Breaking News

ರಾಷ್ಟ್ರೀಯ

ಬಿಎಂಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರು ಸುಟ್ಟು ಕರಕಲು

ಬೆಂಗಳೂರು: ವೇಗವಾಗಿ ಬಂದ ಕಾರು ಬಿಎಂಟಿಸಿ ಬಸ್‌ಗೆ ಡಿಕ್ಕಿಯಾಗಿ ಅಗ್ನಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ನಾಗರಭಾವಿ ಹೊರವರ್ತುಲ ರಸ್ತೆಯ ಚಂದ್ರಾಲೇಔಟ್ ಬಸ್ ನಿಲ್ದಾಣದ ಬಳಿ ನಡೆಯಿತು. ಯಶವಂತಪುರದಿಂದ ನಾಯಂಡಹಳ್ಳಿಗೆ ತೆರಳುತ್ತಿದ್ದ ಬಸ್​ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಿಕೊಳ್ಳಲು ಚಂದ್ರಾಲೇಔಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಹಿಂಬದಿಯಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉಂಟಾದ ಘರ್ಷಣೆಯಿಂದ ಬೆಂಕಿ ಹತ್ತಿಕೊಂಡಿದ್ದು, ಕಾರು ಪೂರ್ತಿಯಾಗಿ …

Read More »

ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಶಾಸಕಾಂಗ ಸಭೆಗೆ ಹಾಜರಾಗಲ್ಲ: ಯತ್ನಾಳ್

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ. ಸುವರ್ಣಸೌಧದಲ್ಲಿಂದು ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಭಾಗದವರಿಗೆ ನಾಯಕತ್ವ ನೀಡಿಲ್ಲ. ನಾವು ದ.ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ ಎಂದು ಅಸಮಾಧಾನ ಹೊರಹಾಕಿದರು. ದೇಶಕ್ಕೆ ನರೇಂದ್ರ ಮೋದಿಯೇ ಗ್ಯಾರಂಟಿ ಇರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. ಈ ಗೆಲುವಿಗೆ ಕಾರಣ ಹಿಂದುತ್ವ, ಅಭಿವೃದ್ಧಿ, ಹೊಂದಾಣಿಕೆ ಇಲ್ಲದ …

Read More »

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಕೀಲರ ಪ್ರತಿಭಟನೆ

ಚಿಕ್ಕಮಗಳೂರು ವಕೀಲರ ಮೇಲೆ ಪೋಲಿಸರ ಹಲ್ಲೆ ಖಂಡಿಸಿ ಬೆಳಗಾವಿಯಲ್ಲಿ ವಕೀಲರ ಪ್ರತಿಭಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಕೀಲರ ಪ್ರತಿಭಟನೆ ಪ್ರತಿಭಟನೆ ವೇಳೆ ಚಿಕ್ಕೋಡಿ ಎಸಿ. ಹಾಗೂ ವಕೀಲರ ನಡುವೆ ಜಟಾಪಟಿ ಪ್ರತಿಭಟನೆ ವೇಳೆ ಎಸಿ.ವಾಹನ ಒಳಗಡೆ ಬಂದ ಹಿನ್ನಲೆ ರೊಚ್ಚಿಗೆದ್ದ ವಕೀಲರು ಪ್ರತಿಭಟನಾ ಸ್ಥಳದಲ್ಲಿ ಎಸಿ ಜೋತೆಗೆ ವಾಗ್ವಾದ ಎ.ಸಿ.ಯನ್ನ ಕೆಳಗೆ ಇಳಿಸಿ ನಡೆದುಕೊಂಡು ಕಳಿಸಿದ ವಕೀಲರು ವಕೀಲರ ವರ್ತನೆಗೆ ಸ್ಥಳದಲ್ಲಿ ವಾಹನ ಬಿಟ್ಟು ತೆರಳಿದ ಚಿಕ್ಕೋಡಿ ಎ.ಸಿ ಸಂಪಗಾವಿ

Read More »

ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ, ಬಡವರಿಗೆ ಅನೂಕೂಲವಾಗಲಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಳಗಾವಿ :ಉತ್ತರ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ (Belagavi) ಜಿಲ್ಲೆ. ಈ ಭಾಗದ ಬಡವರಿಗೆ, ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸುವರ್ಣಸೌಧ (Suvarna soudha) ಚಿಂತನೆ ಮಾಡಿದ್ದು ಮಾಜಿ ಸಿಎಂ ಯಡಿಯೂರಪ್ಪನವರು (B S Yediyurappa). ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ, ಬಡವರಿಗೆ ಅನೂಕೂಲವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಹೇಳಿದರು. ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನತೆ …

Read More »

ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ, ಅರ್ಜಿ ಸಲ್ಲಿಕೆ, ವೇತನದ ವಿವರ

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಒಟ್ಟು 540 ಅರಣ್ಯ ಪಾಲಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇವು ಗ್ರೂಪ್​ ಸಿ ಹುದ್ದೆಗಳಾಗಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಧಿಸೂಚನೆಹುದ್ದೆಗಳು- ಎಲ್ಲಿ, ಎಷ್ಟು?: ಬೆಂಗಳೂರು 49 ಬೆಳಗಾವಿ 12 ಬಳ್ಳಾರಿ 29 ಚಾಮರಾಜನಗರ 83 ಚಿಕ್ಕಮಗಳೂರು 52 ಧಾರವಾಡ 5 ಹಾಸನ 18 ಕಲಬುರಗಿ 58 ಕೆನಾರ 33 ಕೊಡಗು 26 ಮಂಗಳೂರು 62 ಮೈಸೂರು 47 ಶಿವಮೊಗ್ಗ 66 ವಿದ್ಯಾರ್ಹತೆ: ಅಧಿಕೃತ …

