Breaking News

ರಾಷ್ಟ್ರೀಯ

ರಾಯಬಾಗ: ₹45.85 ಲಕ್ಷ ಅನುದಾನದ ಕೊಠಡಿಗಳ ಉದ್ಘಾಟನೆ

ರಾಯಬಾಗ: ತಾಲ್ಲೂಕಿನ ಕಂಕಣವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾನಂದ ನಗರ, ಮೊಳವಾಡ ತೋಟ ಹಾಗೂ ಖನದಾಳೆ ತೋಟದಲ್ಲಿ ₹45.85 ಲಕ್ಷ ಅನುದಾನದಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾಗಿದ್ದ ನೂತನ ಕೊಠಡಿಗಳನ್ನು ಶುಕ್ರವಾರ ಶಾಸಕ ಡಿ.ಎಂ. ಐಹೊಳೆ ಉದ್ಘಾಟಿಸಿದರು.   ಬಳಿಕ ಮಾತನಾಡಿದ ಅವರು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ನಿಮ್ಮ ಜವಾಬ್ಧಾರಿ ಕೊನೆಗೊಳ್ಳುವುದಿಲ್ಲ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕ-ಪೋಷಕರಿಗೂ ಇರುತ್ತದೆ ಎಂದು ಹೇಳಿದರು. ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ …

Read More »

ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿ

ಮೂಡಲಗಿ: ‘ಮನಸ್ಸಿದ್ದರೆ ಏನೆಲ್ಲ ಮಾಡಬಹುದು, ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಯುವ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿಯಾಗಿದ್ದಾರೆ. 2008ರಲ್ಲಿ ಬಿಎ ಪದವಿ ಮುಗಿಸಿ ನೌಕರಿ ದೊರೆಯದಿದ್ದಾಗ ಒಂದೇ ಆಕಳು ಸಾಕಿ ಹೈನುಗಾರಿಕೆ ಆರಂಭಿಸಿ ಹೊನ್ನಪ್ಪ ಅವರ ಹೊಲದಲ್ಲಿ ಇಂದು 20ಕ್ಕೂ ಅಧಿಕ ಎಚ್‌ಎಫ್‌ ತಳಿಯ ಹಸುಗಳು ಇವೆ. ಪ್ರತಿ ದಿನ ಬೆಳಿಗ್ಗೆ 100 ಲೀಟರ್‌, ಸಂಜೆ 100 ಲೀಟರ್‌ ಹೀಗೆ ನಿತ್ಯ 200 …

Read More »

ದಲಿತ ಸಿಎಂ ಮಾಡುವಂತೆ ನಾವು ಒತ್ತಾಯ ಮಾಡಬಹುದು. ಆದರೆ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ

ಶಿರಸಿ(ಉತ್ತರ ಕನ್ನಡ): ರಾಜ್ಯದಲ್ಲಿ ದಲಿತ ಸಿಎಂ ಆಗಲೂ ಇನ್ನೂ ಕಾಲ ಕೂಡಿ ಬಂದಿಲ್ಲ, ಕಾಲ ಕೂಡಿ ಬಂದಾಗ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕಾರ್ಯಕ್ರಮವೊಂದರ ನಿಮಿತ್ತ ಶಿರಸಿಗೆ ಶನಿವಾರ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಮಾಡುವಂತೆ ನಾವು ಒತ್ತಾಯ ಮಾಡಬಹುದು, ಆದರೆ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ದಲಿತ ಸಿಎಂ ವಿಚಾರ ಇಲ್ಲ ಎಂದರು. ಪಕ್ಷದ ಮುಖಂಡ ಬಿ ಕೆ ಹರಿಪ್ರಸಾದ್ ಅವರನ್ನು …

Read More »

