Breaking News

ರಾಷ್ಟ್ರೀಯ

ಸದನದಲ್ಲಿ ಹಾಸಿಗೆ ಕೇಳಿದ ಆರಗ ಜ್ಞಾನೇಂದ್ರ!

ಬೆಂಗಳೂರು : ಸದನದಲ್ಲಿ ಊಟ ಮಾತ್ರವಲ್ಲ ಹಾಸಿಗೆ ದಿಂಬು ಸಹ ನೀಡಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮನವಿ ಮಾಡಿಕೊಂಡ ಸನ್ನಿವೇಶ ಸೋಮವಾರ ಅಧಿವೇಶನದ (Assembly session) ವೇಳೆ ನಡೆಯಿತು. ಸದನದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಮಧ್ಯಾಹ್ನ ಊಟಕ್ಕೆಂದು ಹೊರಹೋದವರು ವಾಪಸ್‌ ಬರುವುದೇ ಇಲ್ಲ ಎಂದು ಆಕ್ಷೇಪಿಸಿದ ಸಭಾಪತಿ ಯು.ಟಿ ಖಾದರ್‌ ಸದಸ್ಯರ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು ಎಂದರು. ಊಟಕ್ಕೆ ಯಾರೂ ಹೊರಗೆ ಹೋಗುವುದು ಬೇಡ. ಇಡೀ …

Read More »

ತಾಂಡಾಗಳಲ್ಲಿ‌ ಹೆಚ್ಚುತ್ತಿದೆ ಮತಾಂತರ: ಪ್ರಮೋದ್ ಮುತಾಲಿಕ್

ವಿಜಯಪುರ: ರಾಜ್ಯದಲ್ಲಿನ‌ ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೇ ರೀತಿ ಮತಾಂತರ ಮುಂದುವರಿದರೆ ವಿಶೇಷ ಪಡೆ ರಚನೆ‌ ರಚಿಸಿ ತಡೆಯಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ನಿಮ್ಮ ಪ್ರಾರ್ಥನೆ ಚರ್ಚ್‌ ಒಳಗೆ ಇರಲಿ. ಹೊರಗಡೆ, ತಾಂಡಾಗಳಲ್ಲಿ ಮೋಸಮಾಡಿ ನೀವು ಮಾಡುವ ಕೆಲಸವನ್ನು ಏಸು ಒಪ್ಪುವುದಿಲ್ಲ ಎಂದರು. ನಮ್ಮ ಧರ್ಮ, ನಮ್ಮ …

Read More »

35 ವರ್ಷ ಜೊತೆಗೆ ಸಂಸಾರ ಮಾಡಿದ್ದೀವಿ, 3 ವರ್ಷ ಆ ಕಡೆ ಹೋಗಿದ್ದರು

ಬೆಂಗಳೂರು: 35 ವರ್ಷ ಜೊತೆಗೆ ನಾವು ಸಂಸಾರ ಮಾಡಿದ್ದೀವಿ. ಇವಾಗ 3 ವರ್ಷ ಅಷ್ಟೇ ಆ ಕಡೆ ಹೋಗಿದ್ದರು ಎಂದು ಎಸ್ ಟಿ ಸೋಮಶೇಖರ್ ಜೊತೆಗಿನ ಫೋಟೋ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ನಡೆದ ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಜೊತೆಯಾಗಿ ತೆರಳಿದರು. ಕಾಂಗ್ರೆಸ್ ಕಡೆ ಮುಖ ಮಾಡಿರುವ …

Read More »

ಸದನದಲ್ಲೂ ಮೊಳಗಿದ ದಲಿತ ಸಿಎಂ, ಪಿಎಂ ಕೂಗು..!

