗಳನ್ನು ವೈದ್ಯರು ಜೋಡಿಸಲಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಶುಶ್ರೂಷಕ ಆಗಿದ್ದ ಸೆಲ್ವಿನ್ ಶೇಖರ್ (36) ಮೆದುಳು ನಿಷ್ಕ್ರಿಯದಿಂದ ಸಾವಿಗೀಡಾದವರು. ಪತ್ನಿಯೂ ನರ್ಸ್​ ಆಗಿದ್ದು, ಪತಿಯ ಅಂಗಾಂಗ ದಾನ ಮಾಡಲು …

Read More »

ಕುಟುಂಬ ಪಿಂಚಣಿ ಪಡೆಯಲು ಎರಡನೇ ಪತ್ನಿ ಅರ್ಹರಲ್ಲ: ಹೈಕೋರ್ಟ್

ಬೆಂಗಳೂರು: ಕುಟುಂಬ ಪಿಂಚಣಿಯಂತ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಎರಡನೇ ಪತ್ನಿಯ ಸಂಬಂಧವನ್ನು ಗುರುತಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕ. ಈ ಪ್ರಕ್ರಿಯೆ ಸರ್ಕಾರಿ ಉದ್ಯೋಗಿಗಳಿಗೆ ಎರಡನೇ ಮದುವೆಗೆ ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಪಡೆಯುವ ಅಧಿಕಾರ ಹೊಂದಿದೆ ಎಂದು ತಿಳಿಸಿದೆ. ಪತಿಯ ಕುಟುಂಬ ಪಿಂಚಣಿ ನೀಡಲು ನಿರಾಕರಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು …

Read More »

ಹಾವೇರಿಯಲ್ಲಿ ಸಕ್ಕರೆ ಗೊಂಬೆ ತಯಾರಿ

ಹಾವೇರಿ: ಗೌರಿ ಹುಣ್ಣಿಮೆ ಬಂದರೆ ಸಾಕು ಉತ್ತರ ಕರ್ನಾಟಕದಲ್ಲಿ ಸಂಭ್ರಮ ಮನೆಮಾಡುತ್ತದೆ. ಅದರಲ್ಲೂ ಹೆಂಗಳೆಯರಂತೂ ಈ ಹಬ್ಬದ ಆಚರಣೆಗೆ ತುದಿಗಾಲಲ್ಲಿ ನಿಂತಿರುತ್ತಾರೆ. ಗೌರಿ ಹುಣ್ಣಿಮೆಯೆಂದರೆ ಸಕ್ಕರೆ ಗೊಂಬೆಗಳು ಇರಲೇಬೇಕು. ಹಿಂದೂಗಳು ಆಚರಿಸುವ ಈ ಹಬ್ಬಕ್ಕೆ ಹಾವೇರಿಯ ಹಲವು ಮುಸ್ಲಿಂ ಕುಟುಂಬಗಳೂ ಕೂಡಾ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತವೆ. ಕಳೆದ ಮೂವತ್ತು ವರ್ಷಗಳಿಂದ ಇಲ್ಲಿನ ಹಲವು ಕುಟುಂಬಗಳು ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಕುಟುಂಬಗಳಲ್ಲಿ ಬಾಬಣ್ಣ ವೀರಾಪುರ ಕುಟುಂಬವೂ ಒಂದು. ಇವರು ಗೌರಿ ಹುಣ್ಣಿಮೆ …

Read More »