ರಾಜ್ಯಕ್ಕೆ ಐಜಿಎಸ್​​ಟಿ ಕಡಿತ ಆಘಾತ: ಸ್ಪಷ್ಟನೆ ಕೋರಿ ಕೇಂದ್ರ ಸಚಿವರಿಗೆ ಸಿಎಂ ಪತ್ರ

ಬೆಂಗಳೂರು: ಬರ, ಗ್ಯಾರಂಟಿ ಯೋಜನೆಗಳಿಂದ ತೀವ್ರ ಆರ್ಥಿಕ ಹೊರೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಇದೀಗ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ.‌ ಕೇಂದ್ರ ಸರ್ಕಾರ ಕರ್ನಾಟಕದ ಐಜಿಎಸ್​​ಟಿ ಸಂಗ್ರಹದಿಂದ 798 ಕೋಟಿ ರೂ.‌ ಕಡಿತಗೊಳಿಸಿದೆ.   IGST ಅಂದರೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಮತ್ತು ಸೇವೆಗಳು ಚಲಿಸಿದಾಗ ಐಜಿಎಸ್​ಟಿ ವಿಧಿಸಲ್ಪಡುತ್ತದೆ. ಐಜಿಎಸ್​ಟಿ ಹಂತದಲ್ಲಿ ಬರುವ ಆದಾಯವನ್ನು ಕೇಂದ್ರ ಹಾಗೂ …

Read More »

ವಾಟರ್ ಪ್ರೂಫ್ ಟೆಂಟ್, ಮಳೆ ಬಂದರೂ ಯಾವುದೇ ಸಮಸ್ಯೆಯಾವುಗುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ನಿನ್ನೆ ಚಳಿಗೆ ಟೆಂಟ್​ ಒಳಗೆ ಪೊಲೀಸರು ತತ್ತರಿಸಿ ಹೋಗಿದ್ದಾರೆ ಎಂದು ಪೊಲೀಸ್​ ಸಿಬ್ಬಂದಿ

ಬೆಳಗಾವಿ: ಡಿ.4ರಿಂದ 15ರ ವರೆಗೆ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ಬಂದೋಬಸ್ತ್​ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿ ಉಳಿದುಕೊಳ್ಳಲು ಬೃಹದಾಕಾರದ ಜರ್ಮನ್ ಟೆಂಟ್​​ಗಳಿಂದ ಟೌನ್​ಶಿಪ್​ಗಳನ್ನು ನಿರ್ಮಿಸಲಾಗಿದೆ. ಪೊಲೀಸ್​ ಸಿಬ್ಬಂದಿಗೆ ನಿರ್ಮಿಸಲಾಗಿರುವ ಜರ್ಮನ್​ ಟೆಂಟ್​ ವ್ಯವಸ್ಥೆ ಹೇಗಿದೆ, ಪೊಲೀಸರು ಏನಂತಾರೆ. ಇಲ್ಲಿದೆ ಮಾಹಿತಿ. ಹೌದು, ಸುವರ್ಣ ವಿಧಾನಸೌಧ ಸಮೀಪದ ಅಲಾರವಾಡ ಗ್ರಾಮದ ಹೊರವಲಯದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಟೌನ್​ಶಿಪ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಾಲ್ಕು ದೊಡ್ಡ ದೊಡ್ಡ ಜರ್ಮನ್ …

Read More »

ಇಂದಿನಿಂದ ಮಲ್ಲೇಶ್ವರಂನ ‘ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯ’ದಲ್ಲಿ ‘ಕಡಲೆಕಾಯಿ ಪರಿಷೆ’

ಬೆಂಗಳೂರು: ಇಲ್ಲಿನ ಮಲ್ಲೇಶ್ವರಂನಲ್ಲಿರುವ ಶ್ರೀ ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.2ರ ಇಂದಿನಿಂದ ಡಿ.4ರವರೆಗೂ 7ನೇ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕಡಲೆಕಾಯಿ ಪರಿಷೆ ಹಾಗೂ ಹಸಿರು ಚೈತನ್ಯೋತ್ಸವ ಕಾರ್ಯಕ್ರಮದ ಆಡಿಯಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.   ಇಂದಿನ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಚಾಲನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ …

Read More »

ಕೊಪ್ಪಳದಲ್ಲಿ ‘ಜೈ ಶ್ರೀರಾಮ್’ ಹೇಳುವಂತೆ ಅಂಧ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ

ಕೊಪ್ಪಳ:ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ‘ಜೈ ಶ್ರೀರಾಮ’ ಎಂದು ಪಠಿಸುವಂತೆ ಒತ್ತಾಯಿಸಿ 62 ವರ್ಷದ ಅಂಧ ಮುಸ್ಲಿಂ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಗಾವತಿ ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಹುಸೇನ್ ಸಾಬ್ ಅವರು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ತನಗೆ ಬಲವಂತವಾಗಿ ಬೈಕ್ ಹತ್ತಿಸಿ, ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ನವೆಂಬರ್ 25 ರ ಮಧ್ಯರಾತ್ರಿ ತನ್ನ ಮೇಲೆ …

Read More »

ಚೀನಾದ ಮಕ್ಕಳಲ್ಲಿ ಆರ್ಭಟಿಸುತ್ತಿರುವಂತ ಹೊಸ ಮಾದರಿಯ ವೈರಸ್ ರಾಜ್ಯಕ್ಕೆ ಕಾಲಿಡೋ ಮುನ್ನವೇ ತಡೆಗಟ್ಟೋ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ.:D.C.

