ಬೆಂಗಳೂರು, ಜನವರಿ 09:ಲೋಕಾಯುಕ್ತ(Lokayukta) ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಬಳ್ಳಾರಿ, ರಾಮನಗರ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ನಾಲ್ಕು ಹಾಗೂ ರಾಮನಗರದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಈ ದಾಳಿ ನಡೆಸಿದೆ. ಪಿಡಬ್ಯೂಡಿ (PWD), ಪಿಡಿಓ (PDO) , ಬೆಸ್ಕಾಂ (BESCOM), ಕೆಆರ್ಐಡಿಎಲ್ (KRIDL) ಹಾಗೂ ಪಂಚಾಯತ್ ಸದಸ್ಯ ಮತ್ತು ಟೌನ್ ಪ್ಲ್ಯಾನಿಂಗ್ ಅಧಿಕಾರಿಗೆ ಸೇರಿದ ಜಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. …
Read More »ಮೂರು ಡಿಸಿಎಂ ಸೃಷ್ಟಿ ವಿಚಾರ: ಸ್ಪಷ್ಟನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಜನವರಿ 09: ದಲಿತ ಮತಗಳನ್ನು ಭದ್ರಪಡಿಸಿಕೊಳ್ಳಲು ಲೋಕಸಭಾ ಚುನಾವಣೆಗೂ (Lok Sabha Election) ಮುನ್ನ ಇನ್ನೂ ಮೂರುಡಿಸಿಎಂ(DCM) ಸ್ಥಾನ ಸೃಷ್ಟಿಸುವಂತೆ ಕಾಂಗ್ರೆಸ್ (Congress) ಹೈಕಮಾಂಡ್ ಮೇಲೆ ಸಿದ್ದರಾಮಯ್ಯ (Siddaramaiah) ಆಪ್ತ ಬಣ ಒತ್ತಡ ಹೇರುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ (Mallikarjun Kharge) ಮಾತನಾಡಿ, ಮೂವರು ಡಿಸಿಎಂ ವಿಚಾರ ಹೈಕಮಾಂಡ್ ಮುಂದೆ ಇಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ …
Read More »ವಿದ್ಯಾರ್ಥಿಗಳು ಶಾಲೆಯಲ್ಲಿ ಶೌಚಾಲಯ ತೊಳೆದರೆ ತಪ್ಪಿಲ್ಲ: ಯುಟಿ ಖಾದರ್
ಮಂಗಳೂರು, : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯಗಳನ್ನು ತೊಳೆದರೆ ತಪ್ಪಿಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ವಿಧಾನಸಭೆ ಸ್ಪೀಕರ್ಯುಟಿ ಖಾದರ್(UT Khader), ವಿದ್ಯಾರ್ಥಿಯಾಗಿದ್ದಾಗ ನಾನು ಕೂಡ ಶಾಲೆಯ ಶೌಚಾಲಯವನ್ನು ತೊಳೆದಿದ್ದೇನೆ. ಮಕ್ಕಳ ಶೌಚಾಲಯವನ್ನು ಮಕ್ಕಳೇ ಸ್ವಚ್ಚಗೊಳಿಸಿದರೆ ತಪ್ಪಿಲ್ಲ. ಇದು ಶಿಕ್ಷಣದ ಒಂದು ಭಾಗ ಎಂದು ಹೇಳಿದರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಮಾತನಾಡಿದ ಅವರು, ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಾಗಿದ್ದಾಗ ನಾವೇ ಕ್ಲೀನ್ ಮಾಡುತ್ತಿದ್ದೆವು. ಅದು ಶಿಕ್ಷಣದ ಒಂದು …
Read More »545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆ,