ಬೆಂಗಳೂರು: ಸಹಕಾರಿ ಕಾನೂನಿಗೆ ತಿದ್ದುಪಡಿ ಚರ್ಚೆ ವೇಳೆ ದಲಿತ ಸಿಎಂ‌ ಮತ್ತು ಪಿಎಂ ಕೂಗು ಮೊಳಗಿತು. ಮಳವಳ್ಳಿ ಶಾಸಕ ನಾರಾಯಣಸ್ವಾಮಿ ಮಾತನಾಡುವಾಗ ದಲಿತರು ಮೇಲೆ ಬರಬೇಕು. ಅದಕ್ಕೆ‌ ಮೀಸಲಾತಿ ಪೂರಕ ಎಂದು ವಾದ ಮಂಡಿಸಿದರು. ಈ ವೇಳೆ ಮಧ್ಯ ಪ್ರವೇಶಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನೀವು ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಿದರೆ ತಾವು ಬೆಂಬಲಿಸಿ ಮತ ಹಾಕುವುದಾಗಿ ಯತ್ನಾಳ್ ಅಬ್ಬರಿಸಿದರು. ಇದಕ್ಕೆ‌ ನಿಮಗೆ ಧಮ್ …

Read More »

ಸತೀಶ ಅಕ್ವಾ ನೂತನ ಕೂಲ್ ಡ್ರಿಂಕ್ಸ್ ಪ್ಲಾಂಟ್ ಉದ್ಘಾಟನೆ ಮಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ ಮತ್ತು ಸರ್ವೋತ್ತಮ್ ಜಾರಕಿಹೊಳಿ,

ಇಂದು ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸಿನಲ್ಲಿ ಇರುವ ದ್ಯಾಮಣ್ಣವರ ಒಡೆತನದ ಸತೀಶ ಅಕ್ವಾ ನೂತನ ಕೂಲ್ ಡ್ರಿಂಕ್ಸ್ ಪ್ಲಾಂಟ್ ಉದ್ಘಾಟನೆ ಮಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ ಮತ್ತು ಸರ್ವೋತ್ತಮ್ ಜಾರಕಿಹೊಳಿ, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ಪ. ಪೂ. ಶ್ರೀ ಲಕ್ಷ್ಮಣ ಅಜ್ಜನವರು ದೇವರ ಕಡಬಿ ವಹಿಸಿದ್ದರು, ಈ ಶುಭ ಸಂದರ್ಭದಲ್ಲಿ ಮುಖಂಡರಾದ ಶಿವು ಪಾಟೀಲ್, ಎಸ್ ಕೆ ಬೂಟಾಳೆ, ರಮೇಶ್ ಸಿಂದಗಿ, ಹಾಗೂ ದ್ಯಾಮಣ್ಣವರ ಕುಟುಂಬದವರಾದ …

Read More »

ಮಗನ ಕಳೆದುಕೊಂಡ ತಾಯಿ ಸಂಕಷ್ಟಕ್ಕೆ ಮಿಡಿದ ಲಕ್ಷ್ಮಿ ಹೆಬ್ಬಾಳ್ಕರ್‌; 1 ವರ್ಷದ ‘ಗೃಹಲಕ್ಷ್ಮಿ’ ಮೊತ್ತ ನೆರವು

ಬೆಳಗಾವಿ: ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಅರಣ್ಯರೋದನ ಅನುಭವಿಸುತ್ತಿದ್ದ ಹಿರಿಯ ವಯಸ್ಸಿನ ತಾಯಿ ಸಂಕಷ್ಟಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮನ ಮಿಡಿದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಮೂಲಕ ಒಂದು ವರ್ಷಕ್ಕೆ ಜಮಾ ಆಗುವ ಹಣದಷ್ಟು ವೈಯಕ್ತಿಯವಾಗಿ ನೆರವಿನ ಹಸ್ತ ಚಾಚಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದರು. ಈತನ ತಾಯಿ ನೀಲವ್ವ ಗುರಕ್ಕನವರ ಮಗನನ್ನು …

Read More »

ಸದನಕ್ಕೆ ಬಂಕ್‌ ಹಾಕಬೇಡಿ

ಬೆಂಗಳೂರು : ಸದನಕ್ಕೆ ವಿಳಂಬವಾಗಿ ಆಗಮಿಸುವವರು,ಗೈರು ಹಾಜರಾಗುವವರು ಹಾಗೂ ಊಟದ ಸಮಯದಲ್ಲಿ ನಾಪತ್ತೆಯಾಗುವ ಶಾಸಕರಿಗೆ ಸಭಾಪತಿ ಯು.ಟಿ. ಖಾದರ್‌ (U T Khader) ಕಿವಿ ಹಿಂಡಿದ ಘಟನೆ ಸೋಮವಾರದ ಅಧಿವೇಶನದ (Karnataka Assembly) ವೇಳೆ ನಡೆದಿದೆ. ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ನಿಗದಿತ ಸಮಯಕ್ಕೆ ಆಗಮಿಸಿದವರ ಪಟ್ಟಿ ಓದಿದ ಯು.ಟಿ. ಖಾದರ ,ಬಳಿಕ ಗೈರು ಹಾಜರಾದವರು ಹಾಗೂ ವಿಳಂಬವಾಗಿ ಆಗಮಿಸುವವರಿಗೆ ಬಿಸಿ ಮುಟ್ಟಿಸಿದರು. ಊಟಕ್ಕೆಂದು ಹೊರಗೆ ಹೋಗುವ ಶಾಸಕರು ಮತ್ತೆ ವಾಪಸ್‌ ಬರುವುದೇ …

