Breaking News

ರಾಷ್ಟ್ರೀಯ

ಪ್ರೊ ಕಬಡ್ಡಿ 10ನೇ ಆವೃತ್ತಿಯ ನಿನ್ನೆ (ಶುಕ್ರವಾರ) ನಡೆದ ಪಂದ್ಯದಲ್ಲಿ ಯು ಮುಂಬಾ ಮಣಿಸಿ ಪುಣೇರಿ ಪಲ್ಟನ್ ತಂಡವು ಎರಡನೇ ಜಯ ದಾಖಲಿಸಿತು.

ಬೆಂಗಳೂರು: ಯು ಮುಂಬಾ ತಂಡವನ್ನು 43- 32 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ತಂಡ ತನ್ನ ಎರಡನೇ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 17 ರೈಡಿಂಗ್‌ಗಳಲ್ಲಿ 12 ಅಂಕಗಳನ್ನು ಗಳಿಸಿದ ಮೋಹಿತ್‌ ಗೋಯತ್ ಅವರು, ಪಲ್ಟನ್‌ ತಂಡದ ಅದ್ಭುತ ಜಯಕ್ಕೆ ಕಾರಣರಾದರು. ಯು ಮುಂಬಾ ಮಣಿಸಿ ಎರಡನೇ ಜಯ ದಾಖಲಿಸಿದ ಪುಣೇರಿ ಪಲ್ಟನ್ಈ ಋುತುವಿನ …

Read More »

ಬ್ರಾಂಡ್ ಬೆಂಗಳೂರಿನ ಅಡಿ ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಪಾಲಿಕೆಯಿಂದ ಬ್ಯಾಂಡ್ – ಬೆಂಗಳೂರಿನ ಅಡಿ ಸಿಲಿಕಾನ್ ಸಿಟಿಯನ್ನು ಸುಂದರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಬೆಂಗಳೂರು ಹಬ್ಬವನ್ನು ಸಹ ಆಚರಿಸಿ ನಗರದ ಹಲವು ರಸ್ತೆಗಳು, ಜಂಕ್ಷನ್ ಕಟ್ಟಡಗಳನ್ನು ಸುಂದರಗೊಳಿಸಿ ವಿದ್ಯುತ್ ಅಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರಫ್ಲೈ ಓವರ್ ಪಿಲ್ಲರ್​ಗಳ ಕೆಳಗೆ ಸಹ , ಕುಳಿತುಕೊಳ್ಳಲು ಆಸನಗಳು ಮತ್ತು ಮಕ್ಕಳಿಗೆ ಆಟವಾಡಲು ಅನುವು ಮಾಡಿಕೊಡಲಾಗಿದೆ. ಪಿಲ್ಲರ್​ಗಳಿಗೆ ಹಲವು ಚಿತ್ರಗಳನ್ನು ಸಹ ಬಿಡಿಸಿ ಸ್ಥಳವನ್ನು …

Read More »

ಹಿರಿಯ ನಟಿ ಡಾ. ಲೀಲಾವತಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಹಿರಿಯ ನಟಿ ಡಾ. ಲೀಲಾವತಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ್-ಸ್ಯಾಂಡಲ್ ವುಡ್ ನ ಹಿರಿಯ ನಟಿ ಡಾ. ಲೀಲಾವತಿ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ನಿಧನದಿಂದ ಚಿತ್ರೋದ್ಯಮವೂ ಸೇರಿದಂತೆ ಇಡೀ ನಾಡೇ ಬಡವಾಗಿದೆ. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಅವರು, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಬಹುಭಾಷೆ ನಟಿಯಾಗಿ ಗುರುತಿಸಿಕೊಂಡಿದ್ದ ಅವರು, ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ …

Read More »