ಬೆಂಗಳೂರು, ಜ.09: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ (PSI Recruitment Scam) ನಡೆದ ಹಿನ್ನೆಲೆ ರದ್ದಾಗಿದ್ದ ಪರೀಕ್ಷೆಯನ್ನು ಮತ್ತೆ ಬರೆಯಲು ದಿನಾಂಕ ನಿಗದಿಯಾಗಿದ್ದು ಜ. 23ರಂದು ಮರು ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ (KEA) ಹೊರಡಿಸಿದೆ. ಕಳೆದ ಡಿ.23ರಂದು ಬೆಂಗಳೂರಿನಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲು ಪ್ರಾಧಿಕಾರ ದಿನಾಂಕ ಪ್ರಕಟಿಸಿತ್ತು. ಆದರೆ, ಅಭ್ಯರ್ಥಿಗಳು ಪರೀಕ್ಷೆಗೆ ತಯಾರಾಗಲು ಹೆಚ್ಚಿನ ಕಾಲಾವಕಾಶ ನೀಡಲು ಪರೀಕ್ಷೆ ಮುಂದೂಡ ಬೇಕೆಂದು …
Read More »ಡೆತ್ ನೋಟ್ ಬರೆದಿಟ್ಟು ಪಿಯು ವಿದ್ಯಾರ್ಥಿ ಆತ್ಯಹತ್ಯೆ
ಬೆಂಗಳೂರು ಗ್ರಾಮಾಂತರ, ಜ.09 : ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯದೊಡ್ಡಬಳ್ಳಾಪುರ( Doddaballapura )ದ ತ್ಯಾಗರಾಜನಗರದ ಮನೆಯೊಂದರಲ್ಲಿ ನಡೆದಿದೆ. ಜಾನ್ಸಿ(17) ಆತ್ಯಹತ್ಯೆಗೆ ಶರಣಾದ ವಿದ್ಯಾರ್ಥಿ. ನಾನು ಯಾರಿಗೂ ಮೋಸ ಮಾಡಿಲ್ಲ. ಬುಜ್ಜಿ, ಆಲ್ ಫ್ರೆಂಡ್ಸ್ ಮಿಸ್ಯೂ. ನಾನು ಲೋಕ ಬಿಟ್ಟು ತೆರಳುತ್ತಿದ್ದೇನೆ, ಎಲ್ಲರೂ ಖುಷಿ ಖುಷಿಯಾಗಿರಿ ಎಂದು ಡೆತ್ ನೋಟ್ ಬರೆದಿಟ್ಟು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಘಟನೆ …
Read More » ಯತ್ನಾಳ್ಗೆ ಮುಖಭಂಗ ಕಾಂಗ್ರೆಸ್ ತೆಕ್ಕೆಗೆ ವಿಜಯಪುರ ಮಹಾನಗರ ಪಾಲಿಕೆ
ವಿಜಯಪುರ: ತೀವ್ರ ಕುತೂಹಲ ಮೂಡಿಸಿದ್ದ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಿದ್ದು, ಎರಡೂ ಸ್ಥಾನದಲ್ಲಿ ಕಾಂಗ್ರೆಸ್(Congress) ಜಯಭೇರಿ ಬಾರಿಸಿದೆ. ವಿಜಯಪುರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ನ ಮೆಹಜಬೀನ್ ಹೊರ್ತಿ ಆಯ್ಕೆಯಾಗಿದ್ದರೆ, ಉಪ ಮೇಯರ್ ಆಗಿ ಕಾಂಗ್ರೆಸ್ನ ದಿನೇಶ್ ಹಳ್ಳಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿಜಯಪುರ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬಿಜೆಪಿ(BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ) ಮುಖಭಂಗವಾಗಿದೆ. …
Read More »ನಡು ರಸ್ತೆಯಲ್ಲೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳು
ರಾಯಚೂರು, : ನಡು ರಸ್ತೆಯಲ್ಲೇ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರಾಯಚೂರು (Raichur) ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರುಕಾಲುವೆ ಬಳಿನಡೆದಿದೆ. ಕಾಪರ್ ವೈರ್ ಕಳ್ಳತನ ಆರೋಪಿಗಳನ್ನು ಬಂಧಿಸಲು ಹೋದಾಗ, ಬಳಗಾನೂರ ಠಾಣೆಯ ಪೊಲೀಸ್ ಪೇದೆ(Police constable) ಗಳಾದ ಮಂಜುನಾಥ್ ಹಾಗೂ ಗೋಪಾಲ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಕಾನ್ಸ್ಟೇಬಲ್ಗಳಿಗೆ ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲೆಗೈದ ಆರೋಪಿಗಳಿಗಾಗಿ ಬಳಗಾನೂರ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ …
Read More »ವಿಜಯಪುರ: ಜ.12 ರಿಂದ ಸಿದ್ದೇಶ್ವರ ಜಾತ್ರೆ ಮಹೋತ್ಸವ; ಯಾವ ದಿನ ಏನೇನು ನಡೆಯಲಿದೆ? ಮಾಹಿತಿ ಇಲ್ಲಿದೆ
ವಿಜಯಪುರ,: ಕೊರೊನಾ ಹಾಗೂ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಕಳೆದ ಮೂರು ವರ್ಷಗಳಿಂದನಗರದಸಿದ್ದೇಶ್ವರ ಜಾತ್ರಾ ಮಹೋತ್ಸವ (Siddheshwar Fair) ನಡೆಸಿರಲಿಲ್ಲ. ಇದೀಗ ಜನವರಿ 12 ರಿಂದ ಜಾತ್ರೆ ಆರಂಭವಾಗಲಿದ್ದು, 18ರ ವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಆ ದಿನಗಳಂದು ವಿವಿಧ ಕಾರ್ಯಕ್ರಮಗಳನ್ನು ಪೂಜಾ ವಿಧಿವಿಧಾನಗಳು ನಡೆಯಲಿವೆ. ಜಾತ್ರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಾತ್ರಾ ಉತ್ಸವ ಸಮೀತಿ ಅಧ್ಯಕ್ಷ ಗುರು ಗಚ್ಚಿನಮಠ, ಜನೇವರಿ 12 ರಂದು ಗೋಮಾತೆ ಪೂಜೆ ಹಾಗೂ ನಂದಿಧ್ವಜಗಳ ಮೆರವಣಿಗೆ …
Read More »ಕೆಎಸ್ಆರ್ಟಿಸಿ ಬಸ್ ಸೋರಿಕೆ; ಬೆಂಗಳೂರಿನಿಂದ ಓಂಶಕ್ತಿ ದೇವಾಲಯಕ್ಕೆ ಹೋಗಿದ್ದ ಭಕ್ತರ ಪರದಾಟ
ಬೆಂಗಳೂರು, ಜ.8: ನಗರದಿಂದ ಕಾಂಚೀಪುರಂನಲ್ಲಿರುವ ಓಂ ಶಕ್ತಿ ದೇವಸ್ಥಾನಕ್ಕೆಕೆಎಸ್ಆರ್ಟಿಸಿ (KSRTC)ಸ್ಪೆಷಲ್ ಬಸ್ ಮೂಲಕ ತೆರಳಿದ್ದ ಓಂ ಶಕ್ತಿ ಮಾಲಾಧಾರಿಗಳು ಬಸ್ ಸೋರಿಕೆಯಿಂದ ಪರದಾಡುವಂತಾಗಿದೆ. ಬಸ್ ಬುಕ್ ಮಾಡಿದ ಭಕ್ತರಿಗೆ ಸಾರಿಗೆ ಇಲಾಖೆ ಡಕೋಟ ಬಸ್ ಕೊಟ್ಟಿರುವುದರಿಂದ ಭಕ್ತರು ಪರದಾಡುವಂತಾಗಿದೆ. ಚೆನ್ನೈ, ಕಾಂಚೀಪುರಂ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ಆದರೆ, ಬೆಂಗಳೂರಿನಿಂದ ಓಂ ಶಕ್ತಿ ದೇವಾಲಯಕ್ಕೆ ಭಕ್ತರು ಹೋಗಿದ್ದ ಕೆಎಸ್ಆರ್ಟಿಸಿ ಬಸ್ ಗುಜರಿಯಾಗಿದ್ದರಿಂದ ಮಳೆ ನೀರು ಸೋರಿಕೆಯಾಗುತ್ತಿದೆ. ಬಸ್ ಒಳಗೆ ಮಳೆ …
Read More »ನನಗೆ ನನ್ನ ಇಬ್ಬರು ಹೆಂಡ್ತೀರು ಬೇಕು; ಮದ್ಯದ ಅಮಲಿನಿಲ್ಲಿ ಮಾನ್ವಿ ಠಾಣೆಗೆ ನುಗ್ಗಿ ಪೊಲೀಸರಿಗೆ ಕಾಟ ಕೊಟ್ಟ ವ್ಯಕ್ತಿ
ರಾಯಚೂರು, : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಕಾಟ ಕೊಟ್ಟ ಘಟನೆರಾಯಚೂರು(Raichur) ಜಿಲ್ಲೆಯಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನೇರವಾಗಿ ಮಾನ್ವಿ ಪೊಲೀಸ್ ಠಾಣೆಗೆ ಬಂದು ನೀಡಿದ ಕಾಟಕ್ಕೆ ಪೊಲೀಸರೇ ಸುಸ್ತಾಗಿದ್ದರು. ಊಟದ ಹೊತ್ತಲ್ಲಿ ಎಂಟ್ರಿ ಕೊಟ್ಟಿದ್ದ ಆತನ ಕಿರಿಕ್ಗೆ ಖಾಕಿ ಪಡೆ ಏನ್ ಮಾಡಬೇಕು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಮದಿರೆಯ ಮತ್ತಲ್ಲಿ ಹಾವಳಿ ಇಟ್ಟಿದ್ದವನ ಡಿಮ್ಯಾಂಡ್ಗೆ …
Read More »