Read More »

ಹನಿಹನಿ ನೀರಿಗೂ ಹಾಹಾಕಾರ – ಟ್ಯಾಂಕರ್‌ ನೀರಿನ ಮಾಫಿಯಾ ಶುರು!

ಬೆಂಗಳೂರು ; ಬೇಸಿಗೆ ಆರಂಭಕ್ಕೆ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಕೊರತೆ (Water scarcity) ಎದುರಾಗಿದೆ. ಟ್ಯಾಂಕರ್‌ ನೀರೂ (Tanker water) ಸಹ ದಿನೇ ದಿನೇ ದುಬಾರಿಯಾಗುತ್ತಾ ಸಾಗುತ್ತಿದ್ದರೂ ಜನರು ನೀರು ಪೋಲು ಮಾಡುತ್ತಿರುವುದು ನಗರಕ್ಕೆ ನುಂಗಲಾರದ ತುತ್ತಾಗಿದೆ. ಈ ನಡುವೆ ಟ್ಯಾಂಕರ್‌ ನೀರು ಪೂರೈಕೆ ಮಾಫಿಯಾ ತಡೆಗಟ್ಟಲು ಜಲಮಂಡಳಿ ಏಕರೂಪ ದರ ನಿಗದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಐದು ಹಂತಗಳಲ್ಲಿ ಕಾವೇರಿ ನೀರು ಪೂರೈಸಲಾಗುತ್ತಿದ್ದು ಪ್ರತಿದಿನ ನಗರವಾಸಿಗಳ ಬಳಕಗೆ ಎರಡು ಟಿಎಂಸಿ …

Read More »

ದಂಗಲ್’ ಖ್ಯಾತಿಯ ನಟಿ ಸುಹಾನಿಯನ್ನು ಬಲಿ ಪಡೆದಿದೆ ಅಪಾಯಕಾರಿ ಕಾಯಿಲೆ

ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ‘ದಂಗಲ್’ ನಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್‌ ಅಕಾಲಿಕ ಸಾವು ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಡರ್ಮಟೊಮಿಯೊಸಿಟಿಸ್ ಎಂಬ ಅಪರೂಪದ ಮತ್ತು ಅಪಾಯಕಾರಿ ಕಾಯಿಲೆ ಸುಹಾನಿಯನ್ನು ಬಲಿಪಡೆದಿದೆ. ಡರ್ಮಟೊಮಿಯೊಸಿಟಿಸ್ ಕಾಯಿಲೆ, ದೇಹದ ಸ್ನಾಯುಗಳಲ್ಲಿ ಊತ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಈ ರೋಗವು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಆದರೆ ಇದು ಸಾಮಾನ್ಯವಾಗಿ 40 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ …

Read More »

ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಯಾದಗಿರಿ, : ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ(died)ಹೊಂದಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಬಳಿ ನಡೆದಿದೆ. ಸವಾರರಾದ ಶಿವನಗೌಡ ಹೊಸಮನಿ(25), ಲಕ್ಷ್ಮಣ(24) ಸಾವನ್ನಪ್ಪಿರುವವರು. ಮೃತರು ಶಹಾಪುರ ತಾಲೂಕಿನ ಬೊಮ್ಮನಹಳ್ಳಿಯ ನಿವಾಸಿಗಳು. ಕೆಂಭಾವಿಯಿಂದ ಬೊಮ್ಮನಹಳ್ಳಿ ಗ್ರಾಮಕ್ಕೆ ಬೈಕ್ ಮೇಲೆ ತೆರಳುವಾಗ ಘಟನೆ ಸಂಭವಿಸಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ …

Read More »