ಸತತ ಹಾಜರಿ: ಶಾಸಕ ಜನಾರ್ದನ ರೆಡ್ಡಿಗೆ ಉಡುಗೊರೆ

ಗಂಗಾವತಿ: ಕಳೆದ ವಿಧಾನಸಭೆಯ ಅಧಿವೇಶನದ ಕಲಾಪದ ಒಂದು ದಿನವೂ ಗೈರಾಗದೇ ಗಮನ ಸೆಳೆದಿದ್ದ ಗಂಗಾವತಿಯ ಶಾಸಕ ಜಿ. ಜನಾರ್ದನ ರೆಡ್ಡಿಗೆ ಸ್ಪೀಕರ್ ಯು.ಟಿ. ಖಾದರ್ ಉಡುಗೊರೆ ನೀಡುವ ಮೂಲಕ ಅಭಿನಂದಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಬಿಡುವಿನ ಸಂದರ್ಭದಲ್ಲಿ ತಮ್ಮ ಕೊಠಡಿಗೆ ಕರೆಯಿಸಿಕೊಂಡ ಸ್ಪೀಕರ್ ಪುಟ್ಟ ಉಡುಗೊರೆ ನೀಡಿ ಅಭಿನಂದನೆ ಸಲ್ಲಿಸಿದರು.   ವಿಧಾನಸೌಧದಲ್ಲಿ ನಡೆದ ಕಳೆದ ಅಧಿವೇಶನದ 14 ದಿನಗಳ ಎಲ್ಲ ಕಾರ್ಯಕಲಾಪದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ದಿನದ …

Read More »

ಯತ್ನಾಳ, ಮೌಲ್ವಿ ಕುಟುಂಬ ಉದ್ಯಮದ ಪಾಲುದಾರರು: ಅಕ್ಕಪಕ್ಕದ ಮನೆಗಳಲ್ಲೇ ವಾಸ

ವಿಜಯಪುರ: ‘ಐಸಿಸ್‌ ಭಯೋತ್ಪಾದಕರೊಂದಿಗೆ ನಂಟಿದೆ’ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಆರೋಪಕ್ಕೆ ಒಳಗಾಗಿರುವ ಜಮಾತ್‌ ಎ ಅಹಲೆ ಸುನ್ನತ್‌ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆದ ಮೌಲ್ವಿ ತನ್ವೀರ್‌ ಹಾಶ್ಮಿ ಅವರು ಇಲ್ಲಿನ ಗಾಂಧಿಚೌಕದ ಬಳಿಯಿರುವ ‘ಟೂರಿಸ್ಟ್‌ ಹೋಟೆಲ್‌’ನ ಪಾಲುದಾರರು.   ಅಷ್ಟೇ ಅಲ್ಲ, ನಗರದ ಹೊರವಲಯದ ಮಹಲ್‌ ಐನಾಪುರ ಗ್ರಾಮದಲ್ಲಿ ಹಾದು ಹೋಗಿರುವ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ಅವರಿಬ್ಬರ ಮನೆಗಳು, ವಾಣಿಜ್ಯ ಮಳಿಗೆಗಳು …

Read More »

ಆರ್​ಎಸ್​ಎಸ್​ ಮ್ಯೂಸಿಯಂಗೆ ದಲಿತರಿಗೆ ಪ್ರವೇಶವಿಲ್ಲ ಅನ್ನೋದು ಹಸಿ ಸುಳ್ಳು: ಮಾಜಿ ಶಾಸಕ ಎನ್​ ಮಹೇಶ್

ಚಾಮರಾಜನಗರ : ಮೌನವಾಗಿ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಆರ್​ಎಸ್​ಎಸ್​ ಮ್ಯೂಸಿಯಂ ಒಳಗೆ ದಲಿತರಿಗೆ ಪ್ರವೇಶಕ್ಕೆ ಅವಕಾಶವಿಲ್ಲವೆಂಬುದು ಹಸಿ ಸುಳ್ಳು. ಏನಾದರೂ ದಲಿತರಿಗೆ ಅವಕಾಶವಿಲ್ಲ ಎನ್ನುವುದು ನಿಜವಾದರೇ ಅದನ್ನು ಗೂಳಿಹಟ್ಟಿ ಶೇಖರ್ ಸಾಬೀತುಪಡಿಸಲಿ ಎಂದು ಮಾಜಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ. ಚಾಮರಾಜನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರ ವಾಟ್ಸಪ್​ ಆಡಿಯೋದಲ್ಲಿರುವ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಸೈಕಾಲಜಿ ವಿದ್ಯಾರ್ಥಿಯಾದ ನನಗೆ ಅವರು ಹೇಳಿರುವುದು ಸುಳ್ಳು ಅನಿಸುತ್ತದೆ. …

Read More »

