Breaking News

ರಾಷ್ಟ್ರೀಯ

ಚಿತ್ರದುರ್ಗ: ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತ

ಚಿತ್ರದುರ್ಗ, ಜನವರಿ 21: ಎಲ್​​ಪಿಜಿ ಸಿಲಿಂಡರ್ (Cylinder) ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮಮ್ಮ (38) ಮೃತ ದುರ್ದೈವಿ. ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಮೇಶ್ ಎಂಬುವರ ಬೀದಿ ಬದಿ ಹೋಟೆಲ್​​ಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿದ್ದ ಮಹಿಳಾ ಕಾರ್ಮಿಕರು ಬೀದಿ ಬದಿ ಹೋಟೆಲ್​​ನತ್ತ ಧಾವಿಸಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಸಿಲಿಂಡರ್​ …

Read More »

ಹಳ್ಳಿ ಹುಡಗನ ಕೈಚಳಕ: ಜೋಳ, ಅಕ್ಕಿಯಿಂದ ಭವ್ಯ ಶ್ರೀರಾಮಮಂದಿರ ನಿರ್ಮಾಣ

ಗದಗ, ಜನವರಿ 21: ಅಯೋಧ್ಯೆಯಲ್ಲಿ (Ayodhya) ನಾಳೆ (ಜ.22) ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಜನರು ಕಾಯುತ್ತಿದ್ದಾರೆ. ಭಕ್ತರು ವಿವಿಧ ರೂಪದಲ್ಲಿ ಪ್ರಭು ಶ್ರೀರಾಮಚಂದ್ರನಿಗೆ (Sri Ram) ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಇದೀಗ ಗದಗ ಜಿಲ್ಲೆಯ ಚಿಕ್ಕಹಂದಿಗೋಳ ಗ್ರಾಮದ ಯುವ ಕಲಾವಿದ ನಾಗರಾಜ ಕಮ್ಮಾರ ಅವರು 15 ಕೆಜಿ ಜೋಳ, 2 ಕೆಜಿ ಅಕ್ಕಿಯಲ್ಲಿ 12 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮಮಂದಿರ …

Read More »

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ

ಬೆಳಗಾವಿ, :ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜ.22ರಂದು ಪಂಚಾಂಗದ ಪ್ರಕಾರ ಮೃಗಶಿರಾ ನಕ್ಷತ್ರವಿದೆ. ಆ ದಿನ ಮಧ್ಯಾಹ್ನ 12.15ರಿಂದ 12.45ರ ನಡುವೆ ವಿಗ್ರಹವನ್ನು ಗರ್ಭಗುಡಿ ಯಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರಾಣ ತುಂಬಲಾಗುತ್ತದೆ. ಈ ಸಮಯದಲ್ಲಿ ಅಭಿಜಿನ್ ಮುಹೂರ್ತವಿರುತ್ತದೆ. ಇದೇ ಸಮಯದಲ್ಲಿ ರಾಮನ ಜನನವಾಯಿತು ಎಂಬ ಕಾರಣದ ಜತೆಗೆ, …

Read More »

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಬೆಳಗಾವಿಯಲ್ಲಿ ಶೋಭಾಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಳಗಾವಿ, : ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾನೆಹಿನ್ನೆಲೆ ಜಿಲ್ಲೆಯಲ್ಲಿ ಶೋಭಾಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ನ ಧಾರವಾಡ ವಿಭಾಗೀಯ ಪೀಠ​ ವಜಾಗೊಳಿಸಿ ಆದೇಶ ಹೊರಡಿಸಿದೆ. ಶ್ರೀರಾಮ ಸೇನೆ ಹಿಂದೂಸ್ತಾನ್ ವತಿಯಿಂದ ನಾಳೆ ಮಧ್ಯಾಹ್ನ ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟ‌ನೆ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ನಗರದ ಸಂಭಾಜಿ ವೃತ್ತದಿಂದ ಶಹಾಪೂರ ವರೆಗೂ ಶೋಭಾಯಾತ್ರೆ ನಡೆಸಲು ಮುಂದಾಗಿದ್ದರು. ಆದರೆ ಕಾನೂನು …

Read More »