ಡಾ.ರಾಜ್​ ಕಪ್​ ಕ್ರಿಕೆಟ್ ಸೀಸನ್​ 6ಕ್ಕೆ ಮುಹೂರ್ತ ಫಿಕ್ಸ್

ಬೆಂಗಳೂರು: ಡಾ.ರಾಜ್​ ಕಪ್​ ಕ್ರಿಕೆಟ್ ಸೀಸನ್​ 6ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚಂದನವನದ ತಾರೆಯರು ತಯಾರಿ ಆರಂಭಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಮಾರಣಾರ್ಥವಾಗಿ ಟೂರ್ನಿ ಆಯೋಜಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಜರ್ಸಿ ಬಿಡುಗಡೆಗೊಳಿಸಿದರು. ಡಾ.ರಾಜ್ ಕಪ್ ಸೀಸನ್​ 6ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, “ರಾಜ್ ಕಪ್ ಆರನೇ ಸೀಸನ್ ಅನ್ನು ವಿದೇಶದಲ್ಲಿ ಮಾಡುತ್ತಿರುವುದು ಕಷ್ಟವಾಗುತ್ತಿಲ್ಲ. ನನಗೆ ಚಿನ್ನದಂತಹ ನಾಯಕರು, ಮಾಲಕರು ಹಾಗೂ …

Read More »

ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು- ಶಾಸಕ ಬಾಲಚಂದ್ರ ಜಾರಕಿಹೊಳಿ

ಕನ್ನಡದ ವೈಭವ, ಸಂಭ್ರಮಕ್ಕೆ ಸಾಕ್ಷಿಯಾದ ಮೂಡಲಗಿಯ ಸುವರ್ಣ ಕನ್ನಡ ರಾಜ್ಯೋತ್ಸವ ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು- ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯಲ್ಲಿಂದು ಅದ್ದೂರಿಯಾಗಿ ನಡೆದ ಸುವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಮೂಡಲಗಿ: ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ಎಲ್ಲ ಕನ್ನಡ ಪರ ಸಂಘಟನೆಗಳು ಒಂದಾಗಿ, ಒಗ್ಗಟ್ಟಾಗಿ ಶ್ರಮಿಸಬೇಕು, ಈ ಮೂಲಕ ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು …

Read More »

ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ಧಾರವಾಡ, ನ.25: ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ (Electric shock) ತಗುಲಿ ಬಾಲಕ ಮೃತಪಟ್ಟ (Death) ಘಟನೆ ಧಾರವಾಡ ನಗರದ ಸಿದ್ದರಾಮ ಕಾಲೋನಿಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ 16 ವರ್ಷದ ಶ್ರೇಯಸ್ ಶಿನ್ನೂರ ಮೃತಪಟ್ಟಿದ್ದಾನೆ. ಮನೆ ಮಹಡಿ ಮೇಲೆ ಗೆಳೆಯರೊಂದಿಗೆ ಸಂಜೆ ಕ್ರಿಕೆಟ್ (Cricket) ಆಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕ್ಯಾಚ್ ಹಿಡಿಯಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಶ್ರೇಯಸ್ ಅಸ್ವಸ್ಥಗೊಂಡಿದ್ದ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ …

Read More »

ಕಂಟೋನ್ಮೆಂಟ್ ಬೋರ್ಡ್ ಸಿಇಒ ಕೊಠಡಿಯಲ್ಲಿ ಸಿಕ್ಕ ಡೆತ್ ನೋಟ್​ನಲ್ಲಿ ಆತ್ಮಹತ್ಯೆಯ ಅಸಲಿ ಸತ್ಯ ಬಯಲು

ಬೆಳಗಾವಿ, ನ.25: ಈ ಆನ್ ಲೈನ್ ಗ್ಯಾಮ್ಲಿಂಗ್ ಗೇಮ್​ಗಳೇ ಹಾಗೇ ಒಂದು ಬಾರಿ ನೀವು ಅದರಲ್ಲಿ ಇಳಿದ್ರೆ ಮತ್ತೆ ಎದ್ದು ಬಂದ ಉದಾಹರಣೆಗಳೇ ಇಲ್ಲ. ಜನ ಸಾಮಾನ್ಯರಿಗೆ ತಿಳಿ ಹೇಳಬೇಕಿದ್ದ ಅಧಿಕಾರಿಯೊಬ್ಬರು ಇದೇ ಆನ್ ಲೈನ್ ಗ್ಯಾಮ್ಲಿಂಗ್​ಗೆ (Online Gambling) ಬಲಿಯಾಗಿದ್ದಾರೆ. ರಕ್ಷಣಾ ಇಲಾಖೆಯ ಅಡಿಯಲ್ಲಿ ಸಿಇಒ ಆಗಿ ಕೆಲಸ ಮಾಡ್ತಿದ್ದ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಬಿಐ (CBI) ದಾಳಿಯಾದ ನಾಲ್ಕೇ ದಿನಕ್ಕೆ ಅಧಿಕಾರಿ ಸಾವಿನ ದಾರಿ …