ಕ್ಯಾ. ಅರ್ಜುನನ ಸಮಾಧಿಗೆ ಕೈ ಮುಗಿದು ನಮಸ್ಕರಿಸಿದ ಮಹಾರಾಜ ಯದುವೀರ್ ಒಡೆಯರ್

ಹಾಸನ: ಕಾಡಾನೆ ದಾಳಿಯಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟ ಹಿನ್ನೆಲೆ ಅರ್ಜುನನ ಸಮಾಧಿಗೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹಾಗೂ ಧರ್ಮಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಆಗಮಿಸಿ ನಮಸ್ಕರಿಸಿದರು.   ಹಾಸನದ ಸಕಲೇಶಪುರದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಬಲಿಷ್ಠವಾದ ಒಂಟಿ ಸಲಗದ ದಾಳಿಗೆ ಅರ್ಜುನ ಗಾಯಗೊಂಡು ಸಾವನ್ನಪ್ಪಿದ್ದ. ಮೃತ ಕ್ಯಾಪ್ಟನ್​ ಅರ್ಜುನನ್ನು ಹಾಸನದ ಯಸಳೂರಿನ ದಬ್ಬಳ್ಳಿಕಟ್ಟೆಯಲ್ಲಿ ಸಮಾಧಿ ಮಾಡಲಾಗಿತ್ತು. ಇಂದು ಹಾಸನಕ್ಕೆ ಆಗಮಿಸಿ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ …

Read More »

ಇಡೀ ದೇಶವೇ ದುಃಖಕ್ಕೆ ಜಾರುವಂತೆ ಮಾಡಿತ್ತುಡಿಸೆಂಬರ್ 8, 2021..

ಸಿಡಿಎಸ್​ ಬಿಪಿನ್​ ರಾವತ್​ ವೀರಮರಣವನ್ನಪ್ಪಿ ಇಂದಿಗೆ 2 ವರ್ಷ. ಅಂದು ನಡೆದ ದುರಂತದಲ್ಲಿ ನಂಜಪ್ಪ ಛತ್ರಂ ಗ್ರಾಮದ ಜನರು ಮೆರೆದ ಮಾನವೀಯತೆ ಗಮನ ಸೆಳೆದಿದೆ. ಈ ಗ್ರಾಮದಲೀಗ ಸಿಡಿಎಸ್​​​​​​​​​​​​ ರಾವತ್​ ಸೇರಿ ಮಡಿದವರ ಸ್ಮಾರಕ ಎದ್ದು ನಿಂತಿದೆ. ಈ ಕುರಿತ ಮಾಹಿತಿ ಇಲ್ಲಿದೆ.   ಕೊಯಮತ್ತೂರು (ತಮಿಳುನಾಡು): ಡಿಸೆಂಬರ್ 8, 2021.. ದೇಶಕ್ಕೆ ದೇಶವೇ ಮೌನಕ್ಕೆ ಜಾರಿದ ದಿನ. ಜನರಲ್​​​​​​ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಜನರು …

Read More »

ಯತ್ನಾಳ್ ಒಬ್ಬ ಮಹಾ ಸುಳ್ಳುಗಾರ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ: ”ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಒಬ್ಬ ಮಹಾ ಸುಳ್ಳುಗಾರ. ಅವರು ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.   ತೆಲಂಗಾಣ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೆರಳುವ ಮುನ್ನ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಯತ್ನಾಳ್ ಅವರ ಹೇಳಿಕೆ ವಿರುದ್ಧ ಕಿಡಿಕಾರಿದರು. ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಯತ್ನಾಳ್ …

Read More »

ವಿಶೇಷಚೇತನರು, ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಸಮಸ್ಯೆ ಆಲಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿಆರ್​ಡಬ್ಬ್ಯೂ, ಯುಆರ್​ಡಬ್ಬ್ಯೂ, ಎಂಆರ್​ಡಬ್ಲ್ಯೂಗಳ ಸೇವೆಯನ್ನು ಖಾಯಂಗೊಳಿಸುವುದೂ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುವರ್ಣ ಗಾರ್ಡನ್ ಬಳಿಯ ಟೆಂಟ್​ನಲ್ಲಿ ಇಂದು ಕರ್ನಾಟಕ ರಾಜ್ಯ ವಿಶೇಷಚೇತನರ ಹಾಗೂ ವಿವಿಧೋದ್ಧೇಶ ಮತ್ತು ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.   ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು. ಸೇವಾ ಭದ್ರತೆ ಕಲ್ಪಿಸಬೇಕು. …

Read More »