Read More »

ಹಾವೇರಿ: 7 ಜೀವಂತ ನಾಡ ಬಾಂಬ್‌ ಪತ್ತೆ, ಆರೋಪಿ ಬಂಧನ

ಹಾವೇರಿ: ಹಾನಗಲ್ ತಾಲೂಕಿನ ಆಡೂರು ಪೊಲೀಸರು ಕಾರ್ಯಾಚರಣೆ ನಡೆಸಿ 7 ಜೀವಂತ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಡ ಬಾಂಬ್ ಇಟ್ಟಿದ್ದ ಆರೋಪದಡಿ ದುರ್ಗಪ್ಪ ತುರಬಿಗುಡ್ಡ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿ ಬೇಟೆಯಾಡುವ ಉದ್ದೇಶದಿಂದ ಕುಸನೂರು ಅರಣ್ಯ ಪ್ರದೇಶದಲ್ಲಿ ಈತ ನಾಡ ಬಾಂಬ್‌ಗಳನ್ನು ಇಟ್ಟಿದ್ದ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪತ್ತೆಯಾದ 7 ಜೀವಂತ ನಾಡಬಾಂಬ್‌ಪ್ರತ್ಯೇಕ ಪ್ರಕರಣ- ಖಾಸಗಿ ಫೋಟೋ ಸೆರೆಹಿಡಿದು …

Read More »

ಬೆಳಗಾವಿಯಲ್ಲಿ ಅಧಿವೇಶನದ ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಹಾಗು ಜೆಡಿಎಸ್ ಸಿದ್ಧ

ಬೆಂಗಳೂರು : ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಪ್ರತಿಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಅಖಾಡಕ್ಕೆ ದುಮುಕಲು ಸಿದ್ಧವಾಗಿದ್ದು, ಪರಸ್ಪರ ಸಹಕಾರದಿಂದ ಒಟ್ಟಾಗಿ ಕಾಂಗ್ರೆಸ್ ಎದುರಿಸಲು ಸನ್ನದ್ಧವಾಗಿವೆ.   ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಈಗ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಸದನದಲ್ಲಿ ಉಭಯ ಪ್ರತಿಪಕ್ಷಗಳು ಜಂಟಿಯಾಗಿ ವಾಗ್ದಾಳಿ ನಡೆಸಲಿವೆ. …

Read More »

ತೆಲಂಗಾಣದ ಎರಡನೇ ಸಿಎಂ ಆಗಿ ರೇವಂತ್​ ರೆಡ್ಡಿ ಪ್ರಮಾಣವಚನ

ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್​ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಕಾಂಗ್ರೆಸ್​ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಇದರೊಂದಿಗೆ ಕೆ. ಚಂದ್ರಶೇಖರ್​ ರಾವ್​ ನೇತೃತ್ವದ ಬಿಆರ್​ಎಸ್​ನ 10 ವರ್ಷಗಳ ಆಡಳಿತ ಅಂತ್ಯವಾಗಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಎ. ರೇವಂತ್​ ರೆಡ್ಡಿ ರಾಜ್ಯದ ಎರಡನೇ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ (ಡಿಸೆಂಬರ್ 4) ಪ್ರಮಾಣವಚನ ಸ್ವೀಕಾರ …

Read More »

ತೆಲಂಗಾಣದಲ್ಲಿ ಬಿಆರ್​ಎಸ್​ ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ತೆಲಂಗಾಣದಲ್ಲಿ ಬಿಎಸ್​ಆರ್​ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು, “ನಾನು ಖುದ್ದಾಗಿ ತೆಲಂಗಾಣಕ್ಕೆ ಭೇಟಿ ನೀಡಿದ್ದೇನೆ. 10 ವರ್ಷದ ಕೆಸಿಆರ್ ಆಡಳಿತದಲ್ಲಿ 10 ಸ್ಕ್ಯಾಮ್ ಗಳಲ್ಲಿ 10 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾಳೇಶ್ವರಂ ನೀರಾವರಿ ಯೋಜನೆಯೊಂದರಲ್ಲೇ 1.50 ಲಕ್ಷ ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಅಲ್ಲಿನ …

Read More »

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಫುಲ್ ಖುಷ್ ಮೂರು ರಾಜ್ಯಗಳಿಗೆ ಬಿಜೆಪಿಯೇ ಬಾಸ್

ಪ್ರಚಂಡ ವಿಜಯಕ್ಕೆ ಕಾರಣೀಕರ್ತರಾದ ಮತದಾರ ಪ್ರಭುಗಳು ಹಾಗೂ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ- ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ್ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿರುವುದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೇನೂ ಲೋಕಸಭೆಯ ಚುನಾವಣೆಯ ಹೊಸ್ತಿನಲ್ಲಿರುವಾಗ ಈ ರಾಜ್ಯಗಳ ಫಲಿತಾಂಶಗಳು ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಕೇಂದ್ರ ಸರ್ಕಾರದ ಯೋಜನೆಗಳಿಂದ ಮತದಾರರು ಬಿಜೆಪಿಗೆ ಫುಲ್ …

Read More »