Read More »

ಚಳಿಗಾಲದ ಅಧಿವೇಶನ ಇಲ್ಲಿಯೇ ಯಾಕಾದರೂ ನಡೆಯುತ್ತದೋ ಎಂದು ಇಲ್ಲಿನ ರೈತರಿಗೆ ಧುತ್ತನೆ ಎದುರಾಗಿದೆ ಟೆನ್ಷನ್! ಏನದು ವಿಷಯ?

ಬೆಳಗಾವಿಯ ಸುವರ್ಣ ಸೌಧದಲ್ಲಿ ( Belagavi Suvarna soudha) ವಾರ್ಷಿಕ ಕಾರ್ಯಕ್ರಮದಂತೆ ಮುಂದಿನ ತಿಂಗಳು ಡಿಸೆಂಬರ್​​ 4 ರಿಂದ 15ರ ವರೆಗೆ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಆದರೆ ಯಾಕಾದ್ರೂ ಈ ಚಳಿಗಾಲದ ಅಧಿವೇಶನ (legislative winter session) ಆರಂಭವಾಗ್ತಿದೆಯಲ್ಲಾ ಅನ್ನೋ ಟೆನ್ಷನ್ ಇಲ್ಲಿನ ರೈತರಿಗೆ (farmers) ಧುತ್ತನೆ ಎದುರಾಗಿದೆ. ಸುವರ್ಣ ಸೌಧದ ಆಸುಪಾಸು ಇರುವ 50ಕ್ಕೂ ಅಧಿಕ ರೈತರು ಅದಾಗಲೇ ಈ ಟೆನ್ಷನ್ ಅನುಭವಿಸತೊಡಗಿದ್ದಾರೆ! ಏನಿಲ್ಲ ಪಾಪಾ ತಾವು ಕಷ್ಟಪಟ್ಟು …

Read More »

ಭವಿಷ್ಯ ಹೇಳ್ತಿದ್ದವಳ ತಲೆ ಸೀಳಿದ ಹಂತಕರು! ಅತ್ಯಾಚಾರವೆಸಗಿ ಕೊಲೆ?

ಕಲಬುರಗಿಯಲ್ಲಿ ಒಂಟಿ ವೃದ್ದೆಯ ಭೀಕರ ಹತ್ಯೆ ಪ್ರಕರಣ ದಾಖಲಿಸಿಕೊಂಡಿರೋ ಆರ್ ಜೆ ನಗರ ಪೊಲೀಸರು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ. ಅದೆನೇ ಇರಲಿ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಿದ್ದ ರತ್ನಾಬಾಯಿ, ತನ್ನ ಭವಿಷ್ಯ ಹಿಗೇ ಅಂತ್ಯವಾಗುತ್ತೆ ಅನ್ನೊದು ತಿಳಿಯದೇ ಇರೋದು ದುರಂತವೇ ಸರಿ. ಹಂತಕರ ಬಂಧನದ ನಂತರವೇ ರತ್ನಾಬಾಯಿ ಹತ್ಯೆಗೆ ಕಾರಣ ಏನು ಅನ್ನೊದು ತಿಳಿಯಲಿದೆ‌.ಆ ವೃದ್ದೆ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಾ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತ ಒಬ್ಬಂಟಿಯಾಗಿ …

Read More »