ಹುಬ್ಬಳ್ಳಿ | ಎಲ್ಲೆಡೆ ರಾಮಮಯ; ಗುಡಿ-ಮಂದಿರ ಕೇಸರಿಮಯ

ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕೆ ಪೂರಕವಾಗಿ ವಾಣಿಜ್ಯ ನಗರಿಯೂ ಸಂಭ್ರಮದಿಂದ ಸಿದ್ಧಗೊಂಡಿದೆ. ನಗರದ ಪ್ರಮುಖ ವೃತ್ತ ಸೇರಿದಂತೆ ಗಲ್ಲಿಗಲ್ಲಿಯೂ ಕೇಸರಿ ಬಾವುಟಗಳಿಂದ ಸಿಂಗಾರಗೊಂಡಿದೆ.   ನಗರದ ದೇವಸ್ಥಾನಗಳು, ಮಠ-ಮಂದಿರಗಳು ರಾಮಧ್ವಜ, ಕೇಸರಿ ಬಾವುಟ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿವೆ. ಗ್ರಾಮೀಣ ಭಾಗದ ಗುಡಿ, ಮಂದಿರಗಳನ್ನು ಸಹ ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ. ವಿವಿಧ ಸಂಘ- ಸಂಸ್ಥೆಗಳು ಬಡಾವಣೆಗಳಲ್ಲಿ ರಾಮೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿವೆ. ದುರ್ಗದಬೈಲ್‌, ಗಣೇಶಪೇಟೆ, …

Read More »

ಜಾನುವಾರು ಜಾತ್ರೆ: ಭರ್ಜರಿ ವ್ಯಾಪಾರ

ಕಕ್ಕೇರಾ: ಪಟ್ಟಣದ ಸೋಮನಾಥ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜಾನುವಾರು ಜಾತ್ರೆ ಭರ್ಜರಿಯಾಗಿ ನಡೆಯುತ್ತಿದೆ. ಭಾನುವಾರದವರೆಗೆ ಜಾನುವಾರು ಜಾತ್ರೆ ಇರಲಿದೆ. ರಾಯಚೂರು, ಕೊಪ್ಪಳ, ಬಾಲಗಕೋಟೆ, ವಿಜಯಪುರ, ಮಾನ್ವಿ, ಲಿಂಗಸುಗೂರು, ದೇವದುರ್ಗ, ತಾವರಗೇರಾ, ಕುಷ್ಟಗಿ, ತಾಳಿಕೋಟೆ, ಇಂಡಿ ಸೇರಿದಂತೆ ವಿವಿಧೆಡೆಯಿಂದ ರೈತಾಪಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ದನಗಳೊಂದಿಗೆ ಜಾತ್ರೆಗೆ ಆಗಮಿಸಿರುವುದು ಕಂಡುಬಂದಿತು.   ಜವಾರಿ ದೊಡ್ಡ ಪಡಿ, ಮೈಸೂರು ಕಿಲಾರಿ, ಕಿಲಾರಿ ತಳಿ, ದೇವಣಿ ಹೀಗೆ ನಾನಾ ತಳಿಗಳ ಎತ್ತುಗಳು ಇಲ್ಲಿ …

Read More »

ಕಲಬುರಗಿ | ಅಘೋಷಿತ ಸ್ಲಂ ನಿವಾಸಿಗಳಿಗೆ ತ್ರಿಶಂಕು ಸ್ಥಿತಿ

ಕಲಬುರಗಿ: ನಗರದಲ್ಲಿರುವ ಘೋಷಿತ ಕೊಳೆಗೇರಿಗಳಲ್ಲಿ ಕೆಲ ಪ್ರದೇಶಗಳ ಅರ್ಧದಷ್ಟು ಭಾಗ ಅಘೋಷಿತವಾಗಿ ಉಳಿದಿದ್ದು, ಜನರಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಸಂಜೀವನಗರ ಕೊಳೆಗೇರಿ ಪ್ರದೇಶ ಇದಕ್ಕೆ ಉತ್ತಮ ಉದಾಹರಣೆ. ಇದು ಖಾಸಗಿಯವರ ಜಾಗದಲ್ಲಿದೆ. ಕೆಲ ಭಾಗವನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ. 80 ಮನೆಗಳಿರುವ ಪ್ರದೇಶ ಅಘೋಷಿತವಾಗಿ ಉಳಿದಿದೆ. ಇಲ್ಲಿಯ ಜನರಿಗೆ ಹಕ್ಕುಪತ್ರಗಳಿಲ್ಲದ ಕಾರಣ ಸರ್ಕಾರದ ಸೌಲಭ್ಯಗಳೂ ದಕ್ಕುತ್ತಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿಯೂ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಇಲ್ಲಿನ ಜನಕ್ಕೆ ಸಮಸ್ಯೆಯ ಸರಪಳಿಯಿಂದ ಕಳಚಿಕೊಂಡು …

Read More »

ಬೆಳುವಾಯಿಯಲ್ಲಿ ಬೆಳಗುತ್ತಿದೆ 3.5 ವರ್ಷಗಳಿಂದ ನಂದಾದೀಪ

ಮೂಡುಬಿದಿರೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ 2020ರ ಆಗಸ್ಟ್‌ 5ರಂದು ಪ್ರಾರಂಭಗೊಂಡಿದ್ದರೆ ಮುನ್ನಾದಿನವೇ ಮೂಡುಬಿದಿರೆ ಸಮೀಪದ ಬೆಳುವಾಯಿ -ಅಳಿಯೂರು ರಸ್ತೆಯ ಬದಿಯಲ್ಲೇ ಇರುವ “ಸುರಕ್ಷಾ” ಹೆಸರಿನ ಮನೆಯಲ್ಲಿ ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂಬ ಸಂಕಲ್ಪದೊಂದಿಗೆ ಬೆಳಗಿಸಿದ ನಂದಾ ದೀಪ ಇದುವರೆಗೂ ನಿರಂತರವಾಗಿ ಬೆಳಗುತ್ತಿದೆ.   ಬೆಳುವಾಯಿ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಸುರೇಶ್‌ ಕುಮಾರ್‌ ಮನೆಮಂದಿಯ ಜತೆಗೂಡಿ ಇಂಥ ದೃಢಸಂಕಲ್ಪ ಮಾಡಿದ್ದು ಸೋಮವಾರಕ್ಕೆ ಸರಿಯಾಗಿ 1,267 …

Read More »

ರಾಯಬಾಗ:ಪಾಳು ಬಿದ್ದ ಮೊರಬ ಶಾಲೆ ಶಿಕ್ಷಕರ ವಸತಿ ಸಮುಚ್ಚಯ

ರಾಯಬಾಗ: ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಅನುದಾನದಡಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳು ಕೆಲವೆಡೆ ಸದುಪಯೋಗವಾಗುತ್ತಿಲ್ಲ. ಅದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಮೊರಬ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಅನುಕೂಲವಾಗಲೆಂದು ಪ್ರೌಢಶಾಲೆ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ್ದ ವಸತಿ ನಿಲಯ ಸಮುಚ್ಚಯ ಈಗ ಪಾಳು ಬಿದ್ದಿದೆ.   ಶಿಕ್ಷಕರು ತಾವು ಕಾರ್ಯ ನಿರ್ವಹಿಸುವ ಶಾಲೆ ಹತ್ತಿರ ಕುಟುಂಬದೊಂದಿಗೆ ವಾಸಿಸಲಿ ಎಂಬ ಉದ್ದೇಶದಿಂದ ಈ …

Read More »

ಬೈಲಹೊಂಗಲ: ರಾಯಣ್ಣನ ನೆಲದಲ್ಲಿ ಕುಸ್ತಿಪಟುಗಳ ಕಾದಾಟ!

ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗುರುವಾರ ನಡೆದ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಸಹಸ್ರಾರು ಕುಸ್ತಿಪ್ರೇಮಿಗಳನ್ನು ರೋಮಾಂಚನಗೊಳಿಸಿತು.   ಕುಸ್ತಿ ಕಣವನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ವಿಜಯಪುರ ಭೂತನಾಳ ತಾಂಡದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮ್ಮಸ್ಸು ನೀಡಿತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು. …

Read More »