ಬೆಳಗಾವಿ: ಚೀನಾದ ಮಕ್ಕಳಲ್ಲಿ ಆರ್ಭಟಿಸುತ್ತಿರುವಂತ ಹೊಸ ಮಾದರಿಯ ವೈರಸ್ ರಾಜ್ಯಕ್ಕೆ ಕಾಲಿಡೋ ಮುನ್ನವೇ ತಡೆಗಟ್ಟೋ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ. ಅದರಲ್ಲಿ ಡಿ.4ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಈ ವೇಳೆ ವೈರಸ್ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಂಟ್ರೋಲ್ ರೂಂ ತೆರೆಯಲಾಗಿದೆ.   ಇಂದು ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಅಧಿವೇಶನದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಅನ್ನು ಚೀನಾ ಹೊಸ ಮಾದರಿಯ ವೈರಸ್ ವಿಚಾರವಾಗಿ …

Read More »

ರಾಜ್ಯ ಸರ್ಕಾರದಿಂದ ‘ಬರ ಪರಿಹಾರ’ಕ್ಕೆ ಅರ್ಹ ‘ರೈತ’ರ ಪಟ್ಟಿ ಬಿಡುಗಡೆ: ನಿಮ್ಮ ಹೆಸರಿದ್ಯಾ? ಹೀಗೆ ಚೆಕ್ ಮಾಡಿ

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ನಂತ್ರ, ರೈತರ ಫಸಲು ಹಾನಿಯಾಗಿತ್ತು. ಹೀಗಾಗಿ ರಾಜ್ಯದ ಅನೇಕ ತಾಲೂಕುಗಳನ್ನು ಬರಪೀಡಿತ ತಾಲೂಕು ಅಂತ ಸರ್ಕಾರ ಘೋಷಣೆ ಮಾಡಿದೆ. ಈಗ ಬರ ಪರಿಹಾರ ಪಡೆಯಲು ಅರ್ಹರಿರುವಂತ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಹೆಸರಿರೋರಿಗೆ ಮಾತ್ರ ಪರಿಹಾರ ಸಿಗಲಿದೆ. ಹಾಗಾದ್ರೇ ನಿಮ್ಮ ಹೆಸರು ಇದ್ಯಾ ಅಂತ ಹೇಗೆ ಚೆಕ್ ಮಾಡೋದು ಅನ್ನೋ ಬಗ್ಗೆ ಮುಂದೆ ಓದಿ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ನಂತ್ರ, ಹಲವು ತಾಲ್ಲೂಕುಗಳನ್ನು ಸರ್ಕಾರ …

Read More »

ಡಿ.23ರಂದು ‘545 ಪಿಎಸ್‌ಐ ನೇಮಕಾತಿ’ಗೆ ಮರು ಪರೀಕ್ಷೆ: ಮುಂದೂಡಲು ‘ಶಾಸಕ’ರು ಆಗ್ರಹ

ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ನಂತ್ರ, ಪರೀಕ್ಷೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರದ್ದುಪಡಿಸಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರವು ಡಿ.23ರಂದು ಮರು ಪರೀಕ್ಷೆ ನಡೆಸೋದಕ್ಕೆ ದಿನಾಂಕ ನಿಗದಿ ಪಡಿಸಿದೆ. ಇಂತಹ ಮರು ನಿಗದಿ ಪರೀಕ್ಷೆಯನ್ನು ಮುಂದೂಡುವಂತೆ ಸಿಎಂ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿಗೆ ಪತ್ರ ಬರೆದು ಶಾಸಕರು ಆಗ್ರಹಿಸಿದ್ದಾರೆ.   ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಸೇರಿದಂತೆ ಹಲವರಿಗೆ ಶಾಸಕರಾದಂತ